೧ಜಗದ ಕೊಳೆಯತೊಳೆಯೆಇಳೆಗೆ ಬಂದೇ ಏನೇಇಬ್ಬನಿ?೨ರಾತ್ರಿಯೆಲ್ಲ ಬಿಕ್ಕಳಿಸಿಜಾರದೇ ಉಳಿದ ಕಂಬನಿಇಬ್ಬನಿ೩ರಾತ್ರಿಯೆಲ್ಲಅಪ್ಪಿತಬ್ಬಿಅಪ್ಪಿತಪ್ಪಿಉಳಿದ ಮುತ್ತಿನ ಹನಿಇಬ್ಬನಿ೪ಮುಂಜಾವಿನ ಕೊರಳಿಗೆವಜ್ರದ ಹರಳುಇಬ್ಬನಿ೫ನೇಸರನ ಸ್ವಾಗತಕೆಥಳಿ ಹೊಡೆದ ನೀರುಇಬ್ಬನಿ೬ರಾತ್ರಿಯ ಸೆಕೆಗೆಮೂಡಿದ ಬೆವರುಇಬ್ಬನಿ೭ಪ್ರೇಮಿಯ ಕೂದಲಿನಅಂಚಿಗೆ ಉಳಿದ ಹನಿಇಬ್ಬನಿ೮ಕಣ್ಣು ಬಿಟ್ಟ ಮಗುಅಮ್ಮನನ್ನು ಕಂಡ ಖುಷಿಯಲ್ಲಿಮೂಡಿದ ಕಣ್ಣಂಚಿನ ಪಸೆಇಬ್ಬನಿ೯ಮುಂಜಾವಿನೆದೆಯಿಂದಉ ದು ರಿಬೀಳುವ ಹನಿಇಬ್ಬನಿ೧೦ಮತ್ತೆ ಬೆಳಗಾಯಿತುಮತ್ತೆ ಹೊಸಜೀವ ಬಂದಿತುನಿಸರ್ಗದ ಆನಂದ ಬಾಷ್ಪಇಬ್ಬನಿ೧೧ರಾತ್ರಿ ಹೊತ್ತುಯಾವುದೋ ಕೀಟ ಮಾಡಿದ ಗಾಯಕ್ಕೆಎಲೆ ಮೇಲೆ ಮೂಡಿದ ಗುಳ್ಳೆಇಬ್ಬನಿ೧೨ಅನಂತದಲಿ ಬಿಂದುಬಿಂದುವಿನಲಿ ಅನಂತಒಂದು ಮಂಜಿನ ಹನಿಯೊಳಗೊಂದು ಬ್ರಹ್ಮಾಂಡ೧೩ಎಲೆಯ ಮೇಲೆಮುಂಜಾವಿನಮುತ್ತಿನ ಗುರುತುಸ್ವಲ್ಪ ಹೊತ್ತುಹಾಗೇ ಇರಲಿ ಬಿಡು೧೪ಪದಗಳಲ್ಲಿಹುಡುಕಿದರೂ ಸಿಗದ ಕವಿತೆಪುಟ್ಟ ಹುಲ್ಲಿನೆಳೆಯ ಮೇಲೆಮುಂಜಾವಿನ ಮಂಜಿನೊಳಗೆನಗುತ್ತ ಕಣ್ಬಿಡುತ್ತಿತ್ತು
*****
ʼಹೋದಲೆಲ್ಲ ಹಾದಿ ʼ ಸರಣಿ:
೧. ಬೆಂಚಿನ ಸ್ವಗತ
೧ಮುಂಜಾವಿನ ಬಾಗಿಲು ಅದೇ ತೆರೆದಿತ್ತುಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆಬಂದು ನನ್ನ ಮೇಲೆ ಕೂತರು ಇಬ್ಬರುವಯಸ್ಸು ಎಪ್ಪತ್ತೋ ಎಂಬತ್ತೋಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನುಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು೨ಕಾಲೇಜಿಗೆ ಚಕ್ಕರ್ನನ್ನ ಮೇಲೆ ಹಾಜರ್ಕಿಲಿಕಿಲಿ ನಗುಚಿಲಿಪಿಲಿ ಮಾತುಕದ್ದು ಕದ್ದು ಮುತ್ತುಹುಸಿಮುನಿಸುಅಳುನಟನೆತುಂಟನಗು‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು‘ಈ ಬೆಂಚು ಇಲ್ಲಿರುವವರೆಗೂ,’ ಎಂದಅವನ ಕೆನ್ನೆಗೊಂದು ಮುತ್ತು ಸಿಕ್ಕಿತು೩ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದುಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನುಇವನ ಡಬ್ಬ ಅವಳು ಹಂಚಿಕೊಂಡರುಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳುಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ‘ನಮ್ಮ ಬದುಕು ಈ ಬೆಂಚಿನಂತೆಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರುಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು೪ಈಗ ರಾತ್ರಿಯ ನೀರವಮೌನದಲ್ಲಿಬೀದಿದೀಪಗಳ ಮಬ್ಬುಬೆಳಕಲ್ಲಿಒಂಟಿಯಾಗಿದಿನದ ನೂರಾರು ಕತೆಗಳ ನೆನೆಯುತ್ತದಿನದ ಸಾವಿರಾರು ಕವನಗಳ ಕನವರಿಸುತ್ತನಿದ್ದೆ ಬರದೇಕೂತೇ ಇದ್ದೇನೆ
೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ
ಕಲ್ಲು ಮುಳ್ಳಿನ ಹಾದಿಯನೆನಪುಗಳು ಕಳೆದಿಲ್ಲಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳುಚುಚ್ಚಿಸಿಕೊಂಡ ಅಪಮಾನಗಳುಇಲ್ಲಿ ಎಲ್ಲ ಒಳ್ಳೆಯವರುಎಂಬ ನಂಬಿಕೆಯಲ್ಲಿಹಲ್ಲು ಕೊರೆದ ಹಾದಿಯಲ್ಲಿಜೊತೆಗೆ ಬಂದವರುನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರುಹೂವಿನ ದಾರಿಯ ಮೇಲೆನಡೆಸುವೆ ಎಂದು ಭರವಸೆ ಕೊಟ್ಟವರುಹೂವಿನ ಜೊತೆ ಮುಳ್ಳೂ ಇರುತ್ತದೆಎಂದು ಹೇಳುವುದನ್ನು ಮರೆತರುನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲಅಲ್ಲಿಯೂ ಸಲ್ಲಲಿಲ್ಲಇಲ್ಲಿಗೂ ಒಗ್ಗಿಕೊಳ್ಳಲಿಲ್ಲದೇಶಬಿಟ್ಟ ಪರದೇಸಿಕಲ್ಲಿಗಿಂತ ಕಲ್ಲಾಗಿಪರಸಿಕಲ್ಲಿನ ಹಾದಿಯ ಮೇಲೆಅಂಗಡಿ ಅಂಗಡಿಗಳಲ್ಲಿನಡೆವ ಜನರ ಮುಖಗಳಲ್ಲಿಸುಖ ಸಂತೋಷ ಹುಡುಕುತ್ತೇನೆಹಾದಿಹೋಕ ನಾನುಹಾದಿಹೋಕನಾಗಿಯೇ ಉಳಿದಿದ್ದೇನೆವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆಹುಲ್ಲುಹಾಸಿನ ಹಾದಿಯಫೋಟೋ ತೆಗೆದುಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆಹೈವೇಯ ಸೈನ್-ಬೋರ್ಡುಗಳುಈಗ ನನ್ನ ಮಿತ್ರರುನನ್ನ ಕಾರಿನ ದಾರಿ ಹೇಳಿಕೊಡುವವರುಹಗಲು ಸಂಜೆ ಅದೇ ಹಾದಿಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ*ಕಾಲ ಮಾಗುತಿದೆದಾರಿ ಸವೆಯುತಿದೆತಾಣದ ಮರೀಚಿಕೆಹಾಗೇ ಉಳಿದಿದೆಹಾಗೇ ಉಳಿದರೇ ಬದುಕೆ?
ಅನಿವಾಸಿ ಎಂಬ ಬಟ್ಟೆಯನ್ನು (ವಿಶೇಷವನ್ನು) ಐದು ವರ್ಷಗಳ ಕಾಲ ಎಳೆ ಎಳೆಯಾಗಿ ನೇದು ಅದಕ್ಕೊಂದು ಸ್ವರೂಪವನ್ನು ಕೊಟ್ಟ ರೀತಿಯ ಒಂದು ಸಮಗ್ರ ವರದಿಯನ್ನು ಓದಿ ಆಗಿದೆ.
ಯಾವ ನೇಯ್ಗೆ, ಯಾವ ಗುಣ ಮಟ್ಟ ನಮಗೆ ಒಪ್ಪಿಗೆಯಾಗಬಲ್ಲದು? ಅದಕ್ಕೊಂದು ಮಾನದಂಡವಿದೆಯೇ? ಮೌಲ್ಯವಿದೆಯೇ? ಅದರಿಂದ ನಮಗೇನು ಪ್ರಯೋಜನ? ನಮಗೆ ಆ ಬಟ್ಟಯ ಜತೆಗಿನ ಬಾಂಧವ್ಯದ ಅಗತ್ಯ ಇದೆಯೇ? ನಮಗೆ ಇದು ಸರಿ ಹೊಂದುತ್ತದೆಯೇ?ಎನ್ನುವ ಪ್ರಶ್ನೆಗಳಿಗೆ ಅವರವರಿಗೆ ದೊರೆಯುವ ಉತ್ತರದ ಮೇಲೆ ಧಾರಕರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಅನಿವಾಸಿಯ ಜೊತೆಗಿನ ಸಂಭಂದಗಳೂ ಹಾಗೆಯೇ.
ಅನಿವಾಸಿ ಎಂಬುದು ಕನ್ನಡಿಗರ ಒಂದು ಪುಟ್ಟ ಗುಂಪು. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಇಲ್ಲಿ ಆದ್ಯತೆ. ಸೃಜನಶೀಲತೆಯ ಮೂಲ ತವರಾದ ಸಾಹಿತ್ಯ ಇದರ ಮುಖ್ಯ ಚಟುವಟಿಕೆ.ಅನಿವಾಸಿಯ ಮೂಲ ಉದ್ದೇಶವಾದ ಸಾಹಿತ್ಯಕ ಮೌಲ್ಯಗಳಲ್ಲಿ ಆಸಕ್ತಿಯಿದ್ದವರಿಗೆ ಅನಿವಾಸಿಯ ಮೂಲಕ ಹಲವು ದರ್ಶನಗಳಾಗಿವೆ. ಆದರೆ, ಸಾಹಿತ್ಯ ಮತ್ತು ಅದರಿಂದ ಉದಯಿಸುವ ಎಲ್ಲ ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಆಸಕ್ತಿಯಿಲ್ಲದೆ ಬರಿ ಪ್ರದರ್ಶನ, ಘೋಷಣೆ,ವಯಕ್ತಿಕ ಪ್ರಚಾರ ಮತ್ತಿತರ ಚಟುವಟಿಕೆಗಳನ್ನು ಹುಡುಕಿಕೊಂಡು ಬಂದು ದುಡುಕಿ ಈ ಗುಂಪನ್ನು ಸೇರಿದವರಿಗೆ ನಿರಾಶೆಯೂ ಆಗಿರಬಹುದು. ಅನಿವಾಸಿಯಲ್ಲಿ ಹುಳುಕಿಲ್ಲವೆಂದಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳಿಗೂ ಕೊರತೆಯಿಲ್ಲ. ಆದರೆ ಪರಸ್ಪರರ ವಿಚಾರಗಳ ಬಗೆಗಿನ ಗೌರವ ಬಹಳ ಮುಖ್ಯ. ಹೇಳಿ ಕೇಳಿ ಇದು ಸೃಜನಶೀಲರ ಗುಂಪು. ಹಾಗಾಗಿ ಇಲ್ಲಿ ಆತ್ಮ, ಅಹಂ ಮತ್ತು ನಾನು (Artists’s Ego) ಎನ್ನುವ ವಿಚಾರಗಳೂ ಉದಿಸುತ್ತವೆ.ಆದರೆ ಪ್ರತಿ ಸದಸ್ಯರೂ ಈ ಬಟ್ಟೆಯ ಬೇರೆ ಬೇರೆ ಎಳೆಗಳು. ಪ್ರತಿಯೊಬ್ಬರೂ ಈ ಗುಂಪಿಗೆ ತಂದಿರುವ ಮೌಲ್ಯಗಳು ಅಮೂಲ್ಯವಾದವುಗಳೇ. ಇಲ್ಲಿ ಸರಿ ಬರುವ ಒಂದೇ ಒಂದು ಸೂತ್ರ ಎಂದರೆ ಈ ಎಲ್ಲ ಎಳೆಗಳ ನಡುವಿನ ಹೊಂದಾಣಿಕೆ ಮತ್ತು ಪ್ರಾಮಾಣಿಕತೆ. ಪ್ರಯತ್ನವಷ್ಟೇ ಫಲವನ್ನು ನೀಡಬಲ್ಲದು.
ಕನ್ನಡ ಸಾಹಿತ್ಯದಲ್ಲಿ ಆಸಕ್ತಯಿರುವ ನಿರುಪದ್ರವಕಾರಿ ಸದಸ್ಯರು ಒಂದೆಡೆ ಸೇರಿ ತಮ್ಮ ಸಾಹಿತ್ಯದ ಒಲವನ್ನು ಮುಂದುವರೆಸುವುದು, ಬೆಳೆಸಿಕೊಳ್ಳುವುದು, ಜೊತೆ ಜೊತೆಯಾಗಿ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳುವುದು, ಒಬ್ಬರನ್ನೊಬ್ಬರು ಉತ್ತೇಜಿಸುವುದು, ಜೊತೆ ಜೊತೆಯಲ್ಲೇ ವಯಕ್ತಿಕ ಬೆಳವಣಿಗೆಗಳು, ಒಂದಷ್ಟು ಸಂತೋಷ,ವಿನೋದ ಮತ್ತು ವಿನಿಮಯ- ಇದರ ಮುಖ್ಯ ಉದ್ದೇಶಗಳು.
ಒಂದೆರೆಡು ವರ್ಷಗಳು ಅನಿವಾಸಿಯ ಜೊತೆ ಕಳೆದ ನಂತರ ಅನಿವಾಸಿಯ ಸಂಪರ್ಕದ ಸವಿಯ ಅರಿವಾಗಲು ಶುರುವಾಗುತ್ತದೆ. ಮೇರೆ ಮೀರುವ (ಕೆಲವೊಮ್ಮೆ) ಕೆಲವರ ಉತ್ಸಾಹಗಳು, ಹಾರ್ದಿಕ ಆಶಯದ ಹಲವರ ಔದಾರ್ಯಗಳು ಬೆಳಕಿಗೆ ಬರುತ್ತವೆ, ಅರ್ಥವೇ ಆಗದ ಕೆಲವರ ನಿರುತ್ತರಗಳು ಕೂಡ ದಕ್ಕತೊಡಗುತ್ತವೆ.
ಡಾ. ರಾಮ್ ಶರಣ್ ಲಕ್ಷ್ಮೀನಾರಾಯಣ
”ನಾನು ನೀಡಿದ್ದು ಕಡಿಮೆ’ ಎನ್ನುತ್ತಲೇ ಕಳೆದ ಐದು ವರ್ಷಗಳಿಂದಲೂ ಅನಿವಾಸಿಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿರುವ ರಾಮಶರಣ್ ತಮ್ಮ ಕೆಳಗಿನ ಬರಹದ ಮೂಲಕ ಅನಿವಾಸಿಯ ಜೊತೆಗಿನ ತಮ್ಮ ವಯಕ್ತಿಕ ಒಡನಾಟವನ್ನು ಇವೇ ಹಿನ್ನೆಲೆಗಳ ಆಧಾರದ ಮೇಲೆ ಈ ಲೇಖನದ ಮೂಲಕ ವಸ್ತುನಿಷ್ಠವಾಗಿ ತೂಕಹಾಕಿದ್ದಾರೆ. ಅನಿವಾಸಿಯ ಒಡನಾಟದಲ್ಲಿ ಕಳೆದ ಮೆಚ್ಚಿನ ಕ್ಷಣಗಳನ್ನು, ಅನಿವಾಸಿಯ ಒಡನಾಟದಲ್ಲಿ ಭೇಟಿಮಾಡಿದ ದಿಗ್ಗಜರನ್ನು ನೆನೆಯುತ್ತ ವ್ಯಾವಹಾರಿಕ ( pragmatic) ಧೋರಣೆಗಳ ಪರಿಧಿಗಳಿಂದ ಹೊರಬಂದು ಭಾವುಕರಾಗಿದ್ದಾರೆ. ಅನಿವಾಸಿಗೆ ಕಾಲ ಕಾಲಕ್ಕೆ ಹೊಸ ನೀರು ಸೇರುತ್ತ ಈ ಅನಿವಾಸಿಯೆಂಬ ನದಿ ನಿರಂತರವಾಗಿ ಹರಿಯಲಿ ಎಂದು ಆಶಿಸುತ್ತಾರೆ.
ರಾಂ ರ ಈ ಲೇಖನದಲ್ಲಿ ಮುಖ್ಯವಾದ ಎರಡು ಪ್ರಶ್ನೆಗಳಿವೆ. ಕೊಟ್ಟದ್ದೇನು? ಪಡೆದದ್ದೇನು?ಇದು ಅತ್ಯಂತ ಮುಖ್ಯವಾದ, ಮೌಲ್ಯಯುತವಾದ ವಿಚಾರ. ಇದನ್ನು ಪ್ರತಿ ಸದಸ್ಯರು ಕೇಳಿ ಕೊಳ್ಳಬೇಕು ಕೂಡ.ಆಗಷ್ಟೆ ವಾಮನ ರೂಪಿ ಅನಿವಾಸಿಯ ವೇದಿಕೆ ನಮ್ಮೆಲ್ಲರಿಗೆ ದೊರಕಿಸಿದ ಅವಕಾಶಗಳ ವಿರಾಟ್ ದರ್ಶನವಾಗುತ್ತದೆ.
ಈ ಸರಣಿಗೆ ಒಂದು ಬರಹವನ್ನು ಬರೆಯಲು ಕೇಳಿದಾಗ ಉತ್ಸಾಹದಿಂದ ಮೊದಲು ಲೇಖನವನ್ನು ಬರೆದು ಕಳಿಸಿದವರು ರಾಂ ಅವರೇ. ಆದರೆ, ಬೇರೆಲ್ಲರ ಲೇಖನಗಳಿಗಾಗಿ ಕಾಯುತ್ತಿದ್ದ ಕಾರಣ ಇಷ್ಟು ನಿಧಾನವಾದದ್ದಕ್ಕೆ ಕ್ಷ್ಮಮೆಯಿರಲಿ ಎಂದು ಕೋರುತ್ತೇನೆ. ಪುಟ್ಟ ಲೇಖನವಾಗಿರುವ ಕಾರಣ ಉದ್ದನ್ನ ಪ್ರಸ್ತಾವನೆ ಅಷ್ಟೆ –ಡಾ. ಪ್ರೇಮಲತ ಬಿ.
ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು?
ಅನಿವಾಸಿಗೆ 5 ವರ್ಷ ತುಂಬಿದೆ ಅಂದ್ರೆ ನಂಬೋಕಾಗ್ತಾ ಇಲ್ಲ. ಪ್ರೇಮಲತಾ 2 ತಿಂಗಳ ಕೆಳಗೆ ವಾಟ್ಸಾಪ್ ಸಂದೇಶ ಕಳಿಸಿದಾಗಲೇ ಗೊತ್ತಾಗಿದ್ದು.
ಈ 5 ವರ್ಷಗಳು ಹೇಗೆ ಹೋದವು ಅಂತಲೇ ಗೊತಾಗ್ಲಿಲ್ಲ. ಹಿಮದ ಉಂಡೆಯಂತೆ ಚಿಕ್ಕ ಕಣದಿಂದ ಮಹಾ ಗಾತ್ರದ ಬಂಡೆ ಆಗದಿದ್ದರೂ ಸಾಕಷ್ಟು ಗಾತ್ರದ ಕಲ್ಲಾಗಿ ನಿಂತಿರುವುದು ಹೆಮ್ಮೆಯ ವಿಷಯ. ಈ ಗತಿಸಿದ ದಿನಗಳಲ್ಲಿ, ಬಹಳಷ್ಟು ಜನ ಸೇರ್ಪಡೆಯಾಗಿದ್ದಾರೆ, ಕೆಲವರು ತೊರೆದು; ತೆರೆ ಮರೆಗೆ ಸರಿದಿದ್ದಾರೆ. ಆದರೆ ನಿಲ್ಲದ ನದಿಯಂತೆ ಅನಿವಾಸಿ ಸದಾ ಹರಿಯುತ್ತ ಬೆಳೆಯುತಿರುವುದನ್ನು ನೋಡುವುದೇ ಸೊಗಸು.
SMART ಥೆರಪಿ ’ ನಾಟಕದಲ್ಲಿ ಪಾತ್ರದಾರಿಯಾಗಿ
ನಾನು ನೀಡಿದ್ದಕ್ಕಿಂತ ಅನಿವಾಸಿಯಿಂದ ಪಡೆದದ್ದೇ ಜಾಸ್ತಿ. ಹಿರಿಯರ ಸಹವಾಸ, ಸಮವಯಸ್ಕರೊಂದಿಗೆ ಸಮಾನ ವಿಷಯಗಳ ಚರ್ಚೆ ರಸಗವಳ ಮೆದ್ದಂತೆ. ವಾರಕ್ಕೊಮ್ಮೆ ಬರುವ ಲೇಖನಗಳು ಮನಸ್ಸಿಗೆ ಮುದ ನೀಡುವುದಲ್ಲದೇ, ಹಲವಾರು ಚರ್ಚೆಗಳಿಗೆ ಪೀಠಿಕೆ, ಸರಕಾಗಿದೆ. ಸತತವಾಗಿ ಇದನ್ನು ನಡೆಸಿಕೊಂಡು ಬಂದಿರುವ ಭಗೀರಥ ಪ್ರಯತ್ನಕ್ಕೆ ಈಗಿನ ಕಾಲದ ಪುರಾವೆಯೇ ಸರಿ. ದೇಶದ ಹಲವು ಊರುಗಳಲ್ಲಿ ಹರಿದು ಹಂಚಿ ಹೋಗಿರುವ ಸದಸ್ಯರು ಅಂತರ್ಜಾಲದ ಹಂದರದಲ್ಲೇ ಬೆಳಸಿರುವ ಸಾಪ್ತಾಹಿಕವನ್ನಿಂದು ಜಗತಿನ ಹಲವು ದೇಶಗಳ ಓದುಗರು ಪ್ರೋತ್ಸಾಹಿಸುತ್ತಿರುವುದು ನಮಗೆ ಸದಾ ಚೈತನ್ಯ ಕೊಡುವ ಲಹರಿ.
ಕವಿ ಡುಂಡಿರಾಜರ ಹನಿಗವನ ಗೋಷ್ಠಿಯಲ್ಲಿ
ವರ್ಷಕ್ಕೆರಡು ಬಾರಿ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ನಡೆಯುವ ಅನಿವಾಸಿ ನಡೆಸಿ ಕೊಡುವ ಸಾಹಿತ್ಯಿಕ ಸಭೆಗಳು ನನ್ನ ಅಚ್ಚುಮೆಚ್ಚಿನ ಕ್ಷಣಗಳು. ಕನಸು – ಮನಸಿನಲ್ಲೂ ಎಣಿಸದ ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜಗಳನ್ನು ಭೇಟಿಯಾಗುವ, ಅವರೆದುರು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ವೇದಿಕೆ ಇದು.
ರಾಜ್ಯ ಪ್ರಶಸ್ತಿ ವಿಜೇತ ಗುರುರಾಜ ಕರ್ಜಗಿಯವರ ಸಮ್ಮುಖದಲ್ಲಿ
ಈ ಎಲ್ಲ ಕ್ಷಣಗಳಲ್ಲಿ ನನಗೆ ಅಪ್ಯಾಯಮಾನವಾಗಿರುವುದು ಶ್ರೀಯುತ ಗುರುರಾಜ ಕರಜಗಿಯವರ ಭೇಟಿ. ವಿಜ್ಞಾನಿ, ಶಿಕ್ಷಣ ತಜ್ಞ, ಸಾಹಿತಿ, ದಾರ್ಶನಿಕ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಕರಜಗಿಯವರು, ಹಿರಿಯರೊಡನೆ ಹಿರಿಯರಾಗಿ; ಕಿರಿಯರೊಡನೆ, ಸಮವಯಸ್ಕನಂತೆ; ಮಕ್ಕಳೊಡನೆ ಮಕ್ಕಳಾಗಿ ಒಡನಾಡುವ ಪರಿ ಹೊಸ ಪಾಠವನ್ನೇ ಕಲಿಸಿತು. “ ವಿದ್ಯಾ ವಿನಯೇನ ಶೋಭತೆ” ಎಂಬ ಮಾತಿಗೆ ಇವರು ಜ್ವಲಂತ ಉದಾಹರಣೆ. ಅನಿವಾಸಿಯ ಸದಸ್ಯನಾಗದಿದ್ದರೆ ಇಂತಹ ಸುವರ್ಣಾವಕಾಶ ನನ್ನದಾಗುತ್ತಿರಲಿಲ್ಲ.
ಧ್ವನಿ ಸುರುಳಿಯ ಬಿಡುಗಡೆ ಸಮಾರಂಭದಲ್ಲಿ
ಪ್ರೇಮಲತಾರ ಒತ್ತಾಸೆಗೆ, ಬತ್ತದ ಉತ್ಸಾಹಕ್ಕೆ ಮಣಿದು ಭಾಗಿಯಾದ ಧ್ವನಿ ಸುರುಳಿಯ ಯೋಜನೆ; ಗೆಳೆಯರೊಂದಿಗೆ, ಕೇಶವ ಬರೆದು ನಿರ್ದೇಶಿಸಿದ ಏಕಾಂಕದಲ್ಲಿ ನಟನೆ; ‘ಅನಿವಾಸಿ ಅಂಗಳದಿಂದ’ ಹೊತ್ತಿಗೆಯ ಬಿಡುಗಡೆ; ಒಂದೇ – ಎರಡೇ? ಈ ಐದು ವರ್ಷಗಳಿಂದ ಸತತವಾಗಿ ಸಾಂಸ್ಕೃತಿಕ – ಸಾಹಿತ್ಯಿಕ ಪ್ರವಾಹದಲ್ಲಿ ಅನಿವಾಸಿ, ನನ್ನನ್ನು ಹಿಂದೆಂದೂ ಅನುಭವಿಸದ, ಅನ್ವೇಷಿಸದ ಜಗತ್ತಿಗೆ ತಂದೊಡ್ಡಿದೆ.
ಗಿರೀಶ್ ಕಾಸರವಳ್ಳಿಯರ ಕಮ್ಮಟದಲ್ಲಿ
ಅನಿವಾಸಿ ಬೆಳೆಯುತ್ತಲೇ ಇರಲಿ, ಇಲ್ಲಿನ ಕನ್ನಡಿಗರಿಗೆ ಸಾಹಿತ್ಯಿಕ ನೆಲೆಯಾಗಲಿ ಎಂಬುದೇ ನನ್ನ ಹಾರೈಕೆ. ಈ ಹಾರೈಕೆಯಲ್ಲಿ ನನ್ನ ಸ್ವಾರ್ಥವೂ ಹಾಸು ಹೊಕ್ಕಾಗಿದೆ. ಅನಿವಾಸಿ ಬೆಳೆದರೆ ಅದರ ಆಶ್ರಯದಲ್ಲಿ ನಾನೂ ಬೆಳೆವನೆಂಬ ಆಶಯ. ನಮ್ಮಲ್ಲರ ಆಶಯವೇ ಅನಿವಾಸಿಗೆ ಬೇಕಾದ ಆಮ್ಲಜನಕ ಎಂದೇ ನನ್ನ ಅನಿಸಿಕೆ.-ರಾಂ