ನೋಡು ಬಾ ನಮ್ಮೂರ ಸರಣಿ – ನನ್ನ ಊರು ಊಟಿ – ಶ್ರೀವತ್ಸ ದೇಸಾಯಿ

ನನ್ನ ಊರಿನ ಬಗ್ಗೆ ಬರೆಯಬೇಕೆಂದೊಡನೆ ನನ್ನ ಮನದಲ್ಲಿ ದ್ವಂದ್ವ ಶುರುವಾಗುತ್ತದೆ. ದ್ವಂದ್ವ ಎರಡು ಬಗೆಯಾದರೆ, ’ಮೂರು ಬಗೆ’ಗೆ ಏನಾದರೂ ಶಬ್ದವಿದ್ದರೆ ಅದನ್ನು ಬಳಸಿಯೇನು. ಇದೇ ಜಗಲಿಯಲ್ಲಿ ಮಿತ್ರ ’ಉಪ್ಪಿನಕಾಯಿ’ ರಾಜಾರಾಮ್ ಕಾವಳೆಯವರು ಬರೆದಂತೆ ನನಗೆ ಮೂರು ಊರುಗಳಲ್ಲಿ ’ನಮ್ಮಮನೆ’ಯಿದೆ/ಇತ್ತು. ಏಕೆಂದರೆ ನಾನು ಹುಟ್ಟಿದ್ದೂರಿನಲ್ಲಿ(ಧಾರವಾಡ) ಹೆಚ್ಚು ದಿನ ಕಳೆಯಲಿಲ್ಲ, ಅಂದಮೇಲೆ ಅದು ನನ್ನೂರಾಗಲಿಲ್ಲ. ನನ್ನ ಜೀವನದ ಅತಿ ಹೆಚ್ಚಾದ ವರ್ಷಗಳನ್ನು ಪರದೇಶದಲ್ಲಿ ಕಳೆದುದು ಈಗಲೂ ವಾಸವಾಗಿರುವ ಡೋಂಕಾಸ್ಟರಿನಲ್ಲಿಯೇ. ಈಗ ಈ ಮನೆ ’ನಮ್ಮ ಮನೆ’. ಆದರೂ ಬಾಲ್ಯದ ಅತ್ಯಂತ ಸಂತೋಷದ ದಿನಗಳನ್ನು ಕಳೆದ ತಮಿಳು ನಾಡಿನ ಊಟಿಯನ್ನೇ ನಾನು ನನ್ನ ಊರು ಎಂದು ಎತ್ತಿಕೊಂಡು

wikiOotyviewpanaromaracecourse003pan ಅದರ ಬಗೆಗೆ ಹೇಳುವೆ.

Ooty Panoramic view : CC Wiki

ಚಂದದ ಸ್ವಚ್ಛಂದ ದಿನಗಳು

ನಾನು 1946 ರಲ್ಲಿ ಹುಟ್ಟಿದ್ದರಿಂದ ನಾನೂ ಒಂದು ರೀತಿಯಿಂದ Midnight Children ಗುಂಪಿಗೆ ಸೇರಿದವನೆನ್ನಬಹುದು. ಸ್ವಾತಂತ್ರ್ಯ ಸಿಕ್ಕ ದಿನದ ಮಧ್ಯರಾತ್ರಿ ಹದಿನೆಂಟು ತಿಂಗಳ ಕೂಸಾಗಿದ್ದರಿಂದ ನನಗೆ ನೆಹರೂವರ ಭಾಷಣ (“We made tryst with destiny”) ನೆನಪಿನಲ್ಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ನೆರಳು ನಮ್ಮ ಜೀವನದ ಮೇಲೆ ಇತ್ತು; ಇನ್ನೂ ಇದೆ. 1942 ರಲ್ಲಿ ಜಪಾನೀಯರು Read More »

ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ – ಸುದರ್ಶನ ಗುರುರಾಜರಾವ್ ಬರೆಯುತ್ತಾರೆ

ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ.
ಲೇಖಕರು: ಶ್ರೀಯುತ ಸಂಜಯ್ ಗುಬ್ಬಿ

vanyajeevi

vanyajeevi2

“ಜಯ ಸುಂದರ ನದಿವನಗಳ ನಾಡೆ” – ಕುವೆಂಪು
”ಬೆಳುವಲ ಮಲೆ-ಕರೆ ಸುಂದರ ಸೃಷ್ಟಿ”- ಚನ್ನವೀರ ಕಣವಿ
”ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ”- ನಿಸಾರ್ ಅಹ್ಮದ್
”ಚಿಮ್ಮುತ ಓಡಿವೆ ಜಿಂಕೆಗಳು-ಕುಣಿದಾಡುತ ನಲಿದಿವೆ ನವಿಲುಗಳು” ಗಂಧದ ಗುಡಿ
“ಹಸಿರೊಡೆದು ಉಸಿರಾಡಿ ನಗುತಿರುವ ನೆಲದಲ್ಲಿ ಕಾವೇರಿ ಮೈದೋರಿ ನಲಿದಿರುವಳು”- ಮಾಗಿಯ ಕನಸು
“ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ ಗಿರಿ ಸಾಲು ತಾನಾಗಿ ಮೆರೆದಾಡಿದೆ
ಚೆಲುವಿನ ರಾಶಿಯ ಗೆಲುವನೂ ಕಾಣಲು ಮಲೆನಾಡ ಮೈಸಿರಿಯು ನೆಲೆ ನಿಂತಿದೆ ..ಎಲ್ಲೆಲ್ಲೂ ನೀನೆ”- ಮಾಗಿಯ ಕನಸು

ಈ ಹಾಡುಗಳನ್ನು, ಕವಿತೆಯ ಸಾಲುಗಳನ್ನು ನಾವು ಓದಿ ಕೇಳಿ, ಸ್ವಲ್ಪ ಮಟ್ಟಿಗೆ ನೋಡಿ ಬಲ್ಲೆವು. ಈ ಸೌಂದರ್ಯದ ಒಳಗಿನ ನಿಜ ಆಳ ಅಗಲಗಳನ್ನು, ಅದರ ಸಂರಕ್ಷಣೆಗೆ ಇರುವ ಸವಾಲುಗಳನ್ನು, ತನು ಮನಗಳನ್ನು ಧಾರೆಯೆರೆದು ಇವುಗಳನ್ನು ಕಾಯಲು ನಡೆಯುತ್ತಿರುವ ತೆರೆಮರೆಯ ಪ್ರಯತ್ನಗಳನ್ನೂ ಸ್ವಂತ ಅನುಭವಗಳ ಮೂಲಕ, ದೃಷ್ಟಾಂತಗಳ ಮೂಲಕ ಉತ್ತಮ ಛಾಯಾಚಿತ್ರಗಳ ಮೂಲಕ ನಮ್ಮ ಮುಂದೆ ಅನಾವರಣಗೊಳಿಸುತ್ತಾ ಸ್ವಾರಸ್ಯಕರ ಭಾಷೆಯ ಲಹರಿಯಲ್ಲಿ ಓದಿಸಿಕೊಂಡು ಹೋಗುವ ಈ ಪುಸ್ತಕ ಅಕಸ್ಮಾತಾಗಿ ನನಗೆ ಸಿಕ್ಕಿದ್ದು ನಿಮಗೆ ಅದರ ಪರಿಚಯ ಮಾಡಿಸಲು ಈ ಲೇಖನ.

Read More »