ಕವಿ ಆಗಬೇಕೆ ?-ಸಿ. ಹೆಚ್. ಸುಶೀಲೇಂದ್ರ ರಾವ್

( ಕವಿ ಎನ್ನಿಸಿಕೊಳ್ಳಲು ಎಲ್ಲರಿಗೂ ಆಸೆಯೇ. ಯಾವಾಗಲ್ಲದಿದ್ದರೂ ವಯಸ್ಸಿನಲ್ಲಿ ಇದ್ದಾಗಲಂತೂ ಎಲ್ಲರೂ ಕವಿಗಳೆ ಅಂತೆ!!  ಕವಿ ಎನ್ನಿಸಿಕೊಳ್ಳಲು ಕ್ರಮಿಸಬೇಕಿರುವ ಹಾದಿಯ ಕಷ್ಟ ಸುಖಗಳು ಹಲವು. ಅವುಗಳ  ಬಗ್ಗೆಯೇ ಒಂದು ಕವಿತೆ ಬರೆದರೆ ಹೇಗೆ?  ಲಘು ಹಾಸ್ಯ, ವಿಡಂಬನೆ, ವರ್ಣನೆ ಮತ್ತು ವಾಸ್ತವಗಳನ್ನು ತಿಳಿಯಾದ ರಸದಲ್ಲಿ ಹಿಡಿದಿಟ್ಟುರುವ ಈ ಕವಿತೆ, ಕವಿಯ ಕಾರ್ಯಾಗಾರದ ಎಲ್ಲ ಮುಖಗಳನ್ನು ತೆರೆದಿಟ್ಟಿದೆ-ಸಂ)

images

  ಕವಿ ಆಗಬೇಕೆ ?

 

ಕವಿ ಆಗಬೇಕೆ ?
ಕಲಿ ಕೂಡಿಸಲು ಪ್ರಾಸ
ಅದೇನು ಬಲು ತ್ರಾಸ
ಆಗುವುದು ಒಮ್ಮೊಮ್ಮೆ ಜಿಜ್ಞಾಸ
ಮಾಡಬೇಕಿಲ್ಲ ಅದಕೆ ಉಪವಾಸ
ಓದಬೇಕು ಸಾಕಷ್ಟು ಇತಿಹಾಸ
ಸವಿ ಅವೆಲ್ಲದರ ಧೃಡ ರಸ

ಮಾಡಬೇಕು ಬರೆಯುವ ಅಭ್ಯಾಸ
ಎಡವಿದರೆ ಆಗುವುದು ಅಭಾಸ
ಅಂತೆ ಆಗುವುದು ಸರಸ ವಿರಸ
ಹಾಗೆಂದು ನಿಲ್ಲುಸುವೆಯ ಹವ್ಯಾಸ?

ಕಾಣಬೇಕು ಆಗಾಗ್ಯೆ ಕವಿ ಕವಿತೆಯ ಕನಸ
ಬೀರು ಕವಿತೆಯಲ್ಲಿ ನಿನ್ನ ಮನದ ವಿಕಾಸ
ತೋರು ನಿನ್ನಯ ಸಂತಸ ಕವಿತೆಯ ಸಾಹಸ
ಆಗ ಸವಿ ನಿನ್ನಯ ಕವಿತೆಯ ಕನಸ

ಕವಿತೆಗಳು ಕವಿಗಳು ಸಹಸ್ರ ಕೋಟಿ
ಆ ಸಮುದ್ರದಲ್ಲಿ ನಿನ್ನದೊಂದು ಚಿಟುಕು ಉಪ್ಪು
ಆದರೇನಂತೆ ನೀ ಬರೆದೆ ಒಂದೇರಡು ಕವನ
ಹಾಡಿ  ನಲಿವರು ನಗುವರು ಅದಕೆಂತು  ಸಾಟಿ

ಅಂತ್ಯದಲ್ಲಿ ನಾಮಾಂಕಿತ ಆಧುನಿಕ ಶ್ರೀನಿವಾಸ
ಮತ್ತೆ ಕೆಲವರು ಕೂಡಿಸುವರು ಪ್ರಾಸ
ಅಂತೆ ಸಾಗುವುದು ಕವಿಗಳ ಪ್ರವಾಸ
ನೆನೆವರು ಆಗ ಕಾಳಿದಾಸ ಕುಮಾರವ್ಯಾಸ

ಸುಶೀಲೇಂದ್ರ ರಾವ್

                                                                                              ಚಿತ್ರ- ಗೂಗಲ್ ಕೃಪೆ    

One thought on “ ಕವಿ ಆಗಬೇಕೆ ?-ಸಿ. ಹೆಚ್. ಸುಶೀಲೇಂದ್ರ ರಾವ್

  1. ತ್ರಾಸವಿಲ್ಲದೇ ಪ್ರಾಸವೊಲಿದರೆ
    ಆಗುವುದು ಕವಿತೆ!
    ರಾಸವಿಲ್ಲದೇ ನ್ಯಾಸ ಮುರಿದಿರೆ
    ನಾಕು ಸಾಲು ಒರತೆ!!

    ಚೆನ್ನಾಗಿದೆ ನಿಮ್ಮ ಪ್ರಾಸದ ಕವನ. ನಿಮ್ಮ ಕವನದಿಂದ ನನ್ನ ಮೇಲಿನ ನಾಕುಸಾಲು!

    – ಕೇಶವ

    Like

Leave a Reply

Your email address will not be published. Required fields are marked *