ಸುಹಾಸ ಪುರುಷೋತ್ತಮ ಕರ್ವೆ ಬರೆದ ನಾಕು ಕವಿತೆಗಳು

ಅಂಬೋಣ

ಮನೆಗೆ ಸೊಬಗ ತರುವುದು ಅಂಗಳದಲ್ಲಿ ತುಳಸಿ
ಸಂಬಂಧಗಳು ಬೆಳೆಸುವ ಹಬ್ಬದ ದೀಪ ಉರಿಸಿ
ಅಪರಿಚಿತರಲ್ಲಿ ಕೂಡ ಅಡಗಿದೆ ಶಬ್ದ ‘ಪರಿಚಿತ’
ತವರು ನಾಡು ಒಂದೇ ಇದರ ಹೊರತು ಬೇಕೇ ಬೇರೆ ಪರಿಚಯ?  || ೧ ||

ಮಳೆ ಹನಿಗೂ ಇರುವುದು ಪುಟಿದೇಳುವ ಹುಮ್ಮಸ್ಸು
       ಧರೆಯ ಆಲಂಗಿಸಲು ಹೊರಟ ಇಂದ್ರಧನಸ್ಸು
ಎಲ್ಲರ ಒಗ್ಗೂಡಿಸಲು ಪಣ ತೊಟ್ಟಿದ ಮನಸ್ಸು
       ಆಯೋಜಕರಿಗೆ ಸಲ್ಲಬೇಕು ಇದರ ಶ್ರೇಯಸ್ಸು || ೨ ||

ತಾಯ್ನಾಡಿನ ಆಡಿ-ಬೆಳೆದ ಮಣ್ಣಿನ ನೆನಪು ಸುಮಧುರ
ಸಾಮಾಜಿಕ ಜಾಲತಾಣಗಳಿದ್ದರೂ ನಾವೆಲ್ಲರೂ ದೂರ
ಕನ್ನಡಾಂಬೆಯ ಮಕ್ಕಳ ಸಮಾಗಮ ಒಂದು ರಸದೌತಣ
ಈ ಸಂಸ್ಥೆ ಹೆಚ್ಚೆಚ್ಚು ಬೆಳೆಯಲಿ ಎಂಬುದು ನಮ್ಮೆಲ್ಲರ ಅಂಬೋಣ || ೩ ||

ಅಪ್ಪಟ ಕನ್ನಡಿಗ

ಅಪ್ಪಟ ಕನ್ನಡಿಗನನ್ನು ಹುಡುಕಲಾರದೆ …
ಆಂಗ್ಲದ ಕರಿನೆರಳಿನಿಂದ ಕನ್ನಡವನ್ನು ಉಳಿಸಲಾಗದೆ
ರಾಜ್ಯೋತ್ಸವದ ಹುಮ್ಮಸ್ಸು ಕರಗಿ ಹೋಗಿದೆ
ಕನ್ನಡವ ಉಳಿಸಲು ನಾವು ಪಣ ತೊಡಬೇಕಾಗಿದೆ || ೧ ||
ಅಪ್ಪಟ ಕನ್ನಡಿಗನನ್ನು ಹುಡುಕಲಾರದೆ

‘ಚೀಟಿ’ ಈಗ ಮಾಯವಾಗಿ ‘ಟಿಕೇಟು’ ಬಂದು ಬಿಟ್ಟಿದೆ
‘ಅಂಚೆ’ಯ ಸ್ಥಾನವನ್ನು ‘ಪೋಸ್ಟು’ ತಿಂದುಬಿಟ್ಟಿದೆ || ೨ ||
ಅಪ್ಪಟ ಕನ್ನಡಿಗನನ್ನು ಹುಡುಕಲಾರದೆ

‘ಪ್ರೀತಿ’ಯಲ್ಲಿರುವ ಪ್ರೀತಿ ‘ಲವ್ವು’ ಎನ್ನುವುದರಲ್ಲಿ ಎಲ್ಲಿದೆ?
‘ರೋಜು’ ಹೇಳಿ ಈಗ ಗುಲಾಬಿಯ ಸುವಾಸನೆ ಕೂಡ ‘ರೋಸಿ’ ಹೋಗಿದೆ || ೩ ||
ಅಪ್ಪಟ ಕನ್ನಡಿಗನನ್ನು ಹುಡುಕಲಾರದೆ

‘ಕನ್ನಡ’ ಮಾಧ್ಯಮದಲ್ಲಿ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ
‘ಕನ್ನಡ’ವನ್ನು ‘ಖನ್ನಡ’ ಮಾಡಿ ‘ಕನ್ನ’ ಹಾಕಲಾಗಿದೆ || ೪ ||
ಅಪ್ಪಟ ಕನ್ನಡಿಗನನ್ನು ಹುಡುಕಲಾರದೆ

ಧನ್ಯ

ನಾನು ಮರಳಿ ಹಾದಿಗೆ

ಮನವು ಮಾತ್ರ ಎಲ್ಲಿದೆ?
ಯಾರೂ ಇಲ್ಲ ಜೋಡಿಗೆ
ಏಕಾಂಗಿ ನಾನು ಹೊರಟಿಹೆ || ೧ ||

ನಾನು ಮತ್ತು ನನ್ನ ದಾರಿ
ಜೊತೆಗವಳ ನೆನಪಿನ ಸವಾರಿ
ನಾನು ಮಾತ್ರ ಬಂದುಬಿಟ್ಟೆ
ಮನವ ಅಲ್ಲೇ ಮರೆತುಬಿಟ್ಟೆ || ೨ ||

ಮೈಲುದ್ದಕ್ಕೂ ಅವಳ ನೆನಪ ಮೆಲಕು
ಅವಳಿಗಾಗಿ ಮುಡಿಪು ಈ ಬದುಕು
ಮನವೇ… ಮನವೇ…. ನೀನು ಇದರ ತಿಳಿದುಕೊ…
ಅವಳೆಂದರೆ ನಾನೇ ಎಂದು ಅರಿತುಕೊ || ೩ ||

ಮನದಲ್ಯಾರಿಹರು ಅವಳ ಹೊರತು
ಎಲ್ಲೇಲ್ಲಿಯೂ ಅವಳದೇ ಹೆಜ್ಜೆ ಗುರುತು
ಮನವ ಮರೆತು ಬಂದೆ ಅಂದು
ಅವಳ ಪಡೆದು ಧನ್ಯನಾದೆ ಇಂದು || ೪ ||

 

ನಿಸರ್ಗ – ಒಂದು ಪಾಠಶಾಲೆ

ಬಿಸಿಲು-ಮಳೆಯ ಕಣ್ಣುಮುಚ್ಚಾಲೆ
ಜೀವನದಲ್ಲಿ ಸುಖ-ದುಃಖವಿರುವ ಹಾಗೆ
ಮಳೆಯಲ್ಲಿ ತುಂಬಿದ ಹಸಿರು
ಆನಂದವೇ ಜೀವನದ ಉಸಿರು || ೧ ||

ಬಿಸಿಲಿನಲ್ಲಿ ಬಾಡಿದ ಮರವು
    ಭೂಮಿ ಬಿಟ್ಟು ಬೀಳುವುದೇ ಹೇಳು?
ಹಸಿರು ಬರುವವರೆಗೂ ಕಾಯುವುದು ಅದು
    ದುಃಖ ಕಳೆದ ಮೇಲೆ ಸುಖ ಬರಲೇಬೇಕು || ೨ ||

ಎತ್ತೆತ್ತರಕ್ಕೂ ಬೆಳೆದ ಮರ
ಆದರೆ ಬೇರು ಮಾತ್ರ ಭೂಮಿಯಲ್ಲೇ ಸ್ಥಿರ
ಸನ್ನಿಧಿಯಲ್ಲಿ ಬಂದವರಿಗೆ ಕೊಡುವುದದು ನೆರಳ
ಅಹಂಕಾರ ಬಿಟ್ಟು ನೀನಿರು ಸದಾ ಸರಳ || ೩ ||

ಮೈ ಉಕ್ಕಿ ಹರಿಯುವ ನದಿ
ಬಂಡೆಗಲ್ಲುಗಳ ದಾಟುವ ಪರಿ
ಸಮುದ್ರಕ್ಕೆ ಸೇರುವ ಹಂಬಲ
ಗುರಿ ಪಡೆಯಲಿರಬೇಕು ‘ಅಡೆ-ತಡೆ’ ದಾಟುವ ಛಲ || ೪ ||

7 thoughts on “ಸುಹಾಸ ಪುರುಷೋತ್ತಮ ಕರ್ವೆ ಬರೆದ ನಾಕು ಕವಿತೆಗಳು

 1. Yellarigu nanna hrutpoorvaka dhanyavadagalu…. Nimma anisikegalu, vimarshegalu hagu ‘bennu tattiruvudu’ nijakku sphoortidayaka…..

  Like

 2. ಕರ್ವೆಯವರ ಕರಗಳಿಂದ ಇನ್ನಷ್ಟು ಕವನಗಳು ಕಂಗೊಳಿಸಲಿ.

  Like

 3. ಪುರುಷೋತ್ತಮ ಕರ್ವೆ ಯವರ ಚಿಕ್ಕ ಚೊಕ್ಕ ಕವನಗಳು ಹೊಸ ಗಾಳಿಯಂತೆ ನಮ್ಮ ಈ ಜಗುಲಿಯ ಮೇಲೆ ಬೀಸಿದ್ದು ಸಂತೋಷ , ಆಹ್ಲಾದ ಉಲ್ಲಾಸಗಳನ್ನು ತಂದಿವೆ.
  ಪ್ರಾಸ ಲಯ ಹಾಗೂ ಅರ್ಥಗಳನ್ನು ಹದವಾಗಿ ಬೆಸೆದ ಕವನಗಳು ಹೊರ ಪದರ ಹಾಗೂ ಒಳ ಪದರಗಳಲ್ಲಿ ಅರ್ಥವನ್ನು ತುಂಬಿ ಸುಂದರವಾಗಿ ಬರೆದಿದ್ದಾರೆ. ಕನ್ನಡಕ್ಕಾಗಿ ನಿಜಕ್ಕೂ ಮಿಡಿಯುವ ಮತ್ತೊಂದು ಹೃದಯದ ಪರಿಚಯ ಈ ವೇದಿಕೆಗೆ ಆಗಿದ್ದು ಒಳ್ಳೆಯ ಬೆಳವಣಿಗೆ.
  ಇನ್ನೂ ಹೀಗೆ ನಿಮ್ಮಿಂದ ಬರಹಗಳು ಬರುತ್ತಿರಲಿ ಬೇರೆಯವರನ್ನು ಎಳೆದು ತರಲಿ.

  Like

 4. ಪದ್ಯಗಳು ಚೆನ್ನಾಗಿವೆ.ಮುಂದುವರೆಸಿ.

  Like

 5. ಹುಟ್ಟಿದ ನಾಡನ್ನು ಹಿಂದೆ ಬಿಟ್ಟು ಬಂದ ಆಂಗ್ಲ ಕನ್ನಡಿಗನ ಮನದಲ್ಲಿ ಏಳುವ ಭಾವನೆಗಳನ್ನು ತಮ್ಮ ಮೊದಲ ಎರಡು ಪದ್ಯಗಳಲ್ಲಿ ಮೆಲಕುಹಾಕುವ ಸುಹಾಸರ ಕವನಗಳಲ್ಲಿ, ಅಪ್ಪಟ ಕನ್ನಡಿಗನ ಭಾಷಾಭಿಮಾನ ಎದ್ದು ಕಾಣುತ್ತದೆ. ನಾವೆಲ್ಲಾ ಇದೇ ದೋಣಿಯಲ್ಲಿ ತೇಲುತ್ತಿರುವ ಪಯಣಿಗರೇ ಆದ್ದರಿಂದ ಸುಹಾಸರ ಮನಸ್ಸಿನ ತಳಮಳ ಅರ್ಥವಾಗುತ್ತದೆ. ಜೊತೆಗಾತಿಯನ್ನು ಅರಸಿ ಹೊರಟ ಮನದ ಅಳಲನ್ನು ತಮ್ಮ ಧನ್ಯ ಕವನದಲ್ಲಿ ವರ್ಣಿಸುವ ಕವಿ, ಆಕೆಯ ನೆನಪಿನಲ್ಲಿ ತಮ್ಮ ಜೀವನವನ್ನು ಮುಡಿಪಾಗಿಡುವ ಸಾಲುಗಳು ನನಗೆ ಹಿಡಿಸಿತು. ಇನ್ನು ನಿಸರ್ಗದ ಆಟಗಳಲ್ಲಿ ನಾವು ಕಲಿಯಬಹುದಾದ ಜೀವನದ ಪಾಠವನ್ನು ಅವರ ಕವನದ “ಹಸಿರು ಬರುವವರೆಗೂ ಕಾಯುವುದು ಅದು, ದುಃಖ ಕಳೆದ ಮೇಲೆ ಸುಖ ಬರಲೇಬೇಕು“ ಸಾಲುಗಳಲ್ಲಿ ಸೊಗಸಾಗಿ ವ್ಯಕ್ತ ಪಡಿಸಿದ್ದಾರೆ. ಸುಹಾಸ್ ಅವರೆ, ನಿಮ್ಮ ಕವನಗಳ ಸೊಬಗನ್ನು ನಾವು ಸವಿಯುವ ಅವಕಾಶವನ್ನು ನಮಗೆ ಹೀಗೆ ನೀಡುತ್ತಲಿರಿ.
  ಉಮಾ ವೆಂಕಟೇಶ್

  Like

 6. ಕರ್ವೆಯವರ ಕವನಗಳಲ್ಲಿ ವಿವಿಧ ವಸ್ತುಗಳಿವೆ.
  ಈ ಕವನಗಳಿಂದ ನಮಗೆ ಪರಿಚಿತರಾದ ಕರ್ವೆಯವರ ಕಾವ್ಯ ಸ್ಫೂರ್ತಿ ಮೆಚ್ಚುವಂಥದು. ಒಂದರಲ್ಲಿ ಅಪ್ಪಟ ಕನ್ನಡಿಗನನ್ನು ಹುಡಿಕಿಕೊಂಡು ಹೋದರೆ ಇನ್ನೊಂದರಲ್ಲಿ ಜೋತೆಗಾರ್ತಿಯನ್ನು ಕಳೆದುಕೊಂಡ ಮನದ ನೋವನ್ನು ಹಿಂಡಿದರೂ ಕೊನೆಯಲ್ಲಿ ಧನ್ಯರಾಗುತ್ತಾರೆ. ಹಟಾತ್ತನೆ ಕೊನೆಯ ಸಾಲುಗಳಲ್ಲಿ ಎದುರಾದ ಆಶಾವಾದ ಹಿಡಿಸಿತು. ಇನ್ನೊಂದರಲ್ಲಿ ನಿಸರ್ಗಪ್ರೇಮಿಯ ಸೂಕ್ಷ್ಮ ಅವಲೋಕನವಿದೆ. ಆಂಗ್ಲದ ಕರಿನೆರಳಲ್ಲಿ ‘ರೋಸಿ’ ಹೋದ ಮನಸ್ಸಿಗೆ ಕನ್ನಡದ ‘ ಲವ್’ ಅಲ್ಲ ಪ್ರೀತಿಯೇ ಬೇಕು! ನನಗೆ ಹಿಡಿಸಿದ ಸಾಲುಗಳು. ತವರಿನಿಂದ ದೂರ ಬಂದ ಎಲ್ಲ ಅನಿವಾಸಿಗಳ ತುಡಿತವೂ ಇಲ್ಲಿ ಉಂಟು. ಮುಂದಿನ ಕಾವ್ಯ ಗುಚ್ಛಕ್ಕೆ ಎದುರು ನೋಡುವಾ.

  Like

 7. Suhas bahala. Chanda baride oduke swalpa tondare aitu adaru y’all a tilitu huge baretu ba keep it up and many happy returns of the day

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.