ನನ್ನೊಳಗಿನ ನನ್ನ ಕಥೆ,ವ್ಯಥೆ!-ಡಾ. ಲಕ್ಷ್ಮೀ ಪ್ರಭು

ಹೊಸ ಪರಿಚಯ-ಡಾ. ಲಕ್ಷ್ಮೀ ಪ್ರಭು

                  laxmi modified image

(ಕಥೆಯನ್ನು ಬರೆಯಲು ಎಲ್ಲರೂ ಕಥೆಗಾರರಾಗಬೇಕೆಂದಿಲ್ಲ!! ನಮ್ಮೆಲ್ಲರೊಳಗೂ ಒಂದು ಕಥೆ ಇದ್ದೇ ಇರುತ್ತದೆ. ಕಾಲಾನುಕ್ರಮದಲ್ಲಿ ನಮ್ಮ ಹಳೆಯ ದಿನಗಳು, ಬದುಕಿ ಬಂದ ದಾರಿ ಮತ್ತು ಬದುಕಿನ ಬದಲಾವಣೆಗಳನ್ನು ಒತ್ತಟ್ಟಿಗಿಟ್ಟರೆ ಅದೇ ಒಂದು ಕಥೆಯಾಗಬಲ್ಲದು!!!

ಸ್ಕಾಟಲ್ಯಾಂಡಿನ ಸ್ಟೆರ್ಲಿಂಗ್ ನಲ್ಲಿ ಹಲವು ದಶಕಗಳಿಂದ ವಾಸವಿರುವ ಡಾ.ಲಕ್ಶ್ಮೀ ಪ್ರಭು ಬದುಕನ್ನು ಹಸನಾಗಿ ಕಂಡವರು.ತುಂಬಿದ ಮನೆಯಲ್ಲಿ ಹುಟ್ಟಿ,ಸಾಂಪ್ರದಾಯಿಕ ಬದುಕನ್ನು ಬದುಕಿ, ಆ ಕಾಲದಲ್ಲಿ ಹೆಂಗಸರಲ್ಲಿ ವಿರಳ  ಎನ್ನಬಹುದಾದ ಉನ್ನತ ವ್ಯಾಸಂಗ ಮಾಡಿ ಬದಲಾವಣೆಯನ್ನರಸಿ ಇಂಗ್ಲೆಂಡಿಗೆ ಬಂದು, ಎದುರಾದ ಬದುಕನ್ನು ಆಲಂಗಿಸಿ ಬದುಕಿದವರು. ಹಲವು ಭಾಷೆಗಳಲ್ಲಿ ಮಾತಾಡಬಲ್ಲ, ಸುಂದರವಾಗಿ ಹಾಡಬಲ್ಲ, ಹುಟ್ಟಿನಿಂದಲೇ ನಾಯಕತ್ವದ ಗುಣಗಳನ್ನು ಮೈವೆತ್ತಿ ಬೆಳೆದ ಇವರು ಸ್ಟೆರ್ಲಿಂಗಿನ ಸುತ್ತ ಮುತ್ತಲಿನ ಭಾರತೀಯರನ್ನೆಲ್ಲ ಒಂದುಗೂಡಿಸಿ ಸಂಘ ಕಟ್ಟಿ ಸುಖ-ದುಃಖವನ್ನು ಕಂಡವರು. ಅಪಾರ  ಆತ್ಮ ವಿಶ್ವಾಸವನ್ನು ಬಿಂಬಿಸುತ್ತ,  ಪ್ರತಿದಿನ ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು ಕೆಲಸಕ್ಕೆ ತೆರಳಿ, ಇಲ್ಲಿನ ಆಂಗ್ಲರ ಜೊತೆಗೂಡಿ ಒಡನಾಡಿದವರು. ಭಾರತೀಯ ಸಮುದಾಯ ಸೇವೆಗಾಗಿ ಇತರರೊಡನೆ ಕೂಡಿ ಕೆಲಸ ಮಾಡಿ ಮುಂದಾಳತ್ವ ವಹಿಸಿದ್ದಕ್ಕಾಗಿ ಲಾರ್ಡ್ ಪ್ರೊವೋಸ್ಟ್ ಪ್ರಶಸ್ತಿಯನ್ನು ಪಡೆದವರು!!

ಅವರ ಈ ಬರಹದಲ್ಲಿ ಹಳೆ-ಕಾಲದ ಮನೆಯ ಚಿತ್ರಣವಿದೆ. ಭಾರತೀಯ ಸಮಾಜ ಬದಲಾದ ಘಳಿಗೆಯ ಸಂಕಷ್ಟವಿದೆ. ಬದುಕು ತರುವ ಸಂಘರ್ಷಗಳನ್ನು  ಬಿಚ್ಚು ಮನಸ್ಸಿನಲ್ಲಿ ಬರೆದಿರುವ ಅವರ ವ್ಯಕ್ತಿತ್ವವನ್ನು ಈ ದಿಟ್ಟ ಜೀವನ-ಬರಹದಲ್ಲಿ ಕಾಣಬಹುದು!!-ಸಂ)

Read More »

ರಾಜಕೀಯ — ಸಿ. ಹೆಚ್. ಸುಶೀಲೇಂದ್ರ ರಾವ್ ರವರ ಕವನ

 

ಹೊಸ ಪರಿಚಯ

sushilendra rao
ಶ್ರೀ ಸಿ. ಹೆಚ್. ಸುಶೀಲೇಂದ್ರ ರಾವ್

(ಕನ್ನಡ ಬಳಗದ ವಲಯದಲ್ಲಿ ಬಹು ಪರಿಚಿತ ಹೆಸರಾದರೂ, ಶ್ರೀಯುತ ಸಿ.ಹೆಚ್. ಸುಶೀಲೇಂದ್ರ ರಾವ್, ಅನಿವಾಸಿಗೆ ಬರೆಯುತ್ತಿರುವುದು ಇದೇ ಮೊದಲು!

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿವರಗೆ ವಿದ್ಯಾಭ್ಯಾಸ.  ಪದವಿ ನಂತರ  ನಾಲ್ಕು ವರ್ಷ ಕರ್ನಾಟಕ PWD ಯಲ್ಲಿ ಕೆಲಸ.ನಂತರ ಇಂಗ್ಲೆಂಡ್ ನಲ್ಲಿ  ಮ್ಯಾಕಲ್ಸ್ ಫೀಲ್ಡ್ ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ನಿವೃತ್ತಿಯಾಗುವವರೆಗೂ ಕೆಲಸ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಭಿರುಚಿ . ಕನ್ನಡ ಸ್ವದೇಶೀ ಸ್ಪರ್ಶ ಭಾವನೆ. ಆಗಾಗ ಮನಸ್ಸಿಗೆ ತೋಚಿದ ವಿಷಯಗಳನ್ನು ಸಂಕ್ಷಿಪ್ತವಾಗಿ ಬರೆಯಯುವ ಅಭ್ಯಾಸ. ನಿವೃತ್ತಿಯಾದ ನಂತರ ಕಾಲ ಕಳೆಯಲು ಶಾಸ್ತ್ರೀಯ ಸಂಗೀತ ಅಭ್ಯಯನ. ಕನ್ನಡ ಬಳಗದ ನಾಟಿಂಗ್ ಹ್ಯಾಮ್ ನಲ್ಲಿ  ನಡೆದ ಮೊಟ್ಟ ಮೊದಲ ಪ್ರಾರಂಭದ ಮಿಲನದಲ್ಲಿ ಭಾಗವಹಿಸಿ  ಕಾರ್ಯಕಾರಿ ಸಮಿತಿಯ ಸದಸ್ಯನಾಗಿಸೇವೆ ಸಲ್ಲಿಸಿ ಅಧ್ಯಕ್ಷಿಣಿ ಸ್ನೇಹ ಕುಲಕರ್ಣಿ  ಹಾಗೂ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರೊಡನೆ ಬಳಗದ ಸಂವಿಧಾನ ರಚನೆ ಮತ್ತು ಚಾರಿಟಿ ಕಮಿಷನ್  ರಿಜಿಸ್ಟ್ರೇಷನ್ ಕೆಲಸಗಳಲ್ಲಿ ಪಾತ್ರ. ಎರಡು ವರ್ಷಗಳ ನಂತರ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ಆಯ್ಕೆ ಯಾಗಿ ನಂತರದ  ಎರಡು  ವರ್ಷಗಳಕ ಕಾಲ ಅಳಿಲು ಸೇವೆ.

ಸುಶೀಲೇಂದ್ರ ಅವರು ಇತ್ತೀಚೆಗೆ ಭಾರತಕ್ಕೆ ಹೋದಾಗ ಅಲ್ಲಿನ ರಾಜಕೀಯದ ಬಗ್ಗೆ ಮೂಡಿದ ಸೋಜಿಗವನ್ನು ಕವನ ರೂಪದಲ್ಲಿ ಹೀಗೆ ಬರೆದಿದ್ದಾರೆ. ವಿಶ್ವದ ಎಲ್ಲ ರಾಜಕೀಯ ವಲಯಕ್ಕೂ ಅನ್ವಯವಾಗುವ ಕವನ!-ಸಂ)

 

ರಾಜಕೀಯ

ರಾಜಕೀಯ ಎಂಬುದು ಒಂದು ದೊಡ್ಡ ಹುಚ್ಚರ ಸಂತೆ
ಅಲ್ಲಿ ಮಾರುವುದೆಲ್ಲಾ ಬರೀ ಸುಳ್ಳಿನ ಕಂತೆ
ಅಲ್ಲಿ ವ್ಯವಹಾರ ಮಾಡುವವರೆಲ್ಲ ಮೂರ್ಖರಂತೆ
ಅದಕ್ಕೆ ಜನಸಾಮಾನ್ಯರು ಮಾಡ್ಬೇಕಿಲ್ಲ ಚಿಂತೆ

ಕೆಲವರು ಹೇಳುವುದು ಅದು ಮುಳ್ಳಿನಬೇಲಿಯಿಂತೆ
ಅರಿಯದೆ ಆಲ್ಲಿ ನುಗ್ಗಿದರೆ ಚುಚ್ಚುವುದು ಖಚಿತವಂತೆ
ಅರಿತವರು ಹಾವು ಹಲ್ಲಿ ಓತಿಕ್ಯಾತಗಳಂತೆ ನುಸುಳಿಸುವರಂತೆ
ನಿಜಕ್ಕೂ ಅದು ಸುಳ್ಳರ ಮೋಸಗಾರರ ಬೊಂತೆ

politics image

ಅಲ್ಲಿ ಸಂತೆಹೊತ್ತಿಗೆ ಮೂರುಮೊಳ ನೇಯುವುದು ನಿತ್ಯ ನಿಯಮವಂತೆ
ಅವರವರೇ ಸೇರಿದಾಗ ಬಂಡತನ ಬಂಡವಾಳತನ ಕೊಚ್ಚಿಕೊಂಡು ಮೆರೆಯುವರಂತೆ
ಅದೆಲ್ಲಾ ಬಯಲಾದಾಗ ಕುಡಿದು ಕೊರಗದವರಂತೆ ನಟನೆ ಮಾಡುವರಂತೆ
ಅವರ ಹೆಂಡಿರು ಮಕ್ಕಳಿಗೆಲ್ಲಾ ಇದೊಂದು ದೊಡ್ಡ ಚಿಂತೆ

ಅವರ ಮುಖ್ಯ ಅಸ್ತಿ ಮಾತಿನ ಚಕಮಕಿಯಂತೆ
ಸಗಣಿ ವರ್ಣಿಸಿ ಅದು ತಿನ್ನಲೇಬೇಕೆಂಬ ನಂಬಿಕೆ ಹುಟ್ಟಿಸುವರಂತೆ
ಒಮ್ಮೊಮ್ಮೆ ಬೇರೆ ಪಂಗಡಗಳೊಡನೆ ಸಂತೆಯಲಿ ವಿವಾಹವಂತೆ
ಹುಚ್ಚರ ಮದುವೆಯಲಿ ಉಂಡವರೇ ಜಾಣರೆಂಬುದು
ನಮ್ಮ ಕನ್ನಡದ ಗಾದೆ ಅನುಭವದ ಮಾತಂತೆ

                                               ಸಿ. ಹೆಚ್. ಸುಶೀಲೇಂದ್ರ ರಾವ್

                                             (Image courtesy-Google)