ಕಿಟಕಿ-ಬಾಗಿಲುಗಳಿಲ್ಲದ ಮನೆ/ಕಟ್ಟಡವನ್ನು ಊಹಿಸಿಕೊಂಡೀರಾ? ಸಾಂಕೇತಿಕವಾಗಿ ಇವನ್ನು ಅನಾದಿ ಕಾಲದಿಂದ ಬಳಸುತ್ತಲೇ ಬಂದಿದ್ದೇವೆ. ಇದರಲ್ಲೇನಿದೆ ಹೊಸತನ ಎಂದೀರಿ ನೀವು! ಬನ್ನಿ, ಓದಿ, ಈ ಕಥಾ ಲೇಖನ. ಶೀರ್ಷಿಕೆಯೇನೋ ಕಥೆಗಳು, ಆದರೆ ನನಗನಿಸುತ್ತಿದೆ ಇದರಲ್ಲಿ ಕಥೆಗಳಿಗೂ ಮೀರಿದ ಗಹನ ವಿಚಾರಗಳಿವೆ. ಅವು ನಿಮ್ಮ ಮನದ ಕಿಟಕಿ-ಬಾಗಿಲುಗಳನ್ನು ತೆರೆದಾವು. ಕಡೆಯಲ್ಲಿ ಕಥೆಗಾರ್ತಿ ಬಿಚ್ಚಿಟ್ಟರೆ ಗುಟ್ಟು?ಇದು ಕಥೆಯೇ, ವೈಚಾರಿಕತೆಯೇ…- ಸಂ

ನಮ್ಮ ಮನಸ್ಸಿಗೆ ನೂರಾರು ಕಿಟಕಿಗಳು. ಇಟ್ಟುಕೊಂಡಷ್ಟೂ ಇವೆ ಬಾಗಿಲುಗಳು. ಅವು ತೆರೆದುಕೊಂಡಾಗ ಕಥೆಗಳ ತೇರು ಹೊರಡುತ್ತದೆ. ಆಗ ಆಗುತ್ತದೆ ನಮ್ಮ ಮನಸ್ಸು ಒಂದು ರಥಬೀದಿ. ಬೀದಿಬದಿ ಅಂಗಡಿ, ಬೆಂಡು ಬತ್ತಾಸು, ಕಳ್ಳೇಪುರಿ, ಕಜ್ಜಾಯ, ಕಳೆಕಳೆ ಬಣ್ಣದ ಬಳೆಗಳ ಬಳೆಗಾರ, ಅಲ್ಲಲ್ಲಿ ಬಣ್ಣದ ಕೀಲುಕುದುರೆ … ಒಂದೇ, ಎರಡೇ! ಸಾವಿರಾರು ಕಥೆಗಳಿವೆ ಆ ಕಿಟಕಿಗಳಲ್ಲಿ. ಬಾಗಿಲುಗಳಿಂದ ಹೊರಡುತ್ತವೆ ಕೆಲವು. ಮುಚ್ಚಿಕೊಂಡಾಗ ಅವು ಗುಸುಗುಸು, ಪಿಸುಪಿಸು ಹೇಳುವ ಇನ್ನೆಷ್ಟೋ ಕಥೆಗಳು …
ನಾವು ಕಟ್ಟುವ ನಮ್ಮದೇ ಆದ ಮನೆಗೆ ಒಂದೇ ಮುಂಬಾಗಿಲು, ಅಲ್ಲೊಂದು ಹಿಂಬಾಗಿಲು, ಇಗೋ ಆಗೋ ಕಿಟಕಿಗಳು.
ಪ್ರತಿಯೊಂದಕ್ಕೂ ಜಾಗರೂಕತೆಯಿಂದ ಆಯ್ದುಕೊಂಡ ವಿನ್ಯಾಸ, ಚೌಕಟ್ಟು, ಬಣ್ಣ, ಮೇಲ್ಮೈ ಹೊದಿಕೆ, ಅಳವಡಿಸಿದ ಕಲ್ಲು, ಮಣ್ಣು,
ಸಿಮೆಂಟ್ …
ನಮ್ಮದೋ, ಅವರದೋ ಮನೆ ಇರುವ ದಿಕ್ಕು, ತಾಣ, ಅದರ ಉದ್ದ, ಅಗಲ, ಸುತ್ತಲೂ ಇರುವ ಅಥವಾ ಇಲ್ಲದಿರುವ ಹೊರಾಂಗಣ ಜಾಗ. ಎಲ್ಲವನ್ನೂ ಗಮನಿಸಿದರೆ ಅಲ್ಲೊಂದು ಇಲ್ಲೊಂದು ಬೇರೆ ಬೇರೆ ಕಥೆಯಿದೆ. ಅವಳದ್ದು, ಅವನದ್ದು, ಅಜ್ಜಿ ತಾತಂದಿರದ್ದು, ಮಕ್ಕಳು ಮೊಮ್ಮಕ್ಕಳು, ಮದುವೆ, ಹುಟ್ಟು, ಸಾವು, ಇನ್ನೂ ಏನೇನೋ…..
ಕಥೆಗಳ ವಿಚಿತ್ರ ಸಂತೆ ಅಲ್ಲಿ ಇದೆ. ಜೀವಗಳಿವೆ. ಜೀವಾತ್ಮಗಳಿವೆ. ನಮಗೆ ನಾವೇ ಆಮಂತ್ರಣವಿಟ್ಟುಕೊಂಡು ಹೊರಟರೆ, ಕಥಾ ಹಂದರಕ್ಕೆ ಹೊಕ್ಕರೆ. ಏನೇನೋ ಸಿಕ್ಕಿಬಿಡುತ್ತದೆ.
ಅಲ್ಲೊಂದು ಜೀವ ಹುಟ್ಟಿತು, ಅಜ್ಜಿ ಬಲು ಜತನದಿಂದ ಆ ಪುಟಾಣಿಗೆ ಮಲ್ಲಿಗೆ ಹೂವ ಮೆತ್ತೆನೆಯ ರಜ್ಹಾಯಿ ತೊಡಿಸಿ, ನೆಟಿಕೆ
ಮುರಿದು, ತೊಟ್ಟಿಲ ತೂಗಿ, ಹಾಡ ಹಾಡಿದ್ದನ್ನು ಕಂಡ ಆ ಕಿಟಕಿಗಳು ನಸು ನಕ್ಕವಂತೆ. ಅಪ್ಪ ಬೇಡೆವೆಂದು ಗದರಿದಾಗ ನೊಂದ ನಾಜೂಕು ಹುಡುಗಿ ತನ್ನ ಪ್ರೀತಿಯ ಹುಡುಗನನ್ನು ಸೇರಲು ಹೊರಟಳಂತೆ. ನಾಜೂಕು
ನಲ್ಲೆ ಕಿಟಕಿಯಿಂದ ಉದ್ದಾನುದ್ದದ ಬಟ್ಟೆಯನ್ನು ಜೋತು ಬಿಟ್ಟು ಧೈರ್ಯ ಮಾಡಿ ಕೆಳಗಿಳಿದು ಮತ್ತೆಂದೂ ಈ ಮನೆಗೆ ನಾ
ಕಾಲಿಡಲಾರೆನೆಂಬ ಸತ್ಯ ಗೊತ್ತಿದೆ ಎಂದು ಕತ್ತೆತ್ತಿ ತನ್ನ ಕಿಟಕಿಯನ್ನು ದಿಟ್ಟಿಸಿ ನೋಡಿದಳಂತೆ. ಅದನ್ನು ನೋಡಿದ ಹಿಂಬಾಗಿಲು ಮುಸಿ ಮುಸಿ ನಕ್ಕಾಗ ಕೇಳಿಸಿಕೊಂಡ ಹೆಬ್ಬಾಗಿಲು ನಿಟ್ಟುಸಿರು ಬಿಟ್ಟಿತಂತೆ – “ಹುಡುಗಿ ತನ್ನನ್ನು ಇನ್ನೆಂದೂ ಸವರಿಕೊಂಡು ದಾಟಿ
ಹೋಗಲಾರಳು, ಆಹಾ ವಿಧಿಯೇ!” ಎಂದು ಮರುಕ ಹುಟ್ಟಿಸಿತಂತೆ.
ಆಗೋ ಆ ಬಡ ಹುಡುಗ ತನ್ನ ಚೆಲುವರಸಿಗೆ ಬರೆದ ಪ್ರೇಮ ಸಂದೇಶವನ್ನ ರವಾನಿಸಿದ್ದು ಈ ಕಿಟಕಿಯೇ. ನೋಡಿ ನಾಚಿದ್ದು ಆ
ಕಿಟಕಿಯೇ. ಇಬ್ಬರನ್ನು ಗದರಿಸಿದ್ದು ಅಹೋ ಆ ವಯಸ್ಸಾದ ನಡುಬಾಗಿಲು.
ಮನೆ ಕಟ್ಟಿ, ಚೆಂದನೆ ಮುಂಬಾಗಿಲ ಇಟ್ಟು, ಗೃಹ ಪ್ರವೇಶ ಮಾಡಿ ದ್ರಾಕ್ಷಾರಸದ ಹೊಳೆ, ಸಂಗೀತದ ಸಂಜೆಯ ಸರದಾರ ಆ ಒಡೆಯ ಇಗೋ ಅದೇ ತನ್ನ ನೆಚ್ಚಿನ ಬಾಗಿಲಿನಿಂದ ಅಂತಿಮಯಾತ್ರೆಗೆ ಹೊರಟ. ಅಂದು ಮೌನಪಥ ಧರಿಸಿದ ಬಾಗಿಲು ಹಾಗೇ ಇದೆ, ಅದರ ತಲೆಗೆ ಹಾಕಿದ ಆ ಕರ್ಟನು ಮುಚ್ಛೇ ಇದೆ. ಇಲ್ಲಿ ಬನ್ನಿ. ಈ ಬಾಗಿಲು ನೋಡಿ. ಹಲವರನ್ನು ನೋಡಿ ಅವು ಉಹು ನಿಮ್ಮನ್ನು ನಾನು ಬಿಟ್ಟುಕೊಳ್ಳಲಾರೆ ಎಂದು ಸಿಡುಕಿ ಧಡಕ್ಕನೆ
ಮುಚ್ಚಿಕೊಂಡಿರಬಹುದು. ಅಹೋ ಎಲ್ಲಿ ನೋಡಿ. ಬೇಡದಿದ್ದರೂ ಕೆಲವರಿಗೆ ತೆರೆದುಕೊಳ್ಳುವ ಪಾಡು ಆ ಕಿಟಕಿಗಳಿಗೆ ಬಂದಿರಬಹುದು.
ಇನ್ನು ಈ ಬೀದಿಯ ಕೆಲ ಬಾಗಿಲುಗಳಂತೂ ಸದಾ ಸಂತೋಷದ ಬುಗ್ಗೆಗಳು. ಆ ಬಾಗಿಲುಗಳು, ಕಿಟಕಿಗಳು ನೋಡಿದ ನಲಿವು,
ನಗೆ, ಉಲ್ಲಾಸ, ಸಂಭ್ರಮ, ಹರ್ಷ ಪಟ್ಟನೆ ಕಾಣಿಸಿಕೊಳ್ಳುತ್ತವೆ. ಅದು ನಮಗೆ ಪಟಕ್ಕನೆ ಅರ್ಥವಾಗಿಬಿಡುತ್ತದೆ ಅಲ್ಲವೇ! ಬಾಗಿಲುಗಳ, ಕಿಟಕಿಗಳ ಕಥೆಗಳ ಸಂತೆಯಲ್ಲಿ ಸಿಕ್ಕುವ ನಮಗೆ ಬೇಕಿದ್ದ ಪದಾರ್ಥಗಳು, ಕುತೂಹಲ ಹುಟ್ಟಿಸುವ ವಸ್ತುಗಳು, ‘ಚೆನ್ನಾಗಿದ್ದೀರಾ?’ ಎಂದು ನಾವು ಮಾತನಾಡಿಸುವ ಮಂದಿ, ಮುಖ ಮುಚ್ಚಿಕೊಂಡ ಕೆಲವರು, ಬಚ್ಚಿಟ್ಟ ನೋವು, ಕೇಳಿಸಿದ ನಗು,
ಜೋಪಾನವಾಗಿ ಅಡಗಿಸಿದ್ದ ಗುಟ್ಟುಗಳು, ಎಲ್ಲವೂ ಸಿಕ್ಕಿಬಿಡುತ್ತವೆ. ಕಥೆಗಳೇ ಹಾಗೆ. ಆ ಆವರಿಸಿಕೊಂಡುಬಿಡುತ್ತವೆ. ಅವುಗಳಲ್ಲಿ ಎಲ್ಲೋ ನಾವೂ ಕೂಡ ಕೊಂಚ ಇದ್ದೀವಿ ಅನ್ನಿಸಿಬಿಡುವುದೂ ಆಗಬಹುದು.
ನಾನು ಫ್ರಾನ್ಸ್ ದೇಶದಲ್ಲಿ ಓಡಾಡುತ್ತಿದ್ದಾಗ ಕಥೆಗಳು ಹಾಗೆ ನನ್ನನ್ನು ಆವರಿಸಿಬಿಡುತ್ತಿದ್ದವು. ನನ್ನ ಕಥೆಗಾರರು ಕಟ್ಟಡಗಳು, ಬಾಗಿಲುಗಳು, ಕಿಟಕಿಗಳು. ಇಲ್ಲಿ ನನ್ನನ್ನು ಆಕರ್ಷಿಸಿದ ಫ್ರೆಂಚ್ ಮನೆಗಳ ಕಿಟಕಿ ಬಾಗಿಲುಗಳ ಕೆಲ ಚಿತ್ರಗಳು ಇವೆ.
– ವಿನತೆ ಶರ್ಮ
…..ಚಿತ್ರ ಪ್ರಬಂಧವೇ?


ಹಾಕುತ್ತಿರುತ್ತಾನೆ. ಅವನ ಕೈಗೆ ಪ್ರಪಂಚ ಪರ್ಯಟನೆಗೆ ಹೋರಟ ನಾರದರು ಸಿಕ್ಕಿಬೀಳುತ್ತಾರೆ. ತಿನ್ನಲು ಬಂದ ರಾಕ್ಷಸನ ಹಸಿವೆಯನ್ನು ಮಂತ್ರ ಶಕ್ತಿಯಿಂದ ಪರಿಹರಿಸುತ್ತ, ಋಷಿಯೊಬ್ಬನ ಶಾಪಕ್ಕೊಳಗಾಗಿ ಅಸುರನಾಗಿರುವ ಯಕ್ಷ ನೀನು ಎಂಬ ಕಥೆಯನ್ನೂ ಹೇಳುತ್ತಾರೆ. ನೀನು ಸ್ತ್ರೀಯೊಬ್ಬಳನ್ನು ಕೂಡಿ, ಗರ್ಭದಾನ ಮಾಡಿ ಅದೇ ಸ್ತ್ರೀಯ ಪತಿಯಿಂದ ಹತನಾದರೆ ಮಾತ್ರ ನಿನಗೆ ಶಾಪ ಮುಕ್ತಿ ಎಂಬ ಪರಿಹಾರವನ್ನು ತಿಳಿಸುತ್ತಾರೆ. ರಾಕ್ಷಸ ಶಾಪ ಮುಕ್ತಿಯ ಹಾದಿ ಹುಡುಕುತ್ತ ಸಾಗುತ್ತಾನೆ.
ಎದುರಾಗುತ್ತಾನೆ. ಉಭಯಕುಶಲೋಪರಿಯ ಬಳಿಕ ಮಾತು ಮುಂದುವರೆಯುತ್ತ, ವೃಷಸೇನೆ ಮನದಿಚ್ಛೆ, ದುಗುಡ-ದುಮ್ಮಾನಗಳನ್ನು ಅಪರಿಚಿತನೆದುರು ಬಿಚ್ಚಿಡುತ್ತಾಳೆ. ಬ್ರಾಹ್ಮಣ ಅವಳಿಗೆ ಸಮಾಧಾನ ಹೇಳಿ, ಆಶೀರ್ವದಿಸಿ ತನ್ನ ದಾರಿ ಹಿಡಿದು ಹೋಗುತ್ತಾನೆ. ಅಂತೆಯೇ ಅಲ್ಲಿಗೆ ಉಗ್ರಸೇನ ಆಗಮಿಸುತ್ತಾನೆ. ವೃಷಸೇನೆಗೆ ಆನಂದಾಶ್ಚರ್ಯ! ನಿರೀಕ್ಷೆಗಿಂತ ಮೊದಲೇ ಬಂದ ಗಂಡನನ್ನು ಕಂಡ ಆಕೆಯ ಸಂತೋಷಕ್ಕೆ ಮೇರೆಯೇ ಇರುವುದಿಲ್ಲ. ರಾಜ ಪ್ರವೇಶಿಸುತ್ತಿದ್ದಂತೇ ಅವರ ಏಕಾಂತಕ್ಕೆ ಧಕ್ಕೆ ಬರದಿರಲೆಂದು ಸಖಿಯರು ಅರಮನೆಗೆ ತೆರಳುತ್ತಾರೆ. ಮೈಮರೆತ ವೃಷಸೇನೆ, ರಾಜನನ್ನು ಬಲು ಸಂಭ್ರಮದಿಂದ ಕೂಡುತ್ತಾಳೆ.
ಆಕೆ ಮೂರ್ಛೆ ಹೋಗುತ್ತಾಳೆ. ತಾನು ಮಾಡಿದ ಪ್ರಮಾದದ ಅರಿವೂ ಇಲ್ಲದ ರಾಕ್ಷಸನೋ ತನ್ನ ಕಾರ್ಯವಾದ ಸಂತಸದಲ್ಲಿ ಬೀಗುತ್ತ ವಿಶ್ರಮಿಸುತ್ತಾನೆ. ಅತ್ತ, ಅರಮನೆಗೆ ತೆರಳಿದ ಸಖಿಯರಿಗೆ ದಿಗ್ಭ್ರಾಂತಿ ; ತಾವು ಕಾಡಿನಲ್ಲಿ ಕಂಡ ಅರಸ ಅರಮನೆಯಲ್ಲೇ ಇದ್ದಾನೆ! ವೃತ್ತಾಂತ ಕೇಳಿದ ಉಗ್ರಸೇನ ನಖಶಿಖಾಂತ ಕೋಪದಿಂದ ಕುದಿಯುತ್ತ ಅರಣ್ಯಕ್ಕೆ ಧಾವಿಸುತ್ತಾನೆ. ಹಮ್ಮಿನಲ್ಲಿ ಕುಳಿತ ದುರುಳನ ಕತ್ತನ್ನು ‘ಖಚಕ್’ ಎಂದು ಕತ್ತರಿಸುತ್ತಾನೆ. ಸ್ಮೃತಿ ಬಂದ ವೃಷಸೇನೆ, ಗಂಡನಿಗೆ ಆದ ಕಥೆಯನ್ನೆಲ್ಲ ಹೇಳಿ, ತಿಳಿಯದೇ ಆದ ತಪ್ಪನು ಮನ್ನಿಸೆನೆಂದು ಗೋಗರೆಯುತ್ತಾಳೆ. ಉಗ್ರಸೇನನಿಗೆ ಉಭಯಸಂಕಟ. ಆತ ವೃಷಸೇನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರೂ, ಸಮಾಜದ ಕೊಂಕುನೋಟವನ್ನು ಎದುರಿಸಲಾರೆನಲ್ಲ ಎಂದು ಅಲವತ್ತುಕೊಳ್ಳುತ್ತಾನೆ. ಬೇರೆ ದಾರಿ ಕಾಣದೇ ವೃಷಸೇನೆ ಇನ್ನೇನು ಆತ್ಮಹತ್ಯೆಯ ಮೊರೆಹೋಗಬೇಕೆನ್ನುವಾಗ, ನಾರದರು ಪ್ರತ್ಯಕ್ಷರಾಗುತ್ತಾರೆ. ಇಬ್ಬರಿಗೂ ಬುದ್ಧಿ ಹೇಳಿ, ದಂಪತಿಗಳನ್ನು ಒಂದು ಮಾಡಿ ಮಂಗಳ ಹಾಡುತ್ತಾರೆ.