ಸ್ಥಳ : ಆಲಿವರ್ ಬರ್ಡ್ ಹಾಲ್, ಸೋಲಿಹಲ್, ಬರ್ಮಿಂಗಹ್ಯಾಮ್
ಸಭೆಯಲ್ಲಿ ಹಾಜರಿದ್ದವರು: ಡಾ ಶ್ರೀವತ್ಸ ದೇಸಾಯಿ, ಡಾ ಶಿವಪ್ರಸಾದ, ಡಾ ಉಮಾ ವೆಂಕಟೇಶ್, ಡಾ ಕೇಶವ್ ಕುಲಕರ್ಣಿ, ಡಾ ಗಿರಿಧರ್ ಹಂಪಾಪೂರ್, ಡಾ ಸುದರ್ಶನ್, ಡಾ ಬಿ.ಎಸ್. ಸತ್ಯಪ್ರಕಾಶ್, ಡಾ ದಾಕ್ಷಾಯಣಿ ಗೌಡ, ಡಾ ಪ್ರೇಮಲತಾ, ಅನ್ನಪೂರ್ಣಾ ಆನಂದ್, ಆನಂದ್ ಕೇಶವಮೂರ್ತಿ, ಡಾ ರಾಮಶರಣ್, ಗುರುಪ್ರಸಾದ್, ಬಸವರಾಜ್.
Photo:©DrSatyaprakash
ಸಭೆಯ ಅಧ್ಯಕ್ಷರು: ಡಾ ಶ್ರಿವತ್ಸ ದೇಸಾಯಿ
೧. ಪರಿಚಯ: ಡಾಶ್ರಿವತ್ಸ ದೇಸಾಯಿ ಅವರು ಸಭೆಯ ಮೊದಲಲ್ಲಿ ಸದಸ್ಯರೆಲ್ಲರನ್ನೂ ಸ್ವಾಗತಿಸಿ, ಹಿಂದಿನ ಸಭೆಯಲ್ಲಿ ಗೈರುಹಾಜರಾಗಿದ್ದವರನ್ನು ತಮ್ಮ ಪರಿಚಯ ಮಾಡಿಕೊಡಲು ಆಮಂತ್ರಿಸಿದರು. ಹಲವು ಸದಸ್ಯರ ಪರಿಚಯ ವೈಖರಿ ಬಹಳ ಆಸಕ್ತಿಪೂರ್ಣವಾಗಿತ್ತು. ಅಧ್ಯಕ್ಷರು ಈ ವೇದಿಕೆಯ ಪ್ರಾರಂಭದ ಹಿನ್ನೆಲೆಯನ್ನು ವಿವರಿಸಿ, ಅದರ ಸಂಚಾಲ ಸಮಿತಿಯ ಮೊದಲ ಭೇಟಿಯ ವಿವರಗಳನ್ನು ನೀಡಿದರು. ವೇದಿಕೆಯ ಪ್ರಾರಂಭದ ಹಿಂದೆ ಯು.ಕೆ.ಕನ್ನಡ ಬಳಗದ ಹಲವು ಹಿರಿಯ ಮತ್ತು ಕಿರಿಯ ಸಾಹಿತ್ಯಾಭಿಮಾನಿ ಸದಸ್ಯರ ಆಸಕ್ತಿ ಮತ್ತು ಪರಿಶ್ರಮಗಳ ಬಗ್ಗೆಯೂ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು. ಸಂಚಾಲನಾ ಸಮಿತಿಯ ಮೊದಲ ಸಭೆ, ೧೮ ಅಕ್ಟೋಬರ್ ೨೦೧೩ರಂದು, ಯುಟಾಗ್ಸೆಟರ್ ನಲ್ಲೂ, ಮತ್ತು ಎರಡನೆಯ ಸಭೆ ಶೆಫೀಲ್ಡಿನಲ್ಲಿ, ಡಾ ಶಿವಪ್ರಸಾದರ ಮನೆಯಲ್ಲಿ ನಡೆಯಿತೆಂದು ತಿಳಿಸಿದರು. ಈ ಸಭೆಗಳ ನಂತರ, ವೇದಿಕೆಯ ಜಾಲ-ಜಗುಲಿಯ ಅಂತರಜಾಲಾ ತಾಣವನ್ನು ”ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ,ಯು.ಕೆ,” ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು.
೨. ಕೆ.ಎಸ್.ಎಸ್.ವಿ.ವಿ ಜಾಲ-ಜಗುಲಿಯ ವಿಚಾರಗಳು: ಜಾಲ-ಜಗುಲಿಯ ಪ್ರಧಾನ ಕಾರ್ಯನಿರ್ವಾಹಕ, ಡಾ ಕೇಶವ್ ಕುಲಕರ್ಣಿ ಅವರು, ಕನ್ನಡದಲ್ಲಿ ಟೈಪ್ ಮಾಡಲು ಲಭ್ಯವಿರುವ ವಿವಿಧ ಅನ್ವಯ ತಂತ್ರಾಂಶಗಳ ಬಗ್ಗೆ ವಿಶದವಾಗಿ ಮಾತನಾಡಿ, ಅವುಗಳನ್ನು ಬಳಸುವ ರೀತಿಯನ್ನು ವಿವರಿಸುತ್ತಾ, ಸಧ್ಯದಲ್ಲಿಯೇ, ಈ ವಿಷಯದ ಬಗ್ಗೆ ಲೇಖನವೊಂದನ್ನು ಸಿದ್ಧಪಡಿಸಿ, ವೇದಿಕೆಯ ಜಾಲ-ಜಗುಲಿಯಲ್ಲಿ ಪ್ರಕಟಿಸುವುದಾಗಿ ವರದಿ ಮಾಡಿದರು. ಸಧ್ಯದಲ್ಲಿ ಲೇಖನವನ್ನು ಪಿಡಿಎಫ಼ ಆವೃತ್ತಿಯನ್ನು ಬಳಸದೆ, ವರ್ಡ್ ಆವೃತ್ತಿಯಲ್ಲಿ ಸಿದ್ಧಪಡಿಸಿ, ಲೇಖಕರು ತಮ್ಮ ಲೇಖನಗಳನ್ನು ನೇರವಾಗಿ ಜಾಲ-ಜಗುಲಿಯಲ್ಲಿ ಪ್ರಕಟಣೆಗೆ ರವಾನಿಸಬೇಕಾಗಿಯೂ ತಿಳಿಸಿದರು. ಎಲ್ಲಾ ಲೇಖಕರಿಗೂ, ತಮ್ಮ ಲೇಖನಗಳ ಕರಡು ಪ್ರತಿಯನ್ನು, ಜಾಲ-ಜಗುಲಿಗೆ ಮಿನ್ನೇರಿಸುವ ಅಧಿಕಾರವನ್ನು ನೀಡುವುದಾಗಿಯೂ ಹೇಳಿದರು. ಪ್ರತಿಯೊಬ್ಬ ಸದಸ್ಯರೂ, ಜಾಲ-ಜಗುಲಿಯಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿ, ಅವುಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಕೋರಿಕೊಂಡರು. ಗೂಗಲ್- ಅನ್ವೇಷಣೆಯ ಚಾಲಕ ತಂತ್ರಾಂಶದಲ್ಲಿ, ವೇದಿಕೆಯ ಮುಖ ಪುಟವನ್ನು ನೇರವಾಗಿ ಹುಡುಕಲು ಮತ್ತು ವ್ಯಾಪಕ ಓದುಗರ ಅನುಕೂಲತೆಗಾಗಿ, ಸೂಕ್ತವಾದ ಹೆಸರು-ಪಟ್ಟಿಗಳನ್ನು (Tags) ಗಳನ್ನು ಉತ್ತಮಪಡಿಸಬೇಕೆಂಬ ವಿಷಯದ (ಗೂಗಲ್ ವಿಸ್ತರಣೆ) ಬಗ್ಗೆ ಚರ್ಚಿಸಲಾಯಿತು. ಜಾಲ-ಜಗುಲಿಯ ಸಂದರ್ಶಕರ ಸಂಖ್ಯೆಯ ವಿವರಗಳನ್ನು, ವೀಕ್ಷಕರಿಗಾಗಿ ಪ್ರಕಟಿಸಬಹುದೆಂದೂ, ಸಧ್ಯದಲ್ಲಿ ಈ ಸಂಖ್ಯಾಂಶದ ವಿವರಗಳು, ಜಾಲ-ಜಗುಲಿಯ ಆಡ್ಯಳಿತ ನಿರ್ವಾಹಕರಿಗೆ ಮಾತ್ರ ಲಭ್ಯವಿರುವುದಾಗಿ ತಿಳಿಸಿದರು. ಸೂಕ್ತವಾದ ಹೆಸರು-ಪಟ್ಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆಯ ಕಾರ್ಯದ ಜವಾಬ್ದಾರಿಯನ್ನು ಕೇಶವ್ ಮತ್ತು ಗಿರಿಧರ್ ಅವರಿಗೆ ಒಪ್ಪಿಸಲಾಗಿದೆ.
Photo courtesy Dr Rajaram Cavale
೨.೧ (ಹಿಂದಿನ ಸಭೆಯ ವರದಿಯ ವಿವರಗಳನ್ನು ಮೇಲಿನ ವಿಭಾಗದಲ್ಲಿ ತಿಳಿಸಲಾಗಿದೆ). ವೇದಿಕೆಯ ಲೇಖಕರಿಗೆ ಲೇಖನಗಳನ್ನು ಸಿದ್ಧಪಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಇವುಗಳಲ್ಲಿ, ಕನ್ನಡ ಅಕ್ಷರಗಳನ್ನು ಟೈಪ್ ಮಾಡುವಾಗ ಉಂಟಾಗುವ ತೊಡಕುಗಳು, ಲೇಖನಗಳ ಜೊತೆಯಲ್ಲಿ ಛಾಯಾಚಿತ್ರಗಳನ್ನು ಜಾಲ-ಜಗುಲಿಗೆ ರವಾನಿಸುವ ವಿಧಾನಗಳು, ಹಕ್ಕುಸ್ವಾಮ್ಯ ಸಮಸ್ಯೆಗಳು, ಮತ್ತು ಕನ್ನಡ ಬಳಗ ಅಂತರಜಾಲಾ ತಾಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗೆ ಕೊಂಡಿಯ ಸಂಪರ್ಕ ಸೌಲಭ್ಯವನ್ನು ಒದಗಿಸುವ ರೀತಿಯನ್ನು ಉತ್ತಮಗೊಳಿಸುವ ವಿಧಾನಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಉತ್ತಮಗೊಳಿಸುವ ಬಗ್ಗೆ ಹಲವಾರು ಸಲಹೆಗಳನ್ನೂ ನೀಡಲಾಯಿತು.Read More »