ನಮಸ್ಕಾರ ಅನಿವಾಸಿ ಬಂಧುಗಳಿಗೆ. ನಾನೀಗ ಭಾರತದಲ್ಲಿದ್ದು ದಿನಕ್ಕೊಂದು ಊರು ಸುತ್ತುತ್ತಿರುವೆ. ಮೊನ್ನೆ ಫ್ಯಾಮಿಲಿ ಗೆಟ್ ಟುಗೆದರ್ ಎಂದು ಶ್ರೀರಂಗಪಟ್ಟಣದಲ್ಲಿದ್ದೆವು. ರಂಗನಾಥ ಮಂದಿರದಲ್ಲಿ ಏಳು ಹೆಡೆಗಳ ಆದಿಶೇಷನ ಮೇಲೆ ಹಾಯಾಗಿ ಮಲಗಿರುವ ಆ ಆದಿರಂಗನನ್ನು ಕಂಡು ಕಣ್ಮನ ತುಂಬಿದವು. ಈ ಸಲ ಮಳೆಯಿಲ್ಲದೇ ಕಾವೇರಿ ತೀರದಲ್ಲೂ ಶೆಖೆಗೆ ಬೆವರಿಳಿಯುತ್ತಿತ್ತು. ರಂಗನಾಥನನ್ನು ಕಂಡಾಕ್ಷಣ “ ಆಹಾ! ಎಂಥ ಸುಖವಪ್ಪಾ ಇವನದು.. ಮಲಗಲು ನುಣುಪಾದ, ದಪ್ಪನೆಯ, ಥಣ್ಣಗಿನ ಆದಿಶೇಷನ ಮಂಚ, ಕಾಲೊತ್ತ ಲು ಕುಳಿತ ಸಿರಿದೇವಿ.. ಯಾರಿಗುಂಟು ಯಾರಿಗಿಲ್ಲ ಇಂಥ ಭಾಗ್ಯ” ಎನ್ನಿಸಿತು. ಸಕಲ ಜೀವ ಜಂತುಗಳನ್ನೂ ಮೇಲು -ಕೀಳು, ಬಡವ- ಬಲ್ಲಿದನೆಂಬ ಭೇದವಿಲ್ಲದೇ ಆವರಿಸಿಕೊಂಡು ದಣಿವಾರಿಸಿ ಹೊಸ ಚೈತನ್ಯ ತುಂಬುವ ಈ ನಿದಿರೆಯೆಂಬ ಮಾಯಾದೇವಿಯ ಸುತ್ತಲೇ ನನ್ನ ಚಿತ್ತ ಸುತ್ತುತಿತ್ತು. ಆದರೆ ತಲೆಯ ವಿಚಾರಗಳನ್ನು, ಮನದ ಭಾವಗಳನ್ನು ಹಾಳೆಗಿಳಿಸಲು ಸಮಯವಿಲ್ಲದಷ್ಟು ವ್ಯಸ್ತವಾಗಿರುವುದರಿಂದ ಈ ಸಲದ ಸಂಚಿಕೆಯಲ್ಲಿ ನಿದ್ದೆಗೆ ಪರ್ಯಾಯವಾಚಿಯಾದ ಕುಂಭಕರ್ಣನ ಬಗ್ಗೆ ಶ್ರೀನಿವಾಸ ಉಡುಪರು ಬರೆದ ಒಂದು ಚಂದದ ಕವನವನ್ನು ಹಂಚಿಕೊಳ್ಳುತ್ತಿರುವೆ. ಓದಿ ಆನಂದಿಸುವಿರೆಂದು ನಂಬಿದ್ದೇನೆ.
ಹೇ ಶ್ರೀನಿವಾಸ!
ತಡವಾದರೂ ಹಠಾ(ಟಾ)ತ್ತನೆ )ನಿದಿರೆಯಿದೆದ್ದ ಕುಂಭಕರ್ಣನ ವರ್ಣಿಸುವ ಅದ್ಭುತ ಶಿಶುಗೀತೆಯನ್ನು ಹಂಚಿ ಕೊಂಡದ್ದಕ್ಕೆ ಗೌರಿಯವರಿಗೆ ಧನ್ಯವಾದಗಳು. ನನಗೆ ಅದರ ಪರಿಚಯವಿರಲಿಲ್ಲ. ಪ್ರವಾಸಕ್ಕೆ ಹೊರಟಿದ್ದೇನೆ. ಹಿತ್ರೂದಲ್ಲಿ ಓದುತ್ತಿದ್ದೇನೆ. ನನಗೂ ಇಂದು ರಾತ್ರಿ ನಿದ್ರೆಯಾಗಲಿಕ್ಕಿಲ್ಲ. ಆ ಕವಿತೆಯನ್ನು ಮೆಲಕುಹಾಕುವೆ. ನಿಶ್ಚಿಂತೆಯಿಂದ ಮಲಗಿದವರನ್ನು ಕಂಡರೆ ನನಗೆ ಯಾವಾಗಲೂ ಹೊಟ್ಟೆಕಿಚ್ಚು. ನಿಮ್ಮ ಪ್ರವಾಸ ಸುಖಕರವಾಗಲಿ.

LikeLike