ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು 1. ಪಲ್ಸಾರ್ ಅನ್ವೇಷಕಿ, ಖಭೌತಶಾಸ್ತ್ರಜ್ಞೆ–ಜೋಸಲೀನ್ ಬೆಲ್ ಬರ್ನೆಲ್ (Jocelyn Bell Burnell) ಡಾ ಉಮಾ ವೆಂಕಟೇಶ್

ವಿಜ್ಞಾನಕ್ಕೆ ಸಂಬಂಧಿಸಿದ  ಲೇಖನಗಳನ್ನು ಬರೆಯುವದರಲ್ಲಿ ಅತ್ಯಂತ ಆಸಕ್ತಿ ಮತ್ತು ವಿಶೇಷ ಪರಿಣತಿ ಹೊಂದಿರುವ ಬರಹಗಾರರಾದ ಡಾ ಉಮಾ ವೆಂಕಟೇಶ್ ಈಗಾಗಲೇ ಈ ವೇದಿಕೆಯ ಓದುಗರಿಗೆ ಚಿರ ಪರಿಚಿತರು. ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರನ್ನು ಕುರಿತಾದ  ಈ ಹೊಸ ಸರಣಿಯಲ್ಲಿ ಅವರ ಮೊದಲ ಲೇಖನ  ಇದು.

 ಹೆಂಗಸರು ಕೇವಲ ಮದುವೆಯಾಗಿ, ಮಕ್ಕಳನ್ನು ಹೆತ್ತು……..?

ವೃತ್ತಿಪರ ರಂಗವನ್ನು ಪ್ರವೇಶಿಸಿ ಅಲ್ಲಿ ಯಶಸ್ಸನ್ನು ಗಳಿಸುವುದು ಮಹಿಳೆಯರಿಗೆ ಸದಾಕಾಲ ಒಂದು ಸವಾಲಿನ ಪ್ರಶ್ನೆಯಾಗೇ ಉಳಿದಿದೆ. ಇದಕ್ಕೆ ಕಾರಣ ಮಹಿಳೆ ತನ್ನ ಬುದ್ಧಿಶಕ್ತಿಯಲ್ಲಾಗಲಿ, ಅಥವಾ ಕಾರ್ಯನಿರ್ವಹಣೆಯ ಸಾಮರ್ಥ್ಯದಲ್ಲಾಗಲಿ ಗಂಡಿಗಿಂತ ಕಡಿಮೆ ಎನ್ನುವ ಕಾರಣದಿಂದಲ್ಲ. ಕೇವಲ ಅವಳು ಪುರುಷಳಲ್ಲ ಎನ್ನುವುದೊಂದೇ ಅದಕ್ಕೆ ಕಾರಣ. ನಮ್ಮ ಸಮಾಜವೆಷ್ಟೇ ಆಧುನಿಕಗೊಂಡು ಮುನ್ನಡೆದಿದೆ ಎಂದುಕೊಂಡರೂ, ಮಹಿಳೆಯರ ಬಗ್ಗೆ ಇರುವ ಕೆಲವು ಕೀಳು ಭಾವನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಆಳವಾಗಿ ಬೇರೂರಿಯೇ ಇವೆ.  ಇಷ್ಟಾದರೂ, ಈ ಪುರುಷ ಪ್ರಧಾನ ಸಮಾಜದ ವಿವಿಧ ವೃತ್ತಿಪರ ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು, ಅಂತಹ ಸಮಯವನ್ನು ಹಿಂದಕ್ಕೆ ನೂಕಿ, ಮುನ್ನಡೆದ ಮಹಿಳೆಯರು ಅನೇಕರಿದ್ದಾರೆ. ಅಂತಹ ವನಿತೆಯರಲ್ಲಿ ಒಬ್ಬಳು ಜೋಸಿಲೀನ್ ಬೆಲ್ ಬರ್ನೆಲ್. ಅತ್ಯಂತ ಪುರುಷ-ಪ್ರಧಾನ ರಂಗವೆನಿಸಿದ ವಿಜ್ಞಾನದಲ್ಲಿ, ಅದರಲ್ಲೂ ಭೌತಶಾಸ್ತ್ರದ ಉಪಕ್ಷೇತ್ರವಾದ ರೇಡಿಯೋ ಖಗೋಳಶಾಸ್ತ್ರದಂತಹ ಅಪರೂಪದ ವಿಷಯದಲ್ಲಿ ಸಾಧನೆಗೈದ ಬ್ರಿಟಿಷ್ ಖಭೌತಶಾಸ್ತ್ರಜ್ಞೆ ಜೋಸಿಲೀನ್ ಬೆಲ್, ಮೊಟ್ಟಮೊದಲ ರೇಡಿಯೋ ಪಲ್ಸಾರ್ ಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಿಳೆಯಾಗಿದ್ದಾಳೆ.Read More »

ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)– ಉಮಾ ವೆಂಕಟೇಶ್

yakka

ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)

 ಸೂರ್ಯನ ಪ್ರಖರವಾದ ಬಿಸಿನ ಹಿನ್ನೆಲೆಯಲ್ಲಿ ಜೋಷುವಾ ಮರಗಳ ತೋಪು
ಸೂರ್ಯನ ಪ್ರಖರವಾದ ಬಿಸಿಲಿನ ಹಿನ್ನೆಲೆಯಲ್ಲಿ ಜೋಷುವಾ ಮರಗಳ ತೋಪು

ನಾಲ್ಕು ಸಮಯದ ವಲಯಗಳು, ಹತ್ತಾರು ದೇಶಗಳು ಮತ್ತು ಸಂಸ್ಕೃತಿಗಳ ಜನರನ್ನು ತನ್ನಲ್ಲಿ ಕೂಡಿಸಿಕೊಂಡಿರುವ, ವಿಶಾಲವಾದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಭೌಗೋಳಿಕ ವೈವಿಧ್ಯತೆಗೇನೂ ಕೊರತೆಯಿಲ್ಲ. ಪರ್ವತಗಳು, ಮರುಭೂಮಿಗಳು, ಪ್ರಸ್ಥಭೂಮಿ, ಮಹಾ ಸರೋವರಗಳು, ಅದ್ಭುತವಾದ ಕಮ್ಮರಿಗಳಂತಹ  ವಿವಿಧ ರೀತಿಯ ಭೌಗೋಳಿಕ ಪ್ರದೇಶಗಳಿರುವ ಇಲ್ಲಿ, ನೋಡುಗರಿಗೆ ಸಂದರ್ಶಿಸಲು ಅನೇಕ ಸ್ಥಳಗಳಿವೆ. ಕ್ಯಾಲಿಫ಼ೋರ್ನಿಯಾದ ದಕ್ಷಿಣದಲ್ಲಿರುವ, ಲಾಸ್ ಏಂಜಲೀಸ್ ಮಹಾನಗರಕ್ಕೆ ಪೂರ್ವದಲ್ಲಿ ಮೊಹಾವೆ ಎಂಬ ಮರುಭೂಮಿಯಿದೆ. ಇದರ ಬಗ್ಗೆ ಅನೇಕರಿಂದ ಕೇಳಿದ್ದೆ. ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು, ನೀವು ಜೋಶುವಾ ಮರಗಳ ರಾಷ್ಟ್ರೀಯ ಉದ್ಯಾನ ನೋಡಿದ್ದೀರಾ? ಇಲ್ಲವಾದರೆ ಖಂಡಿತಾ ನೋಡಿ ಬನ್ನಿ ಎಂದರು. ಸಧ್ಯದಲ್ಲಿ ಕಳೆದ ಆರು ತಿಂಗಳಿಂದ ಲಾಸ್ ಏಂಜಲೀಸಿನಲ್ಲಿ ವಾಸ್ತವ್ಯ ಹೂಡಿರುವ ನಮಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನು ಸಿಗದು ಎಂದು, ನಾವು ಈ ಉದ್ಯಾನಕ್ಕೆ ಭೇಟಿ ನೀಡುವ ನಿರ್ಧಾರ ಮಾಡಿದೆವು. ಕಳೆದ ವಾರ ಇದನ್ನು ಕಾರ್ಯರೂಪಕ್ಕಿಳಿಸಿ, ಈ ಅಪರೂಪದ ಸ್ಥಳಕ್ಕೆ ಹೋಗಿದ್ದೆವು. ಜೋಶುವಾ ಮರ ಸಸ್ಯಶಾಸ್ತ್ರದಲ್ಲಿ “ಯಕ್ಕಾ ಮರ”(Yucca brevifolia) ಅಥವಾ ಭೂತಾಳೆ ಎಂಬ ಪ್ರಭೇಧಕ್ಕೆ ಸೇರಿದ ಸಸ್ಯವಾಗಿದೆ. ಸಾಮಾನ್ಯವಾಗಿ ನೀರಿಲ್ಲದ ಒಣ ಹವೆಯ ಪ್ರದೇಶಗಳಲ್ಲಿ ಬೆಳೆಯುವ ಈ ಗಿಡಗಳು, ತಮ್ಮ ಮಂದವಾದ ಎಲೆಗಳು, ಮುಳ್ಳುಗಳ ಮೂಲಕ ನೀರನ್ನು ಸಂಗ್ರಹಿಸಿ, ಒಣ ಹವೆಯಲ್ಲೂ ತಮ್ಮ ಶಾರೀರಕ ಕ್ರಿಯೆಗಳನ್ನು ಚೊಕ್ಕವಾಗಿ ನಡೆಸಿಕೊಂಡು ಹೋಗುತ್ತವೆ.Read More »