ಇದರ ಇಂಗ್ಲಿಷ್ ಆವೃತ್ತಿಗೆ ಈ ಕೊಂಡಿ ನೋಡಿ: http://wp.me/p4jn5J-fY
ಈ ವರ್ಷದ ಕನ್ನಡ ಬಳಗ ಯು.ಕೆ ಆಯೋಜಿಸಿದ್ದ ದೀಪಾವಳಿಯ ಸಮಾರಂಭದಲ್ಲಿ, ಮೊದಲನೆಯ ದಿನದಂದು, ಮೊತ್ತ ಮೊದಲ ಬಾರಿಗೆ, ಕನ್ನಡ ಬಳಗದ ಆಶ್ರಯದಲ್ಲಿ “ಯುವ-ಜನ ಕಾರ್ಯಕ್ರಮವನ್ನು” ಒಂದು ಪರ್ಯಾಯ ಸಭೆಯನ್ನಾಗಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು, ಡಾ ರವಿಶಂಕರ್ ಸರಗೂರ್, ಕು. ಅನನ್ಯಾ ಪ್ರಸಾದ್, ಹಾಗೂ ಡಾ ಆಶೀರ್ವಾದ್ ಮೆರ್ವೆ ಅವರು ಉತ್ತಮ ರೀತಿಯಲ್ಲಿ ನಿರ್ದೇಶಿಸಿ ನಡೆಸಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು, ಹದಿಹರೆಯದವರು ಮತ್ತು ಯುವಜನರನ್ನು ಅವರದೇ ಆಸಕ್ತಿ ಮತ್ತು ಅಭಿರುಚಿಯಿರುವ ವಿಷಯಗಳಲ್ಲಿ ಉದ್ಯುಕ್ತರನ್ನಾಗಿಸಿ, ಕನ್ನಡ ಬಳಗ, ಯು.ಕೆ ಸಂಘವು ಅವರಿಗೆ ಯಾವ ರೀತಿಯಲ್ಲಿ ಸಂಗತವಾಗಬಹುದು ಎನ್ನುವ ಬಗ್ಗೆ ಅವರ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವುದಾಗಿತ್ತು. ಈ ಕಾರ್ಯಕ್ರಮವು, ಯು.ಕೆಯಲ್ಲಿ ವಾಸವಾಗಿರುವ ಎರಡನೆಯ ಪೀಳಿಗೆಯ ಯುವ-ಕನ್ನಡಿಗರಿಗೆ ಸಂಬಂಧಿಸಿದ ಹಲವಾರು ಕಾರ್ಯೋಪಯೋಗಿ ವಿಷಯಗಳ ಬಗ್ಗೆ ನಡೆಸಿದ ಚರ್ಚೆಯನ್ನು ಒಳಗೊಂಡಿತ್ತು. ಈ ಕಾರ್ಯಕ್ರಮವನ್ನು, ರಸಪ್ರಶ್ನೆಗಳ ಒಂದು ಆಸಕ್ತಿಪೂರ್ಣ ಸ್ಪರ್ದೆಯ ಮೂಲಕ ಅಂತ್ಯಗೊಳಿಸಲಾಯಿತು.
Read More »