ರೂಮೀ ಯ ಕವನಗಳು

**********************************************

ಆಡಿಯೋ ಕೇಳಲು Listen in browser ಮೇಲೆ ಒತ್ತಿರಿ ⬆️⬆️




ಅರಳುವ ಗುಲಾಬಿ ದಳಗಳು

'ದೇವರು ಸೃಷ್ಟಿಸಿದ ಸುಂದರ ಸೂಕ್ಷ್ಮ ಈ ಮುಗ್ಧ ಗುಲಾಬಿಯ ಮೊಗ್ಗು
ಈ ಮೊಗ್ಗಿನ ದಳವನ್ನು ಈ ನನ್ನ ನಯವಿಲ್ಲದ ಕೈಗಳಿಂದ ಹೇಗೆ ಅರಳಿಸಲಿ

ನನ್ನಂತಹ ಅನರ್ಹನಿಗೆ ತಿಳಿಯದ ಈ ರಹಸ್ಯ
ದೇವ ಎಷ್ಟು ಮೃದುವಾಗಿ ನಾಜೂಕಾಗಿ ಅರಳಿಸಿದ
ಈ ಇನಿದಾದ ಹೂ, ನನ್ನ ಕರದಲ್ಲಿ ಬಾಡಿಹೋಗುತ್ತದೆ

ಆ ಭಗವಂತನು ಕಲ್ಪಿಸಿದ ಗುಲಾಬಿಯ ಮೊಗ್ಗನ್ನು
ನನ್ನಿಂದ ಅರಳಿಸಲಾಗಲಿಲ್ಲ
ಈ ನನ್ನ ಜೀವನವನ್ನು ವಿಕಸಿತ ಗೊಳಿಸಲು
ನನ್ನಲಿ ಯಾವ ವಿವೇಕವು ಇದೆ?

ಅವನ ಮೇಲೆ ಭರವಸೆ ಇರಿಸಿ ಅವನನ್ನೇ ಅರಿಸಿ
ದಿನದ ಪ್ರತಿ ಕ್ಷಣವೂ ನಾನು ಅವನ ಮೊರೆ ಹೋಗುವೆ
ಅವನ ದರ್ಶನದ ಹಾದಿಯಲಿ ಈ ಯಾತ್ರಿಕನು
ಅವನ ಮಾರ್ಗದರ್ಶನದಿಂದ ಪ್ರತಿ ಹೆಜ್ಜೆ ಇಡುವೆ

ಆ ದಿವ್ಯ ತೇಜಸ್ವಿಯೇ ಬಲ್ಲ! ನನ್ನ ಮುಂದಿರುವ ಹಾದಿ
ಸಾಗುತ್ತಿರುವೆ ನಾನು ಅವನನ್ನೇ ನಂಬಿ
ಆ ಮುಗ್ಧ ಗುಲಾಬಿಯ ಪ್ರತಿಯೊಂದು ಪಕಳೆಯನ್ನು ಅರಳಿಸುವಂತೆ
ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಪದರುಪದರಾಗಿ ಮುಂದಿಡುತ್ತಾನೆ
ಎನ್ನುವ ಭರವಸೆ ನನ್ನಲಿದೆ

- ರಾಧಿಕಾ ಜೋಷಿ
UNFOLDING  THE ROSE 🌷
It is only a tiny rosebud,
A flower of God's design;
But I cannot unfold the petals
With these clumsy hands of mine.

The secret of unfolding flowers
Is not known to such as I.
GOD opens this flower so sweetly,
When in my hands they fade and die. 🥀

If I cannot unfold a rosebud,
This flower of God's design,
Then how can I think I have wisdom
To unfold this life of mine?

So I'll trust in Him for His leading
Each moment of every day.
I will look to Him for His guidance
Each step of the pilgrim way.

The pathway that lies before me,
Only my Heavenly Father knows.
I'll trust Him to unfold the moments,
Just as He unfolds the rose.

******************************************

ವಿವಾಹ

ಸಪ್ತಪದಿಗೆ ಎಲ್ಲರ ಹಾರೈಕೆ ಇರಲಿ
ಬೆಲ್ಲ ಕಲೆತ ಹಾಲಾಗಲಿ
ಮಧುವಾಗಲಿ, ಮೈಸೂರುಪಾಕಿನಂತಿರಲಿ
ಫಲವನ್ನೂ, ನೆರಳನ್ನೂ ನೀಡಲಿ
ಮಾವಿನ ಮರದಂತೆ
ನಗುವಿನಲಿ ತೇಲಾಡಲಿ
ಪ್ರತಿ ಕ್ಷಣ ಸ್ವರ್ಗಕ್ಕೆ ಕಿಚ್ಚಾಗಲಿ
ಸಹಾನುಭೂತಿಯ ಸಂಕೇತವಾಗಲಿ
ಎಂದಿಗೂ, ಎಂದೆಂದಿಗೂ ಆನಂದ ತುಳುಕಲಿ
ನ್ಯಾಯವಿರಲಿ, ಹೆಸರಾಗಲಿ
ಚಂದಿರನ ಬರಮಾಡುವ ಶುಭ್ರ ನೀಲಾಕಾಶವಾಗಲಿ
ಭಗವಂತನ ಸತ್ವ ಇಳಿವಂದವ
ಬಣ್ಣಿಸಲು ಮಾತೇ ಮರೆವಂತಾಗಲಿ

- ರಾಂ.
This Marriage

May these vows and this marriage be blessed.
May it be sweet milk,
this marriage, like wine and halvah.
May this marriage offer fruit and shade
like the date palm.
May this marriage be full of laughter,
our every day a day in paradise.
May this marriage be a sign of compassion,
a seal of happiness here and hereafter.
May this marriage have a fair face and a good name,
an omen as welcomes the moon in a clear blue sky.
I am out of words to describe
how spirit mingles in this marriage.

********************************************

2 thoughts on “ರೂಮೀ ಯ ಕವನಗಳು

  1. ರಾಮ್ ಮತ್ತು ರಾಧಿಕಾ ನಿಮ್ಮ ಸುಂದರ ಸಾಲುಗಳಿಗೆ, ಹನೀಫ್ ಹಿನ್ನೆಲೆ , ಅಮಿತಾ ಅವರ ಮನತಟ್ಟುವ ಧ್ವನಿ – ಎಲ್ಲಾ ಅದೆಷ್ಟು ಚೆಂದ ಮತ್ತೆ ಗುಡೂರ್ ಅವರ ಕಲ್ಪನೆಯಲ್ಲಿ ಅದ್ಭುತವಾಗಿ ಭಾವ -ಅನಾವರಣ – ಹೀಗೆ ಸೂಫಿ ಕಂಪು , ರೂಮಿ ಕಾವ್ಯ ಎಲ್ಲರ ಆಸೀನ ನಿಮ್ಮ ಆಹ್ವಾನದ ಕರೆಗೆ; ಆಗಮನ ಆಗಿದೆ ಎಂದು ಖಂಡಿತಾ ಅಲ್ಪ ತಿಳಿದಿರುವ ನನ್ನ ಅನುಭವಕ್ಕಂತೂ- ಓದಿದಂತೆ , ಆಲಿಸುದಂತೆ, ಪದೇ ಪದೇ ಬಯುತ್ತಿವೆ , ನಿಮ್ಮ ಪ್ರಯತ್ನ ಹೀಗೆ ಪ್ರಭಲ – ಖಂಡಿತಾ ಸಫಲ ಎಂದಲ್ಲಿ , ಇದು ಒಬ್ಬಂಟಿಗನ ( mine alone)ಉದ್ಗಾರ ಅಲ್ಲ ಅಂದುಕೊಂಡಿರುವೆ ..

    Thanks so much for you both/ all for transcending me/ perhaps all of us, this weekend to Rumi’s ತಂಗುದಾಣ!

    “In unfolding of the rose”
    -there is Rumi’s imagination about the delicate life ( jeeva)unfolding by the Life force( superhuman central to his thinking)directing, taking care of this miraculous blossoming .. but further on the the mortal body living in the present at each step, as each petal of the rosebud capturing the essence of Rumi’s view points but how the Divine then creates a path of pilgrimage what he perhaps refers to as this Life/ living( jeevana).. journey and the life force thereby integrating/ integrated in it, making it a wholesome thing or a wish.. a prayer for it in his not so obvious undercurrents..
    In “This marriage”- while inviting a straight forward looking, good wishes for a marriage in mortal sense, Rumi paints a picture of very aesthetic, loving, even romantic picture initially but transcends slowly this to the wider meaning of what is coming together is about, creativity that can establish bigger things where in the living experience is elevated as the walking the talk and words themselves are seen as redundant, a state we can only guess as simply a Bliss.. can be felt.. powerful pictures again by Rumi, the essence of him leaving us all enveloped.

    Like

  2. ಈ ವಾರದ ಸೂಫಿ ಸಂತ ಕವಿಯ ಎರಡೂ ಕವನಗಳಲ್ಲಿಯ ಭಾವವನ್ನು ಕನ್ನಡಕ್ಕಿಳಿಸಿದ ಇಬ್ಬರನ್ನೂ ಅಭಿನಂದಿಸಬೇಕು. ಅವುಗಳಿಗೆ ಈ ಸಂಚಿಕೆಯ ನಮ್ಮ ಚೊಚ್ಚಿಲ ಪಾಡ್ ಕ್ಯಾಸ್ಟ್ ಧ್ವನಿಪ್ರಾಸಾರಕ್ಕೆ ನಾಂದಿಹಾಡಿದ ಅಮಿತಾ ಅವರ ಧ್ವನಿಮುದ್ರಿಕೆ ಅದಕ್ಕೆ ಕಳಶಪ್ರಾಯವಾಗಿದೆ. ರೂಮಿಯ ಪದಗಳಲ್ಲಿಯ ಜಾದೂವನ್ನು ಭಾವಾನುವಾದ ಮಾಡುವದು ಸುಲಭವಲ್ಲ. ಓದಿ ಕೇಳಿ ಆನಂದಿಸಿದೆ. ಎರಡನೆಯ ಕವಿತೆಯ ಉತ್ತರಾರ್ಧವನ್ನು ಭಾವಕ್ಕೆ ಕುಂದು ಬರದಂತೆ ಅರ್ಧದಷ್ಟು ಪದಗಳಲ್ಲಿ ಅಡಗಿಸಿದ ರಾಂ ಅವರ ಚಮತ್ಕಾರವನ್ನು ( ರೂಮಿಯವರ ಕೊನೆಯ ಸಾಲನ್ನು ಕದ್ದು) I am out of words to describe… how meaning mingles in these translations!

    ಶ್ರೀವತ್ಸ ದೇಸಾಯಿ

    Like

Leave a Reply

Your email address will not be published. Required fields are marked *