ಲ್ಯಾಟಿನ್/ ರೋಮನ್ ಲಿಪಿಯಲ್ಲಿ (ಇಂಗ್ಲೀಷ್ ಭಾಷೆಯನ್ನು ಬರೆಯುವ ಲಿಪಿ) ಕನ್ನಡವನ್ನು ಬರೆದರೆ ಅದನ್ನು ಓದಲು ಪಡುವ ಕಷ್ಟ ಹೇಳುವುದೂ ಕಷ್ಟ (Latin/ Roman lipyalli kannadavannu baredare adannu odalu paduva kashta heluvudu kashta). ಕನ್ನಡವನ್ನು ಕನ್ನಡದಲ್ಲಿ ಬರೆದರೇ ಚೆಂದ, ಓದುವವರಿಗೂ ಅನುಕೂಲ. ಕನ್ನಡ ಲಿಪಿ ತುಂಬ ಸುಂದರ ಕೂಡ. ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಅಂತಿದ್ದರೆ ಕನ್ನಡದಲ್ಲಿ ಬರೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಆದ್ದರಿಂದ ಕನ್ನಡವನ್ನು ಅದಷ್ಟು ಹೆಚ್ಚಾಗಿ ಬಳಸ ಬೇಕು.
cc-wiki
‘ಕಂಪ್ಯೂಟರಿನಲ್ಲಿ ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’, ಇದು ಬಹಳ ಜನ ಕನ್ನಡಿಗರು ಕೇಳುವ ಪ್ರಶ್ನೆ, ‘ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಬರೆಯಲು ಬರುತ್ತಾ?’ ಎಂದು ಹುಬ್ಬೇರಿಸುವವರನ್ನೂ ನೋಡಿದ್ದೇನೆ. ‘ಕನ್ನಡದಲ್ಲಿ ಯಾಕ್ರಿ ಬರೀಬೇಕು?’ ಎಂದು ಶುದ್ಧ ಕನ್ನಡದಲ್ಲೇ ಕೊಂಕು ನುಡಿದವರನ್ನೂ ಕೇಳಿದ್ದೇನೆ.
ಅದೆಲ್ಲ ಇರಲಿ… ಕಾಲವೊಂದಿತ್ತು. ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳು ಕಣ್ಣಿಗೆ ಬಿದ್ದರೆ ಆನಂದವಾಗುತ್ತಿತ್ತು. ಬರಬರುತ್ತ ತಂತ್ರಾಂಶ (software)ದಲ್ಲಿ ಬದಲಾವಣೆಗಳಾದವು, ಕನ್ನಡ ಭಾಷೆ ಜಾಲದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು. ಕನ್ನಡ ಭಾಷೆಯನ್ನು ಕಂಪ್ಯೂಟರಿನ ಕೀಲಿಮಣೆಯಲ್ಲಿ ಕುಟ್ಟಲು ಸುಮಾರು ತಂತ್ರಾಂಶಗಳು ಬಂದರೂ, ಕನ್ನಡ ಕೀಲಿಮಣೆಯನ್ನು ಕನ್ನಡಿಗರ ಮನೆ ಮನೆಗೆ ತಲುಪಿಸಿದ್ದು, ಬರಹ (www.baraha.com). ಸುಮಾರು ಒಂದೂವರೆ ದಶಕದ ನಂತರ ಕನ್ನಡಕ್ಕೀಗ ಯುನಿಕೋಡ್ ಸಿಕ್ಕಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರಿಗೆ ತರಲು ಮಾಡಿದ ಸಾಹಸಗಳು, ಜಗಳಗಳು, ವಾದಗಳು, ಯುನಿಕೋಡ್ ಮಾಡುವವರೆಗಿನ ಪ್ರಯತ್ನಗಳು – ಅವೆಲ್ಲ ಇರಲಿ, ಅವುಗಳ ಬಗ್ಗೆ ಬರೆಯದೇ ಕನ್ನಡವನ್ನು ಕಂಪ್ಯೂಟರಿನಲ್ಲಿ, ಫೋನಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಹೇಗೆ ಕುಟ್ಟುವುದು ಎನ್ನುವುದನ್ನು ನೋಡೋಣ:
ಈ ಎಲ್ಲ ತಂತ್ರಾಂಶಗಳೂ ಮಾಡುವ ಸುಲಭದ ಕೆಲಸವೆಂದರೆ, ಕನ್ನಡ ಪದವನ್ನು ಇಂಗ್ಲೀಷಿನಲ್ಲಿ ಬರೆಯುತ್ತ ಹೋದರೆ ಸಾಕು, ಕನ್ನಡ ತಾನೇ ತಾನಾಗಿ ಮೂಡುತ್ತೆ!
ಉದಾಹರಣೆಗಳು:
‘ಗಮನ’ ಎಂದು ಬರೆಯಲು gamana ಎಂದು ಬರೆದರಾಯಿತು.
ಘಮ = Gama ಅಥವಾ ghama
ಪರಿಮಳ = parimaLa
ಆಗಂತುಕ = aagaMtuka
ದೃಷ್ಟದ್ಯುಮ್ನ = dRShTadyumna
ಯಾವಾಗ ದೊಡ್ಡಕ್ಷರ (capital letter), ಯಾವಾಗ ಚಿಕ್ಕಕ್ಷರ (small letters) ದಲ್ಲಿ ಬರೆಯಬೇಕು ಎನ್ನುವುದನ್ನು ಸ್ವಲ್ಪೇ ಸ್ವಲ್ಪ ಪ್ರಯತ್ನ ಮಾಡಿ ಕಲಿಯಬಹುದು.
ಅಮೆರಿಕದ ಆಪಲ್ ಎಂಬ ಚರ ದೂರವಾಣಿ ಕಾರ್ಯಸಾಧನ ತಯಾರಿಕಾ ಸಂಸ್ಥೆ ಏನೇ ಮಾಡಿದರೂ ಅದು ಜಾಗತಿಕ ವಿದ್ಯಮಾನದ ರೂಪ ಪಡೆಯುವುದು ಇತ್ತೀಚಿನ ಬೆಳವಣಿಗೆ. ತಮ್ಮ ಹೊಸ ಸಾಧನೆ ಬಿಡುಗಡೆಗೆ ಕೆಲವು ತಿಂಗಳಿಗೆ ಮುಂಚೆ ಸ್ವಲ್ಪ ಸ್ವಲ್ಪವಾಗಿ ಅದರ ಮಾಹಿತಿ ಸೋರಿಕೆಯನ್ನು ಜಾಣತನದಿಂದ ನಿಭಾಯಿಸಿ ಜನಮಾನಸದಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿ ಕಾವು ಏರಿಸುವುದು ಇವರ ಕಾರ್ಯ ವೈಖರಿ. ನಿಧಾನವಾಗಿ ಕಾದ ಹಾಲು ಕೊನೆಗೊಮ್ಮೆ ಉಕ್ಕುವಂತೆ ಐ-ಫೋನು ಅಥವ ಐ-ಪ್ಯಾಡು ಬಿಡುಗಡೆಗೊಂಡು ಜನರಲ್ಲಿ ಹುಚ್ಚೆಬ್ಬಿಸಿ ಹುಯಿಲು ನಡೆಸಿ ತಣ್ಣಗಾಗುವುದು ಒಂದು ಸೋಜಿಗವೆ ಸರಿ.
CC-Wiki
ಇತ್ತೀಚೆಗೆ ಈ ಕಂಪನಿ ಬಿಡುಗಡೆ ಮಾಡಿದ ಐ ಫೋನ್ ೫ ನೆ ಅವೃತ್ತಿಯ ಕಾರ್ಯಸಾಧನ ತನ್ನ ತುಂಟತನದಿಂದ ಬಹಳ ಸುದ್ದಿಮಾಡಿತ್ತು. ಈಗ್ಗೆ ಕೆಲವು ವರ್ಷಗಳಿಂದ ನಂಬಲರ್ಹ ಸೇವೆ ಕೊಡುತ್ತ ಎಲ್ಲರ ಪ್ರೀತಿಗೆ ಪಾತ್ರನಾಗಿ ಎಲ್ಲ ಫೋನುಗಳಲ್ಲೂ ಎಲ್ಲ ಗಣಕಗಳಲ್ಲೂ ಸರ್ವಾನ್ತರ್ಯಾಮಿಯ ತೆರದಲ್ಲಿ ವಿರಾಜಮಾನವಾಗಿದ್ದ ಗೂಗಲ್ ಕಂಪನಿಯ ನಕ್ಷೆ ಹಾಗೂ ಮಾರ್ಗದರ್ಶಿ ಸೇವೆಯನ್ನು ಕಿತ್ತೆಸೆದು ತನ್ನದೇ ಪ್ರತಿಷ್ಠೆಯ ಐ- ಮ್ಯಾಪ್ ಅನ್ನು ಅನಾವರಣಗೊಳಿಸಲು ಈ ಆಪಲ್ ಕಂಪನಿ ದುಸ್ಸಾಹಸ ಮಾಡಹೊರಟಿದ್ದು ಬಹಳ ಜನಕ್ಕೆ ತಿಳಿದಿರಬಹುದು. ಇದುವರೆಗೂ ಈ ಸಂಸ್ಥೆಯ ಸಾಧನಗಳು ತಮ್ಮ ಮನಸೆಳೆವ ಕಾರ್ಯಕ್ಷಮತೆಯಿಂದ ಗ್ರಾಹಕರ ಮನಸ್ಸನ್ನು ಗೆದ್ದಿದ್ದೆನೋ ನಿಜ. ಅದೇ ರೀತಿ ಈ ಸಾರಿಯೂ ಫೋನೂ ಅದರ ಮ್ಯಾಪೂ್ ಎಲ್ಲರ ಮೂಗಿನ ಮೇಲೂ ಬೆರಳಿಡಿಸಬಹುದೆಂದು ಎಲ್ಲರೂ ಎಣಿಸಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಇತ್ತೆಂದು ಈ ಕಂಪನಿಗೆ ತಿಳಿದಿರಲಿಲ್ಲ. ಕಾಕತಾಳೀಯವೋ ಎಂಬಂತೆ ಈ ಫೋನಿನ ಆಪರೇಟಿಂಗ್ ಸಿಸ್ಟ್ಂ ಐಓ-೬ ಎಂಬುದೇ ಆಗಿತ್ತು. ಈ ಐ ಮ್ಯಾಪು ಉಪಯೊಗಕ್ಕೆಂದು ಬಿಡುಗಡೆಯಾದ ಮೇಲೆ ಬಹಳ ಮಂದಿ ತರಾತುರಿಯಿಂದ ಫೋನ್ ಖರೀದಿಸಿ, ನಕ್ಷೆಯ ಮಾರ್ಗದರ್ಶಿ ಸೂಚನೆಯಂತೆ ನಡೆದು ದಾರಿ ತಪ್ಪಿಸಿಕೊಂಡದ್ದೆ ಕೊಂಡದ್ದು. ತಿಳಿಯದೆ ಆದ ತಂತ್ರಾಂಶದ ತಪ್ಪಿನಿಂದಾಗಿ ಹಲವಾರು ಜನ ಹಲವು ತೊಂದರೆ ಅನುಭವಿಸಬೇಕಾಯ್ತು. ಎಷ್ಟೇ ಆಗಲಿ ಆದಿಫಲ ಈ ಸೇಬು ಹಣ್ಣು ಆಡಮ್ ಮತ್ತು ಈವ್ ಕಾಲದಿಂದ ದಾರಿತಪ್ಪಿಸುವ ಕೆಲಸ ಮಾಡಿಲ್ಲವೇ!!??. ಆಧುನಿಕ ಕಾಲದಲ್ಲೂ ಪುರುಷ-ಸ್ತ್ರೀಯರ ದಾರಿತಪ್ಪಿಸಿ ಒಂದು ರೀತಿಯ ಸುನಾಮಿಯನ್ನೆ ಜನಮಾನಸದ ಸಾಗರದಲ್ಲಿ ಎಬ್ಬಿಸಿ ಕೋಲಾಹಲವನ್ನೂ,ತಲ್ಲಣವನ್ನೂ ಮತ್ತು ಹಾಹಾಕಾರವನ್ನೂ ಸೃಷ್ಟಿಸಿ ಮೊದಲ ಸಾರಿ ಆಪಲ್ ಕಂಪನಿ ದೇವಸೃಷ್ಟಿ ಅಲ್ಲ; ಯಕಃಶ್ಚಿತ್ ಮಾನವ ಸೃಷ್ಟಿಯೇ ಎಂಬುದನ್ನು ಸಾಬೀತುಗೊಳಿಸಿತು.
ನಮ್ಮ ಜೀವನಕ್ಕೂ ಈ ವಿದ್ಯಮಾನ ಅನ್ವಯಿಸಬುಹುದೆನೋ!!
ನಮ್ಮ ದೇಹವೇ ಫೋನ್ ಆಗಿ, ನಮ್ಮ ಜೀವನವೆ ನಕ್ಷೆಯಾಗಿ, ನಾವು ಓಡಾಡುವ ಕಾರೇ ನಮ್ಮ ಜೀವನದ ಆಕಾಂಕ್ಷೆಗಳು.ಇವುಗಳನ್ನು ಅನುಭಾವಗೊಳಿಸುವ ಕೆಲಸವನ್ನು ಇಂದ್ರಿಯಗಳು ಮಾಡಿದರೆ ಅರಿಷಡ್ವರ್ಗಗಳು ಇವುಗಳೆಲ್ಲವನ್ನು ನಿರ್ದೇಶಿಸುತ್ತವೆ. ಜೀವನದಲ್ಲಿ ನಾವು ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಆ ಕ್ಷಣಕ್ಕೆ ಸರಿಯಾಗಿಯೇ ತೋರಬಹುದು. ಆದರೆ ಗುರಿ ಮುಟ್ಟಿದಾಗಲೇ ನಮ್ಮ ನಿರ್ಧಾರದ ನಿರ್ಣಯ ಆಗುವುದು.
ಹೀಗೆ, ಪಂಚೇಂದ್ರಿಯಗಳನ್ನು ಪ್ರತಿನಿಧಿಸುವ ಐ ಫೋನ್ ೫ ರ ದೇಹ, ಅದನ್ನು ಆಡಿಸುವ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಐಒ-೬, ಕಾಲನ ಪರೀಕ್ಷೆಯಲ್ಲಿ ಗೆದ್ದ ಸಮಾಜದ ಮೌಲ್ಯಗಳನ್ನು ಪ್ರತಿನಿಧಿಸುವ ಗೂಗಲ್ ಮ್ಯಾಪು ಹಾಗೂ ಇಂದಿನ ಮೌಲ್ಯರಹಿತ ಬದುಕನ್ನು ಪ್ರತಿನಿಧಿಸುವ ಐ-ಮ್ಯಾಪುಗಳ ನಡುವಿನ ತಾಕಲಾಟದಲ್ಲಿ ಮನುಷ್ಯನ ಜೀವನ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಅಂಕುರಿಸುತ್ತ ಇತ್ತು.
ಒಂದು ದಿನ ಬೆಳಿಗ್ಗೆ ೫ ಘಂಟೆಗೆ ಎದ್ದು ರೈಲಿಗೆ ಕಾಯುತ್ತ ಕುಳಿತಿದ್ದಾಗ ನನ್ನ ಸ್ನೇಹಿತನೊಬ್ಬ ಹೀಗೆ ಐ ಫೋನ್ ೫ ಹಾಗೂ ಐ ಆಪರೇಟಿಂಗ್ ಸಿಸ್ಟಂ ಸೂತ್ರಾಧಾರಿತ ಐ ಮ್ಯಾಪಿನಿಂದ ದಾರಿತಪ್ಪಿ ಫ಼ೇಸ್ ಬುಕ್ಕಿನಲ್ಲಿ ಗೋಳಾಡಿದ್ದ. ನಗು ಬಂತು ಹಾಗೇ ಸೂರ್ಯೋದಯದ ಜತೆಗೆ ಈ ಕವಿತೆಯ ಉದಯವೂ ಆಯ್ತು.
ಪ್ರಾತಃ ಸ್ಮರಣೀಯರಾದ ದಿ. ಜಿ.ಪಿ.ರಾಜರತ್ನ್ಂ ಅವರ ಬಣ್ಣದ ತಗಡಿನ ತುತ್ತೂರಿ ಪದ್ಯದ ಜಾಡನ್ನು ಹಿಡಿದು ಬರೆದಿದ್ದೇನೆ. ಅದಕ್ಕಾಗಿ ಅವರ ಕ್ಷಮೆ ಇರಲಿ.