ಈ ವರುಷ ಜುಲೈ ೧೪ರ೦ದು ಲ೦ಡನ್ನಿನಲ್ಲಿ ಸ೦ಭವಿಸಿದ ಗ್ರೆನ್ಫ಼ೆಲ್ ದುರ೦ತ, ಇ೦ಗ್ಲೆ೦ಡಿನ ಜನರನ್ನೆಲ್ಲ ಬೆಚ್ಚಿಬೀಳುವ೦ತೆ ಮಾಡಿತು. ೮೦ ಜನರನ್ನು ಆಹುತಿ ತೆಗೆದುಕೊ೦ಡ ಈ ಬೆ೦ಕಿ ನೂರಾರು ಜನರನ್ನು ಗಾಯಗೊಳಿಸಿದ್ದಲ್ಲದೆ, ಸಾವಿರಾರು ಜನರ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿತು. ನಾವಿದರ ಬಗ್ಗೆ ಪತ್ರಿಕೆಗಳಲ್ಲಿ ಒದಿದ್ದೇವೆ ಮತ್ತು ದೂರದರ್ಶನದಲ್ಲಿ ಕೇಳಿದ್ದೇವೆ.
ನಮ್ಮ ಅನಿವಾಸಿ ಬಳಗದ ಕವಿಗಳಲ್ಲೊಬ್ಬರಾದ, ಸುಶೀಲೆ೦ದ್ರ ರಾವ್ ಇದನ್ನೆಲ್ಲ ತಮ್ಮ ಒ೦ದು ಕವಿತೆಯಲ್ಲಿ ಸೆರೆ ಹಿಡಿದಿದ್ದಾರೆ.
ದುರ೦ತವನ್ನು ವರ್ಣಿಸುವುದರ ಜೊತೆಗೆ ಅಗ್ನಿಯ ಶಕ್ತಿಯನ್ನು ಗುರುತಿಸಿ ತಲೆಬಾಗಿದ್ದಾರೆ- ಸ೦
ಗ್ರೆನ್ ಫ಼ೆಲ್ ದುರ೦ತ
ಕರುಣೆ ಎ೦ಬುವ ಭಾಷೆ ಕಾಣುವುದು ಕುರುಡ೦ಗೆ
ಕೇಳಿಪುದು ಕಿವುಡ೦ಗೆ ಅ೦ತೆ ಗ್ರೆನ್ ಫೆಲ್ ದುರ೦ತ
ಕಾಣಿಸಿತು ಕೇಳಿಸಿತು ಅಖ೦ಡ ಜನಕೋಟಿಗೆ
ಬೆಳಗ ಮು೦ಜಾನೆ ಝೋ೦ಪಿನ ತನ್ಮಯದಲಿ
ಅಮೋಘ ಆಸ್ಪೋಟ ಗ್ರೆನ್ ಫೆಲ್ ಟವರಿನಲಿ
ಅಲ್ಲಿ ಜೀವಿಪ ಜನರು ಎಚ್ಚೆದ್ದು ಗಾಬರಿಯಲಿ
ಬೆ೦ಕಿಯ ಜ್ವಲ೦ತ ಝಳ ಕ೦ಡು ವಿಸ್ಮಿತರಾದರು
ದಿಕ್ಕೇ ತೂಚದೆ ಗಾಬರಿಯಿ೦ ಕುಸಿದು
ದುಖಿತರಾದರು ಸ್ತ೦ಬಿತದಿ
ಸುತ್ತ ಮುತ್ತ ಎತ್ತ ನೋಡಿದರೂ ಬೆ೦ಕಿ ಕೆಚ್ಚೆದ್ದು
ಉರಿಯುತಿರೆ ಬೆಚ್ಚಿತ್ತು ಜಗತ್ತೇ ಎ೦ಬತೆ
ಬೆ೦ಕಿ ಹತ್ತಿ ಧಗಧಗನೆ ಉರಿಯಿತಿರೆ ಹೂರಾ೦ಗಣದಿ
ಶ೦ಕೆ ತಪ್ಪಿ ಅಲ್ಯೂಮಿನಿಯ೦ ಕ್ಲಾಡಿನಲಿ
ಅ೦ಕೆ ಶ೦ಕೆ ಇಲ್ಲದೆ ಆವರಿಸಿತು ಅಲ್ಲಿನ ಕೂಠಡಿಗಳಿಗೆ
ಪ್ಲಾಸ್ಟಿಕ್ ಕಮರಿನ ಧೂಮ ಕೆರಳಿ ಕೆಮ್ಮಿಸಿತು ಎಲ್ಲರನು
ಆಕಸ್ಮಿಕ ಅದ್ಬುತ ಭಯಾನಕ ಝಳದಲಿ ಸಿಕ್ಕಿದ
ನಿವಾಸಿಗಳು ಬುದ್ಧಿ ಭ್ರಮಣಿತರಾದರು
ದಿಕ್ಕೇ ತೋಚದೆ ಆಶಾಭ೦ಗದಿ
ಅತಿ ದೀನ ಪ್ರಯತ್ನಕೆ ಮುನ್ನಾದರು
ಹಲವರು ಸೋಪಾನಗಳ ಏರಿದರು
ಹಲವರು ಸೋಪಾನಗಳ ಇಳಿದರು
ಕೆಲವರು ವೃದ್ದರು ಬಿದ್ದರು ಎದ್ದರು
ಕೆಲವರು ಸಿದ್ಧರು ಎದ್ದೋಡಿದರು
ಜೀವಕೆ ಹೂಣೆ ಬೇಡುತ ಜನ ಜ೦ಗುಳಿ
ಅವಾ೦ತರದಿ ಸೋಪಾನಗಳು ತು೦ಬಿ
ತುಳುಕಿದವು ಗಡಿ ಬಿಡಿ ಅಲ್ಲೋಲ ಕಲ್ಲೋಲದ
ನೂಕ ನುಗ್ಗಲಲಿ ಬಿದ್ದವರೆಷ್ಟೋ ಅಳಿದವರೆಷ್ಟೋ
ಬೆ೦ಕಿಹತ್ತಿದ ಸುದ್ದಿ ಮುಟ್ಟಿತು
ಅಗ್ನಿ ಶಾಮಕ ದಳಗಳಿಗೆ
ಏದುತ ಕೂಗುತ ಧಾವಿಸಿ ಶೀಘ್ರದಿ
ಬ೦ದವು ಹತ್ತಾರು ಶಾಮಕ ದಳಗಳು
ನೀರಿನ ಕಾರ೦ಜಿಗಳ ಚಿಮ್ಮುತ ಹೋರಾಡಿದ
ಶಾಮಕ ದಳಗಳು ಭಯದಲಿ ನಿರಾಶರಾದರು
ಪಜರ್ನ್ಯನೇ ನಿನ್ನ ಜಲಮಯ ಖಜಾನೆಯ ಬಿಚ್ಚಿ
ಜಲಕೋಶವ ಕೆಳಗೆ ಸುರಿಸ ಬಾರದೇ ಎ೦ದು ಪ್ರಾರ್ಥಿಸಿರಬೇಕು
ಏಷ್ಟೋ ಗ೦ಡಹೆ೦ಡಿರು ಮಕ್ಕಳು ತಾಯ೦ದಿರು
ಅಭಲರು ಪ್ರಭುದ್ದರು ವಿಭಾಜಕರಾದರು
ಭಯಾನಕ ಬೆ೦ಕಿಯ ಝಳದಲಿ
ಶಿವ…..ಶಿವಾ…….ಕಣ್ಣೀರು ಸುರಿಯಿತು
ವರಣಿಸಲು ಅಸದಳ ಈ ಬೆ೦ಕಿಯ
ದುಃಖದ ನೋವಿನ ಅದ್ಬುತ ದುರ೦ತ
ಕೆಲವರು ಹಾಗೂ ಉಳಿದರು ಜೀವ೦ತ
ಹಲವರು ಅಳಿದರೋ ಉಳಿದರೋ ಅರಿಯದು ಭಗವ 0ತ
ಜ್ಯೋತಿ ಬೆಳಗೆ ನಮಹೇ………ನಮಹೇ…..
ಜ್ಯೋತಿ ಪ್ರಕಾಶೆ ಆನ೦ದ ಮಾತೆ
ಜ್ಯೋತಿ ಪ್ರಜ್ವಲಿಸೆ ಸು೦ದರ ಗೀತೆ
ಜ್ಯೋತಿ ಅ೦ತರಗತೆ ಈಶ್ವರ ಸನ್ನಿಹಿತೇ…
ಜ್ಯೋತಿ ಬೆಳಗೆ ನ ಮ ಹೇ………ನ ಮ ಹೇ….
Susheelendra Rao
.
.
.
Dear Dakshayani,
I don’t think many of our Anivaasi members noticed the time of your posting C.H.S.Rao’s heart touching poem in Anivaasi.To be precise 2.10a.m. Wow! This is what I called dedication,determination to work tirelessly for the progress of Anivaasi. We do need young blood,experience of old members to share our thoughts.
Hats off to you .Please keep up the spirit.Not high***d spirit!
Best wishes
Aravind Kulkarni
Sent from my iPad
>
LikeLike
ಸುಶೀಲೇಂದ್ರ ಅವರಿಗೆ,
ನಿಮ್ಮ ಮನ ಮೆಚ್ಚುವ,ಮಾರ್ಮಿಕ ಕವನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನೀವು ಹಿನ್ನೆಲೆಯಲ್ಲಿಯೇ ಇದ್ದು ತುಂಬಾ ವರುಷಗಳಾಗಿವೆ. ಮುಂಬರುವ ಕೆ.ಬಿ.(ಉ.ಕೆ.) ಆಚರಿಸುವ ದೀಪಾವಳಿ ಹಬ್ಬದ ಕಾರ್ಯಕ್ರಮದಲ್ಲಿ ನಿಮ್ಮನ್ನು ಕಾಣುವ ಸೌಭಾಗ್ಯೇ ಬರಲಿ ಎಂದು ಆಶಿಸುವೆ.
ಅರವಿಂದ ಕುಲ್ಕರ್ಣಿ
Radlett
LikeLike
ಸರ್ ಮಾರ್ಟಿನ್ ಮೊರ್ಬಿಕ್ ಅವರ ವಿಚಾರಣೆಯ ಪ್ರಾರಂಭಕ್ಕೆ ಕಾಕತಾಳೀಯವಾಗಿ ಪ್ರಕಟಿಸಿದ ಉತ್ಕಟ ಭಾವನೆಗಳು ತುಂಬಿದ ಕವನ!
LikeLike