ಒಂದು ಹಳೆಯ ಸವಿನೆನಪು

ಮನೆ ಹಿತ್ತಲಿನಲ್ಲಿ ತಿಂಗಳ ಬೆಳಕಿನ ಹೊಳೆ ಹರಿದಿತ್ತು
ಚಾಮರ ಬೀಸುವ ತೆಂಗಿನ ಗರಿಗಳ ನಡುವೆ
ಸರಸ ಸಂಭಾಷಣೆ ನಡೆದಿತ್ತು
ಹುಣ್ಣಿಮೆ ಚಂದಿರ ಬೆಳ್ಳಿಯ ಬಾನಲಿ ತೇಲಿತ್ತು
ಮೋಡದ ಮೆರವಣಿಗೆಯು ಸಾಗಿತ್ತು
ಅಪ್ಪನ* ಕವಿಮನ ಮುಗಿಯದ ಕವನಕೆ
ಪದಗಳ ಹುಡುಕಲು ಹೊರಟಿತ್ತು
ಹರಡಿದ ಲಂಗದಿ ಮಧ್ಯದಿ ಕುಳಿತ
ಅಕ್ಕನ ಹಾಡಿನ ಇಂಪಿತ್ತು
ಸೋರುವ ನಲ್ಲಿಯ ತಟಪಟ ಶಬ್ದವು
ರಾಗಕೆ ತಾಳವ ಹಿಡಿದಿತ್ತು
ಹಿತ್ತಲ ಗಿಡದಲಿ ಅರಳಿದ ಹೊಗಳ ಕಂಪಿತ್ತು
ತಂಗಾಳಿಯು ಮೆಲ್ಲಗೆ ಸುಳಿದಿತ್ತು
ಬಾವಿಲಿ ಇಣುಕುವ ಅಣ್ಣನ ಚೇಷ್ಟೆಯು
ಅಮ್ಮನಿಗಾಬರಿಗಿಟ್ಟಿತ್ತು, ದನಿ ಎರಿತ್ತು
ಕಥೆ ಕೇಳುವ ರೋಮಾಂಚನದಲಿ
ನನ್ನಯ ಕಿವಿಮನ ಹಿಗ್ಗಿತ್ತು
ಕಥೆಗಳ ನಡುವೆ ಅಮ್ಮನ ತುತ್ತಿನ ಸವಿಯಿತ್ತು
ದುಡಿಮೆಯ ಶ್ರಮದಲಿ ಬಳಲಿದ
ಅಮ್ಮನ ತೋಳದು ಸೋತಿತ್ತು
ಮುದ್ದಿನ ಮಕ್ಕಳ ಆರೈಸುವ ಬಯಕೆಯು
ಆ ನೋವನೆ ನುಂಗಿತ್ತು
ಪ್ರೀತಿ ವಾತ್ಸಲ್ಯದ ಹೊಳೆ ಹರಿದಿತ್ತು
ಸಂತೃಪ್ತಿಯ ಮುಖವದು ಅರಳಿತ್ತು
* ಡಾ. ಜಿ ಎಸ್ ಶಿವರುದ್ರಪ್ಪ
Shivaprasadarige
Dhanyavadgalu. Nimma Kavana tamma Pooja tandeyavara dharatiyalli nimma balagada aatmiyate,Santasa,tumbibaruvante sogasagi barediruviri.Namma KB ge Kalasa ittittiddi.
Aravind
LikeLike
This being a family portrait and a personal tribute to my family ನಮ್ಮ ತಂದೆಯವರ ಶ್ರದ್ಧಾಂಜಲಿಯ ಕಾರ್ಯದಲ್ಲಿ ಈ ಕವನದ ಮೂಲಕ ಕಾವ್ಯ ನಮನವನ್ನು ನಾನು ಅರ್ಪಿಸಿದಾಗ ಅಲ್ಲಿ ಹಾಜರಿದ್ದ ಯು.ಆರ್. ಅನಂತ ಮೂರ್ತಿಯವರು ‘ನಿಮ್ಮ ಪದ್ಯದಲ್ಲಿ ಬಹಳ ಒಳ್ಳೆ images ಗಳಿವೆ’ ಎಂದು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದರು.
ಈ ಪದ್ಯವನ್ನು ಕಳೆದ ವರ್ಷ ನಮ್ಮ ತಂದೆಯವರಿಗೆ ತೋರಿಸಿದಾಗ ಅವರು ಮೆಚ್ಚಿಕೊಂಡು ಕವನವು ಕೆ. ಎಸ್. ಎನ್ ಶೈಲಿಯಲ್ಲಿರುವುದನ್ನು ಗುರುತಿಸಿದ್ದರು
Thank you all for the nice compliments
LikeLike
A perfect family idyll!
ಮೂರು ಚಿತ್ರಗಳು, ಎರಡು ಹಾಡುಗಳು ಹಾಸುಹೊಕ್ಕಾಗಿವೆ ಈ ಕವನದಲ್ಲಿ!
ಒಂದು ಸಂತೃಪ್ತ ಕುಟುಂಬದ ದೈನಂದಿನ ದೃಶ್ಯ , ಬೆಳದಿಂಗಳ ರಾತ್ರಿ ಇದ್ದರೆ ಹೀಗಿರಬೇಕು ಎಂಬ ಬಾಹ್ಯ ಲೋಕ, ಜೊತೆಗೆ ಕೇಶವ ಅವರು ಆರಿಸಿದ ಸುಂದರ ಚಿತ್ರ ಈ ಮೂರಕ್ಕೂ ಕಳೆಕೊಟ್ಟ ಅಕ್ಕನ ಹಾಡು,ತಾಳಕ್ಕೆ leaking tap! ತೆಂಗಾಳಿ ಬೀಸಿ ಆ ತೆಂಗಿನ ಚಾಮರ ಗರಿಗಳಿನ್ದ ಇನ್ನೊಂದು ಸಂಗೀತ ಏಕೆ ಹೊರಡಿಸಿಲ್ಲ ಇಂಥ ಸುಂದರ ವಾತಾವರಣದಲ್ಲಿ, ಎಂದು ನನ್ನ ಮನಸ್ಸು ಕೇಳುತ್ತದೆ.
ನಮ್ಮ ವೇದಿಕೆಯ ಪ್ರಾರಂಭದಲ್ಲಿ ಒಳ್ಳೆಯ ಕಾಣಿಕೆ!
LikeLike
ನೆನಪಿನ ಕಂಪು ನವಿರಾಗಿ ತೇಲಿ ಬಂದಿದೆ. ೆ
ಒಮ್ಮೆಗೇ ಕೆ.ಎಸ್.ನ ಎದುರು ಬಂದ ಹಾಗಾಯ್ತು
LikeLike
ಹಳೆಯ ನೆನಪು ಹಳೆಯ ನವೋದಯ ಶೈಲಿಯಲ್ಲಿ ತುಂಬ ಸುಂದರವಾಗಿ ಮೂಡಿಬಂದಿದೆ. ಓದುತ್ತ ಓದುತ್ತ ಒಂದು ಸುಂದರ ಚಿತ್ರ ಕಣ್ಣ ಮುಂದೆ ಕಟ್ಟುತ್ತದೆ. ಬೆಳದಿಂಗಳ ರಾತ್ರಿ, ಅಪ್ಪ, ಅಪ್ಪ, ಅಕ್ಕ ಎಲ್ಲರ ಸಮ್ಮಿಶ್ರಣದ ನೆನಪು ತುಂಬ ಹೊತ್ತು ಕಾಡುತ್ತದೆ.
LikeLike
ಬಹಳ ಸಿಹಿ ಮತ್ತು ಸುಂದರವಾಗಿದೆ ನಿಮ್ಮ ನೆನಪಿನ ಚಿತ್ರ. ಈ ಕವನಕ್ಕೆ ಆರಿಸಿರುವ ತೈಲವರ್ಣಚಿತ್ರವೂ ಬಹಳ ಚೆನ್ನಾಗಿದೆ. ಇದು ರಶ್ಯನ್ ಕಲಾವಿದನ ಚಿತ್ರವಲ್ಲವೇ? ಇಂತಹ ವರ್ಣಚಿತ್ರವನ್ನು ನಿಮ್ಮ ನೆನಪಿನೊಡನೆ ಜೋಡಿಸಿರುವುದು ಸಮಂಜಸವಾಗಿದೆ.
LikeLike
ಕವನದಲ್ಲಿ ನಿಮ್ಮ ಭಾವನೆಗಳನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸಿದ್ದೀರಿ.
ಅಪ್ಪನ ನೆನಪು-
ದೇವನ ಪ್ರಸಾದದಷ್ಟೇ ಶ್ರೇಷ್ಟ.
ಜಯದೇವನ ಅಷ್ಟಪದಿಗಷ್ಟೇ ಮಧುರ.
ಸವಿಸ್ಮರಣೆಗಳೇ ನಿತ್ಯ ಜಯಂತಿ.
LikeLike
ಒಂದು ಕವನವನ್ನು ಇನ್ನೊಂದು ಕವನದ ಮೂಲಕ ಕಿರು ವಿಮರ್ಶೆ ಮಾಡುವ ನಿಮ್ಮ ಜಾಣತನಕ್ಕೆ ಶರಣು
ನನ್ನ ಅಕ್ಕ ಜಯಂತಿಯನ್ನು ಹಾಗು ಅಣ್ಣ ಜಯದೇವನನ್ನು ಇತರರಿಗೆ ಪರಿಚಯ ಮಾಡಿಕೊಟ್ಟಿದ್ದಿರಿ, ಧನ್ಯವಾದಗಳು.
ನಮಸ್ಕಾರಗಳು
LikeLike