‘ಪೂರ್ವ-ಪಶ್ಚಿಮ’ ಡಾ. ದಾಕ್ಷಾಯಿಣಿ ಗೌಡ ಅವರ ಕವನ

ಪೀಠಿಕೆ:

ಪ್ರೀತಿಗೆ ಗಡಿ,ದೇಶ,ಭಾಷೆ,ಬಣ್ಣ, ಜಾತಿ, ಧರ್ಮಗಳ ಹಂಗು ಇರುವುದಿಲ್ಲ, ಪ್ರೀತಿ ಹೇಗೆ ಹುಟ್ಟುತ್ತದೆ ಎಂದು ಹೇಳುವುದು, ತಾರ್ಕಿಕ ಉತ್ತರ ಕೊಡುವುದು ಸಾಧ್ಯವಿಲ್ಲ, ಅದು ಒಂದು ಸುಂದರ ನಗುವಿವಿನಿಂದ, ಮೌನದ ಭಾಷೆಯಿಂದ, ಕಣ್ಣುಗಳ ಮಿಲನದಿಂದ, ಭಾವನೆಗಳ ವಿನಿಮಯದಿಂದ, ಪರಸ್ಪರ ಗೌರವದಿಂದ, ಕರುಣೆಯಿಂದ, ಆಕರ್ಷಣೆಯಿಂದ, ಹೇಗಾದರೂ ಹುಟ್ಟಬಹುದು.
ಡಾ.ದಾಕ್ಷಾಯಿಣಿ ಗೌಡ ಅವರು ಈ ಕವನದಲ್ಲಿ ಪೂರ್ವ- ಪಶ್ಚಿಮದ ಸಮಾಗಮದಂತೆ ಈ ಪ್ರೀತಿ, ಎಂದಿಗೂ ನವ್ಯ, ಭವ್ಯ ಎಂದು ವರ್ಣಿಸಿದ್ದಾರೆ.
ಕೆ.ಎಸ್.ಎಸ್.ವಿ.ವಿ. (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಹೊರತಂದ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಈ ’ಡೂಯೆಟ್’ ಸೊಗಸಾಗಿ ಮೂಡಿಬಂದಿದೆ, ನೀವೂ ಕೇಳಿ, ಓದಿ ಆನಂದಿಸಿ.

 

east-west.jpg

ಹೆಣ್ಣು – ನನ್ನ, ನಿನ್ನ ಈ ಹೊಸ ಬಾಂಧವ್ಯ

            ನಲ್ಲ, ಈ ಸಮಾಗಮ ಇದು ನವ್ಯ.

 

           ನನ್ನ ಗೋದಿಬಣ್ಣ, ಚಿನ್ನಕ್ಕಿ೦ತ ಚೆನ್ನ,

           ಕಪ್ಪುಕೇಶ ಮೋಡಿ ಮಾಡಿತ೦ತೆ ನಿನ್ನ.

           ಭಾಷೆ, ಮತ, ವರ್ಣ ನಿಲುಕದು ನಮ್ಮನ್ನ

           ಕವಿ ಕರೆದನೆ ಇದ, ಪೂರ್ವ ಪಶ್ಚಿಮಗಳ ಮಿಲನ // ೧//

 

ಗ೦ಡು – ನನ್ನ ನಿನ್ನ ಈ ಹೊಸ ಭಾ೦ಧವ್ಯ

            ನಲ್ಲೆ, ಈ ಸಮಾಗಮ ಇದು ನವ್ಯ.

 

           ಕೇಳಿರದ ಊರಿ೦ದ, ಅರಿಯದ ನಾಡಿ೦ದ ಬ೦ದ ಗೆಳತಿ,

           ಮಿ೦ಚು ನಗೆಯ, ಸ೦ಚು ಮೌನದ ಜ್ಞಾನದೊಡತಿ

           ನಿನ್ನ ದನಿಗೆ, ಹರ್ಷವುಕ್ಕಿ ಕುಣಿವುದೇಕೊ ನನ್ನ ಮನ

           ಕವಿ ಕರೆದನೆ ಇದ ಪೊರ್ವ ಪಶ್ಚಿಮಗಳ ಮಿಲನ

 

ಗ೦ಡು ಮತ್ತು ಹೆಣ್ಣು – ನನ್ನ ನಿನ್ನ ಹೊಸ ಬಾಂಧವ್ಯ

                                     ಈ ಸವಿ ಸಮಾಗಮ ಇದು ಭವ್ಯ.

 

———–ಡಾ. ದಾಕ್ಷಾಯಿಣಿ ಗೌಡ

 

 

            

 

3 thoughts on “‘ಪೂರ್ವ-ಪಶ್ಚಿಮ’ ಡಾ. ದಾಕ್ಷಾಯಿಣಿ ಗೌಡ ಅವರ ಕವನ

  1. Love is Blind ಅಂತ ಇರುವಾಗ ಪ್ರೀತಿಗೆ ಯಾವ ಹಂಗೂ ಬೇಕಿಲ್ಲ , ಅದಕ್ಕೆ ಕಾರಣದ ಅನ್ವೇಷಣೆಯ ಅಗತ್ಯವೂ ಇಲ್ಲ. ದಾಕ್ಷಾಯಣಿಯವರ ಈ ಪ್ರೇಮಕವನದಲ್ಲಿನ ಬಾಂಧವ್ಯದ ಸವಿ ಓದಲಿಕ್ಕಷ್ಟೇ ಅಲ್ಲ ಧ್ವನಿ ಮುದ್ರಿಕೆಯಲ್ಲಿನ ಡ್ಯೂಯೆಟ್ ನಲ್ಲಿ ಸಹ ಸೊಗಸಾಗಿ ಮೂಡಿಬಂದಿದೆ.

    Like

  2. ಪೂರ್ವ-ಪಶ್ಚಿಮಗಳ ಸಮಾಗವನ್ನು ಕೊಂಡಾಡುವ ಪ್ರೇಮ ಕವನ. ಸರಿಸಾಟಿಯಾದ ಇಬ್ಬರು ಅಡೆತಡೆಗಳ ನಂತರವೂ ಕೂಡುವದು ಅಪರೂಪವಲ್ಲ.ರಡ್ಯಾರ್ಡ್ ಕಿಪ್ಲಿಂಗನ ಬ್ಯಾಲೆಡನ ಮೊದಲ ಸಾಲನ್ನು (East is East …etc) ತಪ್ಪಾಗಿ ಅರ್ಥೈಸಿದವರೇ ಹೆಚ್ಚೆಂದು ಹೇಳಲಾಗುತ್ತದೆ! ಡೂಯಟ್ ಕೇಳಲು ಚೆನ್ನಾಗಿದೆ, ದಾಕ್ಷಾಯಣಿ ಅವರೆ!

    Like

Leave a Reply to drdaksha Cancel reply

Your email address will not be published. Required fields are marked *