i- ಪದಗಳು – ಸುದರ್ಶನ ಗುರುರಾಜರಾವ್ ಬರೆದ ಕವಿತೆ

ಐ-ಫೋನ್, ಐ ಪ್ಯಾಡ್ ಇವುಗಳು ನಮ್ಮ ಎಡ ಬಿಡದ ಸಂಗಾತಿಗಳಾಗಿವೆ. ಇವುಗಳ ಜೊತೆಗೆ ಕಳೆಯುವ ಸಮಯ ನಮ್ಮ ದಿನದ ಬಹು ಭಾಗವನ್ನು ಆಕ್ರಮಿಸಿಕೊಂಡು ಮನುಷ್ಯರ ನಡುವಿನ ಸಂವಹನಕ್ಕೆ ಅಡ್ಡ ಗೋಡೆಗಳಾಗಿವೆ. ಮಕ್ಕಳೂ ಇದಕ್ಕೆ ಹೊರತಲ್ಲ. ಭಾವನೆಗಳೇ ಇಲ್ಲದೆ ಬೆಳೆಸಿದರೆ ನಾಳೆ ನಮ್ಮ ಜೊತೆ ಹಂಚಿಕೊಳ್ಳಲು ಅವ್ಗಳಿಗೆ ಏನೂ ಉಳಿದಿರಲಾರದು ಎನ್ನುವುದು ನನ್ನ ಅನಿಸಿಕೆ. ಈ ಹಿನ್ನೆಲೆಯಿಂದ ಬರೆದ ಕವನ ಜಿ.ಪಿ.ರಾಜರತ್ನಂ ರ ರತ್ನನ ಪದಗಳು (hendkudka ratna) ಜಾಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅವರ ಕ್ಷಮೆ ಇರಲಿ. ಹಳೆ ಬೇರಿಗೆ ಹೊಸ ಚಿಗುರನ್ನು ಬಲವಂತವಾಗಿಯಾದರೂ ಅಂಟಿಸುವ ಹುನ್ನಾರ ನನ್ನದು!!

 

 

 

 

 

 

 

i- ಪ್ಯಾದೆಗಳು (padegalu)

ಐ-ಪಾಡ್,ಐ-ಫೋನ್,ಐ-ಪ್ಯಾಡ್ ಅಂದ್ರೆ
ಎಲ್ಲಾರ್ಗೂನು ಪ್ರಾಣ
ಐ-ಪ್ಯಾಡ್ ಕೈಯಲ್ಲಿತ್ತೂಂತಂದ್ರೆ
ಮೈಮೇಲಿರಲ್ಲ ಜ್ಞಾನ                                                                                                                           

ಬೆಳ್ಗಾಗೆದ್ದು ಐ-ಪ್ಯಾಡ್ ಹಿಡ್ಕಂಡ್
ಟಾಯ್ಲೆಟ್ಗೆ ಹೋದಾಂತನ್ನು                  
ಬ್ರಹ್ಮ ಶೌಚ ಮಾಡ್ಕೋಡ್ ಕುಂತು
ಮರ್ತು ಬೇರೇವ್ರನ್ನು
Read More »

ಅಂತರಾಗ್ನಿ – ಸುದರ್ಶನ್ ಬರೆದ ಕವನ

ಅಂತರಾಗ್ನಿ ಸಾಧನೆಯ ಅಂತರಾಗ್ನಿಯದು ಬೇಕೆಂದು ಬದುಕಿಗೆ ಸಾಧನೆಯೆ ಇಲ್ಲದಿಹುದೆಂಥ ಬದುಕು ಸುತ್ತಲಿನ ಪರಿಸರದಿ ಸ್ಫೂರ್ತಿಯನು ಪಡೆಯುತಲಿ ನೀ ಶ್ರಮಿಸು ಪರಿಹರಿಸೆ ಅದರ ಹುಳುಕು                                                                               […]