ಅಂಬೇಡ್ಕರ ಪುತ್ಥಳಿ – ಡಾ. ರಾಮಶರಣ ಬರೆದ ಕವಿತೆ

ಇವತ್ತು ಅಂಬೇಡ್ಕರ್ ಜನ್ಮದಿನ. ಅವರ ನೆನಪಿನಲ್ಲಿ ಒಂದು ಕವನ ನಮನ.

ಅಂಬೇಡ್ಕರ ಪುತ್ಥಳಿ

ಅಂಬೇಡ್ಕರ! ಅಂಬೇಡ್ಕರ!! ಅಂಬೇಡ್ಕರ!!!

CC – Wiki

ಜನ್ಮ ದಿನ ನೆನಪಾಗಿ
ನಡೆಸುವರು ಸಮಾರಂಭ ಆತುರದಿ
ದೀನ ದಲಿತೋದ್ಧಾರ, ಮತ್ತೆ ಕೊಂಚ ಮಮಕಾರ
ಉದಾತ್ತ ಧ್ಯೆಯೋದ್ದೇಶಗಳೆಲ್ಲಿ?
ಮುಂದುವರಿದವು ದಲಿತರ ದಮನ ನಿನ್ನ ಪ್ರತಿಮೆಯ ನೆರಳಿನಲಿ

ಕರಿ ಮೋಡ ಕವಿದಿದೆ ಈ ಸಮಾಜದ ಎದುರು
ಬೆಳ್ಳಿ ಬೆಳಕನು ತನ್ದೀತೆ
ಕೇವಲ ನಿನ್ನ ಪುತ್ಥಳಿಯ ನೆದರು?
ಕನಸಿನ ಸೌಧ ತರಗಲೆಯಂತೆ
ಉದುರಿ ನರಳಿ
ಕಣ್ಣೀರ್ಗರೆಯುತಿದೆ ಹೆದ್ದಾರಿಯ ಬಳಿ
ಅಂಬೇಡ್ಕರ ಪುತ್ಥಳಿ

4 thoughts on “ಅಂಬೇಡ್ಕರ ಪುತ್ಥಳಿ – ಡಾ. ರಾಮಶರಣ ಬರೆದ ಕವಿತೆ

 1. A very nice poem, short but succinct.
  Some rare facts on this person.1. He was trained as an economist 2. He did not want the inclusion of article 370. 3. Converted to Buddhism.
  I am confused about his legacy though, his name and stature has been abused by people, organizations and political parties.

  Like

 2. ರಾಂ, ಕೆಲವೇ ಕೆಲವು ಸಾಲುಗಳಲ್ಲಿ ತುಂಬ ಕ್ಲಿಷ್ಟವಾದ ವಿಷಯವನ್ನು ತುಂಬ ಚೆನ್ನಾಗಿ ಮೂಡಿಬಂದಿದೆ. ಬುದ್ಧ ಬರಲಿ, ಕೃಷ್ಣ ಬರಲಿ, ಗಾಂಧಿ ಬರಲಿ, ಅಂಬೇಡ್ಕರ್ ಬರಲಿ…ಶೋಷಣೆ ತಪ್ಪಿದ್ದಲ್ಲ ಎನಿಸುತ್ತದೆ. ವಿಪರ್ಯಾಸವೆಂದರೆ ಶೋಷಿತನೇ ಶೋಷಿತನ ಶೋಷಣೆ ಮಾಡುತ್ತಿರುವುದು…ಕೇಶವ

  Like

 3. ಕವನದ ಭಾವ ಚೆನ್ನಾಗಿದೆ
  ವಾಲ್ಮೀಕಿ,ವ್ಯಾಸ, ಬುದ್ಧನಾದಿಯಾಗಿ ಎಲ್ಲರನ್ನೂ ವ್ಯಕ್ತಿಗಳಾಗಿ ಬಳಸಿಕೊಂಡರೇ ವಿನಃ ಅವರ ಸಂದೇಶಗಳಲ್ಲ. ಅಂಬೇಡ್ಕರ್ ಕೂಡಾ ಇದಕ್ಕೆ ಹೊರತಲ್ಲ.ಸಂದೇಶಗಳನ್ನು ಕಾರ್ಯ ರೂಪಗೊಳಿಸುವುದು ಕಷ್ಟದ ಕೆಲಸ ಅಲ್ಲವೇ. ವ್ಯಕ್ತಿಗಳನ್ನಾದರೆ ಸ್ವಾರ್ಥಕ್ಕೆ ಸುಲಭವಾಗಿ ಬಳಸಿಕೊಳ್ಳಬಹುದಲ್ಲ.
  ರಾಮನ ನೀತಿ ಬೇಡಾದ ಆಳುವವರಿಗೆ ವಾಲ್ಮೀಕಿಯ ಜಾತಿ ಮುಖ್ಯವಾಗುತ್ತದೆ
  ವ್ಯಾಸನ ಮಹಾಭಾರತದಲ್ಲಿ ಅರ್ಹತೆಯ ಕಡೆಗಣನೆಯಿಂದಾಗೋ ಸಮಸ್ಯೆಯ ಸಂದೇಶ ಯಾರಿಗೂ ಬೇಡ. ಎಲ್ಲರಿಗೂ ತಂತಮ್ಮ ಮಕ್ಕಳನ್ನು ಕುರ್ಚಿಯಲ್ಲಿ ಕೂಡಿಸುವ ತುಡಿತ.
  ಬುದ್ಧನ ತತ್ವ ಬೇಡ ಆದರೆ ಅವನ ಮತ ಬೇಕು
  ಅಂಬೇಡ್ಕರ್ ಹೆಸರು, ಅವರ ದಲಿತ ಹಿನ್ನೆಲೆ ಬೇಕೇ ಹೊರತು ಅವರ ಆಶಯಗಳಲ್ಲ.
  ಜಾತ್ಯಾಧಾರಿತ ಶೋಷಣೆ ಇಂದು ಜಾತಿಯ ಜೊತೆಗೆ ರಾಜಕೀಯಾಧಾರಿತ, ಆರ್ಥಿಕ ಬಲಾಧಾರಿತ ಶೋಷಣೆಯಾಗಿ ಬದಲಾಗಿದೆ ಅಷ್ಟೆ. ಹಳ್ಳಿಯಲ್ಲಿ ದಲಿತರ ಬದುಕನ್ನು ನೋಡುತ್ತಾ ಅವರ ಜೊತೆಗೇ ಬೆಳೆದವನು ನಾನು. ದಲಿತರಲ್ಲೇ ದೀನರನ್ನು ಕಡೆಗಣಿಸುವ ಪರಿಯನ್ನೂ ಕಂಡಿದ್ದೇನೆ.

  Like

 4. ರಾಮಶರಣ್ ಅವರೆ , ಬಹುಶಃ ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳಿಗೆ ತಗುಲಿರುವಷ್ಟು ಧಕ್ಕೆ, ನಮ್ಮ ಸಮಾಜದಲ್ಲಿ ಇನ್ನಾವ ಮಹಾನ್ ವ್ಯಕ್ತಿಯ ಧ್ಯೇಯೋದ್ದೇಶಗಳಿಗೂ ತಗುಲಿರಲಾರದು. ಇದೊಂದು ದೊಡ್ಡ ವಿಪರ್ಯಾಸವೇ ಸರಿ. ಅವರ ಪುಥ್ಹಳಿಯನ್ನು ವಿರೂಪಗೊಳಿಸಿದ್ದಂತೂ ನಮ್ಮ ಸಮಾಜಕ್ಕೆ ಶುದ್ಧ ಅವಮಾನದ ವಿಷಯ. ಕೇವಲ ಅವರ ಜನ್ಮದಿನದಂದು ರಜಾ ನೀಡಿ ಅವರ ಪ್ರತಿಮೆಗೆ ಏರಿಸುವ ಹೂಮಾಲೆ, ಅಂಬೇಡ್ಕರ್ ನಂಬಿದ ಮೌಲ್ಯಗಳ ಕೊಲೆ. ನಿಮ್ಮ ಕವನ ಈ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸಿದೆ. ಜೊತೆಗೆ ಇಂದು ಅವರ ಜನ್ಮ ದಿನ. ದಲಿತರ ದಮನ ನಿರಂತರವಾಗಿ ನಡೆದಿದೆ. ಅದಕೆಂದು ಕೊನೆಯೋ ತಿಳಿಯದು.
  ಉಮ ವೆಂಕಟೇಶ್

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.