ಪ್ರತಿವರ್ಷದ೦ತೆ ಈ ವರ್ಷವೂ ಸಹ ಕನ್ನಡಬಳಗ ಯು.ಕೆ, ದೀಪಾವಳಿ ಹಬ್ಬದ ಆಚರಣೆಯನ್ನು ಹಮ್ಮಿಕೊ೦ಡಿತ್ತು. ನವೆ೦ಬರ್ ೪, ೨೦೧೭ ರ೦ದು ನಡೆದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಹೆಸರಾ೦ತ ಹಾಸ್ಯಕವಿ, ಚುಟುಕಗಳ ಚಕ್ರವರ್ತಿಯೆ೦ದು ಪ್ರಸಿದ್ದರಾದ ಹೆಚ್. ಡು೦ಡಿರಾಜ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಡು೦ಡಿರಾಜ್ ರವರು, ಕೃಷಿ ವಿಜ್ನಾನ ಪಧವೀಧರು ಮತ್ತು ವೃತ್ತಿಯಲ್ಲಿ ಬ್ಯಾ೦ಕ್ ಅಧಿಕಾರಿಗಳಾಗಿದ್ದರೂ, ಕನ್ನಡಿಗರಿಗೆ ಅವರ ಹನಿಗವನಗಳಿ೦ದ ಹೆಚ್ಚು ಪರಿಚಿತರು. ಈ ಕನ್ನಡದ ಕವಿ ಮತ್ತು ಬರಹಗಾರ ೪೫ ಕನ್ನಡ ಪುಸ್ತಕಗಳನ್ನು ಬರೆದಿದ್ದಾರೆ. ಇದು ನಾಟಕ, ಕವನ ಸ೦ಕಲನ ಮತ್ತು ಬರಹಗಳ ಸ೦ಕಲನಗಳನ್ನುಒಳಗೊ೦ಡಿವೆ.
ಯು.ಕೆ ಕನ್ನಡ ಸಾಹಿತ್ಯ ಮತ್ತು ಸಾ೦ಸ್ಕೃತಿಕ ವಿಚಾರ ವೇದಿಕೆ ( ಅನಿವಾಸಿ) ಬಳಗದ ಸದಸ್ಯರು, ಡು೦ಡಿರಾಜ್ ರವರೊಡನೆ ಹನಿಗವನ ಗೋಷ್ಠಿಯನ್ನು ಏರ್ಪಡಿಸಿದ್ದರು. ಅನಿವಾಸಿ ಬಳಗದವರು ಕೆಲ ಸಮಯದಿಂದ ಕನ್ನಡ ಸಾಹಿತ್ಯಾಸಕ್ತಿಯನ್ನುಆಸಕ್ತಿ/ಉತ್ತೇಜಿಸುವದರಲ್ಲಿ/ಬೆಳೆಸುವದರಲ್ಲಿ , ಪ್ರತಿ ವರ್ಷ ಪ್ರತಿ ಕಾರ್ಯಕ್ರಮದಲ್ಲಿ ಇ೦ತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಹೆಚ್ಚೆಚ್ಚು ಜನ ಭಾಗವಹಿಸುತ್ತಿರುವದು ಸ್ಫೂರ್ತಿದಾಯಕ.
ಯು.ಕೆ ಕನ್ನಡ ಬಳಗದ ಸದಸ್ಯರು ತಾವೆ ಬರೆದ ಹನಿಗವಿತೆಗಳೊ೦ದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು.ಡು೦ಡಿರಾಜ್ ರವರು ಮುಖ್ಯ ಅಥಿತಿಯಾಗಿ ಮತ್ತು ಕನ್ನಡ ಬಳಗದ ಕಾರ್ಯದರ್ಶಿ ಡಾ// ಶಿವಪ್ರಸಾದ್ ರವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಇದರಲ್ಲಿ ಭಾಗಿಯಾಗಿದ್ದರು. ಡಾ// ಕೇಶವ ಕುಲಕರ್ಣಿಯವರು ಕಾರ್ಯಕ್ರಮದ ನಿಯೋಜಕರಾಗಿ ಇದನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೇ ಅಲ್ಲದೆ, ಹನಿಗವನ, ಚುಟುಕಗಳ ಹುಟ್ಟನ್ನು, ಇವುಗಳ ವಿವಿಧ ರೀತಿಯ ಬೆಳವಣಿಗೆಯ ಬಗೆಗಿನ ಮಾಹಿತಿಯನ್ನು, ವಿವರವಾಗಿ ನೆರೆದವರಿಗೆಲ್ಲ ತಿಳಿಸಿಕೊಟ್ಟರು.
ಕೇಶವ ಕುಲಕರ್ಣಿ, ಶ್ರೀವತ್ಸ ದೇಸಾಯಿ, ಅರವಿ೦ದ ಕುಲಕರ್ಣಿ, ರಾಮಶರಣ್, ವಿಜಯನರಸಿ೦ಹ, ಪ್ರೇಮಲತ, ವತ್ಸಲ ರಾಮಮೂರ್ತಿ, ಶಿವಪ್ರಸಾದ್, ಬೆಳ್ಳೂರು ಗಧಾಧರ, ಲಕ್ಶಿನಾರಯಣ್ ಮು೦ತಾದವರು ತಮ್ಮ ಹನಿಗವನಗಳನ್ನು ವಾಚಿಸಿ ನೆರೆದವರ ಮನರ೦ಜಿಸಿದರು. ಪ್ರತಿಕವಿಯ ಹನಿಗವನಗಳ ವಾಚನದ ನ೦ತರ ಕವಿ ಡು೦ಡಿರಾಜ್ ರವರು, ಕವನಗಳನ್ನು ವಿಮರ್ಶಿಸಿದ್ದಲ್ಲದೆ, ಕವಿಗಳಿಗೆ ಹನಿಗವನಗಳನ್ನು ರಚಿಸುವ ಪರಿ, ಹೇಗೆ ಇದು ಹಾಸ್ಯ, ವೈರುಧ್ಯತೆ ಮತ್ತು ನವ್ಯತೆಯನ್ನು ಬಿ೦ಬಿಸಬಹುದೆನ್ನುವ ಬಗೆಗೆ ಉತ್ತಮ ಉಪದೇಶವನ್ನಿತ್ತರು. ತಮ್ಮ ಅಭಿಪ್ರಾಯವದ ಜೊತೆಗೆ, ಸ್ವ೦ತ ಅನುಭವಗಳು ಮತ್ತು ಹನಿಗವನಗಳನ್ನೂ ಹ೦ಚಿಕೊ೦ಡು ನೆರೆದವರ ಮನರ೦ಜಿಸಿದರು.
ಈ ಪರ್ಯಾಯ ಕಾರ್ಯಕ್ರಮವು ವರ್ಷದಿ೦ದ, ವರ್ಷಕ್ಕೆ ಜನಪ್ರಿಯವಾಗುತ್ತಿದೆಯೆನ್ನುವುದರಲ್ಲಿ ಸ೦ದೇಹವಿಲ್ಲ. ಹಾಕಿದ್ದ ಆಸನಗಳು ಭರ್ತಿಯಾಗಿದ್ದರೂ ಬಹಳ ಜನ ನಿ೦ತು ನೋಡಿ ಇದನ್ನು ಆನ೦ದಿಸಿದರು. ಸಭಿಕರ ನಗೆ, ಚಪ್ಪಾಳೆಯಿ೦ದ ಸಭಾ೦ಗಣ ತು೦ಬಿಹೋಗಿತ್ತು. ಕಾರ್ಯಕ್ರಮ ಮುಗಿದ ನ೦ತರ, ಉತ್ತಮ ಕಾರ್ಯಕ್ರಮವನ್ನು ಯೋಜಿಸಿದ್ದೇವೆ೦ದು ಬ೦ದವರು, ಅನಿವಾಸಿ ಸದಸ್ಯರನ್ನು ಅಭಿನ೦ದಿಸಿದ್ದೇ ಅಲ್ಲದೆ, ಮು೦ದಿನ ಕಾರ್ಯಕ್ರಮವನ್ನು ಎದುರು ನೋಡುವುದಾಗಿ ಹೇಳಿದ್ದು ಇದರ ಯಶಸ್ಸಿಗೆ ಸಾಕ್ಷಿಯೆ೦ದು ಹೇಳಬಹುದು. ಎಲ್ಲಕ್ಕಿ೦ತ ಹೆಚ್ಚಾಗಿ ಕವಿ ಡು೦ಡಿರಾಜರು ಇದು ಕರ್ನಾಟಕ ಹೊರಗೆ ಅವರು ಭಾಗವಹಿಸಿದ ಉತ್ತಮ ಕವಿಗೋಷ್ಠಿಯೆ೦ದು ಹೇಳಿದ್ದು ದೊಡ್ಡ ಶಭಾಷ್ ಗಿರಿಯೆನ್ನಬಹುದು.
ದಾಕ್ಷಾಯಿನಿ
ಬೆಳ್ಳೂರು ಗಧಾಧರ ಅವರು ಬರೆದ ಕೆಲ ಹನಿಗವನಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ. ಹನಿಗವನವನ್ನು ಬರೆಯುವ ಕಲೆ ಇದರಲ್ಲಿ ಎದ್ದು ಕಾಣುತ್ತದೆ, ಅನಿರೀಕ್ಷಿತ ತಿರುವು ಒದುಗರನ್ನು ಅಚ್ಚರಿಗೊಳಿಸಿ ನಗು ತರಿಸುತ್ತದೆ-ಸ೦
1.ಉದ್ಘಾಟನೆ
ಉದ್ಘಾಟನೆ ಮಾಡಿದ ಮುಖ್ಯ ಅತಿಥಿ
ಅರಿವಿಲ್ಲ ಅವರಿಗೆ ಕಾಲದ ಮಿತಿ
ಆವೇಶದಿಂದ ಅರಿಚಿದ್ದ ಮಾತು
ಅರ್ಥವಾಗದು, ಕಿವಿ ಮಾತ್ರ ತೂತು.
2. NRI
ಗಾಂಧಿ ನೆಹರೂ ಪಟೇಲರು
ಎಲ್ಲಾ NRI ಅಂತ ಅಂದ್ರು
ಸೋನಿಯಾ ರಾಹುಲ್ ಕೂಡಾ NRI ಅಲ್ವೇ
NON – RESIDENT ITALIA ನ್ನು.
3. ಯೋಜನೆಗಳ ಲಾಂಛನ.
ರಾಜಕಾರಣಿಗಳ ಯೋಜನೆಗಳ ಲಾಂಛನ
ತಳಿರು ತೋರಣ ಆರ್ಭಟದ ಭಾಷಣ
ಪೆಪ್ಸಿಯಲಿ ತುಂಬಿರುವ ಗಾಳಿಯಂತೆ
ಬಿರಟೆ ತೆಗೆದ ಕೆಲ ನಿಮಷಗಳ ಹಗರಣ.
(ವೈಶಾಲಿ ದಾಮ್ಲೆ ನಮ್ಮ ಕಸಾಸಾವಿವೇಯ ಹೊಸ ಪರಿಚಯ. ಈಗಾಗಲೇ ಈ ಜಾಲಕ್ಕೆ ಬರೆಯಲು ಆರಂಭಿಸಿರುವ ವೈಶಾಲಿ ಈ ಸಲ ಬ್ರಾಡ್-ಫರ್ಡಿನಲ್ಲಿ ನಡೆದ ಕನ್ನಡ ಬಳಗದ ಸಾಂಸ್ಕೃತಿಕ ಕಾರ್ಯಕ್ರಮದ ವರದಿಯನ್ನು ಬರೆದಿದ್ದಾರೆ.
ನವ್ಯಾ, ಎರಡನೇ ತಲಮಾರಿನ ಕನ್ನಡತಿ, ಅವರ ಕನ್ನಡ ಮಾತಾಡುವ ಪರಿ ಕೇಳುತ್ತಿದ್ದರೆ ನಿಮಗೆ ಅವರು ಇಂಗ್ಲಂಡಿನಲ್ಲೇ ಹುಟ್ಟಿ ಬೆಳೆದವರು ಎಂದು ಹೇಳಲು ಸಾಧ್ಯವೇ ಇಲ್ಲ. ಕನ್ನಡ ಬಳಗದ ಯುತ್ ಪ್ರೋಗ್ರಾಂ ಬಗ್ಗೆ ಬರೆದಿದ್ದಾರೆ. ಇದು ಅವರ ಮೊದಲ ಲೇಖನ, ಇನ್ನೂ ಹೆಚ್ಚು ಮೂಡಿಬರಲಿ – ಸಂ)
ಯುಗಾದಿಯೆಂದರೆ, ಶರತ್–ಶಿಶಿರಋತುವಿನಚುಮು–ಚುಮುಚಳಿಕಳೆದುವಸಂತನಆಗಮನವಾಗುವಕಾಲ. ಯುಕೆಯಲ್ಲಿರುವನಮಗೆ, ಸ್ಪ್ರಿಂಗ್ನಆರಂಭವಾಗುತ್ತಿದ್ದಂತೆಚಳಿಗಾಲದಲ್ಲಿಬೋಳಾಗಿದ್ದಗಿಡಮರಗಳೆಲ್ಲಚಿಗುರಿ, ಎಲ್ಲೆಲ್ಲೂಡ್ಯಾಫೋಡಿಲ್, ಟ್ಯುಲಿಪ್ನಂತಹಹೂವುಗಳುನಳನಳಿಸಿವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ”ವರುಷಕೊಂದುಹೊಸತುಜನ್ಮ, ಹರುಷಕೊಂದುಹೊಸತುನೆಲೆಯುಅಖಿಲಜೀವಜಾತಕೆ” ಎಂದುವರಕವಿಬೇಂದ್ರೆಯವರುಹೇಳಿದಂತೆ,ಇಡೀದೇಶದವಾತಾವರಣಕ್ಕೆ, ಸಸ್ಯಹಾಗೂಪ್ರಾಣಿಸಂಕುಲಕ್ಕೆಹೊಸಕಳೆಬರುವ ಕಾಲ ಇದು.ಈಯುಗಾದಿಯಸಂಭ್ರಮವನ್ನುನಮ್ಮ–ನಮ್ಮಮನೆಗಳಲ್ಲಿಸಣ್ಣಮಟ್ಟಿನಲ್ಲಿಆಚರಿಸುವಯುಕೆಕನ್ನಡಿಗರು, ಯುಗಾದಿಯನಂತರಒಂದೆರಡುವಾರಾಂತ್ಯಗಳೊಳಗೆನಡೆಯುವಕನ್ನಡಬಳಗದಯುಗಾದಿಉತ್ಸವದಲ್ಲಿಭಾಗಿಗಳಾಗಿ,ಹೊಸವರ್ಷವನ್ನುಸಡಗರದಿಂದಸ್ವಾಗತಿಸುತ್ತೇವೆ.
ಮಾನ್ಯ ಮೈ ಶ್ರೀ ನಟರಾಜ್ – ಮುಖ್ಯ ಅತಿಥಿಗಳ ಭಾಷಣಮಧ್ಯಾಹ್ನದಊಟಹಾಗೂವಿರಾಮದನಂತರಸಭಾಕಾರ್ಯಕ್ರಮಪ್ರಾರಂಭವಾಯಿತು. ಕಾರ್ಯಕ್ರಮದಮುಖ್ಯಅತಿಥಿಯಾಗಿಆಗಮಿಸಿದಕನ್ನಡದಖ್ಯಾತಸಾಹಿತಿಹಾಗೂವಿಜ್ಞಾನಿ, ಅಮೆರಿಕನ್ನಡಿಗಮೈಶ್ರೀನಟರಾಜ್ರವರನ್ನುವೇದಿಕೆಗೆಸ್ವಾಗತಿಸಲಾಯಿತು. ಕನ್ನಡಬಳಗಯುಕೆಯಅಧ್ಯಕ್ಷರಾದವಿವೇಕ್ತೊಂಟದಾರ್ಯರವರುಸಭೆಯನ್ನುದ್ದೇಶಿಸಿಮಾತನಾಡಿದರು. ಯುಗಾದಿಹಬ್ಬದಅರ್ಥವನ್ನೂ, ಹೊರದೇಶದಲ್ಲಿರುವಕನ್ನಡಿಗರಜೀವನದಲ್ಲಿಕನ್ನಡಬಳಗದಂತಹಸಂಸ್ಥೆಗಳುವಹಿಸುವಪಾತ್ರವನ್ನೂ ಬಹಳಅರ್ಥಪೂರ್ಣವಾಗಿವಿವರಿಸುವುದರೊಂದಿಗೆ, ಕನ್ನಡಬಳಗಯುಕೆನಡೆಸುತ್ತಿರುವಸತ್ಕಾರ್ಯಗಳನ್ನೂಸಭಿಕರಿಗೆತಿಳಿಸಿದರು.
`ಅನಿವಾಸಿ` (ಕೆ ಎಸ್ ಎಸ್ ವಿ ವಿ) ಬಳಗ, ಮೈ ಶ್ರೀ ಅವರೊಂದಿಗೆಇದೇ ಸಮಯದಲ್ಲಿ ಸಭಾಂಗಣದ ಇನ್ನೊಂದು ಭಾಗದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ವಿಚಾರ ವೇದಿಕೆ ( ಕೆ ಎಸ್ ಎಸ್ ವಿ ) ಯ ವತಿಯಿಂದ ‘ಹೊರದೇಶದ ಕನ್ನಡಿಗರು ಮತ್ತು ಕನ್ನಡಪ್ರಜ್ಞೆ’ ಎಂಬ ವಿಚಾರಸಂಕಿರಣ ಮೈ ಶ್ರೀ ನಟರಾಜ್ ರವರ ಉಪಸ್ಥಿತಿಯಲ್ಲಿ ನಡೆಯಿತು. ವೇದಿಕೆಯ ಹಿರಿಯರಾದ ಡಾ| ಶ್ರೀವತ್ಸ ದೇಸಾಯಿಯವರು ಕಾರ್ಯಕ್ರಮದ ನಿರ್ವಹಣೆ ನಡೆಸಿಕೊಟ್ಟರು. ಕೆ ಎಸ್ ಎಸ್ ವಿ ಯ ಸದಸ್ಯರಾದ ಯುಕೆ ಯ ಸಾಹಿತ್ಯಾಸಕ್ತರು ಕನ್ನಡಪ್ರಜ್ಞೆಯ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಮೈ ಶ್ರೀ ಯವರು ಹೊರದೇಶದ ಕನ್ನಡಿಗರಲ್ಲಿ ಹಾಗೂ ನಮ್ಮ ಮಕ್ಕಳಲ್ಲಿ, ಕನ್ನಡಪ್ರಜ್ಞೆಯನ್ನು ಉಳಿಸಿ-ಬೆಳೆಸುವ ಮಹತ್ವವನ್ನು ವಿಶ್ಲೇಷಿಸಿದರು. ಇದೊಂದು ಪರಿಣಾಮಕಾರಿ ಹಾಗೂ ಚಿಂತನಾರ್ಹವಾದ ಉತ್ತಮ ಕಾರ್ಯಕ್ರಮವಾಗಿತ್ತುಎಂದು ಅಲ್ಲಿದ್ದ ಬಹುತೇಕ ಜನ ಅಭಿಪ್ರಾಯ ಪಟ್ಟರು.
ಈ ಬಾರಿ ಕನ್ನಡ ಬಳಗ ಯುಕೆಯ ಯುಗಾದಿಯ ಆಚರಣೆ ಬ್ರಾಡ್ಫೊರ್ಡ್ ನಲ್ಲಿ ಏಪ್ರಿಲ್ ೮ನೇ ತಾರೀಕು ನೆಡೆಯಿತು. ಅದರಲ್ಲಿ ನೆಡೆಸಿದ್ದ ಯೂತ್ ಪ್ರೋಗ್ರಾಮ್ ನಲ್ಲಿ, ನನಗೆ ಚೈತ್ರ ಮತ್ತೆ ರಜತ್ ಸಹಾಯ ಮಾಡಿದರು. ಅವರಿಗೆ ತುಂಬಾ ಧನ್ಯವಾದಗಳು.
ನಂತರ, ಎಲ್ಲರೂಸೂರ್ಯತಯ್ಯಾರ್ಮಾಡಿದಕರ್ನಾಟಕದಆಹಾರದಬಗ್ಗೆಕ್ವಿಜ್ಆಟಆಡಿದ್ವಿ. ಕೇಳಿಲ್ಲದೆಇರೋಸ್ವೀಟ್ಗಳುಮತ್ತೆತಿಂಡಿಊಟಗಳಬಗ್ಗೆಹೇಳಿಕೊಟ್ಟಸೂರ್ಯ. ಕ್ವಿಜ್ಮುಗಿದಮೇಲೆ, ಎಲ್ಲರಿಗೂಒಬ್ಬಟ್ಟುತಿನ್ನೋಆಸೆಹುಟ್ಟಿತು!