ಪೀಠಿಕೆ:
ಅಮೆರಿಕದ ಆಪಲ್ ಎಂಬ ಚರ ದೂರವಾಣಿ ಕಾರ್ಯಸಾಧನ ತಯಾರಿಕಾ ಸಂಸ್ಥೆ ಏನೇ ಮಾಡಿದರೂ ಅದು ಜಾಗತಿಕ ವಿದ್ಯಮಾನದ ರೂಪ ಪಡೆಯುವುದು ಇತ್ತೀಚಿನ ಬೆಳವಣಿಗೆ. ತಮ್ಮ ಹೊಸ ಸಾಧನೆ ಬಿಡುಗಡೆಗೆ ಕೆಲವು ತಿಂಗಳಿಗೆ ಮುಂಚೆ ಸ್ವಲ್ಪ ಸ್ವಲ್ಪವಾಗಿ ಅದರ ಮಾಹಿತಿ ಸೋರಿಕೆಯನ್ನು ಜಾಣತನದಿಂದ ನಿಭಾಯಿಸಿ ಜನಮಾನಸದಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿ ಕಾವು ಏರಿಸುವುದು ಇವರ ಕಾರ್ಯ ವೈಖರಿ. ನಿಧಾನವಾಗಿ ಕಾದ ಹಾಲು ಕೊನೆಗೊಮ್ಮೆ ಉಕ್ಕುವಂತೆ ಐ-ಫೋನು ಅಥವ ಐ-ಪ್ಯಾಡು ಬಿಡುಗಡೆಗೊಂಡು ಜನರಲ್ಲಿ ಹುಚ್ಚೆಬ್ಬಿಸಿ ಹುಯಿಲು ನಡೆಸಿ ತಣ್ಣಗಾಗುವುದು ಒಂದು ಸೋಜಿಗವೆ ಸರಿ.

ಇತ್ತೀಚೆಗೆ ಈ ಕಂಪನಿ ಬಿಡುಗಡೆ ಮಾಡಿದ ಐ ಫೋನ್ ೫ ನೆ ಅವೃತ್ತಿಯ ಕಾರ್ಯಸಾಧನ ತನ್ನ ತುಂಟತನದಿಂದ ಬಹಳ ಸುದ್ದಿಮಾಡಿತ್ತು. ಈಗ್ಗೆ ಕೆಲವು ವರ್ಷಗಳಿಂದ ನಂಬಲರ್ಹ ಸೇವೆ ಕೊಡುತ್ತ ಎಲ್ಲರ ಪ್ರೀತಿಗೆ ಪಾತ್ರನಾಗಿ ಎಲ್ಲ ಫೋನುಗಳಲ್ಲೂ ಎಲ್ಲ ಗಣಕಗಳಲ್ಲೂ ಸರ್ವಾನ್ತರ್ಯಾಮಿಯ ತೆರದಲ್ಲಿ ವಿರಾಜಮಾನವಾಗಿದ್ದ ಗೂಗಲ್ ಕಂಪನಿಯ ನಕ್ಷೆ ಹಾಗೂ ಮಾರ್ಗದರ್ಶಿ ಸೇವೆಯನ್ನು ಕಿತ್ತೆಸೆದು ತನ್ನದೇ ಪ್ರತಿಷ್ಠೆಯ ಐ- ಮ್ಯಾಪ್ ಅನ್ನು ಅನಾವರಣಗೊಳಿಸಲು ಈ ಆಪಲ್ ಕಂಪನಿ ದುಸ್ಸಾಹಸ ಮಾಡಹೊರಟಿದ್ದು ಬಹಳ ಜನಕ್ಕೆ ತಿಳಿದಿರಬಹುದು. ಇದುವರೆಗೂ ಈ ಸಂಸ್ಥೆಯ ಸಾಧನಗಳು ತಮ್ಮ ಮನಸೆಳೆವ ಕಾರ್ಯಕ್ಷಮತೆಯಿಂದ ಗ್ರಾಹಕರ ಮನಸ್ಸನ್ನು ಗೆದ್ದಿದ್ದೆನೋ ನಿಜ. ಅದೇ ರೀತಿ ಈ ಸಾರಿಯೂ ಫೋನೂ ಅದರ ಮ್ಯಾಪೂ್ ಎಲ್ಲರ ಮೂಗಿನ ಮೇಲೂ ಬೆರಳಿಡಿಸಬಹುದೆಂದು ಎಲ್ಲರೂ ಎಣಿಸಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಇತ್ತೆಂದು ಈ ಕಂಪನಿಗೆ ತಿಳಿದಿರಲಿಲ್ಲ. ಕಾಕತಾಳೀಯವೋ ಎಂಬಂತೆ ಈ ಫೋನಿನ ಆಪರೇಟಿಂಗ್ ಸಿಸ್ಟ್ಂ ಐಓ-೬ ಎಂಬುದೇ ಆಗಿತ್ತು. ಈ ಐ ಮ್ಯಾಪು ಉಪಯೊಗಕ್ಕೆಂದು ಬಿಡುಗಡೆಯಾದ ಮೇಲೆ ಬಹಳ ಮಂದಿ ತರಾತುರಿಯಿಂದ ಫೋನ್ ಖರೀದಿಸಿ, ನಕ್ಷೆಯ ಮಾರ್ಗದರ್ಶಿ ಸೂಚನೆಯಂತೆ ನಡೆದು ದಾರಿ ತಪ್ಪಿಸಿಕೊಂಡದ್ದೆ ಕೊಂಡದ್ದು. ತಿಳಿಯದೆ ಆದ ತಂತ್ರಾಂಶದ ತಪ್ಪಿನಿಂದಾಗಿ ಹಲವಾರು ಜನ ಹಲವು ತೊಂದರೆ ಅನುಭವಿಸಬೇಕಾಯ್ತು. ಎಷ್ಟೇ ಆಗಲಿ ಆದಿಫಲ ಈ ಸೇಬು ಹಣ್ಣು ಆಡಮ್ ಮತ್ತು ಈವ್ ಕಾಲದಿಂದ ದಾರಿತಪ್ಪಿಸುವ ಕೆಲಸ ಮಾಡಿಲ್ಲವೇ!!??. ಆಧುನಿಕ ಕಾಲದಲ್ಲೂ ಪುರುಷ-ಸ್ತ್ರೀಯರ ದಾರಿತಪ್ಪಿಸಿ ಒಂದು ರೀತಿಯ ಸುನಾಮಿಯನ್ನೆ ಜನಮಾನಸದ ಸಾಗರದಲ್ಲಿ ಎಬ್ಬಿಸಿ ಕೋಲಾಹಲವನ್ನೂ,ತಲ್ಲಣವನ್ನೂ ಮತ್ತು ಹಾಹಾಕಾರವನ್ನೂ ಸೃಷ್ಟಿಸಿ ಮೊದಲ ಸಾರಿ ಆಪಲ್ ಕಂಪನಿ ದೇವಸೃಷ್ಟಿ ಅಲ್ಲ; ಯಕಃಶ್ಚಿತ್ ಮಾನವ ಸೃಷ್ಟಿಯೇ ಎಂಬುದನ್ನು ಸಾಬೀತುಗೊಳಿಸಿತು.
ನಮ್ಮ ಜೀವನಕ್ಕೂ ಈ ವಿದ್ಯಮಾನ ಅನ್ವಯಿಸಬುಹುದೆನೋ!!
ನಮ್ಮ ದೇಹವೇ ಫೋನ್ ಆಗಿ, ನಮ್ಮ ಜೀವನವೆ ನಕ್ಷೆಯಾಗಿ, ನಾವು ಓಡಾಡುವ ಕಾರೇ ನಮ್ಮ ಜೀವನದ ಆಕಾಂಕ್ಷೆಗಳು.ಇವುಗಳನ್ನು ಅನುಭಾವಗೊಳಿಸುವ ಕೆಲಸವನ್ನು ಇಂದ್ರಿಯಗಳು ಮಾಡಿದರೆ ಅರಿಷಡ್ವರ್ಗಗಳು ಇವುಗಳೆಲ್ಲವನ್ನು ನಿರ್ದೇಶಿಸುತ್ತವೆ. ಜೀವನದಲ್ಲಿ ನಾವು ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಆ ಕ್ಷಣಕ್ಕೆ ಸರಿಯಾಗಿಯೇ ತೋರಬಹುದು. ಆದರೆ ಗುರಿ ಮುಟ್ಟಿದಾಗಲೇ ನಮ್ಮ ನಿರ್ಧಾರದ ನಿರ್ಣಯ ಆಗುವುದು.
ಹೀಗೆ, ಪಂಚೇಂದ್ರಿಯಗಳನ್ನು ಪ್ರತಿನಿಧಿಸುವ ಐ ಫೋನ್ ೫ ರ ದೇಹ, ಅದನ್ನು ಆಡಿಸುವ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಐಒ-೬, ಕಾಲನ ಪರೀಕ್ಷೆಯಲ್ಲಿ ಗೆದ್ದ ಸಮಾಜದ ಮೌಲ್ಯಗಳನ್ನು ಪ್ರತಿನಿಧಿಸುವ ಗೂಗಲ್ ಮ್ಯಾಪು ಹಾಗೂ ಇಂದಿನ ಮೌಲ್ಯರಹಿತ ಬದುಕನ್ನು ಪ್ರತಿನಿಧಿಸುವ ಐ-ಮ್ಯಾಪುಗಳ ನಡುವಿನ ತಾಕಲಾಟದಲ್ಲಿ ಮನುಷ್ಯನ ಜೀವನ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಅಂಕುರಿಸುತ್ತ ಇತ್ತು.
ಒಂದು ದಿನ ಬೆಳಿಗ್ಗೆ ೫ ಘಂಟೆಗೆ ಎದ್ದು ರೈಲಿಗೆ ಕಾಯುತ್ತ ಕುಳಿತಿದ್ದಾಗ ನನ್ನ ಸ್ನೇಹಿತನೊಬ್ಬ ಹೀಗೆ ಐ ಫೋನ್ ೫ ಹಾಗೂ ಐ ಆಪರೇಟಿಂಗ್ ಸಿಸ್ಟಂ ಸೂತ್ರಾಧಾರಿತ ಐ ಮ್ಯಾಪಿನಿಂದ ದಾರಿತಪ್ಪಿ ಫ಼ೇಸ್ ಬುಕ್ಕಿನಲ್ಲಿ ಗೋಳಾಡಿದ್ದ. ನಗು ಬಂತು ಹಾಗೇ ಸೂರ್ಯೋದಯದ ಜತೆಗೆ ಈ ಕವಿತೆಯ ಉದಯವೂ ಆಯ್ತು.
ಪ್ರಾತಃ ಸ್ಮರಣೀಯರಾದ ದಿ. ಜಿ.ಪಿ.ರಾಜರತ್ನ್ಂ ಅವರ ಬಣ್ಣದ ತಗಡಿನ ತುತ್ತೂರಿ ಪದ್ಯದ ಜಾಡನ್ನು ಹಿಡಿದು ಬರೆದಿದ್ದೇನೆ. ಅದಕ್ಕಾಗಿ ಅವರ ಕ್ಷಮೆ ಇರಲಿ.
ಐ-ವರಾತ
ಹಾಲಿನ ಬಣ್ಣದ ಐ ಫೋನು
ನಲಿಯುತ ಕೊಂಡನು ವಿಜಯೀಂದ್ರನು
ಡಬ್ಬವ ತಿರುಗಿಸಿ ನೋಡುತಲಿ
ಮನದಲೆ ಹಿರಿ ಹಿರಿ ಹಿಗ್ಗುತಲಿ
ಮನೆಕಡೆ ಓಡಿದ ಭರದಿಂದ
ಫೋನನು ತೆಗೆಯುತೆ ಮುದದಿಂದ
ಸಿಂ ಕಾರ್ಡ್ ಅನ್ನು ಹಾಕಿದನು
ಬ್ಯಾಟರಿ ಛಾರ್ಜನು ಮಾಡಿದನು
ವಿಜಯನು ಗರ್ವದಿ ಬೀಗುತಲಿ
ಫ಼ೋನ್ ಆನ್ ಮಾಡಿದ ಹೆಮ್ಮೆಯಲಿ
ಬೆಳಕದು ಮೂಡಿತು ಸ್ಕ್ರೀನಿನಲಿ
ಅರಳುವ ಹೂವಿನ ರೀತಿಯಲಿ
ಬಣ್ಣದ ಚಿತ್ರವು ಮೂಡುತಿರೆ
ವಿಜಯನು ಬುರ್ರನೆ ಉಬ್ಬುತಿರೆ
ಹೆಮ್ಮೆಯು ಕಣ್ಣನು ತುಂಬಿದೊಡೆ
ವಿಜಯನು ನೋಡಿದ ಮಡದಿಯೆಡೆ
ವಿಜಯೋತ್ಸವವನು ಆಚರಿಸೆ
ಹೆಂಡತಿ ಮೆಲ್ಲನೆ ಕನವರಿಸೆ
ವಿಜಯನು ಒಪ್ಪಿದ ತಲೆದೂಗಿ
ಹೇಳಿದ ಹೊರಡಲು ಅನುವಾಗಿ
ಫೋನಲಿ ಅಡಗಿಹ ಅಕ್ಕ” ಸಿರಿ”
ಆಕೆಯೆ ಅವನ ಸೆಕ್ರೆಟರಿ
ಊರಿಗೆ ಹೋಗುವ ದಾರಿಯನು
ತೋರಲು ಆಜ್ಞೆಯ ಮಾಡಿದನು
ಊರಿನ ಪೋಸ್ಟ್ ಕೋಡ್ ಹಾಕಿರಲು
ನಕ್ಷೆಯು ಕಕ್ಷೆಯು ಮೂಡಿರಲು
ಹಿಗ್ಗುತ ವಿಜಯನು ಕಾರಿನೊಳು
ನುಗ್ಗುತ ಬಾಗಿಲ ಮುಚ್ಚಿರಲು
ಲಲನೆಯು ನುಡಿದಳು ಮುದದಿಂದ
ಈಗಲೆ ಹೊರಟರೆ ಬಲು ಚಂದ
ರಸ್ತೆಯು ತಿರುವೂ ಬರುತಿರಲು
ಫೋನದು ದಾರಿಯ ತೋರಿರಲು
ನಕ್ಷೆಯ ತಪ್ಪಿನ ಅರಿವಿಲ್ಲ
ಸುತ್ತಿದ, ಊರದು ಸಿಗಲಿಲ್ಲ
ತಿನ್ನಲು-ಕುಡಿಯಲು ಏನಿಲ್ಲ
ಬಸವಳಿದರು ಆ ದಿನವೆಲ್ಲ
ನಿರ್ಜನ ಬಯಲಿಗೆ ತಂದಿತ್ತು
ನಿನ್ನೂರ್ ಬಂದಿತು ಇಳಿಯೆಂತು
ದಾರಿಯ ತಪ್ಪಿದ ಮಗನಾಗಿ
ಸುತ್ತಲು ನೋಡಿದ ಬೆರಗಾಗಿ
ಹೆಂಡತಿ ಮಕ್ಕಳು ಜೊತೆ ಸೇರಿ
ಹಾಕಿದರವನಿಗೆ ಛೀಮಾರಿ
ಸಾಕೀ ನಿಮ್ಮ ಸಹವಾಸ
ಐ ಫೋನ್ ಜೊತೆಗಿನ ವನವಾಸ
ಹಳ್ಳಕೆ ಬಿದ್ದ ವೃಕನಾಗಿ
ವಿಜಯನು ಮರುಗಿದ ತನಗಾಗಿ
ಆದಿ-ಫಲ ಈ ಆಪಲ್ಲು
ದಾರಿಯ ತಪ್ಪಿಸೊ ಸ್ಯಾಂಪಲ್ಲು
ಆಪಲ್ ಮ್ಯಾಪನು ನಂಬದಿರು
ಗೂಗಲ್ ಸ್ನೇಹವ ತೊರೆಯದಿರು
preethiya sudarshanvarige
NIMMA KAVANA rajarathnam stylenalli athanthya sundaravage moodi bandidhe. Manasige olle kick kottidhe. enthaha adbhuta kavana rachisidri. i phone companige kaluhisidre award guarantee
LikeLike
Wonderful poem. First time I read it,it made my heart feel lighter.
I read it to all my family.
If an I-phone problem can stimulate you to write , can there be a limit to what you can write on!
We would like to see more.
LikeLike
ನಿಮ್ಮ ಕವನ ತುಂಬಾ ಚೆನ್ನಾಗಿ ಬಂದಿದೆ. ಕವನದ ಮೀಟರ್ ಚೆನ್ನಾಗಿದೆ, ಹಾಡಲೂ ಬಹುದು.
ಹೀಗೆ ಬರೆಯುತ್ತಿರಿ.
LikeLike
Dear Dr. Sudarshan,
You have very effectively captured the frustration many of us felt when Apple decided to do away with Google Map and install their own. I am glad to see you have made a mockery of their utter stupidity. There is no doubt we will all become Rajaratnam’s Kasturi if we don’t keep in mind limitations of gadgets for after all they are prone to human follies.
Sathya
LikeLike
ಸುದರ್ಶನ್ ಅವರೆ
ತಮ್ಮ ಈ ಕವನದಲ್ಲಿ ಬಳಸಿರುವ ಭಾಷೆ ಸಂಮೃದ್ಧಿಯಾಗಿರುವುದಲ್ಲದೆ, ಕವನ ಪ್ರಾಸಬದ್ಧವಾಗಿ GPR ಅವರ ಕವನದಷ್ಟೇ ಚೇತೊಹಾರಿಯಾಗಿದೆ. Good adaptation of old style to a new contemporary theme. Welcome to KSSVV
ಪ್ರಸಾದ್
LikeLike
Ellarigu Dhanyavaada. Nanna taantrika agnaanakke besarisade sahaaya maadida keshav haagu pratikriyisi sphurthi needida balagakke chira runi
LikeLike
ಸುದರ್ಶನರೇ,
ಬಹಳೇ ಚೆನ್ನಾಗಿದೆ ನಿಮ್ಮ ಐ-ವರಾತ! ಓದಲೇ ಬೇಕೆಂಬ ವರಾತ; ಪರಾತ ತುಂಬ ಚೌ ಚೌ ಭಾತ! ವಾಹವ್ಹಾ! ಐಕೋನಿಕ್ !! ತಲೆದೂಗಿದೆ
ಈಡನ್ ಗಾರ್ಡನ್, ಆಪ್ಪಲ್, ದಾರಿ ತಪ್ಪುವದು, ಗಂಡು -ಹೆಣ್ಣು (andro -gynae) ದಾರಿ ತಪ್ಪಿಸುವದು, ಇವೆಲ್ಲ ಇಂಧನವಿಲ್ಲಿರುವಾಗ Apple ಅಲ್ಲ Android ಎಂದು ಹಾಕಿ ಸ್ಫೋಟಗೊಳಿಸಲೇ? ಹೀಗೇ ಕವನಗಳ ಬರಾತ ಬರುತ್ತಿರಲಿ. ಶ್ರೀವತ್ಸ
LikeLike
ಸುದರ್ಶನ್,
ನಿಮ್ಮ ಕವನ ತುಂಬ ಚೆನ್ನಾಗಿದೆ. ನಿಮ್ಮ ಶಬ್ದ ಭಾಂಡಾರ ಮತ್ತು ಪದಗಳ ಜೊತೆಗಿನ ಆಟ ಸೊಗಸಾಗಿದೆ. ಆದಮ್ಮಿನ ಆಪಲ್ಲನ್ನೂ ಇಲ್ಲಿ ಸೇರಿಸಿ ಕವನಕ್ಕೆ ಒಂದು ಫಿಲಾಸಾಫಿಕಲ್ ಟಚ್ ಕೂಡ ಕೊಟ್ಟಿದ್ದೀರಿ.
– ಕೇಶವ
LikeLike
ಧನ್ಯವಾದ ಅರವಿಂದ್
ಕನ್ನಡಕ್ಕಾಗಿ ನನ್ನ ಪುಟ್ಟ ಅಳಿಲು ಸೇವೆ ಅಷ್ಟೆ.ಕನ್ನಡ ಬಳಗದ ಸಂಚಿಕೆ ಯಲ್ಲಿ ನನ್ನ ಕಳೆ-ಕಳೆ ಕವನ ಇದೆ ಓದಿ ನಿಮ್ಮ ಅನಿಸಿಕೆ ತಿಳಿಸಿ. ಕನ್ನಡದ ಪದ ಬಳಕೆ ಹೆಚ್ಚಿಸುವಲ್ಲಿ ನಾವೇನು ಮಾಡಬಹುದು ಎನ್ನುವುದರ ಬಗ್ಗೆ ನಾವು ಕಾರ್ಯ ಪ್ರವೃತ್ತರಾಗಬೇಕಿದೆ. ಕನ್ನಡ ಬಹಳ ತೀವ್ರಗತಿಯಲ್ಲಿ ಅಳಿವಿನೆಡೆಗೆ ಸಾಗುವ ಭಾಷೆಯಾಗುತ್ತಿದೆ ಎಂದು ನನ್ನ ಅನಿಸಿಕೆ.
ಸುದರ್ಶನ
LikeLike
ಸುದರ್ಶನ್ ಅವರೆ, ಕನ್ನಡ ಭಾಷೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ತಮ್ಮ ಅಭಿಮಾನವನ್ನು ತೋರಿ ಅದರ ಬಳಕೆಯನ್ನು ಉತ್ತಮ ಗೊಳಿಸಬೇಕಿದೆ. ಕನ್ನಡ ಪದಗಳನ್ನು ಸಮೃದ್ಧಗೊಳಿಸಿ ಭಾಷೆಯನ್ನು ಶ್ರೀಮಂತಗೊಳಿಸುವ ಕಾಲ ಹತ್ತಿರ ಬಂದಿದೆ. ಕನ್ನಡ ಭಾಷೆಯ ಭವಿಶ್ಯ ಇನ್ನು ಕೇವಲ ೨೫ ವರ್ಷಗಳು ಎಂಬ ಹಿರಿಯ ಸಾಹಿತಿಗಳ ಭಯಂಕರ ಭವಿಶ್ಯವಾಣಿಯನ್ನುು ಸುಳ್ಳಾಗಿಸುವ ಹಾದಿಯಲ್ಲಿ ಕನ್ನಡಿಗರು ಧಾಪುಗಾಲಿಡಬೇಕಿದೆ !
LikeLike
Nalumeya Sudarshanavarige
Shubhashaygalu.
Nimma kavan odi nanna mana Higgi sureyayitu. Nima Yinth amulya kannada Sahityada bhandavalu illiyavsrage Yalli adigittu na Kane?
Aravind
Radlett
LikeLike