ಅವೋಕಾಡೋ ಹಣ್ಣುಗಳು — ಕೇಶವ ಕುಲಕರ್ಣಿಯವರ ಕೊಡುಗೆ

ಡಾ ಕೇಶವ ಕುಲಕರ್ಣಿಯವರು ಬಹುಮುಖ ಪ್ರತಿಭೆಯ ಬರಹಗಾರರು. ವಿವಿಧ ‘ಜಾನ್ರ’ಗಳಲ್ಲಿ ಪಳಗಿದವರು. ಅಷ್ಟೇ ಅಲ್ಲ “ಅನಿವಾಸಿಯ” ಪ್ರಾರಂಭದಿಂದಲೂ ಅದರ ಕೇಂದ್ರದಲ್ಲಿದ್ದಾರೆ. ತಾಂತ್ರಿಕ ವಿಷಯಗಳಲ್ಲೂ ಪರಿಣಿತರು. ಇಂಗ್ಲಿಷ್ ಕವನದ ಈ ಅನುವಾದದಲ್ಲಿ ಬೆಣ್ಣೆ ಹಣ್ಣಿನ ಮರ್ಮವನ್ನು ಭೇದಿಸಿ ಬೀಜವನ್ನು ಬಟಾ ಬಯಲು ಮಾಡುವ ಸಾಹಸ!

ಬೆಣ್ಣೆಹಣ್ಣುಗಳು (ಅವೋಕಾಡೋ ಹಣ್ಣುಗಳು)

Avocado
ನಂಗಿಷ್ಟಅವು ಅಂಗೈಲಿ ಒಪ್ಪುವ ರೀತಿ –
ಧಡೂತಿ ಬುದ್ಧನ ತೂಕ,
ಮಾಗಲು ತುಂಟ ಹಿಸುಕು,
ಚೂರಿಯ ನೀಳ ಸೀಳು,
ಮೆದು ಹೀರುತ್ತ
ತಿರಿಗಿಸುತ್ತ ಇಬ್ಭಾಗಿಸಿದರೆ
ಗಟ್ಟಿ ಚರ್ಮ ಸಲೀಸಾಗಿ ಸುಲಿದು
ಬೆತ್ತಲೆ, ಸಾಬೂನಿನಂತೆ ನುಣುಚು.
ನಾನೇ ಬಡಿಸಿಕೊಳ್ಳುವೆ ನನಗೆ
ಸೀಳಿ ಅಗಲಿಸಿ
ಬಿಳಿಪಿಂಗಾಣಿಯ ಮೇಲೆ
ಎಣ್ಣೆ ಸವರಿ ಹೊಳಪಿಸಿ,
ಇಲ್ಲಾ ತುಂಬುವೆ ನುಣುಪು ಕುಣಿಯನು
ಘಾಟು ಒಗ್ಗರಣೆಯಲಿ
ಎಬ್ಬುತ್ತ
ತಿಳಿಬೆಣ್ಣೆಯ ಅಡಗು (ತಿರುಳು).

ನೀವು ಓದಿದ ಯಾವುದೇ ಪಥ್ಯವೂ
ಕಟ್ಟುನಿಟ್ಟಾಗಿ ಅವನ್ನು ನಿರ್ಬಂಧಿಸಿವೆ

(Avocadoes by Esther Morgan, in the collection ‘Beyond Calling Distance.’ Full text in one of the comments.)

ಕನ್ನಡಕ್ಕೆ: ಕೇಶವ ಕುಲಕರ್ಣಿ ಮತ್ತು ಸುದರ್ಶನ್ ಗುರುರಾಜರಾವ್  (ಕೆಳಗೆ ನೋಡಿರಿ)

ಕವಿತೆಯನ್ನು ಓದಿ  ಸುದರ್ಶನ್ ಅವರು ತಮ್ಮ ಅನುವಾದವನ್ನು ಕಳಿಸಿದ್ದಾರೆ. ಅದನ್ನೂ ಸವಿಯಿರಿ! (ಸಂ)

Avocado Translation with name

 

 

 

 

 

ಯು ಕೆ ಕನ್ನಡ ಬಳಗ – ಬ ರಾ ಸುರೇಂದ್ರ ಅವರ ಕವನ

Poem presentation2 enhanced
ಗೌ ಜಯರಾಂ, ಸುರೇಂದ್ರ, ಸತ್ಯನಾರಾಯಣ್ Photo: R Cavale

ಕನ್ನಡ ಬಳಗ ಯು ಕೆ, ಇದೇ ಅಕ್ಟೋಬರ್ ೩೧, ೨೦೧೫ ರಂದು ಚೆಲ್ಟನಂ ದಲ್ಲಿ ದೀಪಾವಳಿ  ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುತು.  ನ್ಯೂಜರ್ಸಿಯಿಂದ ಬಂದ ಕಲಾತರಂಗ ತಂಡದ ವತಿಯಿಂದ ಅದರ ಸದಸ್ಯರಾದ ಕವಿ-ನಟ-ನಾಟಕಕಾರರಾದ ಬ. ರಾ. ಸುರೇಂದ್ರ ಅವರು ಈ ಸಮಾರಂಭಕ್ಕೆಂದೇ ರಚಿಸಿದ ತಮ್ಮ ಕವನವನ್ನುಓದಿ ಬಳಗಕ್ಕೆ ಸಮರ್ಪಿಸಿದರು. ಜೊತೆಗೆ ಕಟ್ಟು ಹಾಕಿಸಿದ ಅದರ ನಕಲನ್ನು ಅಧ್ಯಕ್ಷರಿಗೆ ಕೊಟ್ಟರು. ಅದನ್ನು ಈ ವೇದಿಕೆಯ ಓದುಗರಿಗೆ ಮುಂದೆ ಇಡುತ್ತಿದ್ದೇವೆ:

”ಯು.ಕೆ. ಕನ್ನಡ ಬಳಗ”

ಸಹಸ್ರಾರು ವರುಷಗಳ ಹಿಂದಿನಿಂದ

ಮೈವೆತ್ತಿ ನಿಂದು ಮೆರೆದ ಭವ್ಯತೆಯ ಮೆರುಗಿನಿಂದ

ಇಂದು ಶತ ಯೋಜನೆಗಳ ದೂರವೂ ಬಾಧ್ಯವಾಗದೆ

ಮಿಂಚಿನ ವೇಗದಲ್ಲಿ ಓಡುವ ಕಾಲವೂ ಬಾಧಿಸದೆ

ನಾಗರೀಕತೆಯ ಅಡಿಪಾಯದ ಮೇಲೇರಿರುವಲ್ಲಿ

ಭವ್ಯ ಸಂಸ್ಕೃತಿಯ ಅರಮನೆಯ ಕಟ್ಟಿರುವಲ್ಲಿ

ನಮ್ಮನ್ನು ನಾವು ಮರೆತು ಮೆರೆಯಲಿಚ್ಛಿಸುವಾಗ

ನಮ್ಮತನದ ಕರೆ ಅಲೆ ಅಲೆಯಾಗಿ ತೇಲಿ ಬಂದಾಗ

ಹೆಪ್ಪುಗಟ್ಟಿದ ಮನಗಳಲ್ಲಿ ಹೊಂಬಿಸಿಲು ಬೀಸಲು

ಕನ್ನಡದ ಹೃದಯ ಕಮಲಗಳು ಅರಳಿರಲು

ಭಾಷೆ, ಭಾಷೆಗಳ ಹಂದರದಲ್ಲಿ ಕೋಟಿ ಕೋಟಿ ಕನ್ನಡಿಗರು ನಲಿದಿರುವಾಗ

ಕಲೆಗಳ ಸುಂದರ ರಂಗವಲ್ಲಿ ಬಿಡಿಸಿ ವಿಶ್ವದೆಲ್ಲೆಡೆ ಪಸರಿರುವಾಗ

ಕಡಲಾಚೆಯ ಯು.ಕೆ.ಯಲ್ಲೂ ನೆಲೆ ಕಂಡು ಮೊಳಕೆಯೊಡೆದಾಗ

ಲಂಡನ್ನಿಗರ ಶುಭ ಹಾರೈಕೆಯಲ್ಲಿ ಹಸನಾಗಿ ಬೆಳೆದು ಮೊಗ್ಗಾದಾಗ

ನಾಡನ್ನೂ ನಾಡವರನ್ನೂ ಸ್ಮರಿಸುತ್ತಾ

ನವ್ಯತೆಯ ಮೆರುಗಲ್ಲಿ ಮರೆಯಾಗುತ್ತರುವ ಸಂಸ್ಕೃತಿಯ ಎತ್ತಿ ತೋರಿಸುತ್ತಾ

ಇಂದು ಸುಂದರ ಮಲ್ಲಿಗೆಯ ಹೂವಾಗಿ ಅರಳಿ ಪರಿಮಳ ನಾಡ ಸೇರುವಾಗ

ಹೃದಯ ತುಂಬಿಬಂದ ತಾಯಿ ಭುವನೇಶ್ವರಿಯು ನಲಿದಿರುವಾಗ

ನಸುನಕ್ಕು “ಜೈ ಕರ್ನಾಟಕ” ಎಂದು ಮಂತ್ರ ಪುಷ್ಪಗಳ ಉದುರಿಸಿದಂತಾಯ್ತು

ಧನ್ಯೆ ನಾನು ಎಂದು ಯು.ಕೆ.ಕನ್ನಡಿಗರ ಹರಸಿದಂತಾಯ್ತು.

framed BaraSuPoem
Photo: Suresh Ramayya

ಬ ರಾ ಸುರೇಂದ್ರ (USA)