ಇವತ್ತು ಕ್ರಿಸ್ಮಸ್!

ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ ಆ ಒಂದು ದಿನ ಇವತ್ತು – ಕ್ರಿಸ್ಮಸ್ ಹಬ್ಬ. ಎಲ್ಲೆಲ್ಲೂ ಬಣ್ಣ ಬಣ್ಣದ ದೀಪಾಲಂಕಾರ. ಹಾಡುಗಳು. ಇಡೀ ದೇಶವೇ ಆಚರಿಸುವ ದೊಡ್ಡ ಹಬ್ಬ. ಪ್ರತಿಯೊಂದು ಶಾಲೆಯ ಮಕ್ಕಳು ಒಂದು ತಿಂಗಳು ಕ್ರಿಸ್ಮಸ್ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿ, ಹಾಡುಗಳ ಹೇಳಿ, ಆನಂದಿಸುವ ಕಾಲ. ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಳು. ಮೈಮೇಲೆ ಕಪ್ಪು ಉಡುಗೆಯಿದ್ದರೂ ಮನೆಯಲ್ಲಿ, ಬೀದಿಯಲ್ಲಿ ಬಣ್ಣದ ಓಕುಳಿ. ಕ್ರಿಸ್ತ ಹುಟ್ಟಿದ ಕತೆ. ಬಂಧುಬಳಗ ಬಂದು ಸೇರುವ ಸಂದರ್ಭ. ತಿಂಡಿ ತಿನಿಸು ಊಟ. ಮನ ಬಿಚ್ಚಿ ಕೊಡುವ ದಾನದತ್ತಿಗಳು. ನಮ್ಮೆಲ್ಲರ ಮನೆಗಳಲ್ಲೂ ಒಂದು ಅಲಂಕಾರಿಕ ಕ್ರಿಸ್ಮಸ್ ಟ್ರೀ. ಹಿಮದೇಶಗಳ ಚಳಿ, ಕತ್ತಲು ತುಂಬಿದ ವಾತಾವರಣಕ್ಕೆ ಬೇಕೇ ಬೇಕಿದ್ದ, ಆತ್ಮವನ್ನ ಬೆಚ್ಚಗಿರಿಸುವ ಹಬ್ಬದ ಸೀಸನ್. ಇಲ್ಲಿವೆ ಕೆಲ ವಿಡಿಯೋಗಳು, ನಿಮಗಾಗಿ. -ಸಂ.

img-20161213-wa0010
ಸ್ವರ್ಣ-ವಿಶ್ವನಾಥ್ ಮಂದಗೆರೆ ಮನೆಯಲ್ಲಿ ಕ್ರಿಸ್ಮಸ್ ಟ್ರೀ

ಚಿಕ್ಕ ಮಕ್ಕಳು ಹೇಳುವುದು – Can we have Xmas everyday?

ರುಡೊಲ್ಫ್ ಜಿಂಕೆಯ ಕೆಂಪು ಮೂಗು ಅದಕ್ಕೆ ಕಾರಣವೋ ಎಂಬ ಅನುಮಾನ!

 

ಆ ಮಗು ಹುಟ್ಟುವ ಸಮಯ. ಮೇರಿಯ ಕಂದನೋ, ದೇವಕಿ ತನಯನೋ…

 

ಆಸ್ಟ್ರೇಲಿಯಾದ ಬೇಸಗೆಯಲ್ಲಿ ಬೀಚ್, ಬಾರ್ಬಿಕ್ಯೂ. ಕಾಂಗರೂಗಳ ಜೊತೆ ಈ ಹಾಡು – Six White Boomers…

 

ಈ ವರ್ಷ ನೊಬೆಲ್ ಪ್ರಶಸ್ತಿ ಪಡೆದ ಹಾಡುಗಾರ-ಸಾಹಿತಿ ಬಾಬ್ ಡಿಲೊನ್ ಹಾಡಿದ್ದು – Must Be Santa

 

ಮರೆಯಲಾಗದ ‘ವ್ಹಾಮ್’ -Last Christmas

 

ಜಾನ್ ಲೆನ್ನನ್ ಹಾಡಿದ Happy Xmas, War is Over…

 

 

 

3 thoughts on “ಇವತ್ತು ಕ್ರಿಸ್ಮಸ್!

  1. ವಿಧಿಯ ವಿಪರ್ಯಾಸ ಎನ್ನಬಹುದೇ? ಕಾಕತಾಳೀಯವೋ? ಮರೆಯಲಾಗದ ‘ವ್ಹಾಮ್’ -Last Christmas ವಿಡಿಯೋವನ್ನ ಹಾಕಿದೆವು. ಆ ಹಾಡನ್ನ ಹಾಡಿದ ಜಾರ್ಜ್ ಮೈಕಲ್ ಕ್ರಿಸ್ಮಸ್ ದಿನವಂದೇ ಮೃತರಾಗಿದ್ದಾರೆ ಎಂಬ ಸುದ್ದಿ ನಿನ್ನೆ ಬಂದಿದೆ. ಆತನಿಗೆ ಇದೇ ಕೊನೆಯ ಕ್ರಿಸ್ಮಸ್ ಆದದ್ದು ದುಃಖಕರ.
    ವಿನತೆ ಶರ್ಮ

    Like

  2. ಕ್ರಿಸ್ಮಸ್ ದ ಸ್ಪೇಷಲ್ ಅಂಕಣ ನೋಡಿದೆ .ಉಲ್ಲಾಸ ನೂರ್ಮಡಿಯಾಯ್ತು .ನಿಜಕ್ಕೂ ನಿಮ್ಮ ಕ್ರಿಯಾತ್ಮಕ ,ಸೃಜನಾತ್ಮಕ ಆಲೋಚನೆಗಳು ,ಅವನ್ನ ಕಾರ್ಯರೂಪಕ್ಕಿಳಿಸಿ ಎಲ್ಲರಿಗೂ ನೀಡೀದ ರಸದೌತಣಕ್ಕೆ ಹಾರ್ದಿಕ ಅಭಿನಂದನೆಗಳು.ಕ್ರಿಸ್ಮಸ್ ವೇಳೆಗೆ ನಿಮ್ಮಲ್ಲಿ ಒಂದು ಸಲವಾದರೂ ಭೇಟಿ ನೀಡಬೇಕೆಂಬ ಸಣ್ಣ ಆಸೆಯನ್ನ ಮೂಡಿಸಿದೆ ನಿಮ್ಮ ಅಂಕಣ ಅಂದ್ರೆ ಅಚ್ಚರಿಯೇನಲ್ಲ.
    ಸರೋಜಿನಿ ಪಡಸಲಗಿ

    Liked by 1 person

  3. ಕ್ರಿಸ್ಮಸ್ಗಾಗಿ ಸಮಯೋಚಿತವಾಗಿ ಉಣಬಡಿಸಿದ ‘medley.’ A good selection of songs. Made me feel that wide eyed excited child again! Thank you!

    Like

Leave a Reply to Sarojini Padasalagi Cancel reply

Your email address will not be published. Required fields are marked *