೧ಜಗದ ಕೊಳೆಯತೊಳೆಯೆಇಳೆಗೆ ಬಂದೇ ಏನೇಇಬ್ಬನಿ?೨ರಾತ್ರಿಯೆಲ್ಲ ಬಿಕ್ಕಳಿಸಿಜಾರದೇ ಉಳಿದ ಕಂಬನಿಇಬ್ಬನಿ೩ರಾತ್ರಿಯೆಲ್ಲಅಪ್ಪಿತಬ್ಬಿಅಪ್ಪಿತಪ್ಪಿಉಳಿದ ಮುತ್ತಿನ ಹನಿಇಬ್ಬನಿ೪ಮುಂಜಾವಿನ ಕೊರಳಿಗೆವಜ್ರದ ಹರಳುಇಬ್ಬನಿ೫ನೇಸರನ ಸ್ವಾಗತಕೆಥಳಿ ಹೊಡೆದ ನೀರುಇಬ್ಬನಿ೬ರಾತ್ರಿಯ ಸೆಕೆಗೆಮೂಡಿದ ಬೆವರುಇಬ್ಬನಿ೭ಪ್ರೇಮಿಯ ಕೂದಲಿನಅಂಚಿಗೆ ಉಳಿದ ಹನಿಇಬ್ಬನಿ೮ಕಣ್ಣು ಬಿಟ್ಟ ಮಗುಅಮ್ಮನನ್ನು ಕಂಡ ಖುಷಿಯಲ್ಲಿಮೂಡಿದ ಕಣ್ಣಂಚಿನ ಪಸೆಇಬ್ಬನಿ೯ಮುಂಜಾವಿನೆದೆಯಿಂದಉ ದು ರಿಬೀಳುವ ಹನಿಇಬ್ಬನಿ೧೦ಮತ್ತೆ ಬೆಳಗಾಯಿತುಮತ್ತೆ ಹೊಸಜೀವ ಬಂದಿತುನಿಸರ್ಗದ ಆನಂದ ಬಾಷ್ಪಇಬ್ಬನಿ೧೧ರಾತ್ರಿ ಹೊತ್ತುಯಾವುದೋ ಕೀಟ ಮಾಡಿದ ಗಾಯಕ್ಕೆಎಲೆ ಮೇಲೆ ಮೂಡಿದ ಗುಳ್ಳೆಇಬ್ಬನಿ೧೨ಅನಂತದಲಿ ಬಿಂದುಬಿಂದುವಿನಲಿ ಅನಂತಒಂದು ಮಂಜಿನ ಹನಿಯೊಳಗೊಂದು ಬ್ರಹ್ಮಾಂಡ೧೩ಎಲೆಯ ಮೇಲೆಮುಂಜಾವಿನಮುತ್ತಿನ ಗುರುತುಸ್ವಲ್ಪ ಹೊತ್ತುಹಾಗೇ ಇರಲಿ ಬಿಡು೧೪ಪದಗಳಲ್ಲಿಹುಡುಕಿದರೂ ಸಿಗದ ಕವಿತೆಪುಟ್ಟ ಹುಲ್ಲಿನೆಳೆಯ ಮೇಲೆಮುಂಜಾವಿನ ಮಂಜಿನೊಳಗೆನಗುತ್ತ ಕಣ್ಬಿಡುತ್ತಿತ್ತು
*****
ʼಹೋದಲೆಲ್ಲ ಹಾದಿ ʼ ಸರಣಿ:
೧. ಬೆಂಚಿನ ಸ್ವಗತ
೧ಮುಂಜಾವಿನ ಬಾಗಿಲು ಅದೇ ತೆರೆದಿತ್ತುಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆಬಂದು ನನ್ನ ಮೇಲೆ ಕೂತರು ಇಬ್ಬರುವಯಸ್ಸು ಎಪ್ಪತ್ತೋ ಎಂಬತ್ತೋಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನುಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು೨ಕಾಲೇಜಿಗೆ ಚಕ್ಕರ್ನನ್ನ ಮೇಲೆ ಹಾಜರ್ಕಿಲಿಕಿಲಿ ನಗುಚಿಲಿಪಿಲಿ ಮಾತುಕದ್ದು ಕದ್ದು ಮುತ್ತುಹುಸಿಮುನಿಸುಅಳುನಟನೆತುಂಟನಗು‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು‘ಈ ಬೆಂಚು ಇಲ್ಲಿರುವವರೆಗೂ,’ ಎಂದಅವನ ಕೆನ್ನೆಗೊಂದು ಮುತ್ತು ಸಿಕ್ಕಿತು೩ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದುಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನುಇವನ ಡಬ್ಬ ಅವಳು ಹಂಚಿಕೊಂಡರುಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳುಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ‘ನಮ್ಮ ಬದುಕು ಈ ಬೆಂಚಿನಂತೆಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರುಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು೪ಈಗ ರಾತ್ರಿಯ ನೀರವಮೌನದಲ್ಲಿಬೀದಿದೀಪಗಳ ಮಬ್ಬುಬೆಳಕಲ್ಲಿಒಂಟಿಯಾಗಿದಿನದ ನೂರಾರು ಕತೆಗಳ ನೆನೆಯುತ್ತದಿನದ ಸಾವಿರಾರು ಕವನಗಳ ಕನವರಿಸುತ್ತನಿದ್ದೆ ಬರದೇಕೂತೇ ಇದ್ದೇನೆ
೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ
ಕಲ್ಲು ಮುಳ್ಳಿನ ಹಾದಿಯನೆನಪುಗಳು ಕಳೆದಿಲ್ಲಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳುಚುಚ್ಚಿಸಿಕೊಂಡ ಅಪಮಾನಗಳುಇಲ್ಲಿ ಎಲ್ಲ ಒಳ್ಳೆಯವರುಎಂಬ ನಂಬಿಕೆಯಲ್ಲಿಹಲ್ಲು ಕೊರೆದ ಹಾದಿಯಲ್ಲಿಜೊತೆಗೆ ಬಂದವರುನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರುಹೂವಿನ ದಾರಿಯ ಮೇಲೆನಡೆಸುವೆ ಎಂದು ಭರವಸೆ ಕೊಟ್ಟವರುಹೂವಿನ ಜೊತೆ ಮುಳ್ಳೂ ಇರುತ್ತದೆಎಂದು ಹೇಳುವುದನ್ನು ಮರೆತರುನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲಅಲ್ಲಿಯೂ ಸಲ್ಲಲಿಲ್ಲಇಲ್ಲಿಗೂ ಒಗ್ಗಿಕೊಳ್ಳಲಿಲ್ಲದೇಶಬಿಟ್ಟ ಪರದೇಸಿಕಲ್ಲಿಗಿಂತ ಕಲ್ಲಾಗಿಪರಸಿಕಲ್ಲಿನ ಹಾದಿಯ ಮೇಲೆಅಂಗಡಿ ಅಂಗಡಿಗಳಲ್ಲಿನಡೆವ ಜನರ ಮುಖಗಳಲ್ಲಿಸುಖ ಸಂತೋಷ ಹುಡುಕುತ್ತೇನೆಹಾದಿಹೋಕ ನಾನುಹಾದಿಹೋಕನಾಗಿಯೇ ಉಳಿದಿದ್ದೇನೆವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆಹುಲ್ಲುಹಾಸಿನ ಹಾದಿಯಫೋಟೋ ತೆಗೆದುಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆಹೈವೇಯ ಸೈನ್-ಬೋರ್ಡುಗಳುಈಗ ನನ್ನ ಮಿತ್ರರುನನ್ನ ಕಾರಿನ ದಾರಿ ಹೇಳಿಕೊಡುವವರುಹಗಲು ಸಂಜೆ ಅದೇ ಹಾದಿಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ*ಕಾಲ ಮಾಗುತಿದೆದಾರಿ ಸವೆಯುತಿದೆತಾಣದ ಮರೀಚಿಕೆಹಾಗೇ ಉಳಿದಿದೆಹಾಗೇ ಉಳಿದರೇ ಬದುಕೆ?
ಅನಿವಾಸಿ ಯು ಈ ಫೋಟೋ ಸಂಚಿಕೆ
ರಸದೌತಣದಂತಿದೆ.
ರಾಮಶರಣ್ ರ ಅದ್ಭುತ ಛಾಯಾಚಿತ್ರ ಗಳು ಕಣ್ಣಿಗೆ ಹಬ್ಬ ತಂದಿದೆ.
ಅದರಿಂದಾಗಿ ಹರಿದಿರುವ ಕೇಶವ ಕುಲಕರ್ಣಿಯವರ ಹನಿ ಕವಿತೆಗಳು ಜೀವನ ಪ್ರೀತಿಯನ್ನು ಹೆಚ್ಚಿಸುವಂತಿವೆ.
ಪುಟ್ಟ ಕವನಗಳಲ್ಲಿ ಬೆಟ್ಟದಷ್ಟು ಬೆರಗಿನ ಸೊಬಗಿದೆ.
ಈ ಸಂಚಿಕೆ ಒಂದು ಗುಕ್ಕಿನ ಅತೃಪ್ತಿಯನ್ನು ಉಳಿಸದೆ, ಚಿತ್ರ -ಕಾವ್ಯ ರಸಧಾರೆಯ ಸವಿಯನ್ನು ಆಸ್ವಾದಿಸುತ್ತ, ಆಳ ರುಚಿಯನ್ನು ಅನುಭವಿಸಿ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡಿದೆ.
‘ಆಹಾ…ಹೌದು,ಹೌದು’ ಎನಿಸುವ ತೃಪ್ತಿ ಮತ್ತು ಮೆಚ್ಚುಗೆಗಳನ್ನು ಮೂಡಿಸುತ್ತವೆ😊👌👌👏👏.
ಐಸೊ(ISO), ಐ ಎಸ್ ಓ(ISO), ಐಸಾ
ಫೋಟೋ ಕವನ ಸಂಚಿಕೆ ೨ ಎನ್ನುವ ಹೆಸರಿನಈ ಸಂಚಿಕೆ ಹಲವಾರು ಕಾರಣಗಳಿಂದ ಸಂಗ್ರಹಣೀಯ ’ಕಲೆಕ್ಟರ್ಸ್ ಐಟೆಮ್’ ಆಗಿದೆ.
ಮೊದಲನೆಯದಾಗಿ ಪ್ರೇಮಲತಾ ಅವರು ಬರೆದ ಸಂಪಾದಕೀಯವೇ ಫೋಟೋ ಮತ್ತು ಕವನಗಳ ವ್ಯುತ್ಪತ್ತಿ, ಸಂಬಂಧಗಳ ಬಗ್ಗೆ ಒಂದು ನಿಬಂಧವನ್ನೇ ಬರೆದಿದ್ದಾರೆ. ಛಾಯಾಚಿತ್ರದಲ್ಲಿ ತಮಗೂ ಆಸ್ಥೆಯಿದ್ದು ಸ್ವತಃ ಒಳ್ಳೆಯ ಕವಯಿತ್ರಿಯೆಂದ ಮೇಲೆ ಅವರ ಮಾತುಗಳು ಘನವಾದವು. ಡಾ ಪ್ರಸಾದರು ಅನಾರೋಗ್ಯದಿಂದ ಎದ್ದು ಚೇತರಿಸಿಕೊಂಡು ಈ ಸಂಚಿಕೆಯ ಮೇಲೆ ಸುದೀರ್ಘ ಕಮೆಂಟ್ ಮಾಡಲು ಪ್ರೇರಿಸಿದೆಯೆಂದ ಮೇಲೆ ಕೇಳಬೇಕೆ?
ಎರಡನೆಯದಾಗಿ, ಆಯ್ದ ಒಂದಕ್ಕಿಂತ ಒಂದು ಶ್ರೇಷ್ಠ ರಾಮ್ ಶರಣ್ ಅವರ ಫೋಟೋಗಳು ಮತ್ತು ಅವರೇ ನೀಡಿದ ಶೀರ್ಷಿಕೆ, ಮೊದಲ ಚಿತ್ರದಿಂದಲೇ ವಿಸ್ತರಿಸುವ ಹನಿಯ ತರಂಗಗಳನ್ನೆಬ್ಬಿಸಿವೆ. ಎಲ್ಲಿಂದ ಬಂತು ನೀರನ್ನು ಹೊತ್ತ ಆ ಕಪ್ಪು ಧಾರಕ? (ಬಚ್ಚಲು ಮನೆ, ಅಡಿಗೆ ಮನೆ, ಕೊಟ್ಟಿಲು? ಊಹಿಸಲಾರೆ). ಆದರೆ ಆ ಮ್ಯಾಕ್ರೋ ಫೋಟೋ ಚೆನ್ನಾಗಿ ಕೆಲಸ ಮಾಡಿದೆ. ಕೇಶವರ ಕಿರುಗವನಕ್ಕೆ ಒಳ್ಳೆಯ ಪೀಠಿಕೆ. ಅವರ ಮೊದಲ ಹನಿಗವನದಲ್ಲಿ ಹೇಳಿದ್ದನ್ನು ಇನ್ನೊಂದು ರೀತಿಯಲ್ಲಿ ಹೇಳುವದಾದರೆ:
ಒಂದೊಂದು
ಫೋಟೋದಲ್ಲೂ
ಹೈಕು ಮಳೆ!
ಫೊಟೋ ಮತ್ತು ಕವನ – ಎರಡರದೂ ಉಗಮ ಪ್ರೇಮಲತಾ ಅವರು ಹೇಳುವಂತೆ, -ಮತ್ತು ಹಿಂದೊಮ್ಮೆ ಮುರಳಿಯವರು ಸಹ ಕಮೆಂಟಿಸಿದಂತೆ- ಆ ’ಕವಿಸಮಯ’, ಕ್ಷಣಾರ್ಧದಲ್ಲಿ. ಅವರವರ ಪ್ರತಿಭೆ, ಅನುಭವಕ್ಕನುಗುಣವಾಗಿ ಕವನವೇ ಆಗಲಿ, ಚಿತ್ರವೇ ಆಗಲಿ ಅದನ್ನು ರೂಪಿಸಿ ಅಂತ್ಯ ರೂಪಕ್ಕೆ ತರುತ್ತವೆ. ಅದರಲ್ಲಿ ತಂತಮ್ಮ ಕಲಾರಸಸ್ವಾದವನ್ನು ಉಣಿಸುತ್ತಾರೆ. ಅವರ ತಲೆಯಲ್ಲಿ ಐಸೋ (ISO), ಅಪರ್ಚರ್, ಫೋಕಸ್ ಕುಣಿಯುತ್ತಿರುತ್ತವೆ. (ಇಂದು ಮೊದಲ ಸಲ ಆ ಸುಂದರ ಪದ ’ನಾಭಿದೂರ’ focal legth? ವನ್ನು ಕಲಿತೆ. ಅದನ್ನು ಹುಟ್ಟಿಸಿದವನಿಗೆ ಅನಂತ ಪ್ರಣಾಮಗಳು.) ಈ ಫೋಟೋ ಮತ್ತು ಕವನಗಳನ್ನು ಸಂಪಾದಕೀಯದಲ್ಲಿ ಹೇಳಿದಂತೆ ಕೂಲಂಕುಶವಾಗಿ ನೋಡಿದರೆ ಒಂದು ರೀತಿಯಿಂದ ಇವೆರಡೂ complementary. ಒಂದಿರದೆ ಇನ್ನೊಂದು ಅಪೂರ್ಣ ಅನ್ನುವಷ್ಟು! ಹನಿಗವನದ ಪಟು, ಸಾವಿರ ನೀಲುಗಳ ಬ್ರಹ್ಮ, ತಾವು ರಚಿಸಿದ ಹನಿಗವನಗಳ ನೂಲನ್ನು ತಮ್ಮ ನಾಭಿಯಿಂದ ಹೆಣೆದ ಕೇಶವ ಇಬ್ಬನಿಗೆ ಹದಿನಾಲ್ಕು definitions ಕೊಟ್ಟಿದ್ದೊಂದೇ ಈ ಸರಣಿಯ ಸಾರ್ಥ್ಯಕ್ಯಕ್ಕೆ ಸಾಕ್ಷಿ. ಅವರು ಬರೆದ ಎಂಟನೆಯ ಹನಿಯನ್ನು ಸ್ವಲ್ಪ ತಿರುಚಿ ಹೀಗೂ ಓದ ಬಹುದು:
”ಕಣ್ಣು ಬಿಟ್ಟ ಮಗುವನ್ನು
ಅಮ್ಮ ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ”
ಇವುಗಳನ್ನು ಓದುವಾಗ ಮತ್ತೆ ಮತ್ತೆ ಅವರ ನೀಲುಗಳು ನೆನಪಾದವು.
’ಹಾದ”ಗಳ ಮೇಲಿನ ಸರಣಿಗಳಲ್ಲಿ ಆ ಬೆಂಚಿನ ಚಿತ್ರ ಮತ್ತು ಕವಿತೆ ಎರಡೂ ಅಷ್ಟೇ ಶಕ್ತಿಶಾಲಿಯಾಗಿವೆ. ಹೊಳೆಯುವ ಬೆಂಚಿನ ಸುತ್ತ ನಿಂತ ದೀಪಗಳ composition ಅದ್ಭುತ. ಕಪ್ಪು-ಬಿಳುಪೇ ಇದಕ್ಕೆ ಸರಿಯಾದ ’ವರ್ಣ’. ಅದೇ ರೀತಿಯಲ್ಲಿ ಇನ್ನುಳಿದ ಹಾದಿಗಳ ಮತ್ತು ಎತ್ತರದ ಅಂಗಡಿಗಳ ನಡುವೆ ಫರಸಿಕಲ್ಲಿನ ಮೇಲೆ ನಡೆದಾಡುವ ಜನರ ಚಿತ್ರಗಳ ಸಂಯೋಜನೆಯಲ್ಲಿ (low angle composition) ನುರಿತ ಫೋಟೋಗ್ರಾಫರರ ಛಾಪು ಕಾಣಿಸುತ್ತದೆ. ಆ ಜನರು ಮ್ಯಾಂಚೆಸ್ಟರ್ ಬಳಿಯ ಚಿತ್ರಗಾರನಾಗಿದ್ದ ಎಲ್ ಎಸ್ ಲೌರಿಯ ’ಕಡ್ಡಿಪೆಟ್ಟಿಗೆ ಮನುಷ್ಯರಂತೆ’ ತೋರಿಸಿದ್ದು ಅವರ ಕೌಶಲ್ಯ. ಇನ್ನು ಕೊನೆಯದಾಗಿ ಆ ರಾತ್ರಿ ಟ್ರಾಫಿಕ್ ಚಿತ್ರಅ: Long exposure ಅಷ್ಟೇ ಅಲ್ಲ,”ಒನ್ ವೇ’ ರೀತಿಯಲ್ಲಿ ಚಲಿಸುವ ವಾಹನಗಳ ದೀಪಗಳನ್ನು ಸೆರೆಹಿಡಿದದ್ದೇ ಈ ಫೋಟೋದ ರಹಸ್ಯ. ಒಂದರ್ಧದಲ್ಲಿ ಮುಂದೆ ಹೊರಟ ಕೆಂಪು ಗೆರೆಗಳು (ಟೇಲ್ ಲೈಟ್ಸ್); ಇನ್ನೊಂದು ಕಡೆ ನಮ್ಮತ್ತ ಬರುವ ಹೆಡ್ ಲೈಟ್ಸ್! ರಸ್ತೆಯ ಮೇಲಿನ STOP sign ಮೇಲೆಯೇ ನಮ್ಮ ಕಣ್ಣುಗಳು ಸಹ ನೋಡುತ್ತ ನಿಂತು ಬಿಡುತ್ತವೆ!
ನನ್ನ ವಿಶ್ಲೇಷಣೆ ಕೇಶವ ಅವರು ಪ್ರಾರಂಭದಲ್ಲಿ ಕೊಟ್ಟ ಎಚ್ಚರಿಕೆಯಂತೆ ಚಿತ್ರಕವನದೊಳಗಿನ ಕವಿತೆಯನ್ನು ಕೊಂದಿಲ್ಲ ಅಂತ ಅಂದುಕೊಳ್ಳುತ್ತೇನೆ.
ಇನ್ನು ನನ್ನ ಶೀರ್ಷಿಕೆಯ ಔಚಿತ್ಯ:
ಇತ್ತಿತ್ತಲಾಗಿ ನಾನು ವಿಡಿಯೋನೇ ಹೆಚ್ಚಾಗಿ ಮಾಡುವದರಿಂದ ಎಸ್ ಎಲ್ ಆರ್ ಕ್ಯಾಮರಾ ಬಿಟ್ಟು ಆಪ್ಪಲ್ ಫೋನಿನ ISO ವನ್ನೇ ಹೆಚ್ಚು ವಾಪರಿಸುತ್ತಿದ್ದೇನೆ.ನಮ್ಮ ಕ್ಯಾಮರಾ-ಕ್ಯಾಮ್ ಕಾರ್ಡರ್ ಕ್ಲಬ್ಬುಗಳಲ್ಲಿ ತಾಂತ್ರಿಕ ವಿಷಯಗಳ ಚರ್ಚೆಯೇ ಹೆಚ್ಚಾಗಿ ಕೇಳಿ ಬರುತ್ತವೆ. ನಮ್ಮ ಕ್ಲಬ್ಬಿನಲ್ಲಿ ಕವಿಗಳು ಒಬ್ಬರೋ ಇಬ್ಬರೋ. ಡಾಕ್ಯುಮೆಂಟರಿ ಮಾಡುವವರೇ ಹೆಚ್ಚು. ನಿಮಗೆ ಫೋಟೋ-ಕವನಗಳನ್ನು ನೋಡಬೇಕಾದರೆ ’ಅನಿವಾಸಿಯಲ್ಲ” ಕಂಡುಬರುವಂತೆ ”ಹೀಗಿರಬೇಕು” -ಜಯಂತ ಕಾಯ್ಕಿಣಿಯವರು ಹಿಂದೆ ವರ್ಣಿಸಿದಂತೆ ದೈಹಿಕ ಶ್ರಮ ಮಾಡುವ ಕೆಲಸಕಾರರು ಕೆಲಸ ಮಾಡುತ್ತ ’ಐಸಾ, ಐಸಾ’ ಅಂತ ಹಾಡಿದಂತೆ: ’ಐಸಾ’ –”ಹೀಗೆ, ಹೀಗೆ!’
ಈ ಸಂಚಿಕೆ ರಸದೌತಣ, ನಮಗೆಲ್ಲ!
ಶ್ರೀವತ್ಸ ದೇಸಾಯಿ.

LikeLike

LikeLiked by 1 person