ಅಮ್ಮ ಮತ್ತು ತವರು


ಪ್ರಿಯ ಓದುಗರಿಗೆ ಈ ವಾರದ ಅನಿವಾಸಿಯಲ್ಲಿ ವೀರೇಶ್ ಪಾಟೀಲರು ಬರೆದ ಕವಿತೆಯನ್ನು ಪ್ರಕಟಿಸಿರುವೆ. ಪ್ರಥಮ ಬಾರಿಗೆ ಅನಿವಾಸಿಗೆ ತಮ್ಮ ಕವಿತೆಯನ್ನು ಕಳುಹಿಸಿದ್ದಾರೆ. ಓದಿ ತಮ್ಮ ಪ್ರೋತ್ಸಾಹದ ಅನಿಸಿಕೆಯನ್ನು ಹಂಚಿಕೊಳ್ಳಿ. ಅವರ ಲೇಖನಿಯಿಂದ ಇನ್ನಷ್ಟು ಬರಹಗಳು ಹೊಮ್ಮಲಿ ಎಂದು ಆಶಿಸುವೆ. (ಪರಿಷ್ಕರಿಸಿದೆ)

—– ಇಂತಿ ಸಂಪಾದಕ


ತವರು


ತವರು, ಅಲ್ಲಿಹರು ನನ್ನವರು
ಸುತ್ತಿದರೇನು ನೂರು ಊರು
ಮನೆ ಇರುವುದು ತವರು,
ಅಲ್ಲೇ ಇಹರು ನನ್ನ ದೇವರು.

ಏರಿದರೇನು ಎಷ್ಟು ಎತ್ತರ
ಸೇರಬೇಕಿರುವುದು ನಿನ್ನ ಹತ್ತಿರ.
ನೋಡಿದರೆನಂತೆ ಪೂರ್ವ ಪಶ್ಚಿಮ
ನಿನ್ನಲ್ಲೇ ನನ್ನ ಸರ್ವ ಸಂಭ್ರಮ.

ನಾ ನಡೆದರೇನಂತೆ ಎಲ್ಲಿಗೆ
ದಾರಿ ಬರುವುದು ನಿನ್ನಲ್ಲಿಗೆ.
ಬದುಕ ಪಯಣದಿ, ಎಷ್ಟೋ ದೃಶ್ಯಗಳು ಕಣ್ಣಿಗೆ
ನೋಡುವ ದೃಷ್ಟಿಕೋನ ಮಾತ್ರ ನಿನ್ನದೇ ದೇಣಿಗೆ.

ತವರು, ಅಲ್ಲಿಹರು ನನ್ನವರು
ಸುತ್ತಿದರೇನು ನೂರು ಊರು
ಮನೆ ಇರುವುದು ತವರು,
ಅಲ್ಲೇ ಇಹಳು ನನ್ನ ದೇವರು.

ವೀರೇಶ್ ಪಾಟೀಲ





Leave a Reply

Your email address will not be published. Required fields are marked *