ನಮ್ಮ ಬಗ್ಗೆ

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಯು.ಕೆ

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಯು.ಕೆ, ಕನ್ನಡ ಬಳಗ, ಯು.ಕೆ ಯ (www.kannadabalaga.org.uk) ಆಶ್ರಯದಲ್ಲಿ ಸಾಹಿತ್ಯ ಮತ್ತು ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಪ್ರಾರಂಭಿಸಿರುವ ವೇದಿಕೆ.

ವೇದಿಕೆಯ ಚಟುವಟಿಕೆಗಳನ್ನು ಸ್ವಯಂ ಪ್ರೇರಿತ ಆಧಾರದ ಮೇಲೆ ನಡೆಸಲಾಗುವುದು.

ಕನ್ನಡ ಬಳಗದ ಸಾಹಿತ್ಯ ಸಂಬಂಧ ಚಟುವಟಿಕೆಗಳ ನಿರ್ವಹಣೆ ಮತ್ತು ಸಹಕಾರ ಒದಗಿಸುವ ಕಾರ್ಯಕ್ರಮಗಳು.

ವೇದಿಕೆಯ ಚಟುವಟಿಕೆಗಳನ್ನು “www.anivaasi.com” ಮೂಲಕ ಪ್ರಕಟಿಸುವುದು.

ವೇದಿಕೆಗೆ ಯು.ಕೆಯಲ್ಲಿರುವ ಯಾರು ಬೇಕಾದರೂ ಕನ್ನಡದಲ್ಲಿ ಬರೆಯಲು ಶುರು ಮಾಡಬಹುದು. ಆಸಕ್ತರು anivaasi at gmail dot com ಗೆ ಇಮೇಲ್ ಮಾಡಬಹುದು ಅಥವಾ https://www.facebook.com/anivaasi/ ಫೇಸ್-ಬುಕ್ ಪುಟದಿಂದ  ಸಂಪರ್ಕಿಸಬಹುದು.

ವಿಷಯಗಳು ಸಾಹಿತ್ಯ ಮತ್ತು ಸಂಸ್ಕೃತಿಯ ವಿವಿಧ ಪ್ರಕಾರಗಳಾಗಿದ್ದು, ಕನ್ನಡ ಕವನಗಳು, ಪ್ರಬಂಧ, ಪ್ರವಾಸ, ದಿನಚರಿ, ಸಣ್ಣ ಕಥೆ, ವಿಜ್ಞಾನ, ಪುಸ್ತಕ ಓದು, ಚಲನಚಿತ್ರ ವೀಕ್ಷಣೆ, ನಾಟಕ, ರಸ ಪ್ರಶ್ನೆ ಮೊದಲಾದವುಗಳನ್ನು ಒಳಗೊಂಡಿರುವುವು.

ವೇದಿಕೆಯ ಚಟುವಟಿಕೆಗಳ ಬಗ್ಗೆ ಸಕಾರಾತ್ಮಕ, ನಕಾರಾತ್ಮಕ ಪ್ರತಿಕ್ರಿಯೆಗಳು ಮತ್ತು ಮರು-ಮಾಹಿತಿಯನ್ನು ಸ್ವಾಗತಿಸಲಾಗುವುದು.