ಭರವಸೆ

ಯುಗಾದಿ  ಹಬ್ಬದ ಕವಿ ಗೋಷ್ಠಿ ‘ಅನಿವಾಸಿ’ ಯ ಬಾಳಿನಲ್ಲಿ ಹೊಸ ಭರವಸೆ ಹುಟ್ಟಿಸುವಲ್ಲಿ ಸಫಲವಾಯಿತು. ಈ ಆಶಯವನ್ನು ಪ್ರತಿಬಿಂಬಿಸುತ್ತಿದೆ ಶಿವಪ್ರಸಾದರ ಕವನ…

ಹುಚ್ಚು ಮಾಧ್ಯಮಗಳ ಹಾವಳಿಯಲ್ಲಿ
ಕುಗ್ಗಿಹೊಗಿವೆ ನಮ್ಮ ಕ್ರಿಯಾತ್ಮಕ ಚಿಂತನೆಗಳು
ಕಂಪ್ಯೂಟರ್ಗಳ ಸಾಮ್ರಾಜ್ಯದಲಿ
ಒಣಗಿಹೋಗಿವೆ ಶಾಹಿ ಕುಡಿಕೆಗಳು
ಸೊರಗಿವೆ ಬಣ್ಣ ಬಣ್ಣದ ಲೇಖನಿಗಳು

ಇ-ಮೇಲ್ ಮೊಬೈಲ್ ಗಳ ಧಾಳಿಯಲ್ಲಿ
ಮಲಗಿವೆ ಪತ್ರ ವ್ಯವಹಾರಗಳು
ಆಂಗ್ಲಭಾಷೆಯ ಪ್ರವಾಹದಲಿ
ಕೊಚ್ಚಿಹೋಗಿವೆ ನಮ್ಮಿ ಭಾಷೆಗಳು
ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು

ತಲೆಯೆತ್ತಿವೆ ಆತಂಕವಾದೀ ಶಕ್ತಿಗಳು
ಉಗ್ರಗಾಮಿಗಳ ಪಿತೂರಿಗಳು
ನಡುಗಿಸಿವೆ ನಾಗರೀಕತೆಯ ಖಾಯಿಲೆಗಳು
ಎಡ್ಸ್ ಡಯಾಬಿಟಿಸ್ ಬ್ಲಡ್ ಪ್ರೆಶರ್ ಗಳು

ಮಾಯವಾಗಿವೆ ಹಚ್ಚ ಹಸುರಿನ ಕಾಡುಗಳು
ಕರಗಲಿವೆ ಹಿಮದ ಗೆಡ್ಡೆಗಳು
ಇಲ್ಲಿವೆ ಪ್ರಕೃತಿ ವಿಕೋಪಗಳು
ಧಗೆ ಬಿಸಿಲು ಸುನಾಮಿ ಭೂಕಂಪಗಳು

ಈ ತಲ್ಲಣ ಗೊಳಿಸುವ ಹಿನ್ನೆಲೆಯಲ್ಲಿ
ಅನಿಶ್ಚಿತ ಇಂದು ನಾಳೆಗಳಲಿ
ಮುರಿದುಬಿದ್ದ ವಿಶ್ವಾಸಗಳಲಿ
ಸರಿ ತಪ್ಪುಗಳ ದ್ವಂದಗಳಲ್ಲಿ

ಇನ್ನೂ ಉಳಿದಿವೆ…
ಭರವಸೆಗಳು, ಛಲಗಳು
ನಿರ್ಧಾರ, ನಂಬಿಕೆ ಮತ್ತು ಆಶಯಗಳು

5 thoughts on “ಭರವಸೆ

  1. ಉಗ್ರಗಾಮಿ ಶಕ್ತಿಗಳು ತಾಂಡವವಾಡುತ್ತಿರುವ ಈ ಕಾಲದಲ್ಲಿ ಈ ಆಶಾವಾದ ಬೇಕೇ, ಸರಿ. ಕೊನೆಯ ಸಾಲುಗಳಲ್ಲಿ ಕವಿ ತೋರಿಸಿದ ಛಲ ಶ್ಲಾಘನೀಯ. ಕಲ್ಪನೆಗೆ ಮೀರಿ ಬೆಳೆಯುತ್ತಿರುವ ನಮ್ಮನ್ನು ಕ್ಲೇಷಕ್ಕೊಳಗಾಗಿಸುವ ದುಷ್ಕ್ರುತರನ್ನು ಹತ್ತಿಕ್ಕಿಸುವ ಬಲವನ್ನು ಬೆಳೆಸುವ ಮಾರ್ಗ ಹುಡುಕ ಬೇಕು, ಈ ಆಶಾವಾದದ ಬೆನ್ನೇರಿ!

    Like

  2. ನಮ್ಮನ್ನು ತಲ್ಲಣ ಗೊಳಿಸುವ terrorism, climate change , neo- colonialism ಇತ್ಯಾದಿ pessimistic ವಿಚಾರಗಳ ಹಿನ್ನೆಲೆಯಲ್ಲಿ ಮೂಡಿದ ಈ ಕವನವನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು
    ಈ ಕವನಕ್ಕೆ ಸೂಕ್ತವಾದ ಚಿತ್ರಗಳನ್ನು ಜೋಡಿಸಿ ಕವನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಟ್ಟ ರಾಮ್ ಶರಣ್ ಅವರಿಗೆ ವಂದನೆಗಳು

    Like

  3. ಮಾನವನ ಭೌತಿಕ ಬೆಳವಣಿಗೆ ಮತ್ತು ವಿಘ್ನಾನದ ಪ್ರಗತಿಯೊಂದಿಗೆ, ಸಾಮಾಜಿಕ, ಪರಿಸರ ಹಾಗೂ ಇನ್ನಿತರ ಮೌಲ್ಯಗಳು ಕುಸಿದಿವೆ. ಬಹುಶಃ ಇದು ಅನಿರೀಕ್ಷಿತವೇನಲ್ಲ. ಭೂಮಿಯ ಸಂಪನ್ಮೂಲಗಳನ್ನು ಕಬಳಿಸಿ, ಜೀವಜಾಲದ ವರ್ಗ-ಶ್ರೇಣಿಯಲ್ಲಿ ಈಗ ಉನ್ನತ ಸ್ಥಾನದಲ್ಲಿರುವ ಮಾನವ ಸಂತತಿ, ತನ್ನ ಉಳಿವಿಗಾಗಿ ಇತರ ಜೀವಿಗಳ ಹಕ್ಕನ್ನು ಕಸಿದುಕೊಂಡು, ತನ್ನ ಶ್ರೇಷ್ಠತೆಯನ್ನು ಜಮಾಯಿಸಿ ಮುನ್ನಡೆಯುತ್ತಿರುವ ಫಲವೆ, ಪ್ರಸ್ತುತ ಪರಿಸ್ಥಿತಿ. ಶಿವಪ್ರಸಾದರ ಕವನ ಈ ದೃಶ್ಯವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಆದರೆ ಇನ್ನೂ ಸಮಯ ಮೀರಿಲ್ಲ. ನಮ್ಮ ತಪ್ಪುಗಳನ್ನು ತಿದ್ದಿಕೊಂಡು, ಮುಂದಾಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ ಎನ್ನುವ ನಂಬಿಕೆ ಮತ್ತು ಭರವಸೆಯ ಭಾವನೆಯನ್ನು ಕವನದ ಅಂತ್ಯದಲ್ಲಿ ವ್ಯಕ್ತಪಡಿಸುತ್ತಾರೆ.
    ಉಮಾ ವೆಂಕಟೇಶ್

    Like

  4. ಶಿವಪ್ರಸಾದರ ಈ ಕವನ ವಾಸ್ತವದ ವಿದ್ಯಮಾನಗಳನ್ನು ವ್ಯವಸ್ಥಿತ ರೂಪದಲ್ಲಿ ಕಟ್ಟಿಕೊಡುತ್ತಿದೆ. ತಾ೦ತ್ರಿಕೆ ಬೆಳವಣಿಗೆ ಜೊತೆ ಜೊತೆಯಲ್ಲಿ ಮೌ ಲ್ಯಗಳು ಕುಸಿಯುತ್ತಾ ಇರುವುದು ಉಳಿದೆಲ್ಲ ನಕಾರಾತ್ಮಕ ಅಂಶಗಳಿಗೆ ಕಾರಣ ಎಂದು ನನ್ನ ಭಾವನೆ.
    ಇತರರಿಗೆ ಸ್ಪಂದಿಸುವ ಪ್ರತಿಕ್ರಿಯಿಸುವ ಪರಿಸರ ಇಲ್ಲದೇ ಇರುವುದು, ಸಮಾಜದಲ್ಲಿ ಆದಶ೯ ವ್ಯಕ್ತಿಗಳು ಕಡಿಮೆ ಆಗಿರುವುದು ಹಾಗೂ ಈ ಕವಿತೆ ಆರಂಭದಲ್ಲಿ ಉಲ್ಲೇಖಿಸಿರುವ ಹುಚ್ಚು ಮಾಧ್ಯಮಗಳು ಕೀಳು ಮಟ್ಟದ ಅಭಿರುಚಿಯನ್ನು ಬಿತ್ತಿ ಬೆಳೆಸಿ ಹರಡುತ್ತಿರುವುದು ಈ ಎಲ್ಲಾ ಅವಾಂತರಕ್ಕೆ ಮೂಲ ಕಾರಣ. ಭಾರತಕ್ಕೆ ನೋಬೆಲ್ ಪ್ರಶಸ್ತಿ ತಂದ ರಾಮನ್ ಅವರನ್ನು ಸೆನೆಯದ ಮಾಧ್ಯಮಗಳು ಶಾರೂಕ್ ಹಾಗೂ ಅಮಿತಾಬ್ ರನ್ನು ದಿನವೆಲ್ಲಾ ನೆನನೆದ್ದು ಇದಕ್ಕೆ ಹಿಡಿದ ರತ್ನಗನ್ನಡಿಯಾದೀತು.
    ಉತ್ತಮ ಕವನ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.