“ಚಿನ್ನದ ನಾಡಿದು ಮೈಸೂರು, ಶ್ರೀಗಂಧದ ಬೀಡಿದು ಮೈಸೂರು, ವೀಣೆಯ ಬೆಡಗಿನ ಮೈಸೂರು, ನಾಲ್ವಡಿ ಕೃಷ್ಣನ ಮೈಸೂರು” ಈ ಪದ್ಯದ ಸಾಲುಗಳಲ್ಲಿ ನನ್ನೂರ ಹಿರಿಮೆ, ಗರಿಮೆ, ಸಿರಿ-ಸಂಪತ್ತು ಮತ್ತು ಸೌಂಧರ್ಯಗಳು ತುಂಬಿ ತುಳುಕುತ್ತವೆ. ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ಪಡೆದಿದ್ದ ನನ್ನೂರು, ತನ್ನ ವೈಭವದ ಪರಾಕಾಷ್ಠೆಯಲ್ಲಿದ್ದಾಗ, “ಮಾದರಿ ಮೈಸೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಒಡೆಯರ್ ಮನೆತನದಿಂದ ಆಳಲ್ಪಟ್ಟ ಈ ಊರಿನಲ್ಲಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಿಧ್ಯಾಭ್ಯಾಸ ಹೀಗೆ ಒಂದೇ ಎರಡೇ, ಎಲ್ಲಾ ರಂಗಗಳಲ್ಲೂ ತನ್ನ ಹಿರಿಮೆಯನ್ನು ಮೆರೆದ ಈ ಮಹಿಷಪುರದಲ್ಲಿ, ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನ್ನ ಮನದಲ್ಲಿ, ಅಲ್ಲಿನ ನೆನಪುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.
Category: ಸರಣಿ
ನೋಡು ಬಾ ನಮ್ಮೂರ ಸರಣಿ – ನನ್ನ ಊರು ಊಟಿ – ಶ್ರೀವತ್ಸ ದೇಸಾಯಿ
ನನ್ನ ಊರಿನ ಬಗ್ಗೆ ಬರೆಯಬೇಕೆಂದೊಡನೆ ನನ್ನ ಮನದಲ್ಲಿ ದ್ವಂದ್ವ ಶುರುವಾಗುತ್ತದೆ. ದ್ವಂದ್ವ ಎರಡು ಬಗೆಯಾದರೆ, ’ಮೂರು ಬಗೆ’ಗೆ ಏನಾದರೂ ಶಬ್ದವಿದ್ದರೆ ಅದನ್ನು ಬಳಸಿಯೇನು. ಇದೇ ಜಗಲಿಯಲ್ಲಿ ಮಿತ್ರ ’ಉಪ್ಪಿನಕಾಯಿ’ ರಾಜಾರಾಮ್ ಕಾವಳೆಯವರು ಬರೆದಂತೆ ನನಗೆ ಮೂರು ಊರುಗಳಲ್ಲಿ ’ನಮ್ಮಮನೆ’ಯಿದೆ/ಇತ್ತು. ಏಕೆಂದರೆ ನಾನು ಹುಟ್ಟಿದ್ದೂರಿನಲ್ಲಿ(ಧಾರವಾಡ) ಹೆಚ್ಚು ದಿನ ಕಳೆಯಲಿಲ್ಲ, ಅಂದಮೇಲೆ ಅದು ನನ್ನೂರಾಗಲಿಲ್ಲ. ನನ್ನ ಜೀವನದ ಅತಿ ಹೆಚ್ಚಾದ ವರ್ಷಗಳನ್ನು ಪರದೇಶದಲ್ಲಿ ಕಳೆದುದು ಈಗಲೂ ವಾಸವಾಗಿರುವ ಡೋಂಕಾಸ್ಟರಿನಲ್ಲಿಯೇ. ಈಗ ಈ ಮನೆ ’ನಮ್ಮ ಮನೆ’. ಆದರೂ ಬಾಲ್ಯದ ಅತ್ಯಂತ ಸಂತೋಷದ ದಿನಗಳನ್ನು ಕಳೆದ ತಮಿಳು ನಾಡಿನ ಊಟಿಯನ್ನೇ ನಾನು ನನ್ನ ಊರು ಎಂದು ಎತ್ತಿಕೊಂಡು
Ooty Panoramic view : CC Wiki
ಚಂದದ ಸ್ವಚ್ಛಂದ ದಿನಗಳು
ನಾನು 1946 ರಲ್ಲಿ ಹುಟ್ಟಿದ್ದರಿಂದ ನಾನೂ ಒಂದು ರೀತಿಯಿಂದ Midnight Children ಗುಂಪಿಗೆ ಸೇರಿದವನೆನ್ನಬಹುದು. ಸ್ವಾತಂತ್ರ್ಯ ಸಿಕ್ಕ ದಿನದ ಮಧ್ಯರಾತ್ರಿ ಹದಿನೆಂಟು ತಿಂಗಳ ಕೂಸಾಗಿದ್ದರಿಂದ ನನಗೆ ನೆಹರೂವರ ಭಾಷಣ (“We made tryst with destiny”) ನೆನಪಿನಲ್ಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ನೆರಳು ನಮ್ಮ ಜೀವನದ ಮೇಲೆ ಇತ್ತು; ಇನ್ನೂ ಇದೆ. 1942 ರಲ್ಲಿ ಜಪಾನೀಯರು Read More »
