ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?- ಕೇಶವ ಕುಲಕರ್ಣಿ ಅವರ ಕವನ

ನಮ್ಮ ಜೀವನದಲ್ಲಿ ಪ್ರತಿಕ್ಷಣವೂ ನಮಗೆ ಒಂದಲ್ಲಾ ಒಂದು ಅನುಭವಗಳಾಗುತ್ತವೆ.ಪ್ರತ್ಯಕ್ಷ, ಪರೋಕ್ಷ, ಭೌತಿಕ, ಮಾನಸಿಕ, ಲೌಕಿಕ, ಅಧ್ಯಾತ್ಮಿಕ ಹೀಗೆ ಅವುಗಳ ಸ್ವರೂಪ ಅಪಾರ ಹಾಗೂ ಅವುಗಳ ರಸಾನುಭವ ಅಗಣಿತ. ಈ ಅನುಭವಗಳನ್ನು ಯಥಾವತ್ ನಿರೂಪಿಸಿದರೆ ಅದು ವರದಿಯಾಗಿ ಬಿಡುತ್ತದೆ! ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಅದು ಶಾಸ್ತ್ರವಾಗಿಬಿಡುತ್ತದೆ. ಇಲ್ಲಾ ಅದನ್ನು ಅಂತರ್ಗತಗೊಳಿಸಿ, ಅಲಂಕಾರವನ್ನು ನೀಡಿ, ಒಂದು ರೀತಿ ನೀತಿಯ ಚೌಕಟ್ಟಿನಲ್ಲಿ ಬಣ್ಣಿಸಿದರೆ ಕಾವ್ಯವಾಗುವುದೇನೋ!! ಹಾಗಾದರೆ ಈ ಕಾವ್ಯ ಎಂದರೇನು? ಕವಿತೆಯೇ? ಸಾಹಿತ್ಯವೇ, ಪದ್ಯವೇ,ಗದ್ಯವೇ? ಮುಂದೆ ಓದಿ.

ಅನುಭವಗಳನ್ನು ಚಿತ್ರಿಸುವಲ್ಲಿ ಅವುಗಳಿಗೆ ಒಂದು ವಿಶೇಷತೆಯನ್ನು ನೀಡಿ ಪದಗಳಲ್ಲಿ ಹಿಡಿದಿಟ್ಟಾಗ, ಕಾವ್ಯ ‘’ಅನುಭವ ವಿಶೇಷ ‘’ ವಾಗಿ ರೂಪುಪಡೆಯುತ್ತದೆ ಎನ್ನುತ್ತಾರೆ ನಮ್ಮ ಜಿ.ಎಸ್.ಶಿವರುದ್ರಪ್ಪನವರು.

ಕವಿತೆ ಎಂದರೇನು?

ಈ ಪ್ರಶ್ನೆ ಜಿಜ್ಞಾಸುಗಳನ್ನು, ಪಂಡಿತರನ್ನು ಕಾಲಕ್ಕೂ ಕಾಡದೇ ಬಿಟ್ಟಿಲ್ಲ. ಪೌರಾತ್ಯ ಹಾಗೂ ಪಾಶ್ಚಾತ್ಯ ಚಿಂತಕರು ಈ ನಿಟ್ಟಿನಲ್ಲಿ ಸಾಕಷ್ಟು ವ್ಯಾಖ್ಯಾನಗಳನ್ನು ನೀಡಿದ್ದಾರೆ.

ಇಂಗ್ಲೀಷಿನ ನಿಘಂಟಿನ ಪ್ರಕಾರ,ಕಾವ್ಯ ಅಂದರೆ  poetry ( poeto =I create ); ಇದು ಗ್ರೀಕ್ ಭಾಷೆಯಿಂದ ಬಂದ ಪದ.

Literary work in which the expression of feelings and ideas is given intensity by the use of distinctive style and rhythm; poems collectively or as a genre of literature.

ಅಥವಾ

Is an art form in which human language is used for its aesthetic qualities in addition to, or instead of, its notional and semantic content. It consists largely of oral or literary works in which language is used in a manner that is felt by its user and audience to differ from ordinary prose.

Read More »

ಮುಸಲ ಧಾರೆ – ರಾಮಶರಣ್ ಅವರ ಕವನ

ಮುಸಲ ಧಾರೆ

ಮಳೆ, ಸಂಜೆ, ಉಷಾ ಕಾಲ, ಮೋಡಗಳು, ಇತ್ಯಾದಿಯಾದ  ಪ್ರಕೃತಿಯ ವಿವಿಧ ಅವತಾರಗಳು ಕವಿ ಮನಗಳನ್ನು ಪ್ರಚೋದಿಸದೆ ಬಿಟ್ಟಿಲ್ಲ. ಅದರಲ್ಲೂ ಜೀವ ಆಧಾರಕವಾದ ಮಳೆ ಬಂದಾಗ ಇಳೆಗೊಂದು ಹೊಸ ಸ್ವರೂಪವೇ ಬಂದುಬಿಡುತ್ತದೆ. ಈ ಬಾಹ್ಯ ಬದಲಾವಣೆಯ ಜೊತೆ ಜೊತೆಯಲ್ಲಿ ಅಂತರಿಕವಾಗಿ ಮಳೆ ಮುದ ಕೊಡುವುದರ ಜೊತೆಗೆ ವಿವಿಧರೀತಿಯ ಭಾವನಾತರಂಗಗಳನ್ನು ಬಡಿದೆಬ್ಬಿಸುವುದು ಅಶಕ್ಯವೇನಲ್ಲ; ಹಾಗಾದರೆ ಅದು ಎಂಥ ಭಾವನೆಗಳನ್ನು ಬಡಿಬ್ಬಿಸಬಹುದು?
”ಯದ್ಭಾವಂ ತದ್ಭವತಿ ” ಮನದ ಭಾವ ಇರುವಂತೆ ಭಾವನೆಗಳೂ ಸಹ!
ಇಂತಹ ಒಂದು ಸುಂದರ ಕವನ ಇಲ್ಲಿದೆ, . ಓದಿ ನೋಡಿ, ನಿಮ್ಮ ಭಾವನೆಗಳು ಏನು ಎಂದು ನಮಗೂ ತಿಳಿಸಿ.
Ram_20150327_114957~2
ರಾಮಶರಣ್  ಅವರು ನಮ್ಮ ಜಾಲಜಗುಲಿಯ ಕನಸನ್ನು ಸಾಕಾರಗೊಳಿಸುವ ಪಾತ್ರವಹಿಸಿದ ಸದಸ್ಯರಲ್ಲಿ  ಒಬ್ಬರು. ಭಾರತದಲ್ಲಿ ಪ್ರಾಥಮಿಕ ವೈದ್ಯಕೀಯ ತರಬೇತಿ ಪಡೆದು ಈಗ ಇಂಗ್ಲೆಂಡಿನ ಡಾರ್ಬಿಷೈರ್ ನಲ್ಲಿ, ಮೂಳೆ , ಕೀಲು, ಸ್ನಾಯು ಸಂಬಂಧಿ ಖಾಯಿಲೆಗಳ (Rheumatologist) ತಜ್ಞರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಸಾಹಿತ್ಯಿಕವಾಗಿ ಶ್ರಿಮಂತವಾದ ಕುಟುಂಬದಲ್ಲಿ ಜನಿಸಿ, ಅದೇ ರೀತಿಯ ಕುಟುಂಬದಿಂದ ಪತ್ನಿಯನ್ನೂ  ಪಡೆದು, ತಾವಿರುವಲ್ಲಿಯೇ ಕನ್ನಡದ ಕಂಪನ್ನು ಯುವಪೀಳಿಗೆಯಲ್ಲಿ ಹರಡುತ್ತಿರುವ ಕೃಷಿಕ.
ಕನ್ನಡದ ಬಗ್ಗೆ ತಮಗಿರುವ ಕಾಳಜಿಯನ್ನು ಯಾವ ಅಬ್ಬರ-ಆರ್ಭಟಗಳಿಲ್ಲದೆ, ಶಾಂತವಾಗಿ ಮಾಡಿಕೊಂಡು ಸಾಗುವುದು ಇವರ ವ್ಯಕ್ತಿತ್ವ. ಮಾತು ನಡತೆಗಳು ಸಹ ಮೃದು. ನೀವು ಕರ್ನಾಟಕದ ‘ಶಾಲ್ಮಲಿ’ ಎಂಬ ಸುಂದರ ನದಿಯ ಹರಿವನ್ನು ನೋಡಿದ್ದರೆ, ರಾಮಶರಣ  ಅವರ  ವ್ಯಕ್ತಿತ್ವದ ಪ್ರತಿಮೆ ನಿಮ್ಮ ಮನದಲ್ಲಿ ಮೂಡಬಹುದೇನೋ.

ಮುಸಲ ಧಾರೆ

 
ಹೊಳೆ ಹೊಳೆವ, ಆಕರ್ಷಕ ಕೊಳ

ಎಲ್ಲಿಂದಲೋ ಬೀಸಿ ಬಂತಂದು ಮಾಳ

ತಂತು ಕಾರ್ಮೋಡದಿ ಹುದುಗಿದ್ದ ವರ್ಷಾ ಜಾಲ.

 lake-water-surface-rain-02ಹನಿ ಹನಿಯಾಯ್ತು ಮುಸಲ ಧಾರೆ

ಹನಿಯಲ್ಲ; ಚಿತ್ತ ಕ್ಷೊಭೆ, ನಾ ತಾಳಲಾರೆ

 

ತಳದಲ್ಲಿ ಹಣಿ ನಿಂತ ಕಸ-ಮೃತ್ತಿಕೆ

ಮೇಲೆದ್ದು ಇರಿಯಿತು ಖಡ್ಗವ ಮನಕೆ

ಬೇಡೆನಗೆ ಈ ಚಿತ್ರಹಿಂಸೆ, ಮಳೆಗಿಲ್ಲ ಇದಾವುದರ ಚಿಂತೆ

 

lake-water-surface-rain-07

ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ

ಹೋಗಿನ್ನು ಬರಬೇಡವೆನಲೂ ಎನಗಿಲ್ಲ ಶಕುತಿ

ಬರಗಾಲ ಬಂದೆಲ್ಲ ಬರಡಾದರೆಂಬ ಭೀತಿ

ಡೋಲಾಯಮಾನ ಮನ, ಕಣ್ಬರದು ಮುಂದಿನ ದಿನ

ಬೆಂಕಿಯಲಿ ಬೆಂದು, ಪ್ರಹಾರಗಳ ತಿಂದು ಅಭರಣವಾದಂತೆ ಚಿನ್ನ

ಕಂಡೀತು ಕಾರ್ಮೋಡದಂಚಿನಲಿ ನೇಸರನ ಬಣ್ಣ

rainbow_over_the_lake-1534723