ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)

ನಾಲ್ಕು ಸಮಯದ ವಲಯಗಳು, ಹತ್ತಾರು ದೇಶಗಳು ಮತ್ತು ಸಂಸ್ಕೃತಿಗಳ ಜನರನ್ನು ತನ್ನಲ್ಲಿ ಕೂಡಿಸಿಕೊಂಡಿರುವ, ವಿಶಾಲವಾದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಭೌಗೋಳಿಕ ವೈವಿಧ್ಯತೆಗೇನೂ ಕೊರತೆಯಿಲ್ಲ. ಪರ್ವತಗಳು, ಮರುಭೂಮಿಗಳು, ಪ್ರಸ್ಥಭೂಮಿ, ಮಹಾ ಸರೋವರಗಳು, ಅದ್ಭುತವಾದ ಕಮ್ಮರಿಗಳಂತಹ ವಿವಿಧ ರೀತಿಯ ಭೌಗೋಳಿಕ ಪ್ರದೇಶಗಳಿರುವ ಇಲ್ಲಿ, ನೋಡುಗರಿಗೆ ಸಂದರ್ಶಿಸಲು ಅನೇಕ ಸ್ಥಳಗಳಿವೆ. ಕ್ಯಾಲಿಫ಼ೋರ್ನಿಯಾದ ದಕ್ಷಿಣದಲ್ಲಿರುವ, ಲಾಸ್ ಏಂಜಲೀಸ್ ಮಹಾನಗರಕ್ಕೆ ಪೂರ್ವದಲ್ಲಿ ಮೊಹಾವೆ ಎಂಬ ಮರುಭೂಮಿಯಿದೆ. ಇದರ ಬಗ್ಗೆ ಅನೇಕರಿಂದ ಕೇಳಿದ್ದೆ. ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು, ನೀವು ಜೋಶುವಾ ಮರಗಳ ರಾಷ್ಟ್ರೀಯ ಉದ್ಯಾನ ನೋಡಿದ್ದೀರಾ? ಇಲ್ಲವಾದರೆ ಖಂಡಿತಾ ನೋಡಿ ಬನ್ನಿ ಎಂದರು. ಸಧ್ಯದಲ್ಲಿ ಕಳೆದ ಆರು ತಿಂಗಳಿಂದ ಲಾಸ್ ಏಂಜಲೀಸಿನಲ್ಲಿ ವಾಸ್ತವ್ಯ ಹೂಡಿರುವ ನಮಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನು ಸಿಗದು ಎಂದು, ನಾವು ಈ ಉದ್ಯಾನಕ್ಕೆ ಭೇಟಿ ನೀಡುವ ನಿರ್ಧಾರ ಮಾಡಿದೆವು. ಕಳೆದ ವಾರ ಇದನ್ನು ಕಾರ್ಯರೂಪಕ್ಕಿಳಿಸಿ, ಈ ಅಪರೂಪದ ಸ್ಥಳಕ್ಕೆ ಹೋಗಿದ್ದೆವು. ಜೋಶುವಾ ಮರ ಸಸ್ಯಶಾಸ್ತ್ರದಲ್ಲಿ “ಯಕ್ಕಾ ಮರ”(Yucca brevifolia) ಅಥವಾ ಭೂತಾಳೆ ಎಂಬ ಪ್ರಭೇಧಕ್ಕೆ ಸೇರಿದ ಸಸ್ಯವಾಗಿದೆ. ಸಾಮಾನ್ಯವಾಗಿ ನೀರಿಲ್ಲದ ಒಣ ಹವೆಯ ಪ್ರದೇಶಗಳಲ್ಲಿ ಬೆಳೆಯುವ ಈ ಗಿಡಗಳು, ತಮ್ಮ ಮಂದವಾದ ಎಲೆಗಳು, ಮುಳ್ಳುಗಳ ಮೂಲಕ ನೀರನ್ನು ಸಂಗ್ರಹಿಸಿ, ಒಣ ಹವೆಯಲ್ಲೂ ತಮ್ಮ ಶಾರೀರಕ ಕ್ರಿಯೆಗಳನ್ನು ಚೊಕ್ಕವಾಗಿ ನಡೆಸಿಕೊಂಡು ಹೋಗುತ್ತವೆ.Read More »