ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ದಾಟಿಸಿದರು. ಧಾರೆ ಎರೆದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು. ಆ ದಿನ ನವೆಂಬರ್ ೫, ೨೦೧೬. ಸ್ಥಳ: ಡಾರ್ಬಿ. ಕಾರ್ಯಕ್ರಮ: ಅನಿವಾಸಿ ನಡೆಸಿದ ‘ಈಸ್ಟ್ ಮೀಟ್ಸ್ ವೆಸ್ಟ್’ – ಕನ್ನಡ-ಇಂಗ್ಲಿಷ್ ಕವನಗಳ ಸುಮಧುರ ಮುಖಾಮುಖಿ. ಎರಡು ಭಿನ್ನ ಭಾಷಾ-ಸಾಂಸ್ಕೃತಿಕ ನೆಲೆಗಳ ನಡುಕ್ಷೇತ್ರ. ಬನ್ನಿ, ಆ ಕವನಗಳನ್ನು ಓದೋಣ. -ಸಂ.

–ಜಿ. ಶಿವ ಪ್ರಸಾದ್ ರ ಕವನಗಳು
ಎನ್ನ ಕೈ ಬಿಡು ತಾಯೆ ನಿನ್ನ ಮಮತೆಯ ಬಿಗು ಮುಷ್ಟಿ ಸಡಿಲಗೊಳಿಸು ತಾಯೆ ದೂಡು ಗೂಡಿನಾಚೆಗೆ ಎನ್ನ ಛಲ ಬಲದಿಂದ ಸಿದ್ಧಳಿರುವ ನನ್ನ
ಅಂಜದಿರು ಓ ತಾಯೇ ಹಾರಲು ಕಲಿತಿರುವೆ, ಇರಲಿ ಆಗಸದೆತ್ತರ ಈಜಲು ಕಲಿತಿರುವೆ ಇರಲಿ ಅಳದಾಳದ ಸಾಗರ
ನನ್ನ ಬಾಳು ನನ್ನದೆಂಬ ಅರಿವಾಗಿ ನಡೆಯುವೆನು ನಾನಾಗಿ ರೂಪು ಗೊಳಲ್ಲಿ ನನ್ನ ವ್ಯಕ್ತಿತ್ವ ನನ್ನದೇ ಬೀಜಗಳ ಬಿತ್ತಿ ಬೆಳಸಿ ಎಲ್ಲರಿಗು ತೋರುವೆ ನನ್ನ ಅಸ್ತಿತ್ವ
ನಿನ್ನ ಬಳಿಗೆಂದು ಬರುವೆ ಮತ್ತೆ ಮತ್ತೆ ಸಾಗರ ದಂಚಿನಲಿ ನಿರ್ಗಮಿಸುವ ತೆರೆ ಮರಳುವಂತೆ ಚೈತ್ರದ ಚಿಗುರು ಹೂಗಳು ಮೂಡುವಂತೆ
ಇರಬಹುದು ನನ್ನಲ್ಲಿ ಧೈರ್ಯ ಸ್ಥೈರ್ಯ ನನ್ನ ಅರಿವಿನ ಆಚೆಯಲಿ ಮೂಡುವ ಸಂಕಷ್ಟಗಳ ಸುಳಿಯಿಂದ ಕೈ ಹಿಡಿದೆತ್ತಿ ಸಲಹು ತಾಯಿ
ಹಾತೊರೆದು ಮರಳಿ ಬರುವೆನು ತಾಯೆ ನಿನ್ನ ಪ್ರೀತಿ ವಾತ್ಸಲ್ಯ ಕರೆಗೆ ನಮ್ಮ ಹೆಮ್ಮೆಯ ಬೀಡಿಗೆ ನಿನ್ನ ಸಂತೃಪ್ತ ಎದೆಯ ಗೂಡಿಗೆ
–ಜಿ. ಶಿವ ಪ್ರಸಾದ್
|
Let go, Mother Let go Let go, mother, let go Loosen that tender grip Let me out of the nest For I am ready With determination and zest
Fear not mother, For I have learnt to fly, Great heights they may be. I have learnt to swim The deepest ocean it may be
Let me walk alone I have a life of my own My identity, To the world be known I have many seeds to be sown
I shall return to you Again and again Like the tides that recedes From the shores. Like the bloom That shows up in spring
Full of confidence, I may be the one Crisis may come yet unknown When I ring you, Mother Please pick up the phone
I shall return For your warmth and affection Desperate I remain For that longing and gratification I wish to make you proud, And fill you with that satisfaction
Let go mother Let go
G. Shiva Prasad |
PEACEFUL PLACE – G. Jayaram
Temples
– Where incense sticks are burning
Bells are ringing
Priests are chanting,
People are Praying,
Is a Peaceful place.
Meditating
– on the river banks,
Where birds are singing,
Water’s flowing,
Sun is rising,
Is a peaceful place.
Walking
– along a beach,
Looking and listening
Sounds of waves
Coming up, going down,
Seeing sunset in the evening,
Is a peaceful place.
Graveyard
Where loved ones are buried,
Lay in peace.
Thanking for everything,
Asking for blessing.
Is the MOST PEACEFUL PLACE.
– G Jayaram
ದೀಪದ ಹಾವಳಿ – ಪ್ರಭುರಾಜ ಗಿಣಿಮಾವ
ಸಾವಿರ ಪಣತಿ ಆರದ ಬಿಸಿ ಹತ್ತಿ
ಹಾರಿದ ಮಿಟ್ಟೆಯ ಸುಟ್ಟಿತು ಪಕ್ಕೆ
ತಿರುಗುತ ಸೇರಿತ್ತು ನೆಗೆದು ನೆಲಕ್ಕೆ
ಬಂದಿತು ದೀಪದ ಹಾವಳಿ ಸರಕ್ಕೆ
ಸುರ ಸುರ ಬಾಣದ ಭಯವನು ತಾಳದ
ಸರ ಸರ ಓಡಿ ಎಡವುತ ಗದರುತ
ಕೋಡಂಗಿಗಳ ಗಂಟಲು ಹರಿಯುತ
ಬಂದಿತು ದೀಪದ ಹಾವಳಿ ಗದರಿಸುತ
ಧಡ ಧಡ ಫಟ ಫಟ ಸದ್ದಿನ ಪಟಾಕಿಗೆ
ಕುಂಯ್ಗುಡುವ ಇಳಿಮುಖದ ಕುನ್ನಿಗಳಿಗೆ
ಮಿಂಯ್ಗುಡುವ ಬಿಳಿಚಿದ ಕಣ್ಣ ಕಾಮಿಗಳಿಗೆ
ಬಂದಿತು ದೀಪದ ಹಾವಳಿ ಬಳಿ ಬಳಿಗೆ
ತಬ್ಬಲಿ ಕರುಗಳ ಉರುಳಿನ ಸೆಳೆತ
ತಾಯ್ಗಳ ಭವಣೆಯನರಿಯದ ಹಸುಳೆ
ಬಾ ಎಂದು ಕರೆದ ಗಂಟಲಿನ ಕೊರೆತ
ಬಂದಿತು ದೀಪದ ಹಾವಳಿ ಭರದಿಂದ
ಬೆಚ್ಚನ ಗೂಡಲಿ ಮಲಗಿದ ಪಕ್ಕಿ
ಹೆಚ್ಚಿದ ಸದ್ದ ಕೇಳಿ ಬೆಚ್ಚಿದ ಹಕ್ಕಿ
ಫಟ ಫಟ ರೆಕ್ಕೆ ಬಡೆಯುತ ಹಾರಿ
ಬಂದಿತು ದೀಪದ ಹಾವಳಿ ಭಾರಿ
ಬದುಕೋಣ ಸಹಜೀವಕೆ ಹಿತವಾಗಿ
ಫಟ ಫಟ ಧಡಧಡ ಸದ್ದ ಕಡಿತವಾಗಿ
ಮದ್ದಿನ ಹೂಮಾಲೆ ಸಾಕು ಬೇಕಾದಷ್ಟಾಗಿ
ಕೂಡಲೇ ಬರಲಿ ಅನಂತ ದೀಪಾವಳಿ
-ಪ್ರಭುರಾಜ ಗಿಣಿಮಾವ
ಮನದಾಳದ ನುಡಿಗಳು- ಸೌಭಾಗ್ಯ ಜಯಂತ್ ಮೇರ್ವೆ
ವಿನೋದ ಸಂತೋಷಕೆ
ವೇದಿಕೆ ಇದಾಗಿರುವುದಕೆ
ಮಾತೃ ಭಾಷೆಯ ಮಮತೆ ಕಾರಣವಿದಕೆ
ಕನ್ನಡಾಂಬೆಯ ಒಲವನ್ನ
ಕರುನಾಡಿನ ಕರಗಳನ್ನ
ಕಂಕಣದ ಸಂಕಲ್ಪವನ್ನ
ಕಾರಣವಾಗಿ ಹುಟ್ಟಿದ ಈ ಸಂಸ್ಥೆಯನ್ನ
ಕಂಡು ನನಗಿಂದು ತುಂಬಿತ್ತ ತನುಮನ
ನಿಮ್ಮೆಲ್ಲರಿಗೆ ನನ್ನ ಒಲವಿನ ನಮನ
-ಸೌಭಾಗ್ಯ ಜಯಂತ್ ಮೇರ್ವೆ
ಶ್ರೀವತ್ಸ ದೇಸಾಯಿಯವರ ಕವನಗಳು
ಹಿನ್ನೆಲೆ: ನೀವು ನಂಬಲಿಕ್ಕಿಲ್ಲ. ನನಗಾಗ ೧೩ ಅಥವಾ ೧೪ ವಯಸ್ಸು. ಶಾಲೆಯಲ್ಲಿ ನಮಗೆ ಪಾಠಕ್ಕಿದ್ದ ವರ್ಡ್ಸ್ ವರ್ತ್ ಕವಿಯ ‘ಡಾಫಡಿಲ್’ ಕವಿತೆ ಓದಿದ ಮೇಲೆ ಈ ದೇಶಕ್ಕೆ ಬಂದು ಆ ಹೂವನ್ನು ನೋಡುವ ತವಕ ಹುಟ್ಟುಕೊಂಡುಬಿಟ್ಟಿತು. ಕಾಲೇಜು ಮುಗಿಸಿದ್ರೂ ಮನದಾಳದಲ್ಲಿ ಅದೇ ಆಸೆ ಇದ್ದಿರಬೇಕು. ಇಲ್ಲಿಗೆ ಬಂದಾದ್ಮೇಲೆ ಒಮ್ಮೆ ವಸಂತದಲ್ಲಿ ಲೇಕ್ ಡಿಸ್ಟ್ರಿಕ್ಟ್ ಗೆ ಹೋಗಿ ಅವುಗಳು ಕುಣಿಯುವುದನ್ನು ಕಣ್ಣು ತುಂಬಾ ನೋಡಿ ಮರಳಬೇಕು ಎಂಬ ಉತ್ಕಟ ಇಚ್ಛೆಯಾಗಿತ್ತು. ದೈವ ಮಾತ್ರ ಇನ್ನೂ ಇಲ್ಲೇ ಉಳಿಸಿದೆ. ಜೀನಾ ಯಹಾಂ …
– ಶ್ರೀವತ್ಸ ದೇಸಾಯಿ
The Quest
(Introduction: I was dreaming of coming to this country and seeing the ‘daffodils fluttering and dancing in the breeze’, ever since I read that poem by William Wordsworth at my school [it was in the prescribed textbook], when I had just turned a teenager. I was chasing a dream!).
- Shrivatsa Desai
ಹೂವನ್ನರಸಿ…ನಾನೊಬ್ಬ ಕನಸುಗಾರ ಶಾಲೆಯ ಪಠ್ಯ ಪುಸ್ತಕದ ಹೂವನ್ನರಸಿ ಅರಸಿಯ ನಾಡಿಗೆ ಬಂದವನು ಆಗನಿಸಿತ್ತು ಗಗನ ಕುಸುಮ ಈಗ ಕಂಡದ್ದಾಯಿತು ಈ ಹೂವಿನ ನಾಡಿನಲ್ಲಿ ಹೂ (Who?) ಗಳ ಸುರಿಮಳೆ ಹೆಜ್ಜೆ ಹೆಜ್ಜೆಗೂ ನೀನಾರು? (Who are you?) ಯಾರು ಕರೆಸಿದರು? (Who called you?) ಮರು ಪ್ರಯಾಣವೆಂದು? ನನ್ನ ಹಣೆಯಲ್ಲಿ ಬರೆದಂತೆ ರಾಣಿಯ ನಾಡಲ್ಲೇ ಠಾಣೆ ಹಾಕಿಯಾಯಿತು ನಾನಾರು? ಈ ಹೂದೋಟದಲ್ಲಿ ಕನಸುಗಾರ ನಾ
– ಶ್ರೀವತ್ಸ ದೇಸಾಯಿ |
The Quest
I was a dreamer Searching for a flower from the school textbook I arrived in ‘the land of hope and glory’ the homeland they called ‘Blighty’ and faced questions many Who are you? Who called you? When will you return? But I was fated to stay. And settled here But my dream is still unfulfilled. Before I ‘go’ I wish to build myself a Heaven on Earth for I’m a dreamer, still. –Shrivatsa Desai
|
೨೦೧೪ ದೀಪಾವಳಿಯಂದು ವಿನತೆ ಶರ್ಮ ಬರೆದ ಕವನ – (‘ಅವಧಿ’ ಜಾಲಜಗುಲಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)
ದೀಪಗಳ ಸೇತು ದೀಪಗಳ ಸಾಲು ಸಾಂಬ್ರಾಣಿ ಹೊಗೆ ಸುತ್ತು ಸಂಭ್ರಮದ ಓಡಾಟ ಸಡಗರದ ತಿನಿಸು
ಪುಟ್ಟಿಯ ಕಾಮನಬಿಲ್ಲ ಕನಸು ದೊಡ್ಡ ಮನೆಯ ಅವಳಂತೆ ರೇಷ್ಮೆ ಲಂಗದ ಹುಡುಗಿ ತಾನಾಗುವುದು ಯಾವಾಗ?
ಅವರು ಬಿಟ್ಟ ಊಟಕ್ಕಾಗಿ ಕಾದ ಹಸಿದ ಹೊಟ್ಟೆ ಆದರೂ ಕಣ್ಣಲ್ಲಿ ಬಣ್ಣದ ಬಳೆಗಳ ಚಿತ್ರ
ದೀಪಗಳ ದ್ವೀಪಗಳು ನಾವು ಕೆಲವರು. ನಮ್ಮ ಮನೆಯ ಹರ್ಷ ನಮ್ಮದಷ್ಟೇ, ಮನೆ ಮನೆಯೊಳಗೇ ಮನ ಮನ ಮುಟ್ಟಿಲ್ಲ ಇನ್ನೂ
ಬೀದಿ ಚಿಂದಿಯ ಪ್ಲಾಸ್ಟಿಕ್ ಚೀಲ ಹೊತ್ತ ಅವನ ದೃಷ್ಟಿ ಆ ದೊಡ್ಡ ಮನೆಯತ್ತ
ಆ ಪ್ಲಾಸ್ಟಿಕ್ ಚೀಲ ಡಬ್ಬ ಡಬ್ಬಗಳ ಸುರುಸುರುಬತ್ತಿ, ರಾಕೆಟ್, ಫ್ಲವರ್ ಪಾಟ್, ದೀಪಾವಳಿಯ ಸಿಹಿಯಾಗುವುದೇ?
ದೀಪಗಳು ತುಂಬಿರುವ, ದೀಪಗಳೇ ಇಲ್ಲದ, ನಮ್ಮ ಈ ಎಷ್ಟೋ ದ್ವೀಪಗಳ ನಡುವಿನ ಸೇತು ನಾವಾದರೆ?
ಅವನು ಹಚ್ಚುವ ಅವನದೇ ಆ ಹೆಮ್ಮೆಯ ಕುಲುಕುಲು ಸುರುಸುರು ಬತ್ತಿ ನಗು ನಮ್ಮ ಸಂಭ್ರಮ ಸಡಗರವಾದರೇ
ಪುಟ್ಟಿಯ ಕನಸು, ಕಂಗಳ ಕಾಂತಿ, ಗರಿ ಗರಿ ಹೊಸ ಲಂಗ ಘಲ್ ಘಲ್ ಬಳೆಗಳು ನಮ್ಮ ಬೆಳಕ ಹಣತೆಗಳು.
|
Bridge of light Beckoning row of lights The incense rises like a snake Celebration in their swift feet Sweets fill the eyes
Putti’s rainbow dream Follows the Big House Girl Waiting for her Big day To become a Silk-draped Girl
Awaiting the leftovers Carrying hunger pangs Bangles sing in her ears A flash in her little eyes
Islands of lights Some of us, we’re Our joy is home-kept Not reached all hearts
The boy carries the bag Picking their trash His gaze is on the Big House Boys there, with fireworks
The boy’s bag, will it fill With Diwali sweets With rockets, flower pots, Boxes of sparklers
Closed boxes, we are Some of us. Homes Lit with lights, dark without All around. Awaiting The bridge of light
The boy’s smile Lit with his joy Be our celebration Our Diwali
Putti’s dream Silk dress Murmuring bangles The sparkle of her eyes Be our heart’s light.
|
ಕಳೆದ ಮೂರು ನಾಲ್ಕು ವಾರಗಳನ್ನು ಟೇಮ್ಸ್ ಗಿಂತ ದೂರದ ತುಂಗೆ ಹರಿಯುವ ಭಾರತದಲ್ಲಿ ತಿರುಗಾಡುತ್ತ ಕಳೆದೆನಾದ್ದರಿಂದ ಈ ಅಂಕಣಕ್ಕೆ‘ಅನಿವಾಸಿ‘ ಯಾಗಿದ್ದೆ! ಇಲ್ಲಿಗೆ ಭೆಟ್ಟಿ ಕೊಡಲಾಗಲಿಲ್ಲ. ಡಾರ್ಬಿಯಲ್ಲಿ ದೀಪಾವಳಿಗೆ ಎಲ್ಲರೂ ಕೂಡಿ ಸಂಯೋಜಿಸಿದ East meets West ಕಾರ್ಯಕ್ರಮದ ಕಾರ್ಯಕಲಾಪಗಳ ವರದಿಯನ್ನು ಉತ್ಕೃಷ್ಟವಾಗಿ ಪ್ರಸ್ತುತಗೊಳಿಸಿದ ಮಿತ್ರರಿಗೆಲ್ಲಾ ಅಭಿನಂದನೆಗಳು. ಇಲ್ಲಿರುವಾಗ ಅಲ್ಲಿಯ ಮನೆಯ ನೆನಪಿರುತ್ತದೆ. ಅಲ್ಲಿಗೆ ಹೋದಾಗ ’ಇಲ್ಲಿ’ಯ ಚಿತ್ರವನ್ನೂ ಕಾಣುತ್ತಿದ್ದೆ. ಆದರೆ ತಾಂತ್ರಿಕ ಕೊರತೆಯಿಂದಾಗಿ, ನನ್ನ ಅನಿಸಿಕೆಗಳನ್ನು ಮೂಡಿಸಲಾಗಲಿಲ್ಲ. ಈ ಸಾಲಿನ ಕೊನೆಯ ಘಟಕದಲ್ಲಿ ’ಅನಿವಾಸಿ’ ಹೊಸ ಉಡುಪು ತೊಟ್ಟಿದೆ.ಸಂಪಾದಕರ ಪ್ರಯೋಗಕ್ಕೆ ನನ್ನ ಬೆಂಬಲವಂತೂ ಇದೆ. ಬೇರೆಯವರೂ ಹೊಸತನ್ನು ಜೋಡಿಸಿಯಾರೆಂಬ ಅಭಿಲಾಷೆ. ಹೊಸ ವರ್ಷದಲ್ಲಿ ಹೊಸಹುಮ್ಮಸ ಬರಲಿ. ಶ್ರೀವತ್ಸ ದೇಸಾಯಿ
LikeLike
ತುಂಬಾ ಸುಂದರ ಕವನಗಳು.ರೆಕ್ಕೆ ಬಲಿತ ಹಕ್ಕಿ ಗೂಡು ಬಿಟ್ಟು ಹಾರದೇ ಹೇಳು .ಹಾರಿ ವಿಶಾಲ ಬಾನಂಗಳದಿ ,ಎಲ್ಲೆ ಮೀರಿ ಬೆಳೆದ ಮರದ ಪೊಟರೆಯಲ್ಲಿ ತನ್ನದೇ ಗೂಡು ಕಟ್ಟಿ ತನ್ನ ವಿಶಿಷ್ಟ ಛಾಪು ಮೂಡಿಸದೇ ಹೇಳು.ಇದೇ ಬಯಕೆ ನಾ ಕಂಡೆ ಪ್ರತಿ ಕವನದಿ.ತಮ್ಮದೇ ಸ್ವರ್ಗ ಕಟ್ಟುವಾಸೆ ಕಂಡೆ ,ಬಣ್ಣ ಬಣ್ಣದ ಕನಸುಗಳ ಆಸೆ ಕಂಡೆ.ಆದರೂ ಬೇಂದ್ರೆಯವರು ಹೇಳಿದಂತೆ ಬಾರೋ ಬಾರೋ ಬಾರೋ ಸಾಧನ ಕೇರಿಗೆ ಮರಳಿ ನಿನ್ನೀ ಗೂಡಿಗೆ ಎಂಂಬಂತೆ ತಾಯ್ನಾಡಿನ ತುಡಿತವೂ ಅಲ್ಲಿದೆ ,ಮಿಡಿತವೂ ಅಲ್ಲಿದೆ .ಮನ ಮುಟ್ಟುವ ಕವನಗಳು , ಪೂರ್ವ ಪಶ್ಚಿಮದ ಮಿಲನದಲ್ಲಿ.ಎಲ್ಲ ಕವಿಗಳಿಗೂ ಅಭಿನಂದನೆಗಳು.
ಸರೋಜಿನಿ ಪಡಸಲಗಿ.
LikeLike
ಪೂರ್ವ ಪಶ್ಚಿಮ ಸಾಹಿತ್ಯ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನಗಳನ್ನು ತಲುಪಿಸಿದ ಎಲ್ಲಾರಿಗೂ ಧನ್ಯವಾದಗಳು.
ಕನ್ನಡ ಸಾಹಿತ್ಯದ ಮೇಲೆ ಇಂಗ್ಲೀಷ್ ಗಾಢವಾದ ಪ್ರಭಾವ ಬೀರಿದ್ದು ಇದರ ಬಗ್ಗೆ ನಾನು ಒಂದೆರಡು ಮಾಹಿತಿಯನ್ನು ಕೊಡಲು ಬಯಸುತ್ತೇನೆ
ನಮ್ಮ ರಾಷ್ಟ್ರ ಕವಿ ಕುವೆಂಪು ಅವರು ಬರೆದ ಮೊದಲ ನೂರಾರು ಕವಿತೆಗಳು ಇಂಗ್ಲೀಷಿನಲ್ಲಿ! ಅವರ ಮೊದಲ ಕವನ ಸಂಕಲನ Beginner’s muse is a English Collection! ಈ ಕವನದ ಸಾಲು ಹೀಗಿದೆ
Dishearten not my friends this bard unknown
who holds an alien harp not his own!
ಕುವೆಂಪು ಅವರಿಗೆ ಆಗ ೧೮ ವರ್ಷ ವಯಸ್ಸು ಯಾರಿಗೂ ತಿಳಿಯದ ಕವಿ
ಹಾಗೆ ಅವರು ಹಿಡಿದ ಭಾಷೆ ಇಂಗ್ಲೀಷ್ ಇದರ ಬಗ್ಗೆ ವ್ಯಥೆ ಪಡಬೇಡ ಅನ್ನುವ ಮಾತುಗಳಲ್ಲಿ ಕಾವ್ಯ ಮೊದಲುಗೊಳ್ಳುತ್ತದೆ
Thomas Grey ಎಂಬ ಇಂಗ್ಲಿಷ್ ಕವಿಯ ‘An Elegy written on a country church’ ಎಂಬ ಕವಿತೆಯು ತಮ್ಮ ಮೇಲೆ ಅದ್ಭುತವಾದ ರೀತಿಯಲ್ಲಿ ಪ್ರಭಾವ ಬೀರಿದ ಬಗ್ಗೆ ‘ನಾನೇಕೆ ಬರೆಯುತ್ತೇನೆ’ ಎಂಬ ಲೇಖನದಲ್ಲಿ ಕನ್ನಡದ ಇನೊಬ್ಬ ರಾಷ್ಟ್ರಕವಿ ಡಾ ಜಿ. ಎಸ್ ಎಸ್ ಅವರು ಪ್ರಸ್ಥಾಪಿಸಿದ್ದಾರೆ
ಇದೆ ಒಂದು ಹಿನ್ನಲೆಯನ್ನು ಇಟ್ಟುಕೊಂಡು ಈ ಸಾಹಿತ್ಯ ಕಾರ್ಯಕ್ರಮವನ್ನು ನಾವು ಯೋಜಿಸಿದೆವು. ಇದು ಯಶಸ್ವಿಯಾಗಿ ನಡೆಯಿತು ಎನ್ನಬಹುದು. ಈ ಬರಹಕ್ಕೆ ವಿನತೆ ಅವರು ತುಂಗೆ ಥೇಮ್ಸ್ ನಡುವಿನ ಸೇತುವೆ ಎಂಬ ಶೀರ್ಷಿಕೆ ಕೊಟ್ಟಿರುವುದು ಸೂಕ್ತವಾಗಿದೆ
LikeLike