ಸನ್ಮಿತ್ರ ಓದುಗರೇ !!
ಈ ಆಧುನಿಕ ಜಗತ್ತಿನಲ್ಲಿ ಮನುಷ್ಯ ಪ್ರತ್ಯೇಕವಾಗಿ ತನಗಾಗೇ ವೈಯಕ್ತಿಕ ಸಮಯ ಕೊಡಲು ಸಾಧ್ಯವಾಗುತ್ತಿದೆಯೇ ? ಅದರಲ್ಲೂ ಉದ್ಯೋಗಸ್ತ ಸ್ತ್ರೀಯರಿಗೆ ಸಾದ್ಯವಾಗುತ್ತಿದೆಯೇ ?
ಈ ವಾರದ ಸಂಚಿಕೆಯಲ್ಲಿ ಡಾ. ಸತ್ಯವತಿ ಮೂರ್ತಿ ಅವರು ಪುರುಸೊತ್ತು ಮಾಡಿಕೊಂಡು ‘ಸಿಗಲಿಲ್ಲ ಪುರುಸೊತ್ತು’ ಎಂಬ ಕವನವನ್ನು ರಚಿಸಿದ್ದಾರೆ. ನೀವೂ ಸಹ ಪುರುಸೊತ್ತು ಮಾಡಿಕೊಂಡು ಓದಿ ಪ್ರತಿಕ್ರಿಯಿಸಿ. -ಸವಿ.ಸಂ
ಸಿಗಲಿಲ್ಲ ಪುರುಸೊತ್ತು
ಎಲ್ಲೆಡೆಯು ಹುಡುಕಿ ದಣಿದಿದ್ದಳು ರಮಾಳ ಹೆಣ್ಮಗಳು
ಕೊನೆಗೂ ಸಿಕ್ಕಿತ್ತು ಪುರಸೊತ್ತು,
ಮಹಿಳೆಯರ ಸ್ವಾತಂತ್ರ್ಯದ ಕೂಗಿನಡಿಯಲ್ಲಿ
ಸಮಾನತೆಗೆ ಹೋರಾಡುವ ಸತ್ಯಾಗ್ರಹದ ನಡುವಲ್ಲಿ
ಪುರುಷರೊಡನೆ ಪೈಪೋಟಿಮಾಡುವ ಆಕ್ರೋಶದಲ್ಲಿ
ತಮಗಾಗಿ”ಸ್ಪೇಸ್” ಹುಡುಕುವ ತರಾತುರಿಯಲ್ಲಿ!
ಬಂತು ಕುತ್ತು ಗಂಡಸಿನ ಪುರಸೊತ್ತಿಗೆ
ಹುಡುಕುವ ಸರದಿ ಅವನದಾಯ್ತೀಗ
ಮಕ್ಕಳನು ಶಾಲೆಗಟ್ಟುವ ಗಡಿಬಿಡಿಯಲ್ಲಿ
ಆಫೀಸಿನಲ್ಲಿ ದುಡಿದು ಸಂಜೆ ಮನೆ ಸೇರುವಲ್ಲಿ
ಒಗೆದ ಬಟ್ಟೆಗಳ ಮಡಿಸಿ ಜೋಡಿಸುವಲ್ಲಿ
ಸ್ವಿಂಮ್ಮಿಂಗು, ಕ್ರಿಕೆಟ್ಟು, ಮೂಸಿಕ್ ಗಳಿಗೆ ಮಕ್ಕಳನೊಯ್ಯುವಲ್ಲಿ
ಮಾಡಿದ್ದ ಅಡಿಗೆ ಬಡಿಸುವಲ್ಲಿ. ಪಾತ್ರೆ ತೊಳೆಯುವಲ್ಲಿ
ಒಂದೇ ಎರಡೇ ಎಲ್ಲ ಸಂದುಗೊಂದಿನಲಿ ಹುಡುಕಿ ದಣಿದಿದ್ದಾಯ್ತು
ಸಿಗದಾಯ್ತು ಪುರಸೊತ್ತು, ರಾತ್ರೆ ಹತ್ತಾಯ್ತು, ದೇಹ ಬಳಲಿತು
ಕಟ್ಟಕಡೆಯ ಯತ್ನ! ಹಾಸಿಗೆಯ ಮಡಿಕೆಗಳಲಿ ಹುಡುಕಿದ್ದಾಯ್ತು
ಕಡೆಗೂ ಸಿಗಲಿಲ್ಲ ಪುರಸೊತ್ತು
ಹಿಂದೊಂದು ಕಾಲದಲಿ ಪುರುಷನ ಸ್ವತ್ತಾಗಿದ್ದ ಪುರಸೊತ್ತು,
ಕಾಲದ ಕರಾಮತ್ತಿಗೆ ಸಿಕ್ಕಿ ಆಗಿಹೋಗಿತ್ತು ಸ್ತ್ರೀಯರಾ ಸ್ವತ್ತು .
-ಡಾ. ಸತ್ಯವತಿ ಮೂರ್ತಿ
ಪರಸೊತ್ತಿಗೆ ಹುಡುಕಾಟ ವನ್ನು ಚೆನ್ನಾಗಿ ರೂಪಿಸಿದ್ದೀರಿ ಸತ್ಯವತಿ ಅವರೆ.
“ಕಟ್ಟಕಡೆಯ ಯತ್ನ! ಹಾಸಿಗೆಯ ಮಡಿಕೆಗಳಲಿ ಹುಡುಕಿದ್ದಾಯ್ತು” ಚಂದದ ಸಾಲುಗಳು
ಶ್ರೀವತ್ಸ ದೇಸಾಯಿ
LikeLike
ಅನಾದಿ ಕಾಲದಿಂದ ಸ್ತ್ರೀಯರ ಪರಿಸ್ಥಿತಿಯನ್ನು ಗಂಡಸಿನ ಪುರುಸೊತ್ತು ಕಸಿಯುತ್ತ ಅನಾವರಣಗೊಂಡಿದೆ ನಿಮ್ಮ ಸಾಲುಗಳಲ್ಲಿ. ಆಧುನಿಕ ಯುಗದಲ್ಲಿ ಇದು ಕಣ ಕಣವಾಗಿ ಬದಲಾಗುತ್ತಿದ್ದರೂ ಮನೆ ಕೆಲಸಗಳಲ್ಲಿ ಸಮಾನತೆ ಬರಲು ಇನ್ನೂ ಸಾಕಷ್ಟು ಕಾಲ ಬೇಕಾದೀತು.
– ರಾಂ
LikeLike
ಪ್ರಾಸಬದ್ದವಾದ ಕವಿತೆ. ಪುರುಸೊತ್ತು ಗಂಡು, ಹೆಣ್ಣು, ಇಬ್ಬರಿಗೂ ಇರಬೇಕಾದ ಸ್ವತ್ತು.
ದಾಕ್ಷಾಯಿಣಿ .
LikeLiked by 1 person
Pususottu maadi kondu comment madtaa ideeni!! Bahala sogasaagi barididdeera!! Pleasure to read your Kavanas Dr.Satyavati Murthy avare!!
LikeLiked by 1 person