ಬ್ರಿಟ್-ಕನ್ನಡಿಗರ ಕವನಗಳು: ತುಂಗೆ-ಟೆಮ್ಸ್ ನದಿಗಳ ನಡು ಸೇತುವೆ!
ಹೊಸ ಪ್ರಯತ್ನವಿದು. ‘ಅನಿವಾಸಿ’ಯ ಈ ಜಾಲಜಗುಲಿಯಲ್ಲಿ ಹೊಸ ಪ್ರಯತ್ನ – ಕವನ ವಾಚನವನ್ನು ನೇರ ನಿಮಗೆ ತಲುಪಿಸುವುದು.
ಕಳೆದ ವಾರ ಕೆಲ ಕವನಗಳನ್ನು ಪ್ರಕಟಿಸಿದ್ದೆವು. ಆಗ ಹೇಳಿದ್ದು – “ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ಧಾರೆಯಿಳಿಸಿದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು.”
ಮೇಲೆ ಹೇಳಿದ ಮಾತಿಗೆ ಮತ್ತಷ್ಟು ಕಳೆ ತುಂಬುವ ಪ್ರಯತ್ನವಿದು. ಇಲ್ಲಿ ಕೇಶವ ಕುಲಕರ್ಣಿ ಬಹಳ ಪ್ರೀತಿಯಿಂದ ಮಾಡಿದ ಭಾವಾನುವಾದ ಅಷ್ಟೇ ಅಲ್ಲ, ಅವರದೇ ದನಿಯಲ್ಲಿ ‘ಕ್ಷಣಗಳು‘ ಕವನವನ್ನು ನಾವು ಕೇಳಬಹುದು. ನವೆಂಬರ್ ೫ರಂದು ಅಷ್ಟೇ ಪ್ರೀತಿ, ಅಭಿಮಾನದಿಂದ ಅನ್ನಪೂರ್ಣ ಆನಂದ್ ಹಾಡಿದರು. ಯಾವ ಹಾಡು? ಯಾರದ್ದು? ಟಿ. ಪಿ. ಕೈಲಾಸಂ ಅವರದ್ದು! ‘ನಮ್ಮ ತಿಪ್ಪಾರಳ್ಳಿ ಬಲು ದೂರ’ ಹಾಡೂ (ಕವನ) ಇಲ್ಲಿದೆ. ಅದರ ಜೊತೆಗೆ ಕನ್ನಡದ ಇಬ್ಬರು ಮಹನೀಯರ ದನಿ ಕೇಳುವ ಬೋನಸ್!!
ಕೇಳಿ; ಕವನಗಳನ್ನು ಓದಿ. ಹಂಚಿಕೊಳ್ಳಲು ಮರೆಯದಿರಿ. – ಸಂ.
ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.
Instants: Jorge Luis Borges If I could live again my life, In the next – I’ll try, – to make more mistakes, I won’t try to be so perfect, I’ll be more relaxed, I’ll be more full – than I am now,
In fact, I’ll take fewer things seriously, I’ll be less hygenic, I’ll take more trips, I’ll watch more sunsets, I’ll climb more mountains, I’ll go to more places – I’ve never been, I’ll eat more ice creams and less (lime) beans, I’ll have more real problems – and less imaginary Ones
I was one of those people who live prudent and prolific lives – each minute of his life, Offcourse that I had moments of joy – but, if I could go back I’ll try to have only good moments,
If you don’t know – thats what life is made of, Don’t lose the now! I was one of those who never goes anywhere without a thermometer, without a hot-water bottle, and without an umberella and without a parachute, If I could live again – I will travel light, If I could live again – I’ll try to work bare feet at the beginning of spring till the end of autumn, I’ll ride more carts, I’ll watch more sunrises and play with more children If I have the life to live but now I am 85, and I know that I am dying … |
ಕ್ಷಣಗಳು: ಕೇಶವ ಕುಲಕರ್ಣಿ ನಾ ಮತ್ತೆ ಬದುಕಬಲ್ಲೆನಾದರೆ ನನ್ನ ಯತ್ನವೆಲ್ಲ ಆಗ ಇನ್ನೂ ಹೆಚ್ಚು ತಪ್ಪು ಮಾಡುವುದು ಈಗಿನಷ್ಟು ಒಳ್ಳೆಯವನಾಗದಿರುವುದು ಇನ್ನೂ ಹೆಚ್ಚು ಆರಾಮವಾಗಿರುವುದು ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು
ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು ಹೆಚ್ಚು ಕೊಳಕಾಗಿರುವುದು ಹೆಚ್ಚು ಓಡಾಡುವುದು ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು ತುಂಬ ಐಸ್‍ಕ್ರೀಮು ತಿನ್ನುವುದು, ಕಡಿಮೆ ಬೀನ್ಸು ತಿನ್ನುವುದು ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ ಮಾಡಿಕೊಳ್ಳುವುದು
ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ ಬದುಕಿನ ಪ್ರತಿ ನಿಮಿಷದಲ್ಲೂ! ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು
ನಿನಗೆ ಗೊತ್ತಿಲ್ಲದಿದ್ದರೆ ಕೇಳು – ಬದುಕು ಎಂದರೆ ಅದೇ- ’ಈಗ’ನ್ನು ಕಳೆದುಕೊಳ್ಳಬೇಡ
ನಾನೀಗ ಎಲ್ಲಿಗೆ ಹೋದರೂ ಜ್ವರ ಮಾಪಕ ಬೇಕು ಬಿಸಿನೀರು ಇರಬೇಕು ಕೊಡೆ ಬೇಕು, ಗಾಳಿಕೊಡೆ ಕೂಡ
ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ ವಸಂತನಿಂದ ಹೇಮಂತ ಬರುವವರೆಗೂ. ಬಂಡಿ ಓಡಿಸುತ್ತೇನೆ ತುಂಬ ಸಲ ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು
ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ… ಆದರೆ ನನಗೀಗ ವರ್ಷ ಎಂಬತ್ತೈದು ಇನ್ನೆಷ್ಟು ದಿನ ನಾನು ಬದುಕಬಲ್ಲೆ? |
ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.
It’s a long way to Tipperary… Jack Judge
Up to mighty London Came an Irishman one day. As the streets are paved with gold Sure, everyone was gay, Singing songs of Piccadilly, Strand and Leicester Square, Till Paddy got excited, Then he shouted to them there: It’s a long way to Tipperary, It’s a long way to go. It’s a long way to Tipperary To the sweetest girl I know! Goodbye, Piccadilly, Farewell, Leicester Square! It’s a long long way to Tipperary, But my heart’s right there. (repeat) Paddy wrote a letter To his Irish Molly-O, Saying, “Should you not receive it, Write and let me know!” “If I make mistakes in spelling, Molly, dear,” said he, “Remember, it’s the pen that’s bad, Don’t lay the blame on me! It’s a long way to Tipperary, It’s a long way to go. It’s a long way to Tipperary To the sweetest girl I know! Goodbye, Piccadilly, Farewell, Leicester Square! It’s a long long way to Tipperary, But my heart’s right there. |
ತಿಪ್ಪಾರಳ್ಳಿ ಬಲು ದೂರಾ – ಟಿ. ಪಿ. ಕೈಲಾಸಂ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ
ತಮಾಶಿ ನೋಡೋದಕ್ಕೆ ಬೋರಾ ಬಂದ ಲಾಲ್ಬಾಗ್ ತೋಟಕ್ಕೆ
ಬಸ್ವೀನ್ ಕರ್ಕೊಂಡ್ ಬಂದಾ ಬೋರಾ ವಿಜಯದಶಮೀಗೆ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ |