ವಿಜ್ಞಾನ ಮತ್ತು ಕಾಲ್ಪನಿಕ-ವಿಜ್ಞಾನದ ನಡುವಣ ಅನ್ಯೋನ್ಯತೆಯ ಪ್ರತೀಕವೆನಿಸಿದ ಒಂದು ಅದ್ಭುತ ಚಲನಚಿತ್ರ-“Interstellar”! — ಉಮಾ ವೆಂಕಟೇಶ್

 ಸುಮಾರು ೧೮ ವರ್ಷಗಳ ಹಿಂದೆ,ಕ್ಯಾಲಿಫೋರ್ನಿಯಾದ ಮಹಾನಗರ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದ ಪಸಡೀನಾದಲ್ಲಿರುವ, ಜಗತ್ಪ್ರಸಿದ್ಧ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ (California Institute of Technology, CALTECH) ಸಂದರ್ಶಕ ವಿಜ್ಞಾನಿಯಾಗಿದ್ದ ನನ್ನ ಪತಿಯ ಜೊತೆಯಲ್ಲಿ ಸಹಭಾಗಿತ್ವ ಸಂಶೋಧನೆ ನಡೆಸಿದ್ದ ಅಲ್ಲಿನ ಪ್ರಸಿದ್ಧ ಸೈದ್ಧಾಂತಿಕ ಖಭೌತವಿಜ್ಞಾನಿ, ಪ್ರೋಫೆಸ್ಸರ್  ಕಿಪ್ ಥಾರ್ನ್, ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಸಿದ್ಧಿಯಾದವರು.

With Professor Kip Thorne,  (from left 5 th) Theoretical Astrophysicist, CALTECH, Pasadena, Scientific advisor & Executive producer Interstellar movie. at his house party
With Professor Kip Thorne, ( 5 th from left) Theoretical Astrophysicist, CALTECH, Pasadena, Scientific advisor & Executive producer Interstellar movie. at his house party. (CC. Prof. Bangalore Sathyaprakash)

1991ರಿಂದಲೇ, ಈ ವಿಜ್ಞಾನಿಯ ಹೆಸರು ನನಗೆ ಪರಿಚಿತವಿದ್ದು, 1996ರಲ್ಲಿ ಕಿಪ್ ಥಾರ್ನ್ ಅವರನ್ನು ಮುಖತಃ ಭೇಟಿಯಾಗುವ ಸೌಭಾಗ್ಯ ದೊರೆತಿತ್ತು. ಸಾಮಾನ್ಯ ಸಾಪೇಕ್ಷತೆ (General relativity),  ಗುರುತ್ವದ ಅಲೆಗಳು (Gravitational waves), ಹಾಗೂ ಕಪ್ಪು-ಕುಳಿಗಳ (Black holes) ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಯಲ್ಲಿ, ಸುಮಾರು ೪೦ ವರ್ಷಗಳಿಂದ ಕಾರ್ಯನಿರತರಾಗಿರುವ, ಈ ಖಭೌತವಿಜ್ಞಾನಿ, 2006 ರ ಸಮಯದಲ್ಲಿ ಹಾಲಿವುಡ್ಡಿನ ಚಲನಚಿತ್ರವೊಂದರಲ್ಲಿ, ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಭೌತಶಾಸ್ತ್ರ ವಲಯದಲ್ಲಿ ಕಲರವವನ್ನೆಬ್ಬಿಸಿತ್ತು. ಈಗ ೮ ವರ್ಷಗಳಿಂದ ಆ ಚಿತ್ರದ ತಯಾರಿಕೆಯ ಬಗ್ಗೆ ನಮ್ಮ ಕುತೂಹಲ ಬಹಳವಾಗಿದ್ದು, ಇದರ ಬಿಡುಗಡೆಗಾಗಿ ನಾವೆಲ್ಲಾ ಕಾಯುತ್ತಿದ್ದೆವು. “Interstellar” ಅಂದರೆ, ಅಂತರತಾರಾ, ಅಥವಾ ಅಂತರನಕ್ಷತ್ರೀಯ, ಎಂಬ ಅರ್ಥವನ್ನು ಕೊಡುವ ಹೆಸರಿನ ಈ ಚಲನಚಿತ್ರ, ಕಳೆದ ನವೆಂಬರ್ ೫ನೆಯ ತಾರೀಖು,ಕ್ಯಾಲಿಫೋರ್ನಿಯಾ ಮತ್ತು ನವೆಂಬರ್ ೭ರಂದು ಜಗತ್ತಿನ ಎಲ್ಲೆಡೆ ಬಿಡುಗಡೆಯಾಯಿತು.
Read More »

ಎರಡನೆ ಪೀಳಿಗೆಯ ಇಂಗ್ಲಂಡಿನ ಯುವ-ಕನ್ನಡಿಗರು ಏನು ಹೇಳುತ್ತಾರೆ? – ಆಶೀರ್ವಾದ್ ಮೆರ್ವೆ, ಅನನ್ಯಾ ಪ್ರಸಾದ್ ಮತ್ತು ರವಿಶಂಕರ್ ಸರಗೂರ್ (ತರ್ಜುಮೆ: ಉಮಾ ವೆಂಕಟೇಶ್)

 

ಇದರ ಇಂಗ್ಲಿಷ್ ಆವೃತ್ತಿಗೆ ಈ ಕೊಂಡಿ ನೋಡಿ: http://wp.me/p4jn5J-fY

ಈ ವರ್ಷದ ಕನ್ನಡ ಬಳಗ ಯು.ಕೆ ಆಯೋಜಿಸಿದ್ದ ದೀಪಾವಳಿಯ ಸಮಾರಂಭದಲ್ಲಿ, ಮೊದಲನೆಯ ದಿನದಂದು, ಮೊತ್ತ ಮೊದಲ ಬಾರಿಗೆ, ಕನ್ನಡ ಬಳಗದ ಆಶ್ರಯದಲ್ಲಿ  “ಯುವ-ಜನ ಕಾರ್ಯಕ್ರಮವನ್ನು” ಒಂದು ಪರ್ಯಾಯ ಸಭೆಯನ್ನಾಗಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು, ಡಾ ರವಿಶಂಕರ್ ಸರಗೂರ್, ಕು. ಅನನ್ಯಾ ಪ್ರಸಾದ್, ಹಾಗೂ ಡಾ ಆಶೀರ್ವಾದ್ ಮೆರ್ವೆ ಅವರು ಉತ್ತಮ ರೀತಿಯಲ್ಲಿ ನಿರ್ದೇಶಿಸಿ ನಡೆಸಿದರು.

KBUK 2014 Youth programme 2ಈ ಕಾರ್ಯಕ್ರಮದ ಮುಖ್ಯ ಉದ್ದೇಶವು, ಹದಿಹರೆಯದವರು ಮತ್ತು ಯುವಜನರನ್ನು ಅವರದೇ ಆಸಕ್ತಿ ಮತ್ತು ಅಭಿರುಚಿಯಿರುವ ವಿಷಯಗಳಲ್ಲಿ ಉದ್ಯುಕ್ತರನ್ನಾಗಿಸಿ, ಕನ್ನಡ ಬಳಗ, ಯು.ಕೆ ಸಂಘವು ಅವರಿಗೆ ಯಾವ ರೀತಿಯಲ್ಲಿ ಸಂಗತವಾಗಬಹುದು ಎನ್ನುವ ಬಗ್ಗೆ ಅವರ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವುದಾಗಿತ್ತು. ಈ ಕಾರ್ಯಕ್ರಮವು, ಯು.ಕೆಯಲ್ಲಿ ವಾಸವಾಗಿರುವ ಎರಡನೆಯ ಪೀಳಿಗೆಯ ಯುವ-ಕನ್ನಡಿಗರಿಗೆ ಸಂಬಂಧಿಸಿದ ಹಲವಾರು ಕಾರ್ಯೋಪಯೋಗಿ ವಿಷಯಗಳ ಬಗ್ಗೆ ನಡೆಸಿದ ಚರ್ಚೆಯನ್ನು ಒಳಗೊಂಡಿತ್ತು. ಈ ಕಾರ್ಯಕ್ರಮವನ್ನು, ರಸಪ್ರಶ್ನೆಗಳ ಒಂದು ಆಸಕ್ತಿಪೂರ್ಣ ಸ್ಪರ್ದೆಯ ಮೂಲಕ ಅಂತ್ಯಗೊಳಿಸಲಾಯಿತು.
Read More »