ಸತ್ತವನ ನೆರಳು- ಶಿವಶಂಕರ ಮೇಟಿ ಬರೆದ ಕಥೆ


2 thoughts on “ಸತ್ತವನ ನೆರಳು- ಶಿವಶಂಕರ ಮೇಟಿ ಬರೆದ ಕಥೆ”

  1. ಶಿವಶಂಕರ ಮೇಟಿಯವರ ‘ಬಡ್ಡಿಮನಿ ಬೋಳಶೆಟ್ಟಿ ಭೂತ ಆಗ್ಯಾನಂತ’ ಕಥೆಯಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದದ್ದು ಉತ್ತರ ಕರ್ನಾಟಕದ ಸೊಗಡಿನ ಆಡುಭಾಷೆ. ಅಲ್ಲಿನ ವಿಶಿಷ್ಟ ಪದಗಳು, ನುಡಿಗಟ್ಟುಗಳು, ಮಾತಿನ ಲಯ ಮತ್ತು ಹಾಸ್ಯವನ್ನು ಬಹಳ ಸಹಜವಾಗಿ ಬಳಸಿಕೊಂಡಿದ್ದಾರೆ. ಪಾತ್ರಗಳ ಸಂಭಾಷಣೆಗಳನ್ನು ಓದುವಾಗ ಆ ಜನರೇ ನಮ್ಮೆದುರು ಕುಳಿತು ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಬೋಳಶೆಟ್ಟಿಯ ಭೂತದ ಸುದ್ದಿ ಊರಿನ ತುಂಬ ಹರಡುವ ಪರಿ, ಅದಕ್ಕೆ ಒಬ್ಬೊಬ್ಬರು ತಮ್ಮದೇ ಆದ ವ್ಯಾಖ್ಯಾನ ನೀಡುವ ರೀತಿ, ಕೊನೆಯಲ್ಲಿ ಆ ಭೂತದ ರಹಸ್ಯ ಬಯಲಾಗುವ ಸನ್ನಿವೇಶ, ಎಲ್ಲವೂ ಕಥೆಯನ್ನು ಸ್ವಾರಸ್ಯಕರವಾಗಿಸಿವೆ. ಕಥೆಯ ವಸ್ತುವೂ ಚೆನ್ನಾಗಿದೆ. ಮನುಷ್ಯ ಸತ್ತ ನಂತರ ಅವನ ಬಗ್ಗೆ ಉಳಿಯುವ ನೆನಪುಗಳು, ಅಭಿಪ್ರಾಯಗಳು ಮತ್ತು ಅವನನ್ನು ನೋಡುವ ವಿಭಿನ್ನ ದೃಷ್ಟಿಕೋನಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ತುಂಬ ಚೆನ್ನಾಗಿದೆ.

    ಕಥೆಯಲ್ಲಿ ನನಗೆ ವಿಶೇಷವಾಗಿ ಇಷ್ಟವಾದದ್ದು ಮಾದಪ್ಪನ ಪಾತ್ರ. ಉಳಿದವರಿಗೆ ಬೋಳಶೆಟ್ಟಿಯ ಆಸ್ತಿ, ಹಣ, ಸಾಲಗಳ ಚಿಂತೆಯಾದರೆ, ಮಾದಪ್ಪನಿಗೆ ಮಾತ್ರ ತನ್ನ ಪ್ರೀತಿಯ ‘ಮುತ್ತ್ಯಾ’ನಿಗೆ ಊಟವಾಯಿತೇ ಎಂಬ ಕಾಳಜಿ! ಈ ಮುಗ್ಧ ಪ್ರೀತಿ ಕಥೆಗೆ ಒಂದು ಮಾನವೀಯ ಸ್ಪರ್ಶ ನೀಡುತ್ತದೆ. ಹಾಗೆಯೇ ಆಲದ ಕಟ್ಟೆ ಕೇವಲ ಊರಿನ ಹರಟೆಯ ಸ್ಥಳವಾಗದೆ, ಊರಿನ ಸಾಮೂಹಿಕ ನೆನಪುಗಳ ಪ್ರತೀಕವಾಗಿ ಕಾಣುತ್ತದೆ. ಪಂಚಾಯಿತಿಗೆ ಕೊಡಲು ನಿರಾಕರಿಸಿದ ಒಂದು ಎಕರೆ ಜಮೀನಿನ ಪ್ರಸಂಗವೂ ಕೇವಲ ಆಸ್ತಿಯ ವಿಚಾರವಾಗಿ ಉಳಿಯದೆ, ಊರಿನ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯದ ಪ್ರಶ್ನೆಯನ್ನು ಸೂಕ್ಷ್ಮವಾಗಿ ಎತ್ತುತ್ತದೆ. ಒಟ್ಟಿನಲ್ಲಿ ಹಾಸ್ಯ, ವ್ಯಂಗ್ಯ, ಗ್ರಾಮೀಣ ಬದುಕು ಮತ್ತು ಮಾನವೀಯ ಸಂಬಂಧಗಳನ್ನು ಬೆರೆಸಿ ಒಳ್ಳೆಯ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಸತ್ತ ನಂತರ ಬೋಳಶೆಟ್ಟಿ ಕೆಲವರ ನೆನಪಿನಲ್ಲಿ ಸ್ವಾರ್ಥಿಯಾಗಿ, ಕೆಲವರ ಮನಸ್ಸಿನಲ್ಲಿ ಭೂತವಾಗಿ ಉಳಿದರೆ, ಮಾದಪ್ಪನ ಮನಸ್ಸಿನಲ್ಲಿ ಮಾತ್ರ ಪ್ರೀತಿಯ ಮುತ್ತ್ಯನಾಗಿ ಉಳಿಯುತ್ತಾನೆ! ಅಭಿನಂದನೆಗಳು ಮೇಟಿ! ಕಥಾಸಂಕಲನ ಬೇಗ ಹೊರಬರಲಿ. – ಕೇಶವ

    Like

  2. ಈಗಾಗಲೇ ಹಲವಾರು ಮೆಚ್ಚಿದ ( ನನ್ನನ್ನೂ ಸೇರಿಸಿ ಆ ಪಟ್ಟಿಯಲ್ಲಿ) ಕಥೆಯಾದ ‘ಸತ್ತವನ ನೆರಳು ‘ಆಳಿದ ಮೇಲೆ ‘ ಕಥೆಯ ವಸ್ತುವಿನಿಂದ ಪ್ರೇರಿತರಾದದ್ದು ಎಂದು ಪೀಠಿಕೆಯಲ್ಲಿ ಹೇಳಿದ್ದರೂ ಮೊದಲ ವಾಕ್ಯದಲ್ಲೇ ಇದೊಂದು ದೆವ್ವದ ಕಥೆ ಅಂತ ಡಂಗುರ ಸಾರಿ ಒಂದು ತರದ ಭಯ ಮತ್ತು ಕುತೂಹಲ ಕೆರಳಿಸುತ್ತಾರೆ ಕಥೆಗಾರ ಮೇಟಿಯವರು.
    ಇದು ಹಳ್ಳಿಯಲ್ಲಿ ನಡೆದ ಕಥೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು ಇದರಲ್ಲಿಯ ಇನ್ನೊಂದು ವೈಶಿಷ್ಠ್ಯ. ತಮ್ಮ ವಿಶಿಷ್ಟ ಕಥಾತಂತ್ರದಿಂದ ಕೊನೆಯ ಪ್ಯಾರಾದ ಟ್ವಿಸ್ಟ್ ವರೆಗೆ ಕುತೂಹಲವನ್ನು ಕಾಯ್ದಿದ್ದಾರೆ. ಆ ಕಾರಣಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
    ಹೀಗೆಯೇ ಇನ್ನಷ್ಟು ಕಥೆಗಳನ್ನು ಕನ್ನಡ ಓದುಗರಿಗರಿಗೆ ಕೊಡುತ್ತ ಬನ್ನಿ!

    ಶ್ರೀವತ್ಸ ದೇಸಾಯಿ
    ಲೆಸ್ಟರ್

    Like

Leave a Reply