ಬದುಕು ಜಟಕಾಬಂಡಿ

ನಲುಮೆಯ ಓದುಗರೇ ನಮಸ್ಕಾರ. ‘ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ|’ ಎನ್ನುತ್ತಾರೆ ತಿಮ್ಮಗುರು ಡಿ.ವಿ.ಜಿ. ನಿತ್ಯ ನಿರಂತರತೆ, ಸದೈವ ಜೀವಂತತೆ ಬದುಕಿನ ಲಕ್ಷಣ. ಎಂದೂ, ಎಲ್ಲೂ , ಯಾವ ಪ್ರಸಂಗದಲ್ಲೂ ಬದುಕ ಬಂಡಿ ನಿಲ್ಲುವುದಿಲ್ಲ; ಚಲಿಸುತ್ತಲೇ ಇರುತ್ತದೆ..ಏರು-ತಗ್ಗಿನಲಿ, ಕಾಣದಿಹ ಅನಂತ ತಿರುವುಗಳಲ್ಲಿ, ಬಿಸಿಲು-ಮಳೆಗಳಲ್ಲಿ, ವಸಂತ-ಗ್ರೀಷ್ಮಗಳಲ್ಲಿ..ನಾವಿದ್ದರೂ..ಇಲ್ಲದಿದ್ದರೂ ‘ಬದುಕು ಸೂಜಿದಾರದಂತೆ.ಒಂದು ಕಡೆ ಚುಚ್ಚುತ್ತ ಹಿಂದೆಯೇ ಹೊಲೆಯುತ್ತ ಹೋಗುತ್ತದೆ ಸಾರ್’ ಎನ್ನುತ್ತಾನೆ ನಮ್ಮ ಕೆ.ನಲ್ಲತಂಬಿಯವರ ಕೋಶಿ’ಸ್ ಕವಿತೆಗಳ […]

ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ … ಡಾ. ವಿನತೆ ಶರ್ಮ

ಡಾ ವಿನತೆ ಶರ್ಮ ನಮ್ಮ ವೇದಿಕೆಯ ಸದಸ್ಯರಿಗೆ ಈಗಾಗಲೇ ಪರಿಚಿತರು. ಮನೋವಿಗ್ಯಾನದಲ್ಲಿ ಡಾಕ್ಟರೇಟ್ ಪದವಿ ಪಡೆದ ವಿನುತೆ ಅವರ ಆಸಕ್ತಿ ಇರುವುದು ಶೈಕ್ಷಣಿಕ ಕ್ಷೇತ್ರದಲ್ಲಿ. ಈಗಾಗಲೇ ಆ ವಿಷಯದಲ್ಲಿ ನಮಗೆ ಉತ್ತಮ ಲೇಖನವನ್ನು ನೀಡಿರುವ ವಿನುತೆ ಅವರ ಮತ್ತೊಂದು ಹವ್ಯಾಸ ಪರ್ವತಾರೋಹಣವೆಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದಲ್ಲವೇ! ಅವರ ಈ ಲೇಖನದಲ್ಲಿ ಅವರು ಇದುವರೆಗೆ ಕೈಗೊಂಡ ಇಂತಹ ಪ್ರವಾಸಗಳ ಒಂದು ಅತ್ಯುತ್ತಮ ಚಿತ್ರವನ್ನು ಈ ಲೇಖನದ ಪದಜಾಲದಲ್ಲಿ ಬಂಧಿಸಿ ನಮ್ಮ ಮುಂದಿಟ್ಟಿದ್ದಾರೆ ”ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ” ಎನ್ನುತ್ತ, ಈ […]