ಸಂಬೋಧನೆ
ಹೇಗೆ ಕ್ಷಮಿಸಲಿ ತಂಗಿ
ನನ್ನನ್ನು ಅಂಕಲ್ ಎಂದು ಕರೆದರೆ?
ನೆನ್ನೆ ನಮ್ಮೂರ ‘ಮಾರ್ಕೆಟ್ ಹಾಲ್’ನಲ್ಲಿ
ತರ ತರದ ಸ್ಟಾಲ್ ಗಳು
ಕರಿ-ಬಿಳಿ-ಕಂದು ಬಣ್ಣದ ಮಾರಾಟಗಾರರು
ಗ್ರಾಹಕರೂ ಅಷ್ಟೇ ವರ್ಣರಂಜಿತರು!
ನನ್ನನ್ನು ಕೂಗಿ ಕರೆದು ಮಾಡಿದ ವ್ಯಾಪಾರದಲ್ಲೂ
ಕಂಡಿತ್ತು ಅವರವರ ವೈಶಿಷ್ಟ್ಯಯ
‘Come on love’ ಎಂದಳು ಬಿಳಿಯಳು
‘Two for a quid, darling!’ ಎಂದಳು ಕರಿಯಳು
‘Bananas, a pound uncle!’ ಎಂದಳು ನಮ್ಮವಳು
ಚುರುಕಾದ ಏಷ್ಯನ್ ಹುಡುಗಿ
ಎದೆಯಲ್ಲಿ’ಚುರುಕ್’ ಎಂದಿತು ಅವಳ ಸಂಬೋಧನೆ
ಮನೆಗೆ ಬಂದು ಕನ್ನಡಿ ಮುಂದೆ ನೋಡಿಕೊಂಡೆ
ಹಣೆಯಿಂದ ನೆತ್ತಿಯವರೆಗೆ ಬಟಾ ಬೈಲು
ಅದರೂ ಮಿಂಚುತ್ತಿತ್ತು
ಕಿರಿದರೆ ಬಾಯಲ್ಲಿ ಅಷ್ಟೂ ಹಲ್ಲು!
ಮೊಗದಲ್ಲಿ ಒಂದೂ ಸುಕ್ಕಿಲ್ಲ
ಅಂದಮೇಲೆ, ಪ್ರೀತಿಯೇ ತೋರಿಸಬೇಕಾದರೆ ಅವಳು
ಕೊನೆಗೆ ‘ಅಣ್ಣ’ ಅಂದಿದ್ದರೂ ಸಾಕಿತ್ತು
ಆದರೆ, ಹೇಗೆ ಕ್ಷಮಿಸಲಿ ತಂಗಿ
ಅಂಕಲ್ ಎಂದು ಕರೆದರೆ?
ನಮ್ಮ ಬಳಗದ ಅಪರೂಪದ ಕವಿ ನೀವು. ನಿಮ್ಮ ಕವನ ನವ್ಯೋತ್ತರ ಕಾಲದವು. ಹಾಸ್ಯ, ಸ್ವಾನುಕಂಪದ ವಿಡಂಬಣೆ ಈ ಕವನದಲ್ಲಿ ತುಂಬ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಬತ್ತಳಿಕೆಯಿಂದ ಇನ್ನಷ್ಟು ಕವನಗಳು ಬರುತ್ತಿರಲಿ. – ಕೇಶವ
LikeLike
ಮನಸಿನಲ್ಲಿ ಯಾವ ಬದಲಾವಣೆಗಳಿಲ್ಲದೆ ಸದಾ ತಾರುಣ್ಯವನ್ನೇ ಅನುಭವಿಸುವ ನಮಗೆ ಹಲವಾರು ಭಾರಿ ಬೇರೆಯವರೆ ಸಂಭೋದನೆಯಿಂದ ನಮ್ಮ ಹೊರರೂಪಿನ ಅರಿವಾಗುವುದು ಮುಜುಗರವನ್ನೂ, ಸೋಜಿಗವನ್ನೂ ಮತ್ತು ಆಸ್ಚರ್ಯವನ್ನು ಉಂಟುಮಾಡುತ್ತದೆ.ಕವಿ ಹ್ರುದಯದ ದೇಸಾಯಿಯವರು ಇದನ್ನು ಅತಿ ಸರಳವಾಗಿ, ಸುಂದರವಾಗಿ ನಿರೂಪಿಸಿದ್ದಾರೆ.
ಕವನದಲ್ಲಿ ಸರಳತೆ ಮತ್ತು ಹಾಸ್ಯವನ್ನು ಅಳವಡಿಸಿ ’ಪರಮ ಸತ್ವ’ನ್ನು ನಾಜೂಕಾಗಿ ನಮ್ಮ ಮುಂದಿಟ್ಟಿದ್ದಾರೆ. ನಿಮ್ಮ ಜೀವನದ ಅಪಾರವಾದ ಅನುಭವಗಳು ಹೀಗೆ ಕವನಗಳಾಗಿ ಹೊಮ್ಮಲಿ.
LikeLike
ಮಧ್ಯ ವಯಸ್ಸಿನ ಸಂಕ್ಷೋಭೆಯನ್ನು ನಿಮ್ಮ ಕವನದಲ್ಲಿ, ಹಾಸ್ಯದೊಡನೆ ಬೆರೆಸಿ ಸೊಗಸಾಗಿ ವರ್ಣಿಸಿದ್ದೀರಿ. ಬ್ರಿಟನ್ನಿನ ಸ್ಥಳೀಯ ಸಂತೆಗಳಲ್ಲಿ ನಡೆಯುವ ಸಂಭಾಷಣೆಗಳನ್ನೂ ಸೇರಿಸಿ ಓದುಗರಿಗೆ ಪರಿಚಯಿಸಿದ್ದೀರಿ.
ಉಮಾ ವೆಂಕಟೇಶ್
LikeLike
Dear Shrivatsa,
So nice. Full of Witt,wisdom interwoven in this poem.
Aravind Kulkarni
LikeLike