ವೈದ್ಯನ ಕಥೆ-ವ್ಯಥೆ -ಡಾ ರಾಂಶರಣ್ ಬರೆದ ಕವನ

 

ವೈದ್ಯನ ಕಥೆ-ವ್ಯಥೆ

ಮೈ ನೋವು, ಕೈ ನೋವು

ಡಾಕ್ಟ್ರೇ, ಎಲೆಲ್ಲೂ ನೋವು

ತಲೆ ಶೆಳತ, ಕಾಲು ಜಗತ

ದಿನವೆಲ್ಲ ಕೇಳೆನ್ನ  ರಕ್ತ ಕುದಿಯಿತು ಕತ ಕತ

sick note 2

ನನಗೇನು ರೋಗ ಡಾಕ್ಟ್ರೇ? ಸಾಕಾಯಿತು ಜೀವ

ಒಯ್ದುಬಿಡು ಈ ಪ್ರಾಣ; ಓ ದೇವ!

ನಿನಗಿಲ್ಲ ರೋಗ, ಗಟ್ಟಿ-ಶಟ್ಟಿ ನಿನ್ನ ರಟ್ಟೆ;

ಕುಳಿತುಣ್ಣಲು ಬೇಕೋ ರೊಕ್ಕ ಪುಕ್ಸಟ್ಟೆ?

 

 

ಹಾಗೆನಬೇಡ ದಮ್ಮಯ್ಯ, ನಿನಗೆ ದಯವಿಲ್ಲ

ಕೆಲಸ ಮಾಡಲೆನಗೆ ಸಾಧ್ಯವಿಲ್ಲ

ಕಮಾಯಿ ಇಲ್ಲದೇ ಹೊಟ್ಟೆಗೆ ಹೆಂಡವಿಲ್ಲ,

ದಮ್ಮು ಹೊಡೆಯಲು ಕಾಸಿಲ್ಲ.

 

ಬೇಡೆನಗೆ ಪಬ್ಬಿನ ಚಾಕರಿ, ಕ್ಲೀನಿಂಗ್ ನೌಕರಿ

ನನ್ನ ಮಾದರಿ: ಪಕ್ಕದ ಮನೆ ಸೋಂಭೇರಿ, ಮೇರಿ.

ಆಚೆ ಮನೆ ಆಲ್ಬರ್ಟು, ಬಿದ್ದಿರ್ತಾನೆ ಹಗಲೂ ರಾತ್ರಿ ತಿಂದ್ಬಿಟ್ಟು

ನಂಗೂ ಕೊಡು, ಅವನಂತೆ ಲೈಫ್ ಎಂಜಾಯ್ ಮಾಡಲೊಂದು ಸರ್ಟಿಫ಼ಿಕೆಟ್ಟು

 

ಈಕೆ ರೋಗಿಯಂತೆ, ನಾನು ವೈದ್ಯನಂತೆ

ಅವಳ ತಾಳಕ್ಕೆ ಕುಣಿಬೇಕಂತೆ!

ಅವಳಿಗಿಲ್ಲ ರೋಗ, ಬೇಕು ಕೇವಲ ರಜ

ಹೀಗಿದೆ ಯುಗ; ಇಂದು ಕೆಲಸಗಳ್ಳನೇ ರಾಜ

 

3 weeks of absence redone

 

ಗರಗಸ ಸತತ ಇಂಥವರ ವರಾತ

ನನ್ನ ಮೈಯಿಂದ ರಕುತದ ಜಲಪಾತ

ಹಿಚುಕಲೇ ಕುತ್ತಿಗೆ? ಮುಗಿಸಲೇ ನಿನ್ನ ಕಥೆ?

ತೋರಿಸಲಾರೆನ್ನ ವ್ಯಥೆ!

 

– ರಾಮ್

(ಯು ಕೆ ಕನ್ನಡ ಬಳಗದ 2016 ಯುಗಾದಿ ಉತ್ಸವದಲ್ಲಿ ಇದನ್ನು ಪ್ರಸ್ತುತ ಪಡಿಸಲಾಗಿತ್ತು)

 

5 thoughts on “ವೈದ್ಯನ ಕಥೆ-ವ್ಯಥೆ -ಡಾ ರಾಂಶರಣ್ ಬರೆದ ಕವನ

  1. Common clinical encounter alien to doctors trained in India. I can feel your frustration. It is interesting how our anger, frustrations and emotions trigger thoughts that translate well into poetry! paradoxically there is a weird sense of humor in this poetry

    Like

  2. ನಾನು ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾಗ ಕೆಲವು‌‌ ಕಾಯಿಲೆಗಳನ್ನು ನೋಡಿರಲ್ಲಿಲ್ಲ. ಇಲ್ಲಿ ನಿತ್ಯವೂ‌ ಅದೇ ರಾಗ. Fibromyalgia, chronic fatigue syndrome, regional pain syndrome, ಒಟ್ತಿನಲ್ಲಿ ಕೆಲಸ ಮಾಡಲಾರೆ ಅನ್ನುವ ಕಾಯಿಲೆ. ಈ ರೋಗಗಳಿಗೆ ಹೆಸರು ಕೊಟ್ತ ಪುಣ್ಯಾತ್ಮರಿಗೆ ನಮೊ. ಕವನ ತುಂಬಾ ಚೆನ್ನಾಗಿದೆ ರಾಮ್.

    Like

  3. ವೈದ್ಯರು ದಿನ ನಿತ್ಯ ಎದುರಿಸುವ ಕಿರಿಕಿರಿಯ ಸುಂದರ ವಿವರಣೆ.ನನ್ನ ಡಾಕ್ಟರ್ ಪತಿಯ ಹತ್ತಿರ ಬರುವ ಇಂಥ ರೋಗಿ(??)ಗಳನ್ನ ನೋಡುವ ಪ್ರಸಂಗ ನನಗೂ.ಸರ್ಟಿಫಿಕೇಟ ಕೊಡಲೂ ಆರ ಬಿಡಲೂ ಆರ ಎಂಬ ಪರಿಸ್ಥಿತಿ ವೈದ್ಯರದು.ಒಂಥರ ಇರುಸು ಮುರುಸು.ತುಂಬ ನೈಜ ಚಿತ್ರಣದ ಒಳ್ಳೆಯ ಕವನ ರಾಮಶರಣ್ ಅವರೇ
    ಸರೋಜಿನಿ ಪಡಸಲಗಿ

    Liked by 1 person

  4. ತಮ್ಮ ದೈನಿಕ ದಿನಚರಿಯ ಅನುಭವಗಳನ್ನು ಕವನರೂಪದಲ್ಲಿ ಬರೆದಿದ್ದೀರಾ ರಾಮಶರಣ್. ಎನ್.ಎಚ್.ಎಸ್ ವ್ಯವಸ್ಥೆಯನ್ನು ಮತ್ತು ಅದರಲ್ಲಿನ ಸಮಸ್ಯೆಗಳನ್ನು ಚೆನ್ನಾಗಿ ವರ್ಣಿಸಿರುವ ಈ ಕವನ ಚೆನ್ನಾಗಿದೆ.
    ಉಮಾ

    Like

  5. ಅನಿವಾಸಿ ಡಾಕ್ಟರುಗಳು ಈ ದೇಶದಲ್ಲಿ ದಿನನಿತ್ಯ ನೋಡುವ ದೃಶ್ಯ! ಸ್ವಾನುಭವದಿಂದ ಸುಂದರವಾಗಿ ರಾಮ್ ಬಣ್ಣಿಸಿದ್ದಾರೆ. ಟೈಮ್ ವೇಸ್ಟರ್ ಎಂದು ಶಪಿಸಿಯಾರು ಈ ಸೋಮ್ಬೇರಿಗಳನ್ನು. ಇನ್ನು ನಮ್ಮ National Health Serviceದ ಉದ್ಧಾರ ಹೇಗೆ ಆದೀತು? ಅದೇ ಚಿಂತೆ!

    Like

Leave a comment

This site uses Akismet to reduce spam. Learn how your comment data is processed.