ಚಿತ್ರ – ಬರಹ: ಒಸಗೆ

ಕಲಾಕಾರರಿಗೆ ಸ್ಫೂರ್ತಿ ಬೇಕೆ? ಚಿತ್ರಗಳು ಪಾಶ್ಚಿಮಾತ್ಯ ಸಂಗೀತಗಾರರಿಗೆ ಪ್ರೇರಣೆ ಕೊಟ್ಟ ಉದಾಹರಣೆಗಳೆಷ್ಟೋ. ಮಸ್ಗೋರ್ಸ್ಕಿ, ರಾಕ್ಮಾನಿಕೋವ್, ಬೇಥೋವನ್ ಇವರ ಇಂಥ ಕೃತಿಗಳು ಪ್ರಸಿದ್ಧವಾಗಿವೆ. ಇದೊಂದು ಪ್ರೇಮಲತಾ. ಬಿ ಅವರ ಹೊಸ ಪ್ರಯೋಗ. ನಮ್ಮ ವೇದಿಕೆಯ ಸದಸ್ಯರಿಗೆ  ಒಂದು ಚಿತ್ರವನ್ನು ಕೋಟ್ಟು ಅವರ ಮನದಲ್ಲೆಬ್ಬಿಸಿದ ಭಾವನೆಗಳನ್ನು ಬರಹದಲ್ಲಿ ಮೂಡಿಸಲು ಹೇಳಿದರು. ಪದ್ಯ-ಗದ್ಯ ಯಾವುದೂ ಸರಿ ಎಂದರು. ಅವೆರಡರಲ್ಲಿ ಎರಡನ್ನು ಇಲ್ಲಿಗೆ ಕೊಟ್ಟಿದೆ. ಮುಂದಿನ ‘ತರಂಗ’ದಲ್ಲಿ ಇನ್ನೆರಡು.           Photo: Shrivatsa Desai                                                                         

                ೧)   ಒಸಗೆBoat on the lake

ನೀಲಿ ಆಗಸ, ನೀಲಿ ನೀರು

ಕೈಯಲಿ ಪದ್ಯ, ಪಾನ; ಜೊತೆಗೆ

ಒಲಿದ-ಬೆಸೆದ ಜೀವಗಳು

ತೇಲಿದೆ ಉಮರನ ಸ್ವರ್ಗವೇ ಇಲ್ಲಿ!

 

ವಿಹಾರವೋ ಪಯಣವೋ, ಇದು ಚಂದವೇ ಇಂದು

ವಿಚಾರಾರ್ಹ ಇದೆಲ್ಲ ಶಾಶ್ವತವೇ ಎಂದು

ಅಲ್ಲಿ ಕಾದಿದೆ ನಿಮ್ಮ ಸ್ಥಾನ, ಮೇಲೆ

ಸಲ್ಲಬೇಕು; ಏರಬೇಕು, ಅದೇ ಮುಕ್ತಿ!

ಶ್ರೀವತ್ಸ ದೇಸಾಯಿ

Read More »

i- ಪದಗಳು – ಸುದರ್ಶನ ಗುರುರಾಜರಾವ್ ಬರೆದ ಕವಿತೆ

ಐ-ಫೋನ್, ಐ ಪ್ಯಾಡ್ ಇವುಗಳು ನಮ್ಮ ಎಡ ಬಿಡದ ಸಂಗಾತಿಗಳಾಗಿವೆ. ಇವುಗಳ ಜೊತೆಗೆ ಕಳೆಯುವ ಸಮಯ ನಮ್ಮ ದಿನದ ಬಹು ಭಾಗವನ್ನು ಆಕ್ರಮಿಸಿಕೊಂಡು ಮನುಷ್ಯರ ನಡುವಿನ ಸಂವಹನಕ್ಕೆ ಅಡ್ಡ ಗೋಡೆಗಳಾಗಿವೆ. ಮಕ್ಕಳೂ ಇದಕ್ಕೆ ಹೊರತಲ್ಲ. ಭಾವನೆಗಳೇ ಇಲ್ಲದೆ ಬೆಳೆಸಿದರೆ ನಾಳೆ ನಮ್ಮ ಜೊತೆ ಹಂಚಿಕೊಳ್ಳಲು ಅವ್ಗಳಿಗೆ ಏನೂ ಉಳಿದಿರಲಾರದು ಎನ್ನುವುದು ನನ್ನ ಅನಿಸಿಕೆ. ಈ ಹಿನ್ನೆಲೆಯಿಂದ ಬರೆದ ಕವನ ಜಿ.ಪಿ.ರಾಜರತ್ನಂ ರ ರತ್ನನ ಪದಗಳು (hendkudka ratna) ಜಾಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅವರ ಕ್ಷಮೆ ಇರಲಿ. ಹಳೆ ಬೇರಿಗೆ ಹೊಸ ಚಿಗುರನ್ನು ಬಲವಂತವಾಗಿಯಾದರೂ ಅಂಟಿಸುವ ಹುನ್ನಾರ ನನ್ನದು!!

 

 

 

 

 

 

 

i- ಪ್ಯಾದೆಗಳು (padegalu)

ಐ-ಪಾಡ್,ಐ-ಫೋನ್,ಐ-ಪ್ಯಾಡ್ ಅಂದ್ರೆ
ಎಲ್ಲಾರ್ಗೂನು ಪ್ರಾಣ
ಐ-ಪ್ಯಾಡ್ ಕೈಯಲ್ಲಿತ್ತೂಂತಂದ್ರೆ
ಮೈಮೇಲಿರಲ್ಲ ಜ್ಞಾನ                                                                                                                           

ಬೆಳ್ಗಾಗೆದ್ದು ಐ-ಪ್ಯಾಡ್ ಹಿಡ್ಕಂಡ್
ಟಾಯ್ಲೆಟ್ಗೆ ಹೋದಾಂತನ್ನು                  
ಬ್ರಹ್ಮ ಶೌಚ ಮಾಡ್ಕೋಡ್ ಕುಂತು
ಮರ್ತು ಬೇರೇವ್ರನ್ನು
Read More »