ತೊಳಲಾಟ

ದಾಕ್ಷಾಯಿಣಿ ಇಂಗ್ಲಂಡಿನ ಉತ್ತರ ಭಾಗದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅನಿವಾಸಿಯ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರು. ಈ ಕವನವನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆದ ದೀಪಾವಳಿ ಕವಿಗೋಷ್ಠಿಯಲ್ಲಿ ಡಾ. ವೆಂಕಟೇಶಮೂರ್ತಿಯವರ ಸಮ್ಮುಖದಲ್ಲಿ ಅವರು ಸಾದರ ಪಡಿಸಿದ್ದರು. ಅನಿವಾಸಿಗಳ ಮನದಲ್ಲಿ  ಸ್ವದೇಶ-ಸದ್ಯ ನೆಲೆಸಿರುವ ದೇಶಗಳ ಮಧ್ಯದ ಭಿನ್ನತೆ, ಅನುಪಮತೆಗಳ ಮಜ್ಜಿಗೆ ಕಡೆದು, ಬೆಣ್ಣೆಯಂತೆ ಹಿತವಾದ ತಾತ್ಪರ್ಯವನ್ನು ಉಣಬಡಿಸಿದ್ದಾರೆ.

 

ಇಂಡಿಯಾ ಅಥವಾ ಇಂಗ್ಲೆಂಡ್ 

ನಿರಂತರ ಹೋರಾಟ ಮನದಲ್ಲಿ,

ಹೃದಯಕ್ಕೆ ಬೇಕು ಇಂಗ್ಲೆಂಡಿನ  ತಂಪು,

ಮನಸ್ಸಿಗೆ ಬೇಕು ತಾಯ್ನಾಡಿನ ಸೊಂಪು,

ಅಲ್ಲಿನ ಗಲಾಟ ಗದ್ದಲ ಕಿವಿಗೆ ಕರ್ಕಷ.

ಇಲ್ಲಿನ ನಿಃಶಬ್ದವೂ  ಬೇಸರ, ನೀರಸ

 ಪ್ರಶಾಂತ ಜೀವನ, ಪರಿಣಿತಿಗೆ ಆಹ್ವಾನವಿಲ್ಲಿ,

ಕಲಕಲದ ಕಿತಾಪತಿಯೂ ಬೇಕು ಜೀವನದಲ್ಲಿ.

Image result for BURGER

ಬರ್ಗರ್, ಬನ್, ಬ್ರೆಡ್, ತಿಂದು ಬೋರು,

ಮಸಾಲೆದೋಸೆ ಜಾಸ್ತಿಯಾದರೂ ದೇಹಕ್ಕೆ ತಕರಾರುImage result for DOSA

 ಎಲ್ಲವೂ ಬೇಕು ಅದರದೆ ಪರಿಮಿತಿಯಲ್ಲಿ,

 ಈ ಸಮಸ್ಯೆಗೆ ಪರಿಹಾರವೆಲ್ಲಿ?

                                                        ತ್ರಿಶಂಕು ಸಹ ತರಲಾರ ಉತ್ತರ ನಮ್ಮ ಇಬ್ಬದ

                                                        ನಾವೇ ತರಬೇಕು ಶಾಂತಿ, ಸಂತೋಷ ನಮ್ಮ ಮನಸ್ಸಿಗೆ.

 

                                                                                                                                                                                                                                                                                                                                                                                                                                             -ದಾಕ್ಷಾಯಿಣಿ ಗೌಡ

3 thoughts on “ತೊಳಲಾಟ

  1. ಅಭಿಮನ್ಯುಗಳು,ತ್ರಿಶಂಕುಗಳು ನಾವೆಲ್ಲಾ. ನಾವೆಲ್ಲಾ ಬರೆಯುತ್ತಿರುವ ಕವನಗಳ ಹಿಂದಿನ ತೊಳಲಾಟ ನಿಮ್ಮ ಕವನದಲ್ಲಿ ಇನ್ನೂ ನೇರವಾಗಿ ಅಭಿವ್ಯಕ್ತಿಗೊಂಡಿದೆ.

    Like

  2. The best of both worlds ನಮಗೆ. ಮೊದಲನೆಯ ತಲೆಮಾರಿನ ಅನಿವಾಸಿಗಳು ಪ್ರತಿದಿನವಲ್ಲದಿದ್ದರೂ ಹುಣ್ಣಿವೆ ಗೊಮ್ಮೆ ಕನಿಷ್ಟಪಕ್ಷ ವರ್ಷಕ್ಕೊಮ್ಮೆಯಾದರೂ ಹೀಗೆ ತೊಳಲಾಡುವುದರಲ್ಲಿ ಆಶ್ಚ್ಗರ್ಯವಿಲ್ಲ. ಈ ಸಮಸ್ಯೆಗೆ ಪರಿಹಾರವೆಲ್ಲಿ? ಎಂದು ಕೇಳಿ ತಾವೇ ಉತ್ತರ ಕೊಟ್ಟಿದ್ದಾರೆ ಸಹೋದರಿ ದಾಕ್ಷಾಯಿಣಿ. ಅಂದವಾಗಿ ಬರೆದು ನಮ್ಮ ಜೀವನಕ್ಕೆ ಕನ್ನಡಿ ಹಿಡಿದಿದ್ದಾರೆ. ಅಂತೂ ನಾನೊಬ್ಬನೇ ಅಲ್ಲ, ಉಳಿದವರೂ ಇ ದೋಣಿಯಲ್ಲಿದ್ದಾರೆಮ್ದು ಸಮಾಧಾನ!

    Like

  3. ಸಮರ್ಥ ಶೀರ್ಷಿಕೆ ಹೊತ್ತ ಈ ಕವನ ಪರದೇಶ-ಸ್ವದೇಶಗಳ ನಡುವಿನ ವಿಚಾರ ತಾಕಲಾಟಗಳನ್ನು, ಮನಸ್ಸಿನ ತೊಳಲಾಟವನ್ನು ಸರಳವಾಗಿ, ಹಾಸ್ಯಮಯವಾಗಿ ತೆರೆದಿಡುತ್ತದೆ. ಸಾಮಾನ್ಯ ಅಗತ್ಯಗಳು, ಸರಳ ವಿಚರಗಳನ್ನು ಮುಂದಿಡುತ್ತ ಆ ಮೂಲಕ ನಮ್ಮ ತಾಕಲಾಟಗಳಿಗೆ ನಾವೇ ಸಮಧಾನ ಕಂಡುಕೊಳ್ಳಬೇಕೆಂಬ ಸಂದೇಶ ಹೊತ್ತ ಈ ಕವನ ಸುಂದರವಾಗಿದೆ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.