ದೇವರೇ, ನೀನೆಲ್ಲಿರುವೆ? – ಶ್ರೇಯಾ ಅರಸ್ ಬರೆದ ಕವಿತೆ, ’ಅನ್ವೇಷಣೆ’ ಮತ್ತು ಅನುವಾದಗಳು

ಈ ವಾರದ ಸ್ಪೆಷಲ್ ಪ್ರಸ್ತುತಿ ೧೪ ವರ್ಷದ ಶೆಫೀಲ್ಡ್ ಟ್ಯಾಪ್ಟನ್ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ದೇವರನ್ನರಸುವ ಗಹನವಾದ ವಿಷಯದ ಬಗ್ಗೆ ಇಂಗ್ಲಿಷ್ದಲ್ಲಿ ಬರೆದ ಕವಿತೆ ಮತ್ತು ಅದರ ಕನ್ನಡ ಅನುವಾದ ! ಆಕೆಯ ಶಾಲೆಯಲ್ಲಿ ಕಡ್ಡಾಯವಾಗಿ ರಿಲಿಜಸ್ ಎಜುಕೇಷನ್ (RE) ಕಲಿಸಲಾಗುತ್ತದೆ. ಅದರ ಅಂಗವಾಗಿ Spirited Arts ಬಗ್ಗೆ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತು. ಅವಳು ಈ ಕವನವನ್ನು ಬರೆಯಲು ಆಯ್ದು ಕೊಂಡಳು ”ಬೇಗನೆ ಬರೆದು ಮುಗಿಸಲು ಬರುತ್ತದೆ‘’ಅಂತ! ಡೆಡ್ ಲೈನ್ ಹಿಂದಿನ ರಾತ್ರಿ ಕೊನೆಯ ಗಳಿಗೆಯಲ್ಲಿ ಬರೆದು ಕೊಟ್ಟಳಂತೆ. ಜೀವನ ದ ಮೂರು ಹಂತಗಳಲ್ಲಿ – ಚಿಕ್ಕಂದಿನಿಂದ, ಪ್ರೌಢ ನಂತರ ’ಮುದಿ’ ವಯಸ್ಸಿನಲ್ಲಿ- ದೇವರ ಅನ್ವೇಷಣೆ ಹೇಗೆ ಬದಲಾಗುತ್ತ ಹೋಗುತ್ತದೆ, ಮತ್ತು ಕೊನೆಗೆ ಸಿಗುವ ಉತ್ತರ ಇದನ್ನು ಸುಂದರವಾಗಿ ನಿರೂಪಿಸಿದ್ದಾಳೆ ಶ್ರೇಯಾ. ಆಕೆ ಪ್ರತಿಭಾವಂತ ಬಾಲಕಿ. ಬ್ಯಾಡ್ಮಿಂಟನ್ ಪಟು. ಈ ನಾಡಿನ ನಾಲ್ಕು ’ದೇಶಗಳ’ನ್ಯಾಷನಲ್ ಕೆಟೆಗರಿಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿದ್ದಾಳೆ. U15 ಸಿಂಗಲ್ಸ್ ವರ್ಗದಲ್ಲಿ ೧೦ನೆಯ ರಾಂಕ್ ಮತ್ತು ಮಿಕ್ಸ್ಡ್ ವರ್ಗದಲ್ಲಿ ಎರಡನೆಯ ಸ್ಥಾನ ಗಳಿಸಿದ ಶ್ರೇಯಸ್ಸು ಅವಳದು. ಇದಲ್ಲದೆ ಮೆಡಿಟೇಷನ್, ಡ್ಯಾನ್ಸಿಂಗ್, ಭಾಷಣ, ಓದುವುದು ಮತ್ತು ಚಿತ್ರಕಲೆಯಲ್ಲಿಯೂ ಅವಳಿಗೆ ಆಸಕ್ತಿ. ತಂದೆ- ತಾಯಂದಿರು ಇಬ್ಬರೂ ವೈದ್ಯರು ಮತ್ತೊಬ್ಬ ತಂಗಿಯೊಂದಿಗೆ ಶೆಫೀಲ್ಡ್ ದಲ್ಲಿ ವಾಸಿಸುತ್ತಿದ್ದಾಳೆ. ಶಾಲೆಯಿಂದ ಆಯ್ಕೆಯಾದ ಮೂರು ಕವನಗಳಲ್ಲಿ ಅವಳದೂ ಒಂದು. ಸ್ಫರ್ಧೆಯ ಕೊನೆಯ ಹಂತದಲ್ಲೂ ಆಕೆಗೆ ಜಯವಾಗಲೆಂದು ಆಶಿಸೋಣ.(ಸಂ)

GOD are you there ?

In a tender age, we always ask,
"where is GOD ?"
Small necks crane their heads way into the sky,
Looking for a spark of light, looking for a sign,
But in this unattainable quest, hope is lost,
Forgetting the crucial truth at all cost,

But while we grow we aimlessly look,
Temples, churches, synagogues everywhere we go,
To find the Supreme God we've never seen,
Hoping this is not just a simple dream,

But we hear "you cannot see me with your present eyes"
Echoing in ornate temple, a due on our everlasting, fatiguing path,
Reaching us to the ultimate truth, this guide to life,
This ongoing hourglass,

In a ripe , knowledgeable age, we still ponder,
"where is GOD"
Through prayers, through books , constantly we still look ,
When he says "Seek me with all your heart"
Resonating on the intricate stained windows of the church like a dart,

Into our hearts we go ,for we learnt what had been lost,
It didn't take our eyes, binoculars, never ending, never accepting questions ,
But faith in the truth we receive,
And finally, decades later, to have been achieved,

Frail skin, wide eyed, but still a tender heart,
We don't ask those questions anymore, for we know,
Within the oceans, within the skies,
GOD is simply wherever you lie.

Shreya Arun Urs

The above is Shreya’s  own write up about how she structured the poem and the ideas that inspired her. 
ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆಯುವ ನಮ್ಮ ಮಕ್ಕಳು ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳೆರಡನ್ನೂ ಅರಿತವರಾಗಿರುತ್ತಾರೆ ಮತ್ತು ಅವುಗಳಪ್ರಭಾವ ಅವರ ಮೇಲೆ ಆಗಿರುತ್ತದೆ ಎನ್ನುವದು ಮೇಲಿನ ಕವಿತೆಯಲ್ಲಿ ಮತ್ತು ಸ್ವತಃ ತನ್ನ ಕೈಬರಹದಲ್ಲಿ ಶ್ರೇಯಾ ಬರೆದ ವಿವರಣೆಯಿಂದ ಗೊತ್ತಾಗುತ್ತದೆ.  ಭಗವದ್ಗೀತೆಯ ಮತ್ತು ಬೈಬಲ್ಲಿನ ಜರೆಮಯ್ಯ ಅಧ್ಯಾಯದ ಉಲ್ಲೇಖನ ಸ್ಪಷ್ಟವಾಗಿಯೇ ಇದೆ. ಇಲ್ಲಿ ಬೆಳೆಯುವ ಮಕ್ಕಳು ಐದು ವರ್ಷದ ಭಕ್ತ ಧೃವ ಮತ್ತು ನಚಿಕೇತರ ಉಪನಿಷತ್ತಿನ ಕಥೆಗಳನ್ನು ಅವರು ಕೇಳಿರಬಹುದು.ವಿವೇಕಾನಂದರು ರಾಮಕೃಷ್ಣರನ್ನು ಕಂಡ ಕಥೆಯನ್ನೂ ಕೇಳಿ ಓದಿರ ಬಹುದು. ಇಂಗ್ಲಿಷ್ ವಿದ್ಯಾರ್ಥಿಯಾಗಿ ಅನ್ವೇಷಣೆಯಲ್ಲಿದ್ದ ಹದಿನೆಂಟು ವರ್ಷದ ಕಾಲೇಜು ಹುಡುಗ ನರೇಂದ್ರ ದತ್ತ (ವಿವೇಕಾನಂದರ ಮೊದಲನೆಯ ಹೆಸರು) ಒಮ್ಮೆ ಪ್ರೊಫೆಸರ್ ವಿಲಿಯಂ ಹೇಸ್ಟೀ ಅವರ ಉಪನ್ಯಾಸ ಕೇಳಲು ಹೋದಾಗ ವಿಲಿಯಮ್ ವರ್ಡ್ಸ್ವರ್ಥನ ’ದ ಎಕ್ಸ್ಕರ್ಷನ್’ (The Excursdion) ನೀಳ್ಗವಿತೆಯಲ್ಲಿ ಬರುವ ಟ್ರಾನ್ಸ್ (trance) ಶಬ್ದ ಅಂದರೇನು ಅಂತ ಕೇಳಿದಾಗ ಆತ ದಕ್ಷಿಣೇಶ್ವರದ ಸಾಧು ರಾಮಕೃಷ್ಣರ ಪರಮಹಂಸರನ್ನು ಭೇಟಿಯಾಗಲು ಕಳಿಸಿದರಂತೆ. ಅದು ಅವರ ಮೊದಲ ಭೇಟಿಯಾಗಿತ್ತು. ನಂತರ ಮೂರನೆಯ ಭೇಟಿಯಲ್ಲಿ ’ನೀವು ದೇವರನ್ನು ಕಂಡಿದ್ದೀರಾ?’ ಅಂತ ಅವರನ್ನು ಕೇಳಿದಾಗ ಅವರು ಹೌದು ಅಂದರಂತೆ. ೨೧ನೆಯ ಶತಮಾನದಲ್ಲಿ ಇಲ್ಲಿ ಶ್ರೇಯಾ ಸಹ ಅದೇ ತರಹದ ಪ್ರಶ್ನೆ ಕೇಳಿದ್ದರಲ್ಲಿ ಆಶ್ಚರ್ಯವಿಲ್ಲ. ಅದಕ್ಕನುಗುಣವಾಗಿಯೋ ಎನ್ನುವಂತೆ ನಮ್ಮ ಚಿತ್ರಕಾರರಾದ ಡಾ ಎಲ್ ಎನ್ ಗುಡೂರ್ ಅವರು ಆಧುನಿಕ ಯಂತ್ರಾಂಶದ ’ದಿವ್ಯ ಚಕ್ಷುವನ್ನು’ ಅರ್ಜುನನಿಗೆ ಕೊಡುತ್ತಿದ್ದಾರೆ! ಅವರಿಗೆ ಧನ್ಯವಾದಗಳು. ಕೆಳಗೆ ಕೊಟ್ಟ ಆ ಕವಿತೆಯ ಕನ್ನಡ ಅನುವಾದ ಒಂದು ಸಾಮೂಹಿಕ ಪ್ರಯತ್ನ. ಶ್ರೇಯಾನ ಕಟುಂಬದವರ ಪ್ರಯತ್ನವೂ ಅದರಲ್ಲಿದೆ. ಬೆಂಗಳೂರಿನಲ್ಲಿರುವ ಶಿಕ್ಷಕಿ ಆಕೆಯ ಅಜ್ಜಿ ಗದ್ಯದಲ್ಲಿ ಬರೆದ ಕನ್ನಡದ  ತರ್ಜುಮೆ, ಸೋದರ ಮಾವ AI (ಕೃತಕ ಬುದ್ಧಿಮತ್ತೆಯ) ಸಹಾಯದಿಂದ ಮಾಡಿದ ಅನುವಾದ ಎಲ್ಲ ಆ ಪರಿಷ್ಕರಣೆಯಲ್ಲಿ ಮೇಳೈಸಿವೆ. 

(ಮೇಲಿನ ಕವಿತೆಯ ಕನ್ನಡ ಅನುವಾದ)
ದೇವರೇ, ನೀನೆಲ್ಲಿರುವೆ?

ಚಿಕ್ಕ ವಯಸ್ಸಿನಲ್ಲಿ ನಾವು ಸದಾ ಕೇಳುತ್ತೇವೆ,
"ದೇವರು ಎಲ್ಲಿದ್ದಾರೆ?"
ಸಣ್ಣ ಕತ್ತುಗಳು ತಲೆಯನ್ನು ಆಕಾಶದತ್ತ ತಿರುಗಿಸುತ್ತವೆ,
ಬೆಳಕನ್ನು ಹುಡುಕುತ್ತಾ, ಒಂದು ಸೂಚನೆಯನ್ನು ನಿರೀಕ್ಷಿಸುತ್ತಾ,
ಆದರೆ ಈ ಅಸಾಧ್ಯ ಹುಡುಕಾಟದಲ್ಲಿ, ನಂಬಿಕೆ ಮಾಯವಾಗುತ್ತದೆ,
ಮೂಲಭೂತ ಸತ್ಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತೇವೆ.

ಆದರೆ, ಬೆಳೆಯುತ್ತಾ ನಾವು ದಿಕ್ಕಿಲ್ಲದಂತೆ ತಿರುಗುತ್ತಾ ಹುಡುಕುತ್ತೇವೆ,
ದೇವಾಲಯಗಳಲ್ಲಿ, ಚರ್ಚುಗಳಲ್ಲಿ, ಸೈನಾಗೊಗುಗಳಲ್ಲಿ ಎಲ್ಲ ಕಡೆ ಹೋಗುತ್ತೇವೆ,
ಕಾಣದ ಪರಮಾತ್ಮನ ಹುಡುಕಲು,
ಇದು ಕೇವಲ ಕನಸು ಅಲ್ಲ ಎಂದು ಆಶಿಸುತ್ತಾ.

ಅಕೋ! ಅಲ್ಲೊಂದು ದನಿ ಕೇಳಿಸುತ್ತದೆ, “ನೀವು ನಿಮ್ಮ ಇಂದಿನ ಕಣ್ಣುಗಳಿಂದ ನನ್ನನ್ನು ಕಾಣಲಾಗುವುದಿಲ್ಲ'"
ದೇವಾಲಯದ ಸಂಕೀರ್ಣ ಆವರಣದಲ್ಲದು ಅನುರಣಿಸುತ್ತದೆ,
ನಮ್ಮ ಅವಿರತ ಪ್ರಯಾಣ, ದಣಿದ ದಾರಿ
ತಲುಪಿಸುವುದು
ಪರಮಸತ್ಯದತ್ತ ದಾರಿತೋರಿಸುವುದು ಜೀವನ ದರ್ಶನದ ಸೂಚಕವೇನೆಂದು
ಸಾರುವ ಈ ನಿರಂತರ ಕಾಲಚಕ್ರ

ಮಾಗಿದ, ಜ್ಞಾನೋದಯದ ವಯಸ್ಸಿನಲ್ಲಿ, ನಾವು ಇನ್ನೂ ಯೋಚಿಸುತ್ತೇವೆ,
"ದೇವರು ಎಲ್ಲಿದ್ದಾನೆ"
ಪ್ರಾರ್ಥನೆ, ಪುಸ್ತಕಗಳ ಮೂಲಕ, ನಾವು ಇನ್ನೂ ಹುಡುಕುತ್ತೇವೆ,
ಆತನ ಉತ್ತರ: "ನನ್ನನ್ನು ನಿಮ್ಮ ಪೂರ್ತಿ ಹೃದಯದಿಂದ ಹುಡುಕಿ"
ಚರ್ಚಿನ ಬಣ್ಣದ ಕಾಜಿನ ಕಿಟಕಿಗಳಿಂದ
ಪ್ರತಿಫಲಿತವಾದವು ಆ ಮಾತುಗಳು -
ತಿರುಗು ಬಾಣದಂತೆ

ನಮ್ಮ ಹೃದಯದೊಳಗೆ ನಾವೂ ಪ್ರವೇಶಿಸುತ್ತೇವೆ,
ಏಕೆಂದರೆ ನಾವು ಏನು ಕಳೆದುಕೊಂಡಿದ್ದೆವೋ ಅದನ್ನೀಗ ಅರಿತಿದ್ದೇವೆ,
ಇದಕ್ಕಾಗಿ ನಮಗೆ ಕಣ್ಣುಗಳು, ದೂರದರ್ಶಕಗಳು, ಅಥವಾ ಅಂತ್ಯವಿಲ್ಲದ ಪ್ರಶ್ನೆಗಳು ಬೇಡ,
ಆದರೆ ನಾವು ಕಾಣಲಿರುವ ಸತ್ಯದಲ್ಲಿ ನಂಬಿಕೆ ಇಟ್ಟುಕೊಳ್ಳುತ್ತೇವೆ,
ಅಂತೂ ದಶಕಗಳ ನಂತರ, ಒಂದು ಸಾಧನೆ

ಸಡಿಲಾದ ಸುಕ್ಕಿನ ಚರ್ಮ, ವಿಶಾಲ ಕಣ್ಗಳು ಆದರೆ ಮುಗ್ಧ ಹೃದಯ
ನಾವು ಆ ಪ್ರಶ್ನೆಗಳನ್ನಿನ್ನು ಕೇಳುವುದಿಲ್ಲ, ಏಕೆಂದರೆ ಈಗ ನಮಗೆ ಗೊತ್ತು ,
ಸಮುದ್ರದಲ್ಲಿ, ಭೂಮ್ಯಾಕಾಶದಲ್ಲಿ
“ನಾವೆಲ್ಲೇ ಇದ್ದರೂ, ದೇವರು ಅಲ್ಲಿಯೇ ಇರುತ್ತಾರೆ."

(ಮೂಲ: ಶ್ರೇಯಾ ಅರುಣ್ ಅರಸ್)
ಸಂಪಾದಕರ ಟಿಪ್ಪಣಿ:
ಶ್ರೇಯಾ ಅರಸ್ ಬರೆದ ಕವಿತೆಯ ಕೊನೆಯ ಸಾಲಿನಲ್ಲಿ ಪ್ರತಿಧ್ವನಿಸುವ ಆಶಯ ರಾಷ್ಟ್ರಕವಿ ಜಿ ಎಸ್ ಎಸ್ ಶಿವರುದ್ರಪ್ಪ ಅವರ ಕವನದಲ್ಲಿಯೂ ನಾವೆಲ್ಲ ಕಂಡಿದ್ದೇವೆ. ಎರಡನೆಯ ತಲೆಮಾರಿನವರಿಗೆ ಓದಿ ಅರ್ಥವಾಗಲು ಕಷ್ಟವಾದರೆ ಕೆಳಗೆ ಕೊಟ್ಟ ಸಂಪಾದಕನ ಆಂಗ್ಲ ಅನುವಾದ ಸಹಾಯವಾಗಬಹುದು.


’ಅನ್ವೇಷಣೆ’
ಎಲ್ಲೋ ಹುಡುಕಿದೆ ಇಲ್ಲದ ದೇವರ Looking for the missing God
ಕಲ್ಲು ಮಣ್ಣುಗಳ ಗುಡಿಯೊಳಗೆ In the empty temples of stone and earth
ಇಲ್ಲೇ ಇರುವ ಪ್ರೀತಿ ಸ್ನೇಹಗಳ I missed the love and friendship
ಗುರುತಿಸದಾದೆನು ನಮ್ಮೊಳಗೆ Ever present within us

ಎಲ್ಲಿದೆ ನಂದನ, ಎಲ್ಲಿದೆ ಬಂಧನ Whither Eden, whither bondage
ಎಲ್ಲಾ ಇವೆ ಈ ನಮ್ಮೊಳಗೆ We always had them, I know
ಒಳಗಿನ ತಿಳಿಯನು ಕಲಕದೆ ಇದ್ದರೆ Stir not the calm waters in haste
ಅಮೃತದ ಸವಿಯಿದೆ ನಾಲಿಗೆಗೆ Lest you miss out ambrosia's taste

ಹತ್ತಿರವಿದ್ದೂ ದೂರ ನಿಲ್ಲುವೆವು We're so near, yet apart we grow
ನಮ್ಮ ಅಹಮ್ಮಿನ ಕೋಟೆಯಲಿ Inside our self built fortress of ego
ಎಷ್ಟು ಕಷ್ಟವೋ ಹೊಂದಿಕೆಯೆಂಬುದು Is coexistence that intolerable
ನಾಲ್ಕುದಿನದ ಈ ಬದುಕಿನಲಿ In this life so interminable?

ಜಿ ಎಸ್ ಎಸ್ ಶಿವರುದ್ರಪ್ಪ


ಕವಿತೆ ಕೊಟ್ಟು ಸಹಕರಿಸಿದ ಶ್ರೇಯಾ ಅರಸ್, ಆಕೆಯ ಬ್ಯಾಡ್ಮಿಂಟನ್ನಿಗಾಗಿ ದೇಶವೆಲ್ಲ ಸುತ್ತುವ ತಂದೆ ತಾಯಿಗಳು ಮತ್ತು ಉಳಿದ ಕುಟುಂಬದವರು ಮತ್ತು ನಮ್ಮ ’ರೆಸಿಡೆಂಟ್’ ವ್ಯಂಗ್ಯ ಚಿತ್ರಕಾರ ಡಾ ಲಕ್ಷ್ಮಿನಾರಾಯಣ ಗುಡೂರ್ ಎಲ್ಲರಿಗೂ ಕೃತಜ್ಞತೆಗಳು. (ಸಂ)