ಅನಿವಾಸಿಗೆ ಒಂದು ವರ್ಷ! ಅವಲೋಕನ – ಡಾ.ರಾಜಾರಾಮ ಕಾವಳೆ, ಡಾ. ಶ್ರೀವತ್ಸ ದೇಸಾಯಿ

ರಾಮಾಯಣದಲ್ಲಿ ಬರುವ ಒಂದು ಶ್ಲೋಕ:

”ಶನೈರ್ಯಂತಿ ಪಿಪೀಲಿಕಾ ಯೋಜನಾನಿ ಶತಾನಪಿ

ಅಗಛ್ಚನ್ ವೈನತೇಯೋಪಿ ಪದಂ ಏಕ ನ ಗಛ್ಚತಿ”

ಎಂದು ಹೇಳುತ್ತದೆ. ಸಂದರ್ಭ ನನಗೆ ನೆನಪಿಲ್ಲ. ಆದರೆ ಇದರ ಅರ್ಥ ಜೀವನದ ಎಲ್ಲಾ  ಸಮಯ -ಸಂದರ್ಭಕ್ಕೂ, ಕಾರ್ಯ ಕಲಾಪಗಳಿಗೂ ಅನ್ವಯವಾಗುತ್ತದೆ. ಇದರ ಅರ್ಥ ಇಷ್ಟೇ “ ಕಾರ್ಯ ಸಾಧನೆಗೆ ತೊಡಗುವ  ಮನಸ್ಸುಳ್ಳು ಇರುವೆಯು, ನೂರು  ಯೋಜನ ದೂರವನ್ನು ಕ್ರಮಿಸಬಲ್ಲುದಾದರೆ,ಇಚ್ಚಾಶಕ್ತಿ ಇರದ ಶಕ್ತಿಶಾಲಿ ಗರುಡ,ಒಂದೇ  ಒಂದು ಹೆಜ್ಜೆಯನ್ನೂ ಕ್ರಮಿಸಲಾರದು” ಎಂಬುದೇ ಆಗಿದೆ.

ನಮ್ಮ ಸಾಮರ್ಥ್ಯ ಏನೇ ಇದ್ದರೂ ,ಕಾರ್ಯ ತತ್ಪರತೆ ಇರದಿದ್ದಲ್ಲಿ, ಗುರಿಮುಟ್ಟುವುದು ಅಸಾಧ್ಯ. ಈ ನಿಟ್ಟಿನಲ್ಲಿ, ನಮ್ಮ ಕೆಲಸವನ್ನು ಅವಲೋಕಿಸಿಕೊಂಡು ಮುಂದಿನ ಹಾದಿಯನ್ನು, ನಡೆಯನ್ನು ನಿರ್ಧರಿಸಲು ಅನುವಾಗುವ ಮೊದಲ ಹೆಜ್ಜೆ ಈ ಲೇಖನ ಮಾಲೆ.  ಓದಿ, ನಿಮ್ಮ ಅನಿಸಿಕೆ ತಿಳಿಸಿ.

ಅನಿವಾಸಿಗೆ ಒಂದು ವರ್ಷ! ಅವಲೋಕನ – ಡಾ.ರಾಜಾರಾಮ ಕಾವಳೆ, ಡಾ. ಶ್ರೀವತ್ಸ ದೇಸಾಯಿ 

introduction

Read More »