ಡಾ ಜಿ ಎಸ್ ಶಿವಪ್ರಸಾದ್
ನನ್ನ ಒಂದು ಲಘು ಕವನ ನಿಮ್ಮ ಗಮನಕ್ಕೆ
-ಸಂ
ಹೇಳೇ ರಾಧಾ ಹೇಗಿದ್ದೀಯ
ಫೋನಿನಲ್ಲಿ ಮಾತಾಡಿ ದಿನಗಳಾದವಲ್ಲ
ಮಾತನಾಡುವುದೇನಿದೆ ಅಮ್ಮ
ಮೆಸೇಜ್ ಮಾಡುತ್ತಿದ್ದೆನಲ್ಲಾ
ಸೀರೆ ಬ್ಲೌಸ್ ತರಲೇನೆ ರಾಧಾ
ಹಬ್ಬಕೆ ನಿನಗೇನೂ ಕೊಟ್ಟಿಲ್ಲ
ಸೀರೆಯ ನಾನು ಉಡುವುದೇ ಇಲ್ಲ
ಜೀನ್ಸ್ ಪ್ಯಾಂಟ್, ಮಿನಿಸ್ಕರ್ಟ್ ಇದೆಯಮ್ಮ
ಚಪಾತಿಯಮಾಡಿ ಕಳುಹಿಸಲೇ ರಾಧಾ
ಸೊರಗಿಹೋಗಿರುವೆಯಲ್ಲ
ಪಿಜ, ಪಾಸ್ಟಾ ತರಿಸಿಕೊಳ್ಳುವೆ ಅಮ್ಮ
ಸ್ವಿಗ್ಗಿ, ಡೆಲಿವರೂ ಇವೆಯಲ್ಲ
ಸಿನಿಮಾಗೆ ಹೋಗೋಣ ರಾಧಾ
ನಾಳೆ ಮನೆಗೇ ನೆಟ್ಟಗೆ ಬಾರಮ್ಮ
ಸಿನಿಮಾ ನೋಡಲು ಟೈಮಿಲ್ಲಮ್ಮ
ನೆಟ್ ಫ್ಲಿಕ್ಸ್ ಪ್ರೈಮ್ ಇದೆಯಮ್ಮ
ಒಂಟಿ ಬದುಕೇಕೆ ರಾಧಾ
ಬೇಗ ಮದುವೆಯಾಗಮ್ಮಾ
ಜೊತೆಯಲಿ ಬಾಯ್ ಫ್ರೆಂಡ್ ಇದ್ದಾನಲ್ಲಾ
ಮುದುವೆಗಿದುವೇ ಯಾಕಮ್ಮ
ಇಲ್ಲಿ ಕವಿ ಚಿಕ್ಕ ಕವನವಾದರೇನಂತೆ. ನಮ್ಮ ಇಂದಿನ ಬದುಕಿಗೆ ಕನ್ನಡಿ ಹಿಡಿದು ವ್ಯಂಗೋಕ್ತಿಯಲ್ಲಿ ಮುಂದಿನ ಪೀಳಿಗೆಯವರಿಗೂ ಒಂದು ಸೂಚನೆ ಸಹ ಕೊಡುತ್ತಿದ್ದಾರೆ. ಸದ್ಯ, ರಾಧಾ ಹಳೆಯ ಕಾಲದ ಹೆಸರು ಅಂತ ಇನ್ನೂ ಹೆಸರು ಬದಲಾಯಿಸಿಕೊಂಡಿಲ್ಲ! ಯಾಕೆ ತಂದೆ ತಾಯಿಯರನ್ನು ನೋಡಲಿಕ್ಕೆ ಬರೋದಿಲ್ಲ ಅಂದಾಗ, ಪರವಾಗಿಲ್ಲ, ಪಕ್ಕದ ಫ್ಲಾಟಿನ ಆಂಟಿಯನ್ನೇ ಮಾಮ್ಮಿಯಾಗೀ ’ದತ್ತಕ್ಕೆ’ ತೊಗೊಂಡಿದ್ದೇನೆ, ಅನ್ನಲಿಲ್ಲ! ಕವಿತೆಯ ಭಾಷೆ ಮತ್ತು ಸಂಭಾಷಣೆಯಲ್ಲಿ ಒಂದು ಆತ್ಮೀಯತೆಯಿದೆ ಅನ್ನುವದು ಗಮನಿಸತಕ್ಕದ್ದು. ಅದಕ್ಕೇ ರಾಧಾ ಮತ್ತು ಪ್ರಸಾದ್ ಅವರಿಗೆ ಧನ್ಯವಾದಗಳು!
LikeLike