
ಬಾ ಗೆಳತಿ ಮತ್ತೆ ಕೈ ಕೈ ಹಿಡಿದು
ನಡೆಯೋಣ ತುಸು ದೂರ ಇಳಿ ಸಂಜೆಯಲಿ
ಇಳಿಸುತ ನಮ್ಮೆದೆಗಳ ಭಾರವನು
ಮಾತಿನಿತು, ಮೌನವಿನಿತು
ವಾದ ಬೇಡ, ವಿವಾದ ಬೇಡ
ಅರ್ಥಬೇಡ , ಅನರ್ಥಬೇಡ
ನೆನಪು ಮಾಡಿಕೋ ಮುತ್ತೊಂದ
ಕೇಳಿದ್ದೆ ನಾನು ನಿನ್ನ
ಮದುವೆಗೂ ಮುನ್ನ
ಕಣ್ಣ ಮುಚ್ಚಲು ಹೇಳಿ ನನ್ನ
ಭಯದಲ್ಲೇ ನೀ ಕೊಟ್ಟುದನ್ನ
ಕಣ್ಬಿಡಲು ಮತ್ತೆ ನೀ ಮಾಯವಾದದ್ದನ್ನ
ಮುಂದೆ ಒಳ್ಳೆಯ ದಿನಗಳಿಲ್ಲದ್ದನ್ನು
ನೆಪಮಾಡಿ ದೂರವಿಟ್ಟರು ಬಹು ದಿನ ನಮ್ಮನ್ನು
ನೀನೂ ಮೀರದಾದೆ ಹಿರಿಯರನ್ನು
ನಾನೂ ಕೇಳದಾದೆ ನಿನ್ನನ್ನು
ಗೊತ್ತೇನು ನಿನಗಾಗಿ ನಾ ಬರೆದ ಮೊದಲ ಕವನ
ಸ್ಪಷ್ಟವಾಗಿ ಓದಲು ಬಾರದಾದೆ ನೀನದನ್ನ
ಅಂದಿಗೇ ನಿಲ್ಲಿಸಬೇಕೆನಿಸಿತ್ತು ಬರೆಯುವುದನ್ನ
ಮತ್ತೆ ನಾನೇ ಬಿಡಿಸಿ ಹೇಳಿದೆನು ಅದರರ್ಥವನ್ನ
ಇದೇ ನೋಡು ಬಾಳ ಪಯಣದ ಗುಟ್ಟು
ನನ್ನ ತಪ್ಪಾದರೆ ನಿನ್ನ ಕ್ಷಮೆಯಿರಲಿ
ನಿನ್ನ ತಪ್ಪಾದರೆ ನನ್ನ ಕ್ಷಮೆಯಿರಲಿ
ತೆರೆಮೇಲು ತೆರೆಬೀಳು ಈ ಸರಿ-ತಪ್ಪುಗಳು
ಎಲ್ಲ ಕಹಿಗಳಿಗೆ ಮರೆವು ತಾಳೋಣ
ರವಿ ಜಾರಿದ ಬಾ ಚಂದಿರನೂರ ಸೇರೋಣ
Nimma kavanadalli jeevanada guttu arthapoorvakavaagi chimmide.
Aravind Kulkarni
LikeLike
‘ಅಂದಿಗೇ ನಿಲ್ಲಿಸಬೇಕೆನಿಸಿತ್ತು ಬರೆಯುವುದನ್ನ
ಮತ್ತೆ ನಾನೇ ಬಿಡಿಸಿ ಹೇಳಿದೆನು ಅದರರ್ಥವನ್ನ’
ಸೊಗಸಾದ ಸಾಲುಗಳು.
– ಕೇಶವ
LikeLiked by 1 person
Poetry is simple, effective and romantic
Poet is pragmatic!
LikeLike
ಧನ್ಯವಾದಗಳು ಸರ್
LikeLike
Simple but very effective. It is full of emotions. Liked it a lot
LikeLike
ಧನ್ಯವಾದಗಳು
LikeLike
ಸುಂದರವಾದ ಭಾವಗಳಿವೆ. ಏನನ್ನೋ ಹೇಳುವ ಹಂಬಲ, ತುಸು ಹಾಸ್ಯ, ನೆನಪು, ಕಾತುರ ಜೊತೆಗೆ ಸಂದೇಶಗಳು ಎಲ್ಲ ಒಟ್ಟಿಗೆ ಸೇರಿ ಕವನದ ಹಾದಿ ಅಂಕು ಡೊಂಕಿನಲ್ಲಿ ಸಾಗಿದೆ. ಆದರೂ ಇದರಲ್ಲಿನ ರಮ್ಯತೆಗೆ ಕೊರತೆಯಿಲ್ಲ.
ಬಹಳಷ್ಟು ದಿನದ ಮೇಲೆ ಬರೆದಿದ್ದೀರಿ. ಮತ್ತೆ ಮತ್ತೆ ಬರೆಯುತ್ತಿರಿ.
LikeLike
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಅಂಕು ಡೊಂಕಿನ ಬಗ್ಗೆ ಗಮನ ಹರಿಸುವೆ
LikeLike
ಬಹಳ ಚೆನ್ನಾಗಿದೆ! ಭಾವಪೂರ್ಣ. Touched a chord!
LikeLike