ಎರಡು ಕವನಗಳು

ಮುಹಮ್ಮದ್ ಹನೀಫ್ ಮೂಲತಹ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿನವರು. ದಕ್ಷಿಣ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆ ಸುಜೀರು ಇಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಮುಗಿಸಿ, ನೆರೆಯ ಊರಾದ ತುಂಬೆಯಲ್ಲಿ ಮೊಯಿದ್ದೀನ್ ಎಜುಕೇಷನಲ್ ಟ್ರಸ್ಟ್ ಇಲ್ಲಿನ ತುಂಬೆ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಪದವಿ ಪೂರ್ವ ತರಗತಿಗಳನ್ನು ಪೂರ್ತಿ ಗೊಳಿಸಿದ್ದು, ಉನ್ನತ ವ್ಯಾಸಂಗ ವಿವೇಕಾನಂದ ಕಾಲೇಜು ಆಫ್  ಇಂಜಿನಿಯರಿಂಗ್ ಅಂಡ್  ಟೆಕ್ನಾಲಜಿ, ಪುತ್ತೂರು, ಮಂಗಳೂರಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡು, ನಂತರ ಬೆಂಗಳೂರಿನ ಪ್ರತಿಷ್ಠಿತ ವೈಮಾನಿಕ ಹಾಗೂ ರೈಲ್ವೇ ಕಂಪೆನಿಗಳಲ್ಲಿ ಸಾಫ್ಟ್ವೇರ್, ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ, ಇದೀಗ ಇಂಗ್ಲೆಡಿನಲ್ಲಿ ವಿಮಾನದ ಸಿಸ್ಟಮ್ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕವಿತೆ ಬರೆಯುವುದು ಅವರ ಹವ್ಯಾಸ. ಈ ವಾರದ ಅನಿವಾಸಿಯಲ್ಲಿ ಅವರ ಎರಡು ಕವನಗಳಿವೆ. ದಯವಿಟ್ಟು ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.

——- ಇಂತಿ ಸಂಪಾದಕ

One thought on “ಎರಡು ಕವನಗಳು

  1. ಹನೀಫ್ ಅವರ ಎರಡೂ ಕವನಗಳು ಮತ್ತೆ ಮತ್ತೆ ಓದಲು ಹಚ್ಚಿಸುತ್ತವೆ. ಓದಿದಂತೆ ಅರ್ಥಗಳನ್ನು ಬಿಚ್ಚುತ್ತಾ ಹೋಗುತ್ತವೆ. ಎರಡರಲ್ಲೂ ‘ಆತ’ ಬರುತ್ತಾನೆ; ಸೃಷ್ಟಿಕರ್ತನೇ ಅನ್ನಿರಿ, ದಯಾಳು ಅನ್ನಿರಿ ದೇವರು ಅನ್ನಿರಿ, ಜಗದೊಡೆಯ ಅನ್ನಿರಿ. ನಾವು ಕಣ್ಣುಮುಚ್ಚಾಲೆ ಆಡುತ್ತಿರುತ್ತೇವೆ, ‘ಆ ದಿನ ‘ಬರುವವರೆಗೆ. ‘ಅಲ್ಲಿಯವರೆಗೆ ‘ನ್ಯಾಯ ಎಷ್ಟು ಕಿರಚಿದರೂ ಅನ್ಯಾಯದ ಮೌನವೇ ಕೇಳಿಸುತ್ತದೆ’! ಮೊದಲನೆಯದಲ್ಲಿ ಇಡೀ ಜಗದ ಅಂತ್ಯವಿದೆ. ಅಂದು ಸತ್ಯದ ಅನಾವರಣವಂತೆ.. ಅದನ್ನೇ ಬೇರೆ ಬೇರೆ ಧರ್ಮಗಳು Armageddon, day of reckoning ಅಥವಾ Apocalypse ಅಂತ ಕರೆದಿವೆ. ಕೊನೆಗೆ ‘ಸತ್ಯಮೇವ ಜಯತೆ’ ಅನ್ನುವ ಆಶಾಭಾವ.
    ಎರಡನೆಯ ಕವಿತೆಯಲ್ಲಿಯೂ ಅಂತ್ಯವಿದೆ . ಅದು ಮಾನವನ ಅಂತ್ಯ ಮತ್ತು ಅಲ್ಲಿಯ ವರೆಗೆ ನಾವು ದಯೆಯನ್ನು ಗುರುತಿಸದ ಕುರುಡರು. ಆಮಿಷ, ಆಕಾಂಕ್ಷೆಯ ಬೆನ್ನು ಹತ್ತಿ ಹೊರಟು ನಾಲ್ಕು ದಿನಗಳ ಜೀವನದಲ್ಲಿ ಮೌಲ್ಯಗಳಿಗೆ ಬೆನ್ನು ತೋರಿಸಿ ಆಯುಷ್ಯ ಕಳೆಯುತ್ತಿದ್ದೇವೆ ಅಂತ ಎಚ್ಚರಿಕೆ ಕೊಡುತ್ತಿದ್ದಾರೆ. ಅವರು ಸರಳ ಭಾಷೆಯಲ್ಲಿ ಗಹನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಶಕ್ತಿಯಿದೆ. ಅನಿವಾಸಿಗೆ ಬರೆಯುತ್ತಿರಲಿ ಎಂದು ಆಶಿಸುವೆ. — ಶ್ರೀವತ್ಸ

    Like

Leave a Reply to shrivatsadesai Cancel reply

Your email address will not be published. Required fields are marked *