ಫ಼ೇಸ್ ಬುಕ್ – ಜಿ ಎಸ್ ಎಸ್ ಪ್ರಸಾದ್ ಕವಿತೆ

ಎಂತಹ ವಿಸ್ಮಯ ಈ ಫ಼ೇಸ್ ಬುಕ್ಕು
ತಗೊ ನನ್ನಿಂದ ಒಂದು ಸೂಪರ್ ಲೈಕು

ಬರ್ತಡೆ ಹಾಲಿಡೆ ಫೊಟಗಳ ಥಳಕು
ಶುಭ ಹಾರೈಕೆ ಎಲ್ಲರಿಗು ಬೇಕು

ಲಲನೆಯರ ವಿವಿಧ ಭಂಗಿ ಬಳುಕು
ಲೈಕುಗಳ ಪಟ್ಟಿಗೆ ಹಾತೊರೆಯುವ ಬದುಕು

ಖುಷಿ ಕೊಡುವ ನೂರಾರು ಸರಕು,
ಮಿತಿಯಿಲ್ಲ, ಎಷ್ಟು ಬೇಕಾದರೂ ತುರುಕು!

ಪರಸ್ಪರ ಭೇಟಿಯಾಗದೆ ವೃದ್ಧಿಸಿದ ಗೆಳೆತನ
ಫ಼ೇಸ್ ಬುಕ್ಕಿನಿಂದ ಇನ್ನಿಲ್ಲ ಒಂಟಿತನ

ಕಾಲದೇಶಗಳ ಮಿತಿಯರಿಯದ ಗ್ಲೋಬಲ್ ಸಂತಾನ
ಜಡಗಟ್ಟಿದ ಬದುಕಿಗೆ, ಫೇಸ್ ಬುಕ್; ನೀನೆ ಚೇತನ!

(ಇತ್ತೀಚೆ ನಡೆದ ಹಾಸ್ಯಕವಿಗೋಷ್ಠಿಯಲ್ಲಿ ಓದಿದ್ದು)

3 thoughts on “ಫ಼ೇಸ್ ಬುಕ್ – ಜಿ ಎಸ್ ಎಸ್ ಪ್ರಸಾದ್ ಕವಿತೆ

  1. facebook is magical. The way it connects people from all around the world is amazing. I recently got united with a long lost friend on Messenger.
    Facebook deserves all kinds of appreciation for raising awareness globally on many things. In fact, many youngsters are addicted to it and cannot imagine life with out it!!
    A well thought poem on deserving facebook !!!

    Like

  2. FB ಎಂದ ಕೂಡಲೆ ಅರ್ಧ ಜನ ಸೈ ಎಂದರೆ ಉಳಿದವರು ಬೈ ಎನ್ನುತ್ತಾರೆ. ಪ್ರಸಾದ ಅವರು ತಮ್ಮ ಕವನದಲ್ಲಿ ಈಗಿನ ಕಾಲದ ಯುವಮನಸ್ಸುಗಳನ್ನಷ್ಟೆ ಅಲ್ಲ ಬೇರೆಯವರನ್ನೂ ಆಕರ್ಷಿಸಿದ modern phenomenon ಗೆ ಕನ್ನಡಿ (ಅಥವಾ ರಾವುಗನ್ನಡಿ ಎನ್ನಿ!) ಹಿಡಿದಿದ್ದಾರೆ. ಅಭಿನಂದನೆಗಳು. ಕವನಕ್ಕೆ ಲೈಕು! ಅವೆರಡರಲ್ಲಿ ಯಾವುದು ಸತ್ಯ, ಯಾವುದು (virtual) ಮಿಥ್ಯ? ಸ್ನೇಹ, ಗ್ಲೋಬಲ್ ಕುಟುಂಬದ ಜೊತೆಗೆ ಉತ್ಪ್ರೇಕ್ಷೆ, ಹೆಗ್ಗಳಿಕೆ, washing dirty linen in public, ಇವೆಲ್ಲವನ್ನೂ ತುರುಕಲು ಸಾಧ್ಯವಿರುವಾಗ ಹಂಸಕ್ಷೀರದಂದೆ ಗುಣಗಳನ್ನಷ್ಟೇ ಹೀರುವದು ನಮ್ಮ ಕರ್ತವ್ಯ; ವ್ಯಥಾ ಸಮಯಹರಣವಾಗದಿರದಂತೆ ನೋಡಿಕೊಳ್ಳ ಬೇಕು. (ಈ ಸಮಯದಲ್ಲಿ ನನ್ನದೊಂದು ಫೋಟೊ ಹಾಕುವದಿತ್ತು. ಇಲ್ಲಿ ಸಾಧ್ಯವಿಲ್ಲ, ಅದಕ್ಕೇ ಫೇಸ್ ಬುಕ್ಕಿಗೇ ಬನ್ನಿ!)

    Like

  3. ಮಾನವ ಹುಟ್ಟಿನಿಂದಲೇ ಸಾಂಘಿಕ ಜೀವನ ಬಯಸುವ ಜೀವಿ.ಮಗು ತನ್ನ ಅಳುವಿನ ಮೂಲಕ ಎಲ್ಲರನ್ನ ಆಕರ್ಷಿಸುವುದು ಇದಕ್ಕೇ.ಆತಗೆ ಕೊಡ ಕೊಳ್ಳುವಿಕೆ ,ಹೊಗಳಿಕೆ ತೆಗಳಿಕೆ ,ಹಿಗ್ಗು ಕುಗ್ಗು ಎಲ್ಲ ಬೇಕು.ಆದರೆ ಎಲ್ಲ to the point ಆಗಿರುವ ಈ ವೇಗದ ,ಯಾಂತ್ರಿಕ ಜೀವನದಲ್ಲಿ ಅದಕ್ಕೆಲ್ಲಿ ಅವಕಾಶ? ಆದರೆ ಭಾವನೆಗಳ ಹರಿವಿಗೆ .ಹಂಚುವಿಕೆಗೆ ಒಂದು ದಾರಿ ಬೇಕಲ್ಲ?ಈ ಫೇಸ್ ಬುಕ್ ಅದಕ್ಕೆ ಒಂದು ಬಾಗಿಲು ತೆರೆಯುತ್ತಿದೆಯೋ ಏನೋ!ಸಂಬಂಧಗಳು ಸಾಯುತ್ತಿರುವಾಗ ಅರಿಯದ ಹೊಸ ಸ್ನೇಹ ಸಂಬಂಧಗಳ ಹುಟ್ಟು ಹಾಕಿ ,ಚೇತನವನ್ನು. ತುಂಬುತ್ತಿದಿಯೋ ಎಂಬನಿಸಿಕೆ.ಎಲ್ಲಿಯೋ ವಿಡಂಬನೆಯ ಎಳೆ ಕಂಡರೂ , ಈ ಫೇಸ್ಬುಕ್ ನಿಜಕ್ಕೂ ವರವಾದರೆ ,ನಿಮ್ಮ ಜೊತೆ ನನ್ನದೂ ಒಂದು ಲೈಕು ಶಿವ ಪ್ರಸಾದ್ ಅವರೇ.ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.