ವೆಸ್ಟನಬರ್ಟ್ ವೃಕ್ಷಾಗಾರದಲ್ಲಿ ಶರತ್ ಋತುವಿನ ವರ್ಣದೋಕುಳಿ ! – ಉಮಾ ವೆಂಕಟೇಶ್ ಲೇಖನ

ಸೊರಗುತ್ತಿರುವWestonbirt Arboretum Autumn colours October 30 2012 021 ಸೂರ್ಯನ ಕಿರಣ, ನಲುಗುತ್ತಿರುವ ತಾಪಮಾನ, ಮೊಟಕಾಗುವ ಹಗಲುಗಳು, ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ನೆಲಕ್ಕೊರಗುವ ಗಿಡಮರದ ಎಲೆಗಳು, ಕ್ಷೀಣವಾಗುವ ಹಕ್ಕಿಗಳಿಂಚರ ಹೀಗೆ ಪ್ರಕೃತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗುವ ಈ ಬದಲಾವಣೆಗಳು, ಉತ್ತರ ವಲಯದಲ್ಲಿನ ಶೀತ ದೇಶಗಳಲ್ಲಿ ವಾಸಿಸುವ ಜನತೆಯ ಪ್ರತಿ ವರ್ಷದ ಅನುಭವ. ಪ್ರಕೃತಿಯ ಈ ಪರಿವರ್ತನೆ ಕೇವಲ ಶರದೃತುವಿನ ಆಗಮನದ ಸೂಚನೆಯನ್ನಷ್ಟೇ ಅಲ್ಲ, ಮುಂಬರುವ ದೀರ್ಘವಾದ ಚಳಿಗಾಲದ ಖಿನ್ನತೆಯನ್ನು ನಮ್ಮಲ್ಲಿ ಉಂಟುಮಾಡುವ ಸಮಯವೆಂದು ನಮ್ಮೆಲ್ಲರ ಭಾವನೆ. ಆದರೆ ಈ ಶರದೃತುವಿನ ಆಗಮನ, ಪ್ರಕೃತಿಯ ಮತ್ತೊಂದು ಸುಂದರ ರೂಪವನ್ನು ತನ್ನೊಂದಿಗೆ ಹೊತ್ತು ತರುತ್ತದೆ. ಉತ್ತರ ವಲಯದಲ್ಲಿ ಬಹುತೇಕ ಮರಗಳು ಮುಂಬರುವ ಚಳಿಗಾಲದ ಪ್ರತಿಕೂಲ ಹವಾಮಾನವನ್ನೆದುರಿಸಲು, ತಮ್ಮ ಎಲೆಗಳಲ್ಲಿನ ಪಚ್ಚೆ ವರ್ಣವನ್ನು ತೊರೆದು ಕಾಮನಬಿಲ್ಲಿನ ಇತರ ವರ್ಣಗಳಿಗೆ ಮೊರೆಹೋಗುವ ದೃಶ್ಯ ನಿಜಕ್ಕೂ ಮನಮೋಹಕ! ಕಡಿಮೆಯಾಗುವ ಹಗಲಿನ ಅವಧಿ ಮತ್ತು ಸೂರ್ಯನ ತಾಪಮಾನ ಇವೆರಡರ ಪ್ರತಿಕೂಲವನ್ನೆದುರಿಸಲು, ಉತ್ತರ ವಲಯದ ಮರಗಿಡಗಳಲ್ಲಿನ ಎಲೆಗಳು ತಮ್ಮ ಹಸಿರು ಬಣ್ಣದ ವರ್ಣದ್ರವ್ಯವನ್ನು (pigment) ದ್ಯುತಿಸಂಷ್ಲೇಷಣೆಯ ಕಾರ್ಯದಲ್ಲಿ (Photosynthesis) ಸಮರ್ಥವಾಗಿ ಉಪಯೋಗಿಸಲಾಗದ ಕಾರಣದಿಂದ,ತಮ್ಮಲ್ಲಿನ ಇತರ ವರ್ಣದ್ರವ್ಯಗಳಿಗೆ ಬದಲಾಯಿಸುತ್ತವೆ. ಆ ಹಳದಿ, ಕೇಸರಿ, ಚಿನ್ನದ ಬಣ್ಣ, ಕೆಂಪು, ಕಂದು ಬಣ್ಣಗಳ ಅನೇಕ ಛಾಯೆಗಳನ್ನು ಹೊತ್ತು ವಿರಾಜಿಸುವ ಈ ಶರದೃತುವಿನ ಸೌಂದರ್ಯವನ್ನು ಕಣ್ಣಾರೆ ಕಂಡು ಸವಿಯಬೇಕು.

ಪ್ರಕೃತಿಯ ಈ ಮನಮೋಹಕ ರೂಪವನ್ನು ಸ್ವಯಂ Westonbirt Arboretum Autumn colours October 30 2012 050ನೋಡುವ ಅವಕಾಶವೊಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ನನಗೆ ದೊರೆಯಿತು. ಇಂಗ್ಲೇಂಡ್ ದೇಶದಲ್ಲಿ, ಗ್ಲೌಸ್ಟರಶೈರಿನ ಪ್ರತಿಷ್ಟಿತ ಕಾಟ್ಸವೋಲ್ಡ್ ಪ್ರದೇಶದಲ್ಲಿರುವ ವೆಸ್ಟನಬರ್ಟ್ ವೃಕ್ಷೋದ್ಯಾನ, ಬ್ರಿಟಿಷ್ ದ್ವೀಪಗಳಲ್ಲಿನ ಅತ್ಯುತ್ತಮ ಉದ್ಯಾನವನಗಳಲ್ಲೊಂದು. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ಆಂಗ್ಲರು ಪ್ರಾರಂಭಿಸಿದ ಸಸ್ಯಗಳ ಅನ್ವೇಷಣೆಯ ಉಚ್ಛ್ರಾಯಕಾಲದಲ್ಲಿ ನೆಡಲ್ಪಟ್ಟ ಈ ವೃಕ್ಷೋದ್ಯಾನವನ್ನು, ೧೮೨೯ರಲ್ಲಿ ರಾಬರ್ಟ್
ಸ್ಟೇಯನರ್ ಹೋಲ್ಫ಼ರ್ಡ್ ಪೂರ್ಣವಾಗಿ ಊರ್ಜಿತಗೊಳಿಸಿದ. ಇಂದು ಪ್ರಪಂಚದಲ್ಲೇ ಅನೇಕ ಉತ್ತಮ ವೃಕ್ಷಗಳ ಸಂಗ್ರಹವನ್ನು ಹೊಂದಿದ ಸುಮಾರು ೬೦೦ ಎಕರೆಗಳ ಈ ವಿಶಾಲ ವೃಕ್ಷೋದ್ಯಾನ, ಸುಮಾರು ೧೮,೦೦೦ಕ್ಕಿಂತ ಹೆಚ್ಚಿನ ವಿವಿಧ ಮರಗಿಡಗಳ ತಳಿಗಳನ್ನು ಹೊಂದಿದೆ.

ವೆಸ್ಟನಬರ್ಟ್ ವೃಕ್ಷೋWestonbirt Arboretum Autumn colours October 30 2012 016ದ್ಯಾನವನ್ನು  Old Arboretum ಮತ್ತು Silk wood ಎಂಬ ಎರಡು ಪ್ರಮುಖ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.  Old Arboretum ಭಾಗದ ಭೂದೃಶ್ಯವನ್ನು ಬಹಳ ಚತುರತೆಯಿಂದ ವಿನ್ಯಾಸಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಅತಿ ಭವ್ಯವಾದ ಮಾರ್ಗಗಳು, ಸುಂದರ ಧೀರ್ಘ-ದೃಶ್ಯಗಳನ್ನು ಕಾಣಬಹುದಾಗಿದೆ. ಇಲ್ಲಿರುವ ಅನೇಕ ವೃಕ್ಷಗಳನ್ನು ೧೮೫೦ನೆಯ ಇಸವಿಯಲ್ಲಿ ನೆಡಲಾಗಿದೆ. ಆದರೆ Silk-wood ವಿಭಾಗ ಮತ್ತೊಂದು ಅನುಭವವನ್ನು ನೀಡುತ್ತದೆ.ಇಲ್ಲಿ ಅನೇಕ ವಿಲಕ್ಷಣ ಸಸ್ಯ ಪ್ರಭೇಧಗಳನ್ನು ೧೩ನೆಯ ಶತಮಾನದಿಂದ ಕಾಪಾಡುತ್ತಿದ್ದಾರೆ. ಮೇಪಲ್ ಮರಗಳ ೨೦೦೦ ನಮೂನೆಗಳನ್ನು ವೆಸ್ಟನಬರ್ಟ್ ವೃಕ್ಷೋದ್ಯಾನದಲ್ಲಿ ಕಾಣಬಹುದು. ಜಪಾನಿನ ಮೇಪಲ್ ಮರಗಳದ್ದೇ ಸುಮಾರು ೩೦೦ ತಳಿಗಳಿವೆ.  Acer palmatum ಎಂಬ ಜಪಾನ್ ದೇಶದ ಮೇಪಲ್ ಮರಗಳ ಶರದೃತುವಿನ ವರ್ಣ ವೈಭವ ಜಗದ್ಪ್ರಸಿದ್ಧ. ಚೈನಾ ದೇಶದ Chinese Spindle (Euonymus oxyphyllus) ತನ್ನ ಎಳೆಯ ಸುಂದರ ಗುಲಾಬಿ ಬಣ್ಣದ ಎಲೆಗಳಿಂದ ಕಂಗೊಳಿಸುತ್ತದೆ. ಉತ್ತರ ಇರಾನ್ ಮತ್ತು ಟರ್ಕಿ ದೇಶಗಳಿಂದ ತಂದು ಬೆಳೆಸಿರುವ, The Persian Ironwood (Parrotia persica) ಮತ್ತು ಹಿಕರಿ ವೃಕ್ಷಗಳು ಹಳದಿ ಬಣ್ಣಗಳ ಓಕುಳಿಯಾಡುತ್ತವೆ. ಜಪಾನ್ ಮತ್ತು ಚೈನಾ ದೇಶಗಳ ಮೂಲದ Katsura (Circidiphyllum japonicum) ವೃಕ್ಷ, ವರ್ಷದ ಈ ಸಮಯದಲ್ಲಿ ತನ್ನ ವರ್ಣಗಳ ಜೊತೆಗೆ, ಸುಟ್ಟ ಸಕ್ಕರೆ ಮತ್ತು ಕ್ಯಾಂಡಿ ಫ಼್ಲಾಸ್ ವಾಸನೆಗಳನ್ನು ಉತ್ಪತ್ತಿ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತವೆ. ಈ ಮರಗಳಲ್ಲದೆ ಬರ್ಚ್, ವಿವಿಧ ಜಾತಿಯ ಪೈನ್, ದೇವದಾರು, ಓಕ್, ಲಾರ್ಚ್ ಮತ್ತು ಸೈಪ್ರಸ್ ಜಾತಿಯ ಅನೇಕ ಪ್ರಭೇಧಗಳು ತಮ್ಮ ಕಾಮನಬಿಲ್ಲಿನ ಮೋಹಕ ವರ್ಣಗಳಿಂದ ನೋಡುವವರ ಮನಸೆಳೆಯುತ್ತದೆ.

Westonbirt Arboretum Autumn colours October 30 2012 062

ಸಿಲ್ಕ್ ವುಡ್ ವಿಭಾಗದಲ್ಲಿನ, ಚೆರ್ರಿ, ಆಶ್ ಮರಗಳು ಶರತ್ಕಾಲದ ಸುಂದರ ವರ್ಣಗಳನ್ನು ಪ್ರದರ್ಶಿದರೆ, ಅದರ ಸಮೀಪದಲ್ಲಿನ, ಬರ್ಚ್, ಸೈಪ್ರಸ್, ಲಾರ್ಚ್ ಮತ್ತು ಇತರ ಪ್ರಭೇಧಗಳು, ಕಿತ್ತಳೆ ಬಣ್ಣದಿಂದ ಹಿಡಿದು, ಕಂದು ಬಣ್ಣಗಳವರೆಗಿನ ಅನೇಕ ಛಾಯೆಗಳನ್ನು ತಮ್ಮ ಎಲೆಗಳಲ್ಲಿ ಪ್ರಕಟಿಸುತ್ತವೆ. ಜೀವನದಲ್ಲಿ ಮೊದಲ ಬಾರಿಗೆ ಇಷ್ಟೊಂದು ಮೋಹಕ ವರ್ಣಗಳನ್ನು ಒಂದೆ ಬಾರಿಗೆ ನೋಡಿದಾಗ ನನಗಾದ ಆನಂದ ಅವರ್ಣನೀಯ. ನನ್ನ ಕ್ಯಾಮೆರಾ ಇವೆಲ್ಲಾ ಬಣ್ಣಗಳನ್ನು ಸದ್ದಿಲ್ಲದೆ ಸೆರೆಹಿಡಿದರೂ, ಕಣ್ಣುಗಳಿಂದ ವೀಕ್ಷಿಸಿ ನನ್ನ ಮನದಲ್ಲಿ ಅಚ್ಚೊತ್ತಿರುವ ಉಜ್ವಲವರ್ಣದ ಚಿತ್ರಗಳೊಡನೆ ಎಂದೂ ಸ್ಪರ್ದಿಸಲಾWestonbirt Arboretum Autumn colours October 30 2012 228ಗದು. ಶರದೃತುವಿನ ಈ ವರ್ಣ ವೈಭವ, ಪ್ರಕೃತಿಯ ಹೋಳಿ ಹಬ್ಬವೇ ಅಥವಾ ಹವಾಮಾನದ ತೀವ್ರತೆಯನ್ನೆದುರಿಸಿ ತಮ್ಮ ಅಸ್ತಿತ್ವವನ್ನು ಹಿಡಿದಿಡಲು ವೃಕ್ಷಗಳು ನಡೆಸುವ ನಿರಂತರ ಸೆಣಸಾಟವೆ! ನನ್ನ ಮನ ನಿರ್ಧರಿಸಲಾಗದೆ ತೊಳಲಿತು.  ಅಲ್ಲಿ ನೆರೆದಿದ್ದ ನೂರಾರು ಜನಗಳ ಕಂಗಳ ಹೊಳೆಯುವ ನೋಟ, ನಿಸರ್ಗದ ಈ ವರ್ಣದೋಕುಳಿಯ ವೈಭವಕ್ಕೆ ಬೆರಗಾದ ಭಾವನೆಗಳನ್ನಂತೂ ನಿಸ್ಸಂದೇಹವಾಗಿ ತೋರುತ್ತಿತ್ತು. ನನ್ನ ಮನದಲ್ಲಿ ಬಹು ಕಾಲ ಅಚ್ಚಳಿಯದಂತೆ ಮೂಡಿರುವ ಆ ಮನಮೋಹಕ ದೃಶ್ಯವನ್ನು ನನ್ನ ಈ ಲೇಖನದಲ್ಲಿ ಸೆರೆ ಹಿಡಿಯುವ ಈ ಪ್ರಯತ್ನ ಓದುಗರ ಗಮನ ಸೆಳೆದು ಈ ವೃಕ್ಷೋದ್ಯಾನಕ್ಕೆ ಭೇಟಿ ನೀಡುವಂತೆ ಪ್ರಚೋದಿಸಲಿ ಎಂಬುದೆ ನನ್ನ ಹಾರೈಕೆ. ಈ ವೃಕ್ಷೋದ್ಯಾನದ ಎಲ್ಲಾ ವಿವರಗಳಿಗೆ ಭೇಟಿ ನೀಡಿ :

www.forestry.gov.uk/westonbirt

Westonbirt, Tetbury, Gloucestershire GL8 8QS
01666 880220

 

Westonbirt Arboretum Autumn colours October 30 2012 021

Westonbirt Arboretum Autumn colours October 30 2012 016Westonbirt Arboretum Autumn colours October 30 2012 016