ಮನೆಯ ಉಪ್ಪಿನಕಾಯಿ – ರಾಜಾರಾಮ ಕಾವಳೆಯವರ ಅನುಭವಗಳು

[ಉಪ್ಪಿನಕಾಯಿಯ ನೆಪದಲ್ಲಿ ರಾಜಾರಾಮ ಕಾವಳೆಯವರು ಅನಿವಾಸಿ ಕನ್ನಡಿಗರನ್ನು ಸದಾ ಸತಾಯಿಸುವ ಪ್ರಶ್ನೆಗಳಾದ ’’ನಮ್ಮ ಮನೆ ಯಾವುದು?ನಮ್ಮ ಊರು ಎಲ್ಲಿದೆ?” ಇದರ ಬಗ್ಗೆ ಸೀರಿಯಸ್ಸಾಗಿ ವಿಚಾರ ಲಹರಿ ಹರಿಸಿದ್ದಾರೆ.-ಸಂ]

ಲವು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಹಲವು ಸ್ನೇಹಿತರು ಬಂದಿದ್ದರು. ಮಾತುಕತೆ ಉಪಚಾರಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದೆವು. ನನ್ನಪತ್ನಿ ತಯಾರಿಸಿದ್ದ ರುಚಿಕರವಾದ ಊಟವನ್ನು ಸ್ವಾರಸ್ಯವಾಗಿ ಎಲ್ಲರೂ ಸವಿಯುತ್ತಿದ್ದಾಗ, ಉಪ್ಪಿನಕಾಯಿಯನ್ನು ಇಡುವುದನ್ನು ಮರೆತಿದ್ದನ್ನು ಕಂಡು ಪದ್ಮಳು ನನಗೆ ಹೇಳಿದಳು- ‘ರೀ, ಉಪ್ಪಿನಕಾಯಿಯನ್ನು ತಂದಿಡ್ರೀ’.

ಅದಕ್ಕೆ ಕಬ್ಬೋರ್ಡಿನಲ್ಲಿದ್ದ ಅನೇಕ ಉಪ್ಪಿನಕಾಯಿಗಳನ್ನು ನೋಡಿ ನಾನು ಅವಳನ್ನು ಕೇಳಿದೆ- ‘ಯಾವ ಉಪ್ಪಿನಕಾಯಿ ತರಲಿ?’ ಅದಕ್ಕೆ ಅವಳು, ‘ಅದೇ ಮನೇ ಉಪ್ಪಿನಕಾಯಿ ತನ್ನಿ’ ಎಂದಳು. ಅಲ್ಲಿದ್ದ ಅನೇಕ ಅಂಗಡಿಯಿಂದ ಕೊಂಡ ಉಪ್ಪಿನಕಾಯಿಗಳ ಜತೆಗಿದ್ದ, ನಮ್ಮ ಮನೆಯಲ್ಲೇ ಬೆಳೆದ ಸೇಬಿನಿಂದ, ನಾನೇ Picklesತಯಾರಿಸಿದ ಆ ಉಪ್ಪಿನಕಾಯಿಯ ಬಾಟಲನ್ನು ತಂದು ನಮ್ಮ ಅತಿಥಿಗಳ ಮುಂದಿಟ್ಟೆನು. ಅದಕ್ಕೆ ನನ್ನ ಸತಿ ‘ಏನ್ರಿ, ಎಲ್ಲಾಬಿಟ್ಟು ನೀವು ಮಾಡಿದ ಆ ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ ತಂದ್ರಲ್ಲ್ರೀ’ ಎಂದಳು. ಎಲ್ಲಾ ಉಪ್ಪಿನಕಾಯಿಗಳು ಅಂಗಡಿಯಿಂದ ತಂದದ್ದಾದರಿಂದ, ಅವಳಿಗೆ ಇನ್ನಾವುದೂ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇಲ್ಲವೆಂದು ಹೇಳಿದಾಗ ಆಕೆ- ‘ಅದೇರೀ ಬೆಂಗಳೂರಿನಿಂದ ನಮ್ಮಮ್ಮನ ಮನೆಯಿಂದ ತಂದ ಆ ದೊಡ್ಡ ಬಾಟಲು, ಪ್ಲಾಸ್ಟಿಕ್ಕವರಿನಿಂದ ಮುಚ್ಚಿರುವ ಬಾಟಲು ಫ್ರಿಜ್ಜಿನಲ್ಲಿ ಇದೆಯಲ್ಲಾ ಅದೇ ಮನೇ ಉಪ್ಪಿನ ಕಾಯಿ’ ಎಂದಳು.Read More »

ಸುದರ್ಶನ್ ಹರಟೆ ಕಟ್ಟೆ: ಅನಂತಮೂರ್ತಿ ಉಚ್ಚೆಯೂ ಕಲುಬುರ್ಗಿಯ ಕಾಕ ರಚ್ಚೆಯೂ

“ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷೀನೋ , ಇಲ್ಲಾ… ಓತಿಕ್ಯಾಥಕ್ಕೆ ಬೇಲಿ ಸಾಕ್ಷೀನೋ ? ಇವೆರೆಡರಲ್ಲಿ ಅನಂತಮೂರ್ತಿ ಮತ್ತು ಎಂ.ಎಂ. ಕಲುಬುರ್ಗಿ ಇಬ್ಬರ ಕಾಂಬಿನೇಷನ್ಗೆ ಚೆನ್ನಾಗಿ ಹೊಂದಿಕೆಯಾಗುವ ಗಾದೆ ಯಾವುದು?” ಎಂದು ವಿಜಯ ಕೇಳ್ದ. ಕಾಫಿ ಕುಡಿಯೋಣ ಬನ್ರೋ ಅಂತ ಕರೆದು, ಈಗ ನೋಡಿದ್ರೆ ತಲೆ ಕೆರಕೊಳ್ಳೋ ಪ್ರಶ್ನೆ ಕೇಳ್ತಾನಲ್ಲಾ ಅಂತ ಸೀನ, ಕಿಟ್ಟ, ಜಗ್ಗು, ಪುಟ್ಟ ಮತ್ತು ಸಂಜಯರಿಗೆ ಅನ್ನಿಸದೇ ಇರಲಿಲ್ಲ. ಇದೇನೋ ಮಸಲತ್ತು ಮಾಡ್ತಾ, ಯಾವ್ದೋ ಪ್ರಶ್ನೆ ಕೇಳಿ ಕಾಫಿ ದುಡ್ಡನ್ನು ಯಾರ್ದಾದ್ರೂ ತಲೆಗೆ ಕಟ್ಟೋ ಹುನ್ನಾರ ಮಾಡುತ್ತಿದ್ದಾನೆಂದು ಅವರಿಗೆ ಸಂಶಯವಾಯ್ತು. ಕೇಳೇ ಬಿಟ್ರು, “ಅದೆಲ್ಲಾ ಏನಿಲ್ಲ. ಇವತ್ತು ಕಾಫೀ ಖರ್ಚು ನನ್ನದೇ” ಅಂದ ವಿಜಯ.

CC- Wiki

ಉದ್ಧಾಮ ಸಾಹಿತಿ ಅನ್ನಿಸಿಕೊಂಡ ಯು.ಆರ್. ಅನಂತಮೂರ್ತಿ ಬಾಲ್ಯದಲ್ಲೋ, ತಾರುಣ್ಯದಲ್ಲೋ ದೇವರ ಇರುವನ್ನು ಅಲ್ಲಗಳೆಯಲು, ತನಗೆ ತಾನೇ ಸತ್ಯದ ಸಾಕ್ಷಾತ್ಕಾರಕ್ಕೆ ದೇವರ ಮೂರ್ತಿಯ ಮೇಲೆ ಉಚ್ಚೆ ಮಾಡಿದ್ದು ಹಾಗೂ ಸಂಶೋಧಕ, ಪ್ರಾಧ್ಯಾಪಕ ಅನ್ನಿಸಿಕೊಂಡ ಕಲುಬುರ್ಗಿ ಅದನ್ನು ಜಗಜ್ಜಾಹೀರು ಮಾಡಿದ್ದು, ಇದರಿಂದ ಹಿಂದೂ ಅಸ್ತಿಕವರ್ಗ ಕ್ರೋಧಗೊಂಡಿದ್ದು, ನಾಸ್ತಿಕ ವರ್ಗ ಪುಳಕಿತಗೊಂದಿದ್ದು, ಸಮಾಜದಲ್ಲಿ ಕೋಲಾಹಲ ಮೂಡಿದ್ದು, ಪತ್ರಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗಿ ಪರಸ್ಪರರ ಮೇಲೆ ಕೆಸರೆರೆಚಾಟ ನಡೆದಿದ್ದು ಅವರಿಗೆ ಗೊತ್ತಿಲ್ಲದ್ದೇನಾಗಿರಲಿಲ್ಲ. ಇದನ್ನು ಚರ್ಚೆಗೆ ಎಳೆಯಲು ವಿಜಯ ಸಂಚು ನಡೆಸಿದ್ದ.

ಚರ್ಚೆಗೆ ವೇದಿಕೆ ಸಿದ್ಧಮಾಡಲು ವಿಜಯ ವಿಷಯದ ಪರಿಚಯ ಮಾಡಿದ: ಈಗ ಏನಪ್ಪಾ ಅಂದ್ರೆ,,,,

Read More »