ಬಿ ಎಂ ಶ್ರೀ ಅವರ ”ಪದುಮ” – ಶ್ರೀವತ್ಸ ದೇಸಾಯಿಯವರಿಂದ ಒಂದು ಅನ್ವೇಷಣೆ

1024px-Sacred_lotus_Nelumbo_nucifera cc
CC – Wiki

ಬಿ ಎಂ ಶ್ರೀಯವರು ಬರೆದ ‘ಪದುಮ’

ಅರಸಿನ ಕುಲವೋ, ಏನಿದ್ದೇನು!

ಸುರವಧುರೂಪೋ, ಏನಿದ್ದೇನು!

ಗುಣವೋ, ಸೊಬಗೋ, ಏನಿದ್ದೇನು!

ಪದುಮಾ, ಇದ್ದವು ನಿನಗೆಲ್ಲ.

ಪದುಮಾ, ಎಚ್ಚತ್ತಳುವುದೆ ಅಲ್ಲದೆ

ಕಣ್ಣಿವು ನಿನ್ನನ್ನು ಕಾಣುವುವೆ?

ನೆನಸಿ ಕೊಳ್ಳುವೆ, ಬಿಸುಸುಯ್ಯುವೆ, ಇರುಳನು

ನಿನಗೆಯೆ ಮೀಸಲು ತೆಗೆದಿಡುವೆ.

                ಇದು ’ಕನ್ನಡದ ಕಣ್ವ’ ಬಿ ಎಂ ಶ್ರೀಕಂಠಯ್ಯನವರ ಎಂಟೇ ಸಾಲಿನ ಪದ್ಯ ’ಪದುಮ’. ಇದೊಂದು ಚರಮ ಗೀತ. ಆದರೂ ಅದರ ಸೌಂಧರ್ಯವೇನೂ ಕಡಿಮೆಯಿಲ್ಲ.ಅದರ ರಚನೆ, ಛಂದಸ್ಸು, ಲಯಗಳು ಕವಿಯ ಉದ್ವಿಗ್ನತೆಯನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. ’ಇಂಗ್ಲಿಷ್ ಗೀತಗಳು’1926ರಲ್ಲಿ ಮೊದಲು ಪ್ರಕಟವಾದರೂ, ಈ ಕವನ ಸಂಕಲನದ 1952ರ ಆವೃತ್ತಿಯಲ್ಲಿ ಪ್ರಸ್ತಾವನೆಯಲ್ಲಿ ತೀ ನಂ ಶ್ರೀಕಂಠಯ್ಯನವರು ಹೀಗೆ ಹೇಳುತ್ತಾರೆ: “ಹೊಸ ಕವಿತೆಗೆ ಒಳ್ಳೆಯ ಮೇಲ್ಪಂಕ್ತಿಯನ್ನು ಇಂಗ್ಲಿಷ್ ಗೀತಗಳಲ್ಲಿ ಅವರು ಹಾಕಿ ಕೊಟ್ಟರು”. ಈ ಕವಿತೆ ಅದಕ್ಕೆ ಒಂದು ಉದಾಹರಣೆ. ಅನುವಾದವೇ ಆದರೂ ಸ್ವಂತ ರಚನೆಯೆನ್ನುವಂತೆ ನಿಲ್ಲುವಷ್ಟು ಸತ್ವ ಇದರಲ್ಲಿದೆ.

Read More »

ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

ನಾನು ಇತ್ತೀಚೆಗೆ ಹರಪ್ಪ ನಾಗರೀಕತೆಯ ಪುಸ್ತಕಗಳ ಸರಣಿಯನ್ನು ಬರೆಯಲು ಪ್ರಾರಂಭ ಮಾಡಿದ್ದೇನೆ. ಈ ಸರಣಿಯ ಮೊದಲ ಪುಸ್ತಕ ”ಹರಪ್ಪ; ಸೋಮನ ಆಕರ್ಷಣೆ”  (The Lure of Soma)  ಕಳೆದ ವರ್ಷ (2013) ಪ್ರಕಟವಾಗಿದೆ

.Final Cover oct 3CiviltàValleIndoMappa

Map: CC Wiki

ನಾನೇಕೆ ಬರೆದೆ?

ಶಾಲೆಯಲ್ಲಿ ಹರಪ್ಪ ಮತ್ತು ಮೊಹೆಂಜೋದಾರೋ ಅವಶೇಷಗಳ ಬಗ್ಗೆ ಕಲಿತ ನಂತರದ ದಿನಗಳಿಂದಲೂ, ನಾನು ಭಾರತದ ಪ್ರಾಚೀನ ಇತಿಹಾಸದಿಂದ ಬಹಳಷ್ಟು  ‌ಆಕರ್ಷಿಸಲ್ಪಟ್ಟಿದ್ದೇನೆ.  ಆ ಸಮಯದಲ್ಲಿ, ಈ ವಿಷಯದ ಬಗ್ಗೆ ಲಭ್ಯವಿದ್ದ ಸಾಹಿತ್ಯ ಬಹಳ ವಿರಳವಾಗಿದ್ದು, ಅದನ್ನು ದೊರಕಿಸಿಕೊಳ್ಳುವುದು ಒಬ್ಬ ಶಾಲಾ ವಿದ್ಯಾರ್ಥಿಯ ಪಾಲಿಗಂತೂ ಅತ್ಯಂತ ಕಷ್ಟಕರವಾದ ಕಾರ್ಯವೆನಿಸಿತ್ತು.  ಅಲ್ಲಿಂದೀಚೆಗೆ, ಸಿಂಧೂ ಕಣಿವೆ ನಾಗರೀಕತೆಯ ಉತ್ಖನನದ ಕೆಲಸದ ಗತಿ ಚುರುಕಾಗಿ ನಡೆದಿದೆ, ಹಾಗೂ ಇದರಿಂದ, ಭಾರತೀಯ  ಪೂರ್ವ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ಅಗಾಧವಾಗಿ ಬದಲಾಯಿಸಿದೆ. ಶಾಲೆಯಲ್ಲಿ ನಮ್ಮ ಶಿಕ್ಷಕರು, ಈ ಮಹಾನ್ ಸಿಂಧೂ ಕಣಿವೆಯ ನಾಗರೀಕತೆಯ ಬಗ್ಗೆ ನಮಗೆ ಪಾಠ ಮಾಡಿದ್ದು ಈಗಲೂ ನೆನಪಿದೆ. ಅದೇನೆಂದರೆ, ಕ್ರಿ.ಪೂ 1500 ರಲ್ಲಿ,  ರಶಿಯಾದ ಸ್ಟೆಪ್ಪೀಸ್ ಹುಲ್ಲುಗಾಡು ಪ್ರದೇಶದಿಂದ ಬಂದ ಲೂಟಿಕೋರರಾದ ಆರ್ಯರು, ಈ ನಾಗರೀಕತೆಯನ್ನು ನಾಶ ಮಾಡಿದರು ಎಂದು.  ದುರದೃಷ್ಟವಶಾತ್, ಅನೇಕ ವಿದ್ವಾಂಸರು ಈಗಲೂ ವಿಶ್ವದಾದ್ಯಂತ ಇದೇ ಕಥೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಆದರೂ ಸಹಾ, ಅವರಿಗೆ ಅಗಾಧವಾದ ವೇದ ಸಂಗ್ರಹಗಳ ಸೃಷ್ಟಿಯ ಕರ್ತೃತ್ವವನ್ನು ನೀಡಲಾಗಿದೆ.  ವೇದಗಳನ್ನು,  ಪ್ರಾಚೀನ ಜಗತ್ತಿನ ಅತ್ಯಂತ ಬೃಹತ್ ಮತ್ತು ಗಹನವಾದ ಜ್ಞಾನವುಳ್ಳ  ಗ್ರಂಥಗಳೆಂದು ಒಪ್ಪಿಕೊಂಡಿದ್ದಾರೆ.  ಗ್ರಂಥಗಳಲ್ಲಿ ಅಡಕವಾಗಿರುವ ಜ್ಞಾನ, ಎಷ್ಟೊಂದು ಪ್ರಗತಿಪರವಾಗಿದೆ ಎಂದರೆ, ಇವು, ಇಂತಹ ಪ್ರಾಚೀನ ಕಾಲದಲ್ಲಿ, ಉತ್ಪತ್ತಿಯಾಯಿತೆಂಬುದನ್ನು, ಗ್ರಹಿಸುವುದು ಕಠಿಣವಾಗಿದೆ.Read More »