ಅವೋಕಾಡೋ ಹಣ್ಣುಗಳು — ಕೇಶವ ಕುಲಕರ್ಣಿಯವರ ಕೊಡುಗೆ

ಡಾ ಕೇಶವ ಕುಲಕರ್ಣಿಯವರು ಬಹುಮುಖ ಪ್ರತಿಭೆಯ ಬರಹಗಾರರು. ವಿವಿಧ ‘ಜಾನ್ರ’ಗಳಲ್ಲಿ ಪಳಗಿದವರು. ಅಷ್ಟೇ ಅಲ್ಲ “ಅನಿವಾಸಿಯ” ಪ್ರಾರಂಭದಿಂದಲೂ ಅದರ ಕೇಂದ್ರದಲ್ಲಿದ್ದಾರೆ. ತಾಂತ್ರಿಕ ವಿಷಯಗಳಲ್ಲೂ ಪರಿಣಿತರು. ಇಂಗ್ಲಿಷ್ ಕವನದ ಈ ಅನುವಾದದಲ್ಲಿ ಬೆಣ್ಣೆ ಹಣ್ಣಿನ ಮರ್ಮವನ್ನು ಭೇದಿಸಿ ಬೀಜವನ್ನು ಬಟಾ ಬಯಲು ಮಾಡುವ ಸಾಹಸ!

ಬೆಣ್ಣೆಹಣ್ಣುಗಳು (ಅವೋಕಾಡೋ ಹಣ್ಣುಗಳು)

Avocado
ನಂಗಿಷ್ಟಅವು ಅಂಗೈಲಿ ಒಪ್ಪುವ ರೀತಿ –
ಧಡೂತಿ ಬುದ್ಧನ ತೂಕ,
ಮಾಗಲು ತುಂಟ ಹಿಸುಕು,
ಚೂರಿಯ ನೀಳ ಸೀಳು,
ಮೆದು ಹೀರುತ್ತ
ತಿರಿಗಿಸುತ್ತ ಇಬ್ಭಾಗಿಸಿದರೆ
ಗಟ್ಟಿ ಚರ್ಮ ಸಲೀಸಾಗಿ ಸುಲಿದು
ಬೆತ್ತಲೆ, ಸಾಬೂನಿನಂತೆ ನುಣುಚು.
ನಾನೇ ಬಡಿಸಿಕೊಳ್ಳುವೆ ನನಗೆ
ಸೀಳಿ ಅಗಲಿಸಿ
ಬಿಳಿಪಿಂಗಾಣಿಯ ಮೇಲೆ
ಎಣ್ಣೆ ಸವರಿ ಹೊಳಪಿಸಿ,
ಇಲ್ಲಾ ತುಂಬುವೆ ನುಣುಪು ಕುಣಿಯನು
ಘಾಟು ಒಗ್ಗರಣೆಯಲಿ
ಎಬ್ಬುತ್ತ
ತಿಳಿಬೆಣ್ಣೆಯ ಅಡಗು (ತಿರುಳು).

ನೀವು ಓದಿದ ಯಾವುದೇ ಪಥ್ಯವೂ
ಕಟ್ಟುನಿಟ್ಟಾಗಿ ಅವನ್ನು ನಿರ್ಬಂಧಿಸಿವೆ

(Avocadoes by Esther Morgan, in the collection ‘Beyond Calling Distance.’ Full text in one of the comments.)

ಕನ್ನಡಕ್ಕೆ: ಕೇಶವ ಕುಲಕರ್ಣಿ ಮತ್ತು ಸುದರ್ಶನ್ ಗುರುರಾಜರಾವ್  (ಕೆಳಗೆ ನೋಡಿರಿ)

ಕವಿತೆಯನ್ನು ಓದಿ  ಸುದರ್ಶನ್ ಅವರು ತಮ್ಮ ಅನುವಾದವನ್ನು ಕಳಿಸಿದ್ದಾರೆ. ಅದನ್ನೂ ಸವಿಯಿರಿ! (ಸಂ)

Avocado Translation with name

 

 

 

 

 

7 thoughts on “ಅವೋಕಾಡೋ ಹಣ್ಣುಗಳು — ಕೇಶವ ಕುಲಕರ್ಣಿಯವರ ಕೊಡುಗೆ

 1. ಎರಡೂ ಕವನಗಳು ಸೊಗಸಾಗಿ ಮೂಡಿ ಬಂದಿವೆ. ಚಿಕ್ಕಂದಿನಿಂದ ಅಜ್ಜನ ಮನೆಯಲ್ಲಿ ಬೆಳೆದ ಬೆಣ್ಣೆ ಹಣ್ಣನ್ನು ಸಕ್ಕರೆಯೊಂದಿಗೆ ಹದವಾಗಿ ಬೆರೆಸಿ ಗಮ್ಮತ್ತಾಗಿ ತಿಂದ ನೆನಪುಗಳೆಲ್ಲ ಇಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಕಂಡಾಗ ಮರುಕಳಿಸಿತ್ತು.
  ಭಿನ್ನವಾಗಿ ಇಬ್ಬರೂ ಕವಿಗಳು ತಮ್ಮದೇ ಶೈಲಿಯಲ್ಲಿ ಭಾವನುವಾದಿಸಿ ಬೆಣ್ಣೆ ಹಣ್ಣನ್ನು ಉಣಬಡಿಸಿದ್ದಕ್ಕೆ ಧನ್ಯವಾದಗಳು.

  Like

 2. ವ್ಹಾ ವ್ಹಾ ಸುದರ್ಶನ ಅವರೆ! ಅಡುಗೆ ಮನೆಯಲ್ಲಿ ಅದೇ ಪದಾರ್ಥವನ್ನು ತರತರದ ವಿಧದಲ್ಲಿ ರುಚಿ ರುಚಿಯಾಗಿ ಉಣ ಬಡಿಸುವಂತೆ ಅವಾಕಾಡೋದ ಸವಿಯನ್ನು ಹೆಚ್ಚಿಸಿದ್ದೀರಿ. ಮೇಲೆ ಪ್ರಸಾದರು ಬರೆದಂತೆ ಇನ್ನೊಂದು helpingಗೆ ಕೈಚಾಚಬೇಕು. ರವಿ ಕಾಣದ್ದನ್ನು ಕವಿ ಕಂಡಂತೆ ಇನ್ನೊಂದು ನೋಟ. ಇದರ ಲಯ, ಪ್ರಾಸ, ಅದ್ಭುತವಾಗಿದೆ. ಇನ್ನೊಬ್ಬರು ಯಾರಾದರು ಇನ್ನೊಂದು ಶೈಲಿಯಲ್ಲಿ ಅನುವಾದ ಮಾಡಲು ಆಹ್ವಾನ ಕೊಡೋಣವೇ? ಇದೇ ಟೇಬಲ್ಲಿನಲ್ಲಿ ಅದಕ್ಕೂ ಜಾಗವಿದೆ.

  Like

 3. ಸಸ್ಯಶಾಸ್ತ್ರ ಓದಿದ ನನಗೆ ಬೆಣ್ಣೆ-ಹಣ್ಣು ಅರ್ಥಾತ್ ಅವಕಾಡೋ ಕೇವಲ ಅದರ ವರ್ಗೀಕರಣ ಮತ್ತು ಗುಣಲಕ್ಷಣಗಳ ದೃಷ್ಟಿಯಿಂದಷ್ಟೇ ಪರಿಚಿತವಾದ ಸಸ್ಯ. Persia grattissima ಎಂಬ ಹೆಸರಿನಿಂದ ನನಗೆ ಪರಿಚಿತವಾದ ಈ ಗಿಡ, ನಮ್ಮ ಅಡುಗೆಮನೆಯ ಸಾಮಾನ್ಯ ಸಂಭಾರ ಪದಾರ್ಥ ದಾಲ್ಚಿನ್ನಿಯ ಅಥವಾ Cinnamon ಪ್ರಭೇಧದ ಕುಟುಂಬಕ್ಕೆ ಸೇರಿದೆ. ಅದರ ಬಗ್ಗೆಯೂ ಕವನ ರಚಿಸಿದ್ದಾರೆ ಎಂದು ತಿಳಿದು ಆಷ್ಚರ್ಯವಾಯಿತು. ಅದಕ್ಕೇ ಏನೋ, “ರವಿ ಕಾಣದ್ದನ್ನು ಕವಿ ಕಂಡ“ ಎನ್ನುತ್ತಾರೆ. ಇದರ ಮೂಲ ಆಂಗ್ಲ ಆವೃತ್ತಿಯನ್ನು ನೋಡಿದ ಮೇಲೆ, ಕೇಶವ್ ಅವರು ಅದನ್ನು ಕನ್ನಡಕ್ಕೆ ಅನುವಾದಿಸಲು ಮಾಡಿದ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಈ ಹಣ್ಣಿನ ಉತ್ತಮ ಗುಣಗಳ ಬಗ್ಗೆ , ಆಹಾರ ತಗ್ಯರ ನಡುವೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಆದರೇನು ಅದರ ಸ್ವಾದವನ್ನು ಸವಿಯುವುದನ್ನು ಜನ ಬಿಟ್ಟಾರೆಯೇ? ಕೇಶವ್ ಮೂಲಕ್ಕೆ ಅಡ್ಡಿಬರದಂತೆ ಕನ್ನಡದ ಪದಗಳನ್ನು ಸುಂದರವಾಗಿ ಬಳಸಿದ್ದಾರೆ. ಹಣ್ಣಿನ ರಚನೆಯ ಬಗ್ಗೆ, ನಂತರ ಅದನ್ನು ಅಟ್ಟು ಬಡಿಸಿಕೊಳ್ಳುವ ಬಗೆಯನ್ನು ಮೂಲ ಕವಿಯತ್ರಿ ಎಸ್ತರ್ ಅವರು ವಿವರಿಸಿರುವ ರೀತಿ, ಅವಕಾಡೋ ಹಣ್ನನ್ನು ಬಳಸದವರಿಗೂ ಅದನ್ನು ಬಳಸುವಂತೆ ಪ್ರೇರೇಪಿಸುವಂತಿದೆ. ಕೇಶವ್ ಕನ್ನಡದ ಘಮ, ಘಾಟು ಒಗ್ಗರಣೆ, ಪದಗಳನ್ನು ಬಳಸಿ, ಅದನ್ನು ಕನ್ನಡಿಗರ ಅಡುಗೆಮನೆಗೂ ಪರಿಚಯಿಸುವ ಸುಂದರ ಪ್ರಯತ್ನ ಮಾಡಿದ್ದಾರೆ. ನವ್ಯ ಬಗೆಯ ಕವನಗಳನ್ನು ನಮಗೆ ಹೀಗೆ ಪರಿಚಯಿಸುತ್ತಿರಿ ಕೇಶವ್.
  ಉಮಾ ವೆಂಕಟೇಶ್

  Like

 4. This poem has inspired me to have Avocado for my lunch this afternoon. I had avocado, soya beans, peppery salad and humous on a soft white totila wrap and thoroughly enjoyed it.
  Thanks to Srivathsa for posting the english version and for the above explanation, with out which the ‘Avocado’ would have been difficult to digest!
  Keshav has selected an interesting and a difficult poem for translation and managed to put it together in Kannada. Good try!

  Like

 5. ಲೋಕೋ ಭಿನ್ನ ರುಚಿಃ. ಮೊದಲು ಈ ಕವನ ಕಬ್ಬಿಣದ ಕಡಲೆಯಂತಿದ್ದರೂ ನನ್ನ ಸ್ವಲ್ಪ ಅನ್ವೇಷಣೆಯ ನಂತರ ಅಂಜೂರದಂತೆ (sic) ಬಿಡಸಲಾಯಿತು. ಅವೋಕಾಡೋದ ವ್ಯುತ್ಪತ್ತಿ ದಕ್ಷಿಣ ಅಮೆರಿಕದ ಅಝ್ಟೆಕ್ ಶಬ್ದ ಅವಾಕಾಟ್ಲ್ ಎಂದು ತಿಳಿದಮೇಲೆ, ಅದರ ಅರ್ಥ ಮತ್ತು ಕೊನೆಯಲ್ಲಿನ ’ನಿರ್ಬಂಧ’ ಇವು ಇಲ್ಲಿ ಬರುವ ಪ್ರತಿಮೆಗಳ ಸುಳುವು ಕೊಡುತ್ತವೆ. ಇಲ್ಲಿ ಬರುವ ಬುದ್ಧ ಬುದಾಯಿ, ಅಥವಾ ಹೋಟೇಯಿ ಎಂಬ ಸಂತೃಪ್ತ ‘Laughing Buddha.’ ಅವಾಕಡೋದಂತೆ ಹಲಸನ್ನೂ ಬಿಡಿಸಲು ಚೂರಿ ಬೇಕಲ್ಲವೆ? ಆಸ್ವಾದಿಸಲೆಂದು ಎಬ್ಬುವ ಒಳಗಿನ ಬೆಣ್ಣೆಯಂಥ ಹಳದಿ ಅಡಗನ್ನು ಕೆಲವರು ಅದು fat, ಅದಕ್ಕೆ ನಿಷಿದ್ಧ ಎಂದರೆ ಕೆಲವರು ಆಹಾರ ವಿಜ್ಞಾನಿಗಳು (dieticians) ಅದರ ಗುಣಗಾನ ಮಾಡುತ್ತಾರಂತೆ, ಈ ಕವನದ ವಸ್ತುವಿನಂತೆ! ಮೂಲ ಇಂಗ್ಲಿಷ್ ದಲ್ಲಿಯ ಪದಗಳ ಬೆಡಗು, ಪ್ರಾಸ (’s’ alliteration, ಕೆಳಗೆ ನೋಡಿ) ಇವನ್ನು ಅನುವಾದದಲ್ಲಿ ತರಲು ಸಾಧ್ಯವಾಗುವದಿಲ್ಲ. ಎಂತಲೇ ಎಲ್ಲ ಅನುವಾದಗಳೂ ಸಫಲವಾಗುವದಿಲ್ಲ. ಆದರೆ ಕೇಶವ ಅವರು ಈ ಕವನದ ಅಡಕದಲ್ಲಿ (brevity) ಕವಯಿತ್ರಿ ಎಸ್ಠರ ಕೊಟ್ಟ ಅರ್ಥವನ್ನು, ’ಕುಣಿಯಲ್ಲಿ ಘಾಟು ಒಗ್ಗರಣೆಯನ್ನು (sharp vinaigrette ನ ರೂಪಾಂತರ ನನಗೆ ಹಿಡಿಸಿತು) ತುಂಬುವಂತೆ’ ತುಂಬುವಲ್ಲಿ ಸಫಲರಾಗಿದ್ದಾರೆ ಎಂದು ನನ್ನ ಮತ. ಎಸ್ಥರ್ ಮಾರ್ಗನ್ ಇತ್ತೀಚಿನ ಇಂಗ್ಲಿಷ್ ಕವಿಗಳಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾರೆ ಎಂದು ತಿಳಿದು ಬರುತ್ತದೆ. ಕವನದ ಉಗಮ ಮತ್ತು ಬೆಳವಣಿಗೆಯ ಮೇಲೆ ಅವರು ಬರೆದದ್ದನ್ನು ಆಕೆಯ ಬ್ಲಾಗಿನಲ್ಲಿ ಓದ ಬಹುದು. ಈ ಕವನ ಇನ್ನೊಬ್ಬರ “Lifesaving Poems” ಸಂಗ್ರಹದಲ್ಲಿ ಸೇರ್ಪಡೆಯಾಗಿದೆಯಂತೆ! ನಮ್ಮ ವಿಚಾರ ವೇದಿಕೆಯಲ್ಲಿ ಇಂಥ ಹೊಸ ಅಲೆಯ ಕೃತಿಗಳನ್ನು ಪರಿಚಯಿಸುವ ಪ್ರಯತ್ನ ಇದು.
  Avocados
  by Esther Morgan

  I like the way they fit the palm –
  their plump Buddha weight,
  the sly squeeze for ripeness,
  the clean slit of the knife,
  the soft suck
  as you twist the halves apart,
  the thick skin peeling easily.
  Naked, they’re slippery as soap.
  I serve them for myself
  sliced and fanned
  on white bone china
  glistening with olive oil,
  or I fill the smooth hollow
  with sharp vinaigrette
  scooping out
  the pale, buttery flesh.
  Every diet you’ve ever read
  strictly forbids them.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.