ನೆನಪುಗಳು ತೇಲಿ ಬರ್ತಾವ ಹುಡುಕಿ


3 thoughts on “ನೆನಪುಗಳು ತೇಲಿ ಬರ್ತಾವ ಹುಡುಕಿ

  1. ಗೋಣಿ ಚೀಲದ ಬಗ್ಗೆ ಇಷ್ಟು ಸುಂದರವಾಗಿ ಬರೆಯಬಹುದು ಎಂದು ತೋರಿಸಿಕೊಟ್ಟು ಮೇಟಿ ತಮ್ಮ ಬರಹದ ಸಾಮರ್ಥ್ಯವನ್ನು ಚೀಲದಿಂದ ಹೊರ ತೆಗೆದು ತೋರಿಸಿದ್ದಾರೆ ಅಥವಾ ಗೋಣಿ ಚೀಲದ ಪರದೆಯನ್ನು ಸರಿಸಿ ಪ್ರದರ್ಶಿಸಿದ್ದಾರೆ.

    ನಮ್ಮಲ್ಲೂ ಗೋಣಿ ಚೀಲ ಜನ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಬಾಗಿಲಬಳಿ ಕಾಲು ಒರೆಸುವ ಬಟ್ಟೆಯಿಂದ ಮಳೆಗಾಲದಲ್ಲಿ ಶಿರವೇರಿ ರಕ್ಷಾಕವಚದ ತನಕ ಅದರ ಹರವು. ಅವನ್ನೆಲ್ಲ ನೆನಪಿಸಿತು.

    ಗೋಣಿ ಚೀಲ ತನ್ನಲ್ಲಡಗಿದ ಸಂಪತ್ತನ್ನು ಜೀವನದುದ್ದಕ್ಕೂ ಬಳಸುವ ಬುತ್ತಿಯಾದ ಕಥೆ ನಿಮ್ಮ ಹುಡುಕಾಟದ ಛಲ , ಓದಬೇಕೆಂಬ ತೆವಲಿಗೆ ಕನ್ನಡಿ ಹಿಡಿದಿದೆ.

    ರಾಂ

    Like

  2. ನಿಮ್ಮ ಬಾಲ್ಯದ ನೆನೆಪಿನ ಗೋಣಿಚೀಲದ ಪ್ರಬಂಧ ತುಂಬ ಆಪ್ತಬರಹ.
    ಗೋಣಿಚೀಲದ ಹಲವಾರು ಉಪಯೋಗಗಳನ್ನು ನೆನೆಪಿಸಿಕೊಳ್ಳುತ್ತ, ಪಾಟಿಚೀಲದಲ್ಲಿ ಇಟ್ಟುಕೊಳ್ಳುವ ಗೋಣಿಚೀಲದ ತುಣುಕಿನ ಪ್ರಸಂಗಗಳು ಮುದನೀಡುತ್ತವೆ. ನನಗೆ ಅದರ ಮೇಲೆ ಎಷ್ಟೊಂದು ಪ್ರೀತಿ ಇತ್ತೆಂದರೆ, ಕೆಲವು ಸಲ ಪಾಟಿಚೀಲದಲ್ಲಿ ಪುಸ್ತಕ ಹಾಕಿಕೊಳ್ಳುವದನ್ನು ಮರೆತರೂ ಗೋಣಿ ಚೀಲವನ್ನು ಮಡಗಿಕೊಳ್ಳುವದನ್ನು ಮಾತ್ರ ಮರೆಯುತ್ತಿರಲಿಲ್ಲ, ಎನ್ನುವ ವಾಕ್ಯ ವ್ಹಾ ವ್ಹಾ! ನಮ್ಮ ಮನೆಯಲ್ಲಿ ಐದಾರು ಗೋಣಿ ಚೀಲಗಳು, ಮನೆಯವರ ಹೊಟ್ಟೆಯ ಹಸಿವಿಗೆ ಆಹಾರವಾಗಲು ಕಾಯುತ್ತಿರುವ ಕಾಳು ಕಡಿಗಳನ್ನು ತುಂಬಿಕೊಂಡು, ತುಂಬು ಬಸುರಿಯ ಹೊಟ್ಟೆಯಂತೆ ಉಬ್ಬಿಕೊಂಡು, ಮನೆಯ ಮೂಲೆಯಲ್ಲಿ ಯಾವಾಗಲೂ ಮಲಗಿರುತ್ತಿದ್ದವು. ದಿನಗಳು ಉರುಳಿದಂತೆ ಅವುಗಳೆಲ್ಲ ಖಾಲಿಯಾಗಿ, ಪ್ರಸವ ಆದಮೇಲೆ ಚಪ್ಪಟೆಯಾಗುವ ಹೆಂಗಳೆಯರ ಹೊಟ್ಟೆಯಂತೆ ಕಂಡು, ಮರು ಗರ್ಭಕ್ಕೆ ಕಾಯುವ ಗರ್ಭಕೋಶದಂತೆ ಮತ್ತೆ ಕಾಳು ಕಡಿಗಳಿಂದ ಉಬ್ಬಿಕೊಳ್ಳಲು ಕಾಯುತ್ತಲಿದ್ದವು. ಎನ್ನುವ ಸಾಲುಗಳಲ್ಲಿ ಬರುವ ಉಪಮೆ ಉತೃಕ್ಷ್ಟ! ಇನ್ನು ಮುಟ್ಟಬಾರದ ಗೋಣಿಚೀಲಗಳಲ್ಲಿ ನಿಮಗೆ ಸಿಕ್ಕದ್ದು ಬೆಲೆಕಟ್ಟಲಾಗದ ಗಣಿ. ಆ ಗೋಣಿಚೀಲದಲ್ಲಿದ್ದ ಅನರ್ಘ್ಯ ರತ್ನಗಳು ನಿಮಗೆ ದೊರಕಿದ್ದು ನಮ್ಮ ಪುಣ್ಯ, ಇಂಥ ಚಂದದ ಪ್ರಬಂಧ ಅನಿವಾಸಿಗೆ ಸಿಕ್ಕಿತು. – ಕೇಶವ

    Like

  3. ಇದೊಂದು ಆಪ್ತ ಬರಹ ಮೇಟಿಯವರ ನೆನಪಿನ ಸುರುಳಿಯಿಂದ! ಕಾಲೇಜ ರಿಯೂನಿಯನ್ ‘ಹೂಡಿ’ಕೆಯಿಂದ ಬೀಜಾಂಕುರವಾದ ಸಸಿಯನ್ನು ಸುಂದರವಾಗಿ ಪೋಷಿಸಿಬರೆದ ಲೇಖನ. ಬೆಳೆಯ ಸಿರಿ ಮೊಳಕೆಯಲ್ಲಿ ಅನ್ನುವಂತೆ ಅವರ ಎರಡು ‘ಕರಿಯರು’ಗಳ (ವೃತ್ತಿ-ಪ್ರವೃತ್ತಿ) ಉಗಮ ಹಳ್ಳಿಯ ತುಂಬು ಗೋಣಿ. ಆ ಹೂಡಿದ ಗರ್ಭವನ್ನು ಬಗೆದು (ಸೀಜೇರಿಯನ್ ಮಾಡಿ) ಹೊರ ತೆಗೆದ ಸಾರಸ್ವತ ಮರಿಗಳೇ ಮುಂದೆ ಕತೆಗಾರರಾದದ್ದರ ಸೂಚನೆ ಕೊಟ್ಟಂತಿದೆ. ಎರಡನೆಯದಾಗಿ ಆ ‘ಬಗೆ’ಯೇ ಮುಂದೆ ಅವರು ಪ್ರಸೂತಿಶಾಸ್ತ್ರದ ವೃತ್ತಿಗೂ ನಾಂದಿ ಹಾಡಿತೇನೋ! ಕಾಲೇಜು ಮಿಲನದ ಐಡಿಯಾ (conception) ಒಂದು ಕಡೆ ಉದಯವಾಗಿ ಚಲಿಸಿ ಈ ವಾರದ ಅಂಕಣವಾಗಿ ಬೆಳೆದು ನಮಗೆ ಸೊಗಸಿನ ಓದಾಗಿದೆ! ಯಶಸ್ವಿ ‘ಡೆಲಿವರಿಗೆ’ ಅಭಿನಂದನೆಗಳು, ಮೇಟಿಯವರೇ!

    ಶ್ರೀವತ್ಸ

    Like

Leave a Reply to lramasharan Cancel reply

Your email address will not be published. Required fields are marked *