ಶಿವಪ್ರಸಾದ್ ಮತ್ತು ಅರವಿoದ ಕುಲ್ಕರ್ಣಿಯವರ ಹನಿಗವನಗಳು.

ಓದುಗರೆ, ಹನಿಗವನಗಳ ಹೆಜ್ಜೆಯ, ಗೆಜ್ಜೆಯ ನಾದದ ಇ೦ಪು ಕೇಳಿದಷ್ಟೂ ಚೆ೦ದ.
ಈ ವಾರ ಈ ಕ೦ಪನ್ನು ಅರವಿ೦ದ ಕುಲ್ಕರ್ಣಿ ಮತ್ತು ಪ್ರಸಾದ್ ರವರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ. ಪ್ರತಿಯೊ೦ದು ಕವನದ ಹಾದಿ ಬೇರೆ, ನಾದ ಬೇರೆ ಆದರೆ ಗುರಿ ಒ೦ದೆ, ಅದೇನೆ೦ದರೆ ನಾಲ್ಕು ಸಾಲುಗಳಲ್ಲಿ ಅರ್ಥ ತು೦ಬಿ ನಿಮ್ಮನ್ನು ರ೦ಜಿಸುವುದು-ಸ೦

ಪ್ರಸಾದ್ ಹನಿಗವಿತೆಗಳು:

 ಜಮುನ

ಜೋಡಿ ಜಡೆ ಜಮುನ

ಕೊಡು ಇತ್ತ ಕಡೆ ಗಮನ.

ನನ್ನ ಮೊಬೈಲ್ ನಂಬರ್ ಕೇಳಿದ್ದಾಳೆ

ಆಚೆ ಮನೆ ನಯನ

ಕಂಡಾಗಲೆಲ್ಲ ಕಣ್ಣರಳಿಸಿ ಹಾಯ್

ಎನ್ನುತ್ತಾಳೆ ಈಚೆ ಮನೆ ಸುಮನ

***

Image result for cartoon images of krishna and radha

ರಾಧೆ – ಕೃಷ್ಣರ ಸಲ್ಲಾಪ

ಕೃಷ್ಣ ನೀ ಬೇಗನೆ ಬಾರೋ ಎಂದಳು ರಾಧ

ಎಲ್ಲಿಗೆ ಎಂದ ಕೃಷ್ಣ

ಮತ್ತೆಲ್ಲಿಗೆ ಪಕ್ಕದ ಪಾರ್ಕಿಗೆ ಎಂದಳು ರಾಧೆ

ಕೊಳಲನ್ನು ತರಲೆ ಎಂದ ಕೃಷ್ಣ

‘ಯು ಟ್ಯೂಬ್’ ಇರುವಾಗ ಆ ಟ್ಯೂಬ್ ಏಕೆ

ಎಂದಳು ರಾಧೆ!

***

Image result for bottled water cartoon images

ಕುರುಕ್ಷೇತ್ರದಲ್ಲಿ ದಾಹ

ಶರಶಯ್ಯಯಲ್ಲಿ ಮಲಗಿದ ಭೀಷ್ಮರೆಂದರು

ಬಿಸಿಲೇರಿ ಬಾಯಾರಿದೆ.

ಬಾಣ ಹೂಡದ ಅರ್ಜುನನೆಂದ

ಗುರುಗಳೇ

ಮಳೆಯಿಲ್ಲದೆ ನೆಲವಾರಿದೆ.

ಇಗೋ ಕೊಳ್ಳಿ ಬಿಸಿಲೆರಿ ಬಾಟಲ್

ಇದು ಕೂಡ ಮಿನರಲ್ ವಾಟರ್!

***

ಕವಿ ಜಿ. ಎಸ್. ಎಸ್. ಮತ್ತು ಪೂಜಾರಿ

‘ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ’

ಎಂದರು ಕವಿ ಜಿ. ಎಸ್. ಎಸ್

ಕನ್ನಡಕ ಹಾಕಿಕೊಂಡು

ಸರಿಯಾಗಿ ಮತ್ತೆ ಹುಡುಕಿ ಸಾರ್

ಎಂದ

ಗಾಬರಿಯಿಂದ,  ಒಳಗಿದ್ದ ಪೂಜಾರಿ!

***

ನನ್ನ ಅಪ್ಪ ಅಮ್ಮ

 

‘ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ’

ಎಂದರು ನನ್ನ ಅಪ್ಪ

ಬಿಕ್ಕಿ ಬಿಕ್ಕಿ ಅತ್ತಳು ನನ್ನಮ್ಮ!!

***

ದಶಾವತಾರ

ಧರ್ಮ ಸಂರಕ್ಷಿಸಲು

ಭಗವಂತ ಎತ್ತಿದ್ದಾನೆ ದಶಾವತಾರ

ಈಗ ‘ಹಿಂದೂವಾದಿ’ ಅವತಾರ

ಧರ್ಮದ ಹೆಸರಿನಲ್ಲಿ

ಏಕೆ ದ್ವೇಷ ತಿರಸ್ಕಾರ?

ಇರಲಿ ಧರ್ಮ ಮತ್ತು ರಾಜಕೀಯಗಳ

ನಡುವೆ ಅಂತರ.

***

ದೀಪಾವಳಿ

ದೀಪಾವಳಿ ಬಂತು ದೀಪಾವಳಿ

ಪಟಾಕಿ ಸದ್ದು ಗದ್ದಲಗಳ ಹಾವಳಿ

ಹಣತೆ ಹಣತೆಗಳು ಸೇರಿ ಬೆಳಗಲಿ

ಅಜ್ಞಾನದ ಅಂಧಕಾರವು ಕಳೆಯಲಿ

ಪ್ರೀತಿ ವಿಶ್ವಾಸಗಳು ಬೆಳಗಲಿ.

 

 ಡಾ// ಶಿವಪ್ರಸಾದ್ 

***********************************************************************

ಅರವಿ೦ದ ಕುಲ್ಕರ್ಣಿಯವರ ಹನಿಗವನಗಳು:

ಅoದು-ಇoದು

Image result for gilli danda game images

ಕಡಬು ಕಡಲೆ ಸವಿದು ಬೆಳೆದೆ ಹಳ್ಯಾಗ
ಜಿಗಳಿ ಚೀಪಿ , ಲಗಳಿ ಹಾಕ್ಕೊಂಡು
ಜಿಗೀತಿದ್ದೆ  ಮಂಗ್ಯಾನ್ಹಾಂಗ
ಗಾಳಿಪಟ, ಕುಸ್ತಿ, ಗಿಲ್ಲಿದಾಂಡು, ಬೈಲಾಗ!
ಅಭ್ಯಾಸ? ನಾಳೆ ಯಾತಕ್ಕಿದೆ ?
ಅಪ್ಪ ಮಾಡಿಟ್ಟ ಗಂಟು ದಕ್ಕಿದೆ
ಜನ್ಮಭೂಮಿ ತೊರೆದೆ ಮೂವತ್ತರಾಗ
ಈ ಕರ್ಮಭೂಮ್ಯಾಗ ಕೂತೇನಿ ಎಪ್ಪತ್ತರಾಗ
ಏನು ಕರ್ಮ ಅಂತ ದಿನಾ ಅದೇ ರಾಗ!

ಕಾಲ‌!

ಹಾಯ್ ಡಾರ್ಲಿಂಗ್:  ಡೇಟಿಂಗ್ ಕಾಲ
ಹಾಯ್  ಹನಿ:  ವೆಡ್ಡಿಂಗ್ ಸಮಯ
ನೀವೇ ನನ್ನ ಪ್ರಾಣ, ನನ್ನ ದೇವರು: ಹನಿಮೂನ ಕಾಲ
” ಸಾಕಾಗ್ಯೇದ ಈ ಗೋಳು, ಈ ಸಂಸಾರ”: ವಿರಕ್ತಿ  ಕಾಲ
” ನಾ ಹೊರಟೆ, ನೀವೇ ಸಂಭಾಳಿಸಿ ಮಕ್ಕಳನ್ನ”:  ಪ್ರಿ- ಡಿವೋರ್ಸ್  ಕಾಲ!

                ಡಾ//ಅರವಿoದ ಕುಲ್ಕರ್ಣಿ